AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ‘ಬ್ಲಾಕ್ ಪ್ಯಾಂಥರ್’ ಹುಡುಕಿದ ಮಾರ್ವೆಲ್, ಯಾರು ಈ ಡೇವಿಡ್?

Black Panther movie: ಚಾಡ್ವಿಕ್ ಬೋಸ್ಮನ್, ‘ಬ್ಲಾಕ್ ಪ್ಯಾಂಥರ್’ ಆಗಿ ನಟಿಸಿದ್ದರು. ಅವರ ಪಾತ್ರ ಭಾರಿ ದೊಡ್ಡ ಹಿಟ್ ಆಯ್ತು. ‘ಬ್ಲಾಕ್ ಪ್ಯಾಂಥರ್’ಗೆ ಜನಪ್ರಿಯತೆ ತಂದುಕೊಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಆದರೆ 2020ರಲ್ಲಿ ಅವರು ಕ್ಯಾನ್ಸರ್​​ನಿಂದಾಗಿ ನಿಧನ ಹೊಂದಿದರು. ಈಗ ಅವರ ನಿಧನದ ಆರು ವರ್ಷಗಳ ಬಳಿಕ ಮಾರ್ವೆಲ್ ಹೊಸ ‘ಬ್ಲಾಕ್ ಪ್ಯಾಂಥರ್’ ಅನ್ನು ಹುಡುಕಿದೆ.

ಹೊಸ ‘ಬ್ಲಾಕ್ ಪ್ಯಾಂಥರ್’ ಹುಡುಕಿದ ಮಾರ್ವೆಲ್, ಯಾರು ಈ ಡೇವಿಡ್?
Black Panther
ಮಂಜುನಾಥ ಸಿ.
|

Updated on:Jul 29, 2026 | 11:33 AM

Share

ಮುಖ್ಯಾಂಶಗಳು

  • ಹೊಸ ಬ್ಲ್ಯಾಕ್ ಪ್ಯಾಂಥರ್ ಪಾತ್ರಧಾರಿಯನ್ನು ಮಾರ್ವೆಲ್ ಹುಡುಕಿದೆ.
  • 2020 ರಲ್ಲಿ ಬ್ಲ್ಯಾಕ್ ಫ್ಯಾಂಥರ್ ಪಾತ್ರಧಾರಿ ಚಾಡ್ವಿಕ್ ನಿಧನ ಹೊಂದಿದ್ದರು.
  • ಆರು ವರ್ಷಗಳ ಬಳಿಕ ಹೊಸ ನಟನನ್ನು ಹುಡುಕಲಾಗಿದೆ.

‘ಐರನ್ ಮ್ಯಾನ್’, ‘ಸೂಪರ್ ಮ್ಯಾನ್’, ‘ಸ್ಪೈಡರ್ ಮ್ಯಾನ್’, ‘ಥಾರ್’, ‘ಬ್ಲಾಕ್ ವಿಡೊ’, ‘ಡಾಕ್ಟರ್ ಸ್ಟ್ರೇಂಜ್’ ರೀತಿ ‘ಬ್ಲಾಕ್ ಪ್ಯಾಂಥರ್’ ಸಹ ಬಲು ಜನಪ್ರಿಯ ಸೂಪರ್ ಹೀರೋ. ಮಾರ್ವೆಲ್​​ನ (Marvel) ಈ ಸೂಪರ್ ಹೀರೋ, ‘ಅವೇಂಜರ್ಸ್’ ತಂಡದಲ್ಲಿಯೂ ಇದ್ದಾನೆ. ‘ಬ್ಲಾಕ್ ಪ್ಯಾಂಥರ್’ ಮೊದಲು ಬಿಡುಗಡೆ ಆದಾಗ ಚಾಡ್ವಿಕ್ ಬೋಸ್ಮನ್, ‘ಬ್ಲಾಕ್ ಪ್ಯಾಂಥರ್’ ಆಗಿ ನಟಿಸಿದ್ದರು. ಅವರ ಪಾತ್ರ ಭಾರಿ ದೊಡ್ಡ ಹಿಟ್ ಆಯ್ತು. ‘ಬ್ಲಾಕ್ ಪ್ಯಾಂಥರ್’ಗೆ ಜನಪ್ರಿಯತೆ ತಂದುಕೊಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಆದರೆ 2020ರಲ್ಲಿ ಅವರು ಕ್ಯಾನ್ಸರ್​​ನಿಂದಾಗಿ ನಿಧನ ಹೊಂದಿದರು. ಈಗ ಅವರ ನಿಧನದ ಆರು ವರ್ಷಗಳ ಬಳಿಕ ಮಾರ್ವೆಲ್ ಹೊಸ ‘ಬ್ಲಾಕ್ ಪ್ಯಾಂಥರ್’ ಅನ್ನು ಹುಡುಕಿದೆ.

ಬ್ರಿಟಿಷ್ ನಟ ಡೇವಿಡ್ ಜಾನ್ಸನ್ ಇನ್ನು ಮುಂದಿನ ಸಿನಿಮಾಗಳಲ್ಲಿ ‘ಬ್ಲಾಕ್ ಪ್ಯಾಂಥರ್’ ಆಗಿ ನಟಿಸಲಿದ್ದಾರೆ. ಸ್ಯಾನ್ ಡಿಯಾಗೋ ಕಾಮಿಕ್ ಕಾನ್‌ನಲ್ಲಿ ಹೊಸ ಬ್ಲ್ಯಾಕ್ ಪ್ಯಾಂಥರ್ ಆಗಿ ಡೇವಿನ್ ಜಾನ್ಸನ್ ಅವರನ್ನು ಪರಿಚಯಿಸಲಾಯ್ತು. ಈ ಪಾತ್ರವು ಅವರ ವೃತ್ತಿಜೀವನದ ಇದುವರೆಗಿನ ಅತ್ಯುನ್ನತ ಮೈಲಿಗಲ್ಲು ಎಂದು ಗುರುತಿಸಲ್ಪಟ್ಟಿದೆ. ಜೊನ್ಸನ್ ಅವರು ಈ ಹಿಂದೆ ಟೆಲಿವಿಷನ್, ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ತಮ್ಮ ನಟನೆ ಮಾಡಿದ್ದಾರೆ. ಆದರೆ ಬ್ಲಾಕ್ ಪ್ಯಾಂಥರ್ ಅವರ ಈ ವರೆಗಿನ ಅತ್ಯುತ್ತಮ ಅವಕಾಶ.

