AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

74 ಕೋಟಿ ರೂ. ಪಡೆದರೂ 2 ದಿನದ ಬಳಿಕ ಭಾರತದಲ್ಲಿ ಒಂದು ಕ್ಷಣವೂ ನಿಲ್ಲದ ರಿಯಾನಾ; ಕಾರಣ?

‘ಭಾರತದಲ್ಲಿ ನಾನು ಕಳೆದ ಕ್ಷಣಗಳು ಅತ್ಯುತ್ತಮವಾಗಿದ್ದವು. ಇಲ್ಲಿ ನಾನು 2 ದಿನ ಇದ್ದೆ’ ಎಂದು ಭಾರತವನ್ನು ಬಿಟ್ಟು ತೆರಳುವಾಗ ಗಾಯಕಿ ರಿಯಾನಾ ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ಪ್ರೀ-ವೆಡ್ಡಿಂಗ್ ಸಮಾರಂಭಕ್ಕೆ ಬಂದಿದ್ದ ರಿಯಾನಾಗೆ ಬರೋಬ್ಬರಿ 74 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ.

74 ಕೋಟಿ ರೂ. ಪಡೆದರೂ 2 ದಿನದ ಬಳಿಕ ಭಾರತದಲ್ಲಿ ಒಂದು ಕ್ಷಣವೂ ನಿಲ್ಲದ ರಿಯಾನಾ; ಕಾರಣ?
ರಿಯಾನಾ
ಮದನ್​ ಕುಮಾರ್​
|

Updated on: Mar 03, 2024 | 3:35 PM

Share

ಈಗ ಎಲ್ಲೆಲ್ಲೂ ಮುಕೇಶ್​ ಅಂಬಾನಿ ಅವರ ಕುಟುಂಬದ ಬಗ್ಗೆಯೇ ಸುದ್ದಿ. ಅವರ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿದ್ದು, ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಮುಕೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಪುತ್ರ ಅನಂತ್​ ಅಂಬಾನಿ (Anant Ambani) ಅವರ ಪ್ರೀ-ವೆಡ್ಡಿಂಗ್​ ಸಮಾರಂಭಕ್ಕೆ ಬಾಲಿವುಡ್​ ಸೆಲೆಬ್ರಿಟಿಗಳು ಮಾತ್ರವಲ್ಲದೇ ವಿದೇಶದ ಅನೇಕ ಗಾಯಕರು, ಕಲಾವಿದರು ಕೂಡ ಆಗಮಿಸಿ ಮನರಂಜನೆ ನೀಡಿದ್ದಾರೆ. ಖ್ಯಾತ ಗಾಯಕಿ ರಿಯಾನಾ ಅವರಿಗೆ ಬಹುಕೋಟಿ ರೂಪಾಯಿ ಸಂಭಾವನೆ ನೀಡಿ ಕರೆಸಲಾಗಿತ್ತು. ವರದಿಗಳ ಪ್ರಕಾರ, ಅವರು 74 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಹಾಗಿದ್ದರೂ ಕೂಡ ಕಾರ್ಯಕ್ರಮ ಮುಗಿದ ಬಳಿಕ ರಿಯಾನಾ (Rihanna) ಅವರು ಒಂದು ಕ್ಷಣವೂ ಭಾರತದಲ್ಲಿ ಉಳಿದುಕೊಂಡಿಲ್ಲ.

ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ರಿಯಾನಾ ಅವರು ಹಲವು ಸೂಪರ್​ ಹಿಟ್​ ಹಾಡುಗಳನ್ನು ಹಾಡಿದ್ದಾರೆ. ವೇದಿಕೆಯಲ್ಲಿ ಅವರು ಹಾಡಿ ಕುಣಿಯುವುದನ್ನು ನೋಡಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ವಿವಾಹಪೂರ್ವ ಸಮಾರಂಭಕ್ಕೆ ಬಂದಿದ್ದ ವಿವಿಐಪಿ ಅತಿಥಿಗಳನ್ನು ರಿಯಾನಾ ಅವರು ರಂಜಿಸಿದ್ದಾರೆ. ಅವರ ಜೊತೆ ಬಾಲಿವುಡ್​ ಮಂದಿ ಕೂಡ ಕುಣಿದಿದ್ದಾರೆ. ರಿಯಾನಾ ಅವರು ಒಟ್ಟು 2 ದಿನ ಭಾರತದಲ್ಲಿ ಕಾಲ ಕಳೆದಿದ್ದಾರೆ.

