ಅನಂತ್​ ಅಂಬಾನಿ ಪ್ರೀ-ವೆಡ್ಡಿಂಗ್​ ಸಮಾರಂಭಕ್ಕೆ ರಿಯಾನಾ ಬಂದಿದ್ದರ ಹಿಂದಿದೆ ಬೇರೆ ಕಾರಣ

ರಾಧಿಕಾ ಮರ್ಚೆಂಟ್​ ಮತ್ತು ಅನಂತ್​ ಅಂಬಾನಿ ಅವರ ಪ್ರೀ-ವೆಡ್ಡಿಂಗ್​ ಸಮಾರಂಭಕ್ಕೆ ಬಂದಿದ್ದ ವಿಶ್ವ ಪ್ರಸಿದ್ಧ ಗಾಯಕಿ ರಿಯಾನಾ ಅವರಿಗೆ ಬರೋಬ್ಬರಿ 74 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗಿದೆ. ಕೇವಲ ಈ ಸಂಭಾವನೆ ಹಣಕ್ಕಾಗಿ ರಿಯಾನಾ ಅವರು ಭಾರತಕ್ಕೆ ಬಂದಿದ್ದಲ್ಲ. ಈ ಭೇಟಿಯ ಹಿಂದೆ ಬಿಸ್ನೆಸ್​ ಪ್ಲ್ಯಾನ್​ ಇದೆ.

ಅನಂತ್​ ಅಂಬಾನಿ ಪ್ರೀ-ವೆಡ್ಡಿಂಗ್​ ಸಮಾರಂಭಕ್ಕೆ ರಿಯಾನಾ ಬಂದಿದ್ದರ ಹಿಂದಿದೆ ಬೇರೆ ಕಾರಣ
ರಿಯಾನಾ, ಅನಂತ್​ ಅಂಬಾನಿ, ರಾಧಿಕಾ ಮರ್ಚೆಂಟ್​

Updated on: Mar 21, 2024 | 6:42 PM

ಒಂದಷ್ಟು ದಿನಗಳ ಹಿಂದೆ ಅನಂತ್ ಅಂಬಾನಿ (Mukesh Ambani) ಹಾಗೂ ರಾಧಿಕಾ ಮರ್ಚೆಂಟ್​ ಅವರ ವಿವಾಹಪೂರ್ವ ಸಮಾರಂಭ ಗ್ರ್ಯಾಂಡ್​ ಆಗಿ ನಡೆಯಿತು. ಗುಜರಾತ್​ನ ಜಾಮ್​ನಗರ್​ನಲ್ಲಿ ನಡೆದ ಈ ಪ್ರೀ-ವೆಡ್ಡಿಂಗ್ (Anant Ambani Pre Wedding) ಸಮಾರಂಭಕ್ಕೆ ಬೇರೆ ಬೇರೆ ರಾಷ್ಟ್ರಗಳಿಂದ ಸೆಲೆಬ್ರಿಟಿಗಳು ಬಂದಿದ್ದರು. ಜಾಗತಿಕ ಮಟ್ಟದಲ್ಲಿ ಫೇಮಸ್​ ಆಗಿರುವ ಬಲಿಷ್ಠ ಕಂಪನಿಗಳ ಸಿಇಒಗಳೆಲ್ಲ ಈ ಸಮಾರಂಭಕ್ಕೆ ಹಾಜರಿ ಹಾಕಿದ್ದರು. ವಿಶ್ವ ಪ್ರಸಿದ್ಧ ಪಾಪ್​ ಗಾಯಕಿ ರಿಯಾನಾ (Rihanna) ಕೂಡ ಬಂದು ಸಂಗೀತ ಕಾರ್ಯಕ್ರಮ ನೀಡಿದರು. ಅದರೆ ಅವರು ಈ ಸಮಾರಂಭಕ್ಕೆ ಬಂದಿದ್ದರ ಹಿಂದೆ ಅಸಲಿ ಕಾರಣ ಬೇರೆಯೇ ಇದೆ ಎನ್ನಲಾಗುತ್ತಿದೆ.

ಮುಖೇಶ್​ ಅಂಬಾನಿ ಹಾಗೂ ನಿತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್​ ಅಂಬಾನಿ ಅವರು ರಾಧಿಕಾ ಮರ್ಚೆಂಟ್​ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಜುಲೈನಲ್ಲಿ ಅವರ ಮುದುವೆ ನಡೆಯಲಿದೆ. ಈ ಜೋಡಿಯ ಪ್ರೀ-ವೆಡ್ಡಿಂಗ್​ ಸಮಾರಂಭಕ್ಕೆ ಬಂದಿದ್ದ ರಿಯಾನಾ ಅವರಿಗೆ ಬರೋಬ್ಬರಿ 74 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗಿದೆ. ಕೇವಲ ಈ ಸಂಭಾವನೆ ಹಣಕ್ಕಾಗಿ ರಿಯಾನಾ ಅವರು ಭಾರತಕ್ಕೆ ಬಂದಿದ್ದಲ್ಲ. ಈ ಭೇಟಿಯ ಹಿಂದೆ ಬಿಸ್ನೆಸ್​ ಪ್ಲ್ಯಾನ್​ ಇದೆ.

ಇದನ್ನೂ ಓದಿ: 74 ಕೋಟಿ ರೂ. ಪಡೆದರೂ 2 ದಿನದ ಬಳಿಕ ಭಾರತದಲ್ಲಿ ಒಂದು ಕ್ಷಣವೂ ನಿಲ್ಲದ ರಿಯಾನಾ; ಕಾರಣ?

ಬೇರೆ ಸೆಲೆಬ್ರಿಟಿಗಳ ರೀತಿ ಗಾಯಕಿ ರಿಯಾನಾ ಕೂಡ ಬ್ಯೂಟಿ ಬ್ರ್ಯಾಂಡ್​ ಹೊಂದಿದ್ದಾರೆ. ‘ಫೆಂಟಿ’ ಎಂಬುದು ಅವರ ಕಂಪನಿಯ ಹೆಸರು. ಈಗಾಗಲೇ ಅಮೆರಿಕ, ಇಂಗ್ಲೆಂಡ್​, ಮೆಕ್ಸಿಕೋ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಇದರ ಮಾರಾಟ ಆಗುತ್ತಿದೆ. ಆದರೆ ಭಾರತದಲ್ಲಿ ಇನ್ನಷ್ಟೇ ಇದರ ವ್ಯವಹಾರ ಬೆಳೆಯಬೇಕಿದೆ. ಭಾರತದಲ್ಲಿ ‘ಸೆಫೋರಾ ಇಂಡಿಯಾ’ ಮಳಿಗೆಗಳ ಮೂಲಕ ‘ಫೆಂಟಿ’ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ‘ಸೆಫೋರಾ’ ಇರುವುದು ಅಂಬಾನಿ ಒಡೆತನದಲ್ಲಿ. ಅಂಬಾನಿಯವರ ರಿಲಯನ್ಸ್​ ರಿಟೇಲ್​ ಉದ್ಯಮದ ಜೊತೆ ಕೈ ಜೋಡಿಸುವ ಉದ್ದೇಶದಿಂದಲೇ ರಿಯಾನಾ ಅವರು ಅನಂತ್​ ಅಂಬಾನಿಯ ಪ್ರೀ-ವೆಡ್ಡಿಂಗ್​ ಸಮಾರಂಭಕ್ಕೆ ಬಂದಿದ್ದರು ಎಂದು ವರದಿ ಆಗಿದೆ.

ಇದನ್ನೂ ಓದಿ: ಅನಂತ್​ ಅಂಬಾನಿ ಮದುವೆಗೆ ಬಂದ ರಿಯಾನಾ ಜತೆ ವಿದೇಶದಿಂದ ಬಂತು 4 ಗಾಡಿ ಲಗೇಜ್​

ಗಾಯಕಿ ರಿಯಾನಾ ಅವರು ಭಾರತಕ್ಕೆ ಬಂದಾಗ ಸಖತ್​ ಸುದ್ದಿ ಆಯಿತು. ಕಾರಣ ಏನೆಂದರೆ, ಅವರು ಬರುವಾಗ 4 ದೊಡ್ಡ ಗಾಡಿಯಲ್ಲಿ ಲಗೇಜ್​ ತಂದಿದ್ದರು. ಕೇವಲ ಎರಡು ದಿನಗಳ ಕಾಲ ಇಂಡಿಯಾದಲ್ಲಿ ಇರಲು ನಾಲ್ಕು ಗಾಡಿ ಲಗೇಜ್​ ಯಾಕೆ ಎಂಬುದು ಎಲ್ಲರ ಪ್ರಶ್ನೆ ಆಗಿತ್ತು. ವರದಿಗಳ ಪ್ರಕಾರ, ತಮ್ಮ ವೇದಿಕೆ ಕಾರ್ಯಕ್ರಮಕ್ಕೆ ಬೇಕಾದ ಸಾಮಗ್ರಿಗಳನ್ನು ಕೂಡ ಅವರು ವಿದೇಶದಿಂದ ತಂದಿದ್ದರು ಎನ್ನಲಾಗಿದೆ. ರಿಯಾನಾ ಜೊತೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಹಾಡಿ, ಕುಣಿದು ಎಂಜಾಯ್​ ಮಾಡಿದರು. ಫೋಟೋ ತೆಗೆದುಕೊಂಡು ಸಂಭ್ರಮಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.