ವೈರಲ್ ಆಗುತ್ತಿದೆ ಯಶ್ ಬೆತ್ತಲೇ ಸೀನ್​​, ರಣ್​​ಬೀರ್ ಕಪೂರ್ ಜೊತೆ ಹೋಲಿಕೆ ಏಕೆ?

Toxic movie: ಈ ಹಿಂದೆ ಬಿಡುಗಡೆ ಆಗಿದ್ದ ‘ಟಾಕ್ಸಿಕ್’ ಸಿನಿಮಾದ ಹಾಡು, ಪ್ರೋಮೊ ಸಖತ್ ರೊಮ್ಯಾಂಟಿಕ್ ಆಗಿ ಹಸಿ-ಬಿಸಿ ದೃಶ್ಯಗಳಿಂದ ಕೂಡಿತ್ತು. ಆದರೆ ನಿನ್ನೆ ಬಿಡುಗಡೆ ಆದ ಟ್ರೈಲರ್ ಆಕ್ಷನ್ ಭರಿತವಾಗಿದೆ. ಜೊತೆಗೆ ಯಶ್ ಅವರ ಹಲವು ಮಾಸ್, ಎಲಿವೇಷನ್ ದೃಶ್ಯಗಳನ್ನು ಒಳಗೊಂಡಿದೆ. ಆದರೆ ಟ್ರೈಲರ್​​ನಲ್ಲಿ ಇದ್ದ ಒಂದು ದೃಶ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆ ಆಗುತ್ತಿದೆ. ಅದುವೇ ಯಶ್ ಅವರ ಬೆತ್ತಲೆ ದೃಶ್ಯ.

ವೈರಲ್ ಆಗುತ್ತಿದೆ ಯಶ್ ಬೆತ್ತಲೇ ಸೀನ್​​, ರಣ್​​ಬೀರ್ ಕಪೂರ್ ಜೊತೆ ಹೋಲಿಕೆ ಏಕೆ?
Yash

Updated on: Aug 09, 2026 | 5:51 PM

ಮುಖ್ಯಾಂಶಗಳು

  • ಟಾಕ್ಸಿಕ್ ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ ರಿಲೀಸ್ ಆಗಿದೆ.
  • ಟ್ರೈಲರ್​​ನಲ್ಲಿನ ಆಕ್ಷನ್, ಡ್ರಾಮಾ ಅನ್ನು ಜನ ಮೆಚ್ಚಿಕೊಂಡಿದ್ದಾರೆ.
  • ಟ್ರೈಲರ್​​ನಲ್ಲಿರುವ ಯಶ್​ ಅವರ ಬೆತ್ತಲೆ ಸೀನ್​ ಬಗ್ಗೆ ಚರ್ಚೆ ನಡೆಯುತ್ತಿದೆ.

‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ (Toxic) ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ (ಆಗಸ್ಟ್ 08) ಬಿಡುಗಡೆ ಆಗಿದೆ. ನಾಲ್ಕು ನಿಮಿಷಗಳ ಈ ಟ್ರೈಲರ್ ಹಾಲಿವುಡ್​​ ಲೆವೆಲ್​​ನಲ್ಲಿದೆ. ಈ ಹಿಂದೆ ಬಿಡುಗಡೆ ಆಗಿದ್ದ ‘ಟಾಕ್ಸಿಕ್’ ಸಿನಿಮಾದ ಹಾಡು, ಪ್ರೋಮೊ ಸಖತ್ ರೊಮ್ಯಾಂಟಿಕ್ ಆಗಿ ಹಸಿ-ಬಿಸಿ ದೃಶ್ಯಗಳಿಂದ ಕೂಡಿತ್ತು. ಆದರೆ ನಿನ್ನೆ ಬಿಡುಗಡೆ ಆದ ಟ್ರೈಲರ್ ಆಕ್ಷನ್ ಭರಿತವಾಗಿದೆ. ಜೊತೆಗೆ ಯಶ್ ಅವರ ಹಲವು ಮಾಸ್, ಎಲಿವೇಷನ್ ದೃಶ್ಯಗಳನ್ನು ಒಳಗೊಂಡಿದೆ. ಆದರೆ ಟ್ರೈಲರ್​​ನಲ್ಲಿ ಇದ್ದ ಒಂದು ದೃಶ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆ ಆಗುತ್ತಿದೆ. ಅದುವೇ ಯಶ್ ಅವರ ಬೆತ್ತಲೆ ದೃಶ್ಯ.

ಟ್ರೈಲರ್​​ನಲ್ಲಿ ಬರುವ ಒಂದು ದೃಶ್ಯದಲ್ಲಿ ಯಶ್, ಬೆತ್ತಲೆಯಾಗಿ ನಿಂತಿದ್ದಾರೆ, ಅವರ ಎದುರು ನಟಿ ರುಕ್ಮಿಣಿ ವಸಂತ್ ಇದ್ದಾರೆ. ಯಶ್ ಮೈಮೇಲೆ ಬಟ್ಟೆ ಇಲ್ಲ, ಕೈಯಲ್ಲಿ ಮದ್ಯದ ಬಾಟಲಿ ಹಿಡಿದಿದ್ದಾರೆ. ‘ನಾಗರೀಕತೆಯಿಂದ ಚರ್ಚೆ ನಡೆಯುತ್ತೆ ಅನ್ನೋ ಉದ್ದೇಶದಿಂದ ಬಂದೆ ಎಂದು ರುಕ್ಮಿಣಿ ವಸಂತ್ ಹೇಳಿದರೆ, ‘ನಾನು ನಾಗರೀಕನ ಥರ ಕಾಣ್ತೀನ?’ ಎಂದು ಯಶ್ ಕೇಳುತ್ತಾರೆ. ಯಶ್ ಅವರು ಬೆತ್ತಲೆ ನಿಂತಿರುವ ದೃಶ್ಯದ ಸ್ಕ್ರೀನ್ ಶಾಟ್​​ ತೆಗೆದುಕೊಂಡು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ಸೀನ್​​ನಲ್ಲಿ ಪಾಪ ರುಕ್ಮಿಣಿ ಪಾತ್ರದ ಜೊತೆ ಏನೇನಾಗುತ್ತದೆಯೋ ಎಂದು ಆತಂಕ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು, ‘ನಮ್ಮ ರುಕ್ಮಿಣಿಗೆ ಏನೂ ಮಾಡಬೇಡ ರಾಯ’ ಎಂದಿದ್ದಾರೆ. ಇನ್ನು ಕೆಲವರು ಯಶ್ ಫಿಸೀಕ್ ಅನ್ನು ಕೊಂಡಾಡಿದ್ದಾರೆ. ಇನ್ನು ಕೆಲವರು ರುಕ್ಮಿಣಿ ವಸಂತ್ ಎದುರು ಯಶ್ ಹೀಗೆ ನಿಂತಿದ್ದಾರಾಲ್ಲ ಎಂದು ಬೇಸರ ಸಹ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್​’ನಲ್ಲಿ ಕಡಿಮೆ ಇದ್ದ ತಾರಾ ಸೀನ್​​ಗಳು ಬಳಿಕ ಹೆಚ್ಚಾಗಿದ್ದು ಏಕೆ?

ಇನ್ನು ಕೆಲವರು ಯಶ್ ಅವರ ಬೆತ್ತಲೆ ಚಿತ್ರವನ್ನು, ‘ಅನಿಮಲ್’ ಸಿನಿಮಾನಲ್ಲಿ ರಣ್​ಬೀರ್ ಕಪೂರ್ ಅವರ ಬೆತ್ತಲೆ ಚಿತ್ರಕ್ಕೆ ಹೋಲಿಸಿದ್ದಾರೆ. ‘ಟಾಕ್ಸಿಕ್’ ಟ್ರೈಲರ್ ಸೀನ್ ನೋಡಿದಾಗ ನನಗೆ ‘ಅನಿಮಲ್’ ಸಿನಿಮಾದ ಸೀನ್ ನೆನಪು ಬಂತು ಎಂದಿದ್ದಾರೆ. ಕೆಲವರು ‘ಇದು ‘ಅನಿಮಲ್’ ಸಿನಿಮಾದ ದೃಶ್ಯದ ಕಾಪಿ ಎಂದಿದ್ದಾರೆ. ಆದರೆ ಇನ್ನು ಕೆಲವರು, ‘ಅಸಲಿ ‘ಅನಿಮಲ್’ ಎಂದರೆ ಏನು ಎಂಬುದನ್ನು ಯಶ್ ರಣಬೀರ್‌ಗೆ ತೋರಿಸಿಕೊಡಲಿದ್ದಾರೆ’ ಎಂದು ಬರೆದಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಯಶ್ ಅವರ ಬೆತ್ತಲೆ ದೃಶ್ಯವನ್ನು ಜಾಣತನದಿಂದ ಸೆರೆ ಹಿಡಿಯಲಾಗಿದೆ. ಟ್ರೈಲರ್​​ನಲ್ಲಿ ಕೇವಲ ಒಂದು ಸೆಕೆಂಡ್​​ಗೆ ಈ ದೃಶ್ಯ ಬಂದು ಹೋಗುತ್ತದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈಗ ಅದೇ ದೃಶ್ಯದ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ರಾಯ ಮತ್ತು ಟಿಕೆಟ್ ಹೆಸರಿನ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಗೀತೂ ಮೋಹನ್​​ದಾಸ್ ಸಿನಿಮಾದ ನಿರ್ದೇಶಕಿ. ಸಿನಿಮಾವನ್ನು ಕೆವಿಎನ್ ಹಾಗೂ ಮಾನ್​​ಸ್ಟರ್ ಮೈಂಡ್ಸ್ ನಿರ್ಮಾಣ ಮಾಡಿದೆ. ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Sun, 9 August 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us