ಇಂಗ್ಲೆಂಡ್‌ನ ಲಂಡನ್‌ನಲ್ಲಿ ಜನಿಸಿದ ಜೊನ್ಸನ್, ಆರಂಭದಲ್ಲೇ ನಟನೆಯಲ್ಲಿ ಒಲವು ಬೆಳೆಸಿಕೊಂಡರು ಮತ್ತು ವಿಶ್ವದ ಅತ್ಯಂತ ಪ್ರತಿಷ್ಠಿತ ನಾಟಕ ಶಾಲೆಗಳಲ್ಲಿ ಒಂದಾದ ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್‌ನಲ್ಲಿ (RADA) ಅಧ್ಯಯನ ಮಾಡಿದರು. ಈ ಸಂಸ್ಥೆಯು ಆಂಥೋನಿ ಹಾಪ್ಕಿನ್ಸ್, ಟಾಮ್ ಹಿಡ್ಲ್‌ಸ್ಟನ್, ಸಿಂಥಿಯಾ ಎರಿವೋ, ಕೆನ್ನೆತ್ ಬ್ರಾನಾಗ್, ರಾಲ್ಫ್ ಫೈನ್ಸ್ ಮುಂತಾದ ಹಲವಾರು ಹೆಸರಾಂತ ಬ್ರಿಟಿಷ್ ನಟರನ್ನು ಚಿತ್ರರಂಗಕ್ಕೆ ನೀಡಿದೆ. ಅದೇ ಸಂಸ್ಥೆಯಲ್ಲಿ ನಟನೆ ಕಲಿತ ಡೇವಿಡ್ ಜಾನ್ಸನ್, ಟಿವಿ ಮತ್ತು ರಂಗಭೂಮಿಯಲ್ಲಿ ನಟನೆ ಮೂಲಕ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ:ವಿಶ್ವದ ಟಾಪ್ ಸಿನಿಮಾ ನಿರ್ದೇಶಕನಿಗೆ ಭಾರತದ ಈ ನಿರ್ದೇಶಕ ಅಚ್ಚು-ಮೆಚ್ಚು

‘ಇಂಡಸ್ಟ್ರಿ’ ನಾಟಕದಲ್ಲಿ ಗಸ್ ಸ್ಯಾಕಿ ಪಾತ್ರವನ್ನು ನಿರ್ವಹಿಸುವ ಮೂಲಕ ಜೊನ್ಸನ್ ಮೊದಲು ಗಮನ ಸೆಳೆದರು. 2023ರ ಪ್ರಣಯ ಹಾಸ್ಯ ಚಿತ್ರ ‘ರೈ ಲೇನ್’ ಮೂಲಕ ಅವರು ತಮ್ಮ ಖ್ಯಾತಿಯನ್ನು ಮತ್ತಷ್ಟು ಗಟ್ಟಿಗೊಳಿಸಿದರು. ನಂತರ ಈ ನಟ ‘ಏಲಿಯನ್: ರೋಮುಲಸ್’ ಚಿತ್ರದಲ್ಲಿ ಕಾಣಿಸಿಕೊಂಡರು. ಈಗ ಹಲವು ಹಂತದ ಆಡಿಷನ್, ಪರೀಕ್ಷೆಗಳನ್ನು ದಾಟಿ ಪ್ರತಿಷ್ಠಿತ ‘ಬ್ಲಾಕ್ ಪ್ಯಾಂಥರ್’ ಪಾತ್ರ ತಮ್ಮದಾಗಿಸಿಕೊಂಡಿದ್ದಾರೆ.

ಚಾಡ್ವಿಕ್ ಬೋಸ್​​ಮನ್ ನಿಧನದ ಬಳಿಕ 2022 ರಲ್ಲಿ ಒಂದು ‘ಬ್ಲಾಕ್ ಪ್ಯಾಂಥರ್’ ಸಿನಿಮಾ ಬಂದಿತಾದರೂ ಸಿನಿಮಾನಲ್ಲಿ ಬ್ಲಾಕ್ ಪ್ಯಾಂಥರ್​ನ ತಂಗಿ ಅಣ್ಣನ ಜವಾಬ್ದಾರಿ ನಿರ್ವಹಿಸುವ ಕತೆ ಹೇಳಲಾಗಿತ್ತು. ಈಗ ಕೊನೆಗೂ ಹೊಸ ಬ್ಲಾಕ್ ಪ್ಯಾಂಥರ್ ಅನ್ನು ಮಾರ್ವೆಲ್ ಹುಡುಕಿದ್ದು, ಹೊಸ ನಟನೊಟ್ಟಿಗೆ, ಹೊಸ ‘ಬ್ಲಾಕ್ ಪ್ಯಾಂಥರ್’ ಸಿನಿಮಾ 2029ಕ್ಕೆ ಬಿಡುಗಡೆ ಆಗಲಿದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:30 am, Wed, 29 July 26

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು