ಎದುರು ಬದುರಾಗಲಿದ್ದಾರೆ ಇಬ್ಬರೂ ಮೆಗಾ ಪ್ಯಾನ್ ಇಂಡಿಯಾ ಸ್ಟಾರ್​ಗಳು: ಹಿಂದೆ ಸರಿಯುವರು ಯಾರು?

Prabhas-Yash: ಪ್ರಭಾಸ್ ಹಾಗೂ ಯಶ್ ಅವರುಗಳು ಭಾರತದ ಟಾಪ್ ಪ್ಯಾನ್ ಇಂಡಿಯಾ ಸ್ಟಾರ್ ನಟರು. ಆದರೆ ಮುಂದಿನ ವರ್ಷ ಏಪ್ರಿಲ್​ನಲ್ಲಿ ಈ ಇಬ್ಬರೂ ಬಾಕ್ಸ್ ಆಫೀಸ್​ನಲ್ಲಿ ಪರಸ್ಪರ ಎದುರು-ಬದುರಾಗಲಿದ್ದಾರೆ ಎನ್ನಲಾಗುತ್ತಿದೆ.

ಎದುರು ಬದುರಾಗಲಿದ್ದಾರೆ ಇಬ್ಬರೂ ಮೆಗಾ ಪ್ಯಾನ್ ಇಂಡಿಯಾ ಸ್ಟಾರ್​ಗಳು: ಹಿಂದೆ ಸರಿಯುವರು ಯಾರು?
Updated By: Digi Tech Desk

Updated on: Aug 08, 2024 | 11:33 AM

ಈಗೇನಿದ್ದರೂ ಪ್ಯಾನ್ ಇಂಡಿಯಾಗಳ ಸಿನಿಮಾಗಳ ಜಮಾನ. ತಮ್ಮ ಚಿತ್ರರಂಗದಲ್ಲಿ ಸ್ಟಾರ್ ಆಗಿದ್ದವರು ಪ್ಯಾನ್ ಇಂಡಿಯಾನಲ್ಲಿ ಸ್ಟಾರ್ ಆಗಲು ಸಾಧ್ಯವಾಗಿಲ್ಲ. ಪವನ್ ಕಲ್ಯಾಣ್, ಬಾಲಕೃಷ್ಣ, ದಳಪತಿ ವಿಜಯ್ ಇನ್ನೂ ಕೆಲವರು ಅವರ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್​ ನಟರು ಆದರೆ ಅವರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಸಾಧ್ಯವಾಗಿಲ್ಲ. ಪ್ರಭಾಸ್ ಈಗ ಭಾರತದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ. ನಟ ಯಶ್​ ಸಹ ಭಾರತದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್​ಗಳಲ್ಲಿ ಒಬ್ಬರು. ಇದೀಗ ಈ ಇಬ್ಬರು ಒಂದೇ ದಿನ ಎದುರು ಬದುರಾಗುತ್ತಿದ್ದಾರೆ.

ಪ್ರಭಾಸ್ ನಟನೆಯ ‘ರಾಜಾ ಡಿಲಕ್ಸ್’ ಸಿನಿಮಾ ಮುಂದಿನ ವರ್ಷ ಏಪ್ರಿಲ್ 10 ರಂದು ಬಿಡುಗಡೆ ಆಗಲಿದೆ. ನಿನ್ನೆಯಷ್ಟೆ ಸಿನಿಮಾದ ಸಣ್ಣ ಟೀಸರ್ ಒಂದು ಬಿಡುಗಡೆ ಆಗಿದ್ದು, ಪ್ರಭಾಸ್​ರ ಇತ್ತೀಚೆಗಿನ ಸಿನಿಮಾಗಳ ರೀತಿಯ ಸಿನಿಮಾ ಇದಲ್ಲ. ‘ಬಾಹುಬಲಿ’ ಸಿನಿಮಾದ ಬಳಿಕ ಪ್ರಭಾಸ್ ಎಲ್ಲವೂ ಲಾರ್ಜರ್ ದ್ಯಾನ್​ ದಿ ಲೈಫ್ ರೀತಿಯ ಸಿನಿಮಾಗಳನ್ನೇ ಮಾಡಿದ್ದಾರೆ. ‘ಸಾಹೋ’, ‘ಆದಿಪುರುಷ್’, ‘ಸಲಾರ್’, ‘ಕಲ್ಕಿ’ ಹೀಗೆ ಆದರೆ ‘ರಾಜಾ ಡಿಲಕ್ಸ್’ ಸಿನಿಮಾ ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಆದ ಬಳಿಕ ಮೊದಲ ಬಾರಿಗೆ ಕಾಮಿಡಿ ಜಾನರ್​ನ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.

ವಿಶೇಷವೆಂದರೆ ‘ರಾಜಾ ಡಿಲಕ್ಸ್’ ಸಿನಿಮಾ ಬರೀ ಹಾರರ್ ಕಾಮಿಡಿ ಮಾತ್ರವಲ್ಲ, ಇದು ಹಾರರ್ ರೊಮ್ಯಾಂಟಿಕ್ ಕಾಮಿಡಿ. ದೆವ್ವವೊಂದು ಯುವತಿಯನ್ನು ಪ್ರೀತಿಸುವ ಕತೆಯನ್ನು ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಅತೃಪ್ತ ಆತ್ಮದ ಪಾತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಈಗ ಬಿಡುಗಡೆ ಆಗಿರುವ ಟೀಸರ್​ನಲ್ಲಿ ಪ್ರಭಾಸ್​ ಹಳೆಯ ಮಾದರಿ ಕಾರೊಂದರಲ್ಲಿ ಬಂದಿಳಿಯುತ್ತಾರೆ, ಕೈಯಲ್ಲಿ ಹೂಗುಚ್ಛ ಇದ್ದು ರೊಮ್ಯಾಂಟಿಕ್ ಮೂಡ್​ನಲ್ಲಿದ್ದಾರೆ. ಕಾರಿನ ಕನ್ನಡಿ ಪ್ರಭಾಸ್​ ಗಾಗಿ ತನ್ನಷ್ಟಕ್ಕೆ ತಾನೇ ತಿರುಗುತ್ತದೆ. ಪ್ರಭಾಸ್ ತಮ್ಮನ್ನು ತಾವು ನೋಡಿಕೊಂಡು ಖುಷಿ ಪಡುತ್ತಾರೆ. ಸಿನಿಮಾ 2025ರ ಏಪ್ರಿಲ್ 10 ಕ್ಕೆ ತೆರೆಗೆ ಬರಲಿದೆ ಎಂದು ಸಹ ಟೀಸರ್​ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾದಲ್ಲಿ ಎರಡನೇ ನಾಯಕಿ ಅನ್ನೋ ವಿಚಾರ; ಖಡಕ್ ಆಗಿ ಉತ್ತರಿಸಿದ ನಟಿ

ಆದರೆ ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಸಿನಿಮಾ ಸಹ ಏಪ್ರಿಲ್ 10ಕ್ಕೆ ಬಿಡುಗಡೆ ಆಗುವುದಾಗಿ ಘೋಷಣೆ ಮಾಡಿದ್ದಾಗಿದೆ. ‘ಟಾಕ್ಸಿಕ್’ ಸಿನಿಮಾದ ಹೆಸರು ಬಿಡುಗಡೆ ಆದ ದಿನವೇ ಸಿನಿಮಾ ಏಪ್ರಿಲ್ 10, 2025ಕ್ಕೆ ಬಿಡುಗಡೆ ಆಗಲಿದೆ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಈಗ ಪ್ರಭಾಸ್​ರ ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗುತ್ತಿರುವುದಾಗಿ ಘೋಷಿಸಲಾಗಿದ್ದು, ಇಬ್ಬರು ಸಮಬಲದ ಪ್ಯಾನ್ ಇಂಡಿಯಾ ಸ್ಟಾರ್​ಗಳು ಬಾಕ್ಸ್ ಆಫೀಸ್​ ಜಿದ್ದಾಜಿದ್ದಿಗೆ ಮುಂದಾಗಿದ್ದು ಇಬ್ಬರಲ್ಲಿ ಯಾರು ಗೆಲ್ಲಲಿದ್ದಾರೆ ಕಾದು ನೋಡಬೇಕಿದೆ.

ಆದರೆ ಕೆಲವು ಮೂಲಗಳ ಪ್ರಕಾರ, ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ತಡವಾಗುತ್ತಿರುವ ಕಾರಣದಿಂದಲೇ ‘ರಾಜಾ ಡಿಲಕ್ಸ್’ ಸಿನಿಮಾ ಏಪ್ರಿಲ್ 10ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ ಎನ್ನಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಸಿನಿಮಾದ ಚಿತ್ರೀಕರಣ ತಡವಾಗಿದೆಯಂತೆ. ಹಾಗಾಗಿ ಏಪ್ರಿಲ್ ತಿಂಗಳ ಬದಲಿಗೆ ಮೇ ಅಥವಾ ಜೂನ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Tue, 30 July 24