Where is Pushpa? ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕೇಳಿಬಂದಿದೆ ಈ ಪ್ರಶ್ನೆ; ಉತ್ತರಕ್ಕಾಗಿ ಫ್ಯಾನ್ಸ್ ಹುಡುಕಾಟ
Pushpa 2 Movie: ‘ಪುಷ್ಪ 2’ ಕಥೆಯ ಬಗ್ಗೆ ಅನೇಕ ಊಹೆಗಳನ್ನು ಮಾಡಲಾಗುತ್ತಿದೆ. ಪುಷ್ಪರಾಜ್ ಜೈಲಿಗೆ ಹೋಗುವಂತಾಗಿದ್ದು ಹೇಗೆ? ಅಲ್ಲಿಂದ ತಪ್ಪಿಸಿಕೊಳ್ಳಲು ಆತ ಮಾಡಿದ ಸಾಹಸ ಎಂಥದ್ದು? ಇತ್ಯಾದಿ ವಿವರಗಳನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಎಸ್ಎಸ್ ರಾಜಮೌಳಿ ಅವರು ನಿರ್ದೇಶನ ಮಾಡಿದ ‘ಬಾಹುಬಲಿ’ ಸಿನಿಮಾ ಬಿಡುಗಡೆ ಆದ ಬಳಿಕ ಒಂದು ಟ್ರೆಂಡ್ ಸೃಷ್ಟಿ ಆಗಿತ್ತು. ‘ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ?’ ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಅದೇ ರೀತಿಯ ಟ್ರೆಂಡ್ ಈಗ ಮತ್ತೆ ಮರುಕಳಿಸಿದೆ. ‘ಪುಷ್ಪ 2’ (Pushpa 2) ಸಿನಿಮಾದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಆದಾಗಿನಿಂದ ‘Where is Pushpa?’ ಎಂಬ ಪ್ರಶ್ನೆ ಉದ್ಭವ ಆಗಿದೆ. ನಿರ್ದೇಶಕ ಸುಕುಮಾರ್ (Director Sukumar) ಅವರು ಅಭಿಮಾನಿಗಳಲ್ಲಿ ಭಾರಿ ಕೌತುಕ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲು ಅರ್ಜುನ್ (Allu Arjun) ಅಭಿಮಾನಿಗಳು ಈ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಮತ್ತೆ ಈ ಪ್ರಶ್ನೆ ಕೇಳಿಬರುತ್ತಿದೆ. ‘ಪುಷ್ಪ 2’ ಸಿನಿಮಾ ಬಿಡುಗಡೆ ಆದಾಗಲೇ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲಿದೆ.
‘ಪುಷ್ಪ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆಯಿತು. ಈಗ ‘ಪುಷ್ಪ 2’ ಚಿತ್ರ ಕೂಡ ಅದ್ದೂರಿಯಾಗಿ ತಯಾರಾಗುತ್ತಿದೆ. ಬಹುಭಾಷೆಯಲ್ಲಿ ಫಸ್ಟ್ ಗ್ಲಿಂಪ್ಸ್ ಅನಾವರಣ ಮಾಡಿದ ಬಳಿಕ ಅಭಿಮಾನಿಗಳ ನಿರೀಕ್ಷೆ ಜಾಸ್ತಿ ಆಗಿದೆ. ‘ಪುಷ್ಪ 2’ ಸಿನಿಮಾದಿಂದ ದೊಡ್ಡ ಗೆಲುವು ಪಡೆಯಲೇಬೇಕು ಎಂಬ ಗುರಿಯೊಂದಿಗೆ ನಿರ್ದೇಶಕ ಸುಕುಮಾರ್ ಅವರು ಹಲವು ತಂತ್ರಗಳನ್ನು ಬಳಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Hema Malini: ಅಲ್ಲು ಅರ್ಜುನ್ಗೆ ಭರಪೂರ ಮೆಚ್ಚುಗೆ ನೀಡಿದ ಹೇಮಾ ಮಾಲಿನಿ; ಆದ್ರೆ ಹಿಂದಿ ಮಂದಿಗೆ ಕೋಪ ಬಂದಿದ್ದೇಕೆ?
ಅಲ್ಲು ಅರ್ಜುನ್ ಅವರ ಜನ್ಮದಿನದ ಪ್ರಯುಕ್ತ ಬಿಡುಗಡೆ ಆದ ಫಸ್ಟ್ ಗ್ಲಿಂಪ್ಸ್ನಲ್ಲಿ ‘ಪುಷ್ಪ 2’ ಕಥೆಯ ಬಗ್ಗೆ ಒಂದಷ್ಟು ಸುಳಿವುಗಳನ್ನು ಬಿಟ್ಟುಕೊಡಲಾಗಿತ್ತು. ‘ಗುಂಡಿನಿಂದ ಗಾಯಗೊಂಡಿರುವ ಪುಷ್ಪರಾಜ್ ತಿರುಪತಿ ಜೈಲಿನಿಂದ ಎಸ್ಕೇಪ್ ಆಗಿದ್ದಾನೆ. ಈಗ ಎಲ್ಲಿದ್ದಾನೆ ಪುಷ್ಪ?’ ಎಂಬ ಹಿನ್ನೆಲೆ ಧ್ವನಿ ಈ ವಿಡಿಯೋದಲ್ಲಿ ಹೈಲೈಟ್ ಆಗಿತ್ತು. ಪುಷ್ಪರಾಜ್ ಜೈಲಿಗೆ ಹೋಗುವಂತಾಗಿದ್ದು ಹೇಗೆ? ಅಲ್ಲಿಂದ ತಪ್ಪಿಸಿಕೊಳ್ಳಲು ಆತ ಮಾಡಿದ ಸಾಹಸ ಎಂಥದ್ದು? ಇತ್ಯಾದಿ ವಿವರಗಳನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಕಥೆಯ ಬಗ್ಗೆ ಅನೇಕ ಊಹೆಗಳನ್ನು ಮಾಡಲಾಗುತ್ತಿದೆ.
Fastest 1M Likes in Hindi
PAN INDIA SUPER StAAr ??@alluarjun#WhereIsPushpa Glimpse – 16 Hrs#AdiPurushTrailer – 19 Hrs pic.twitter.com/8s7Q3ePvXJ
— S U N N Y AA (@sunnyteju2) May 10, 2023
ಅಲ್ಲು ಅರ್ಜುನ್ ಜೊತೆ ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಮುಂತಾದವರು ನಟಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆಯು ಅದ್ದೂರಿ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ದಕ್ಷಿಣ ಭಾರತದ ಮಂದಿ ಮಾತ್ರವಲ್ಲದೇ ಹಿಂದಿ ಪ್ರೇಕ್ಷಕರು ಕೂಡ ಈ ಸಿನಿಮಾಗಾಗಿ ಕಾದಿದ್ದಾರೆ. ಈ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