ಇದನ್ನೂ ಓದಿ: ಅಂಬಾನಿ ಮದುವೆಗೆ ಬಂದ ರಿಯಾನಾ ಕೈಯಲ್ಲಿರುವ ಬ್ಯಾಗಿನ ಬೆಲೆ ಎಷ್ಟು ಗೊತ್ತೆ?

ರಿಯಾನಾ ಅವರು ಭಾರತದಲ್ಲಿ ಇರುವಷ್ಟು ಸಮಯವನ್ನು ಖುಷಿಯಿಂದ ಕಳೆದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಫ್ಯಾನ್ಸ್​ ಜೊತೆ ಹಾಗೂ ಪೊಲೀಸರ ಜೊತೆ ಅವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆದರೆ ಬರೋಬ್ಬರಿ 74 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರೂ ಕೂಡ ಅವರು ಭಾರತದಲ್ಲಿ ಎರಡು ದಿನಕ್ಕಿಂತಲೂ ಹೆಚ್ಚು ಸಮಯ ಉಳಿದುಕೊಂಡಿಲ್ಲ. ತಮ್ಮ ಕೆಲಸ ಮುಗಿಯುತ್ತಿದ್ದಂತೆಯೇ ಅವರು ಲಗೇಜ್​ ಪ್ಯಾಕ್​ ಮಾಡಿಕೊಂಡು ವಾಪಸ್​ ಹೊರಟಿದ್ದಾರೆ.

ಇದನ್ನೂ ಓದಿ: ಅನಂತ್​ ಅಂಬಾನಿ ಮದುವೆಗೆ ಬಂದ ರಿಯಾನಾ ಜತೆ ವಿದೇಶದಿಂದ ಬಂತು 4 ಗಾಡಿ ಲಗೇಜ್​

ಅಷ್ಟು ಗಡಿಬಿಡಿಯಲ್ಲಿ ರಿಯಾನಾ ಅವರು ಭಾರತದಿಂದ ವಾಪಸ್​ ಹೊರಡಲು ಕಾರಣ ಇದೆ. ತಮ್ಮ ಮಕ್ಕಳ ಸಲುವಾಗಿ ಅವರು ವಾಪಸ್​ ಹೊರಟಿರುವುದಾಗಿ ಹೇಳಿದ್ದಾರೆ. ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಅವರ ಪ್ರೀ-ವೆಡ್ಡಿಂಗ್​ ಸಮಾರಂಭವನ್ನು ಮುಗಿಸಿ ವಿಮಾನ ನಿಲ್ದಾಣಕ್ಕೆ ತೆರಳುವಾಗ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದಿದ್ದ ಅವರು ಈ ವಿಷಯ ತಿಳಿಸಿದ್ದಾರೆ. ಮಕ್ಕಳಿಗಾಗಿ ಅವರು ವಾಪಸ್​ ಹೊರಟಿದ್ದಾರೆ. 36 ವರ್ಷದ ರಿಯಾನಾ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ.

ರಿಯಾನಾ ಅವರು ಭಾರತಕ್ಕೆ ಬರುವಾಗ ನಾಲ್ಕು ಗಾಡಿಯಲ್ಲಿ ಲಗೇಜ್​ ತಂದಿದ್ದರು. ಅದರ ವಿಡಿಯೋ ವೈರಲ್​ ಆಗಿತ್ತು. ಕೇವಲ 2 ದಿನ ಉಳಿದುಕೊಳ್ಳಲು ನಾಲ್ಕು ಗಾಡಿ ಲಗೇಜ್​ ತಂದಿದ್ದರು ಎಂಬುದನ್ನು ತಿಳಿದು ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.