AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದಲ್ಲೇ ಹೆಚ್ಚು ಹುಡುಕಲ್ಪಟ್ಟ ನಟರಲ್ಲಿ ಪವನ್ ಕಲ್ಯಾಣ್​ಗೆ ಎರಡನೇ ಸ್ಥಾನ

Year Ender 2024: ವರ್ಷ ಮುಗಿಯುತ್ತಾ ಬಂದಿದೆ. ಈ ವರ್ಷ ಕೆಲ ಹೊಸ ಸ್ಟಾರ್​ಗಳು ಹುಟ್ಟಿದ್ದಾರೆ, ಈ ವರ್ಷ ಮನೊರಂಜನಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಸಹ ಆಗಿದೆ. ಇದೀಗ ಗೂಗಲ್, ವಿಶ್ವದಲ್ಲಿ ಈ ವರ್ಷ ಜನ ಅತಿ ಹೆಚ್ಚು ಯಾವ ನಟ ಅಥವಾ ನಟಿಯರ ಬಗ್ಗೆ ಹುಡುಕಾಡಿದ್ದಾರೆ ಎಂಬ ಪಟ್ಟಿ ಬಿಡುಗಡೆ ಮಾಡಿದ್ದು, ಪವನ್​ಗೆ ಎರಡನೇ ಸ್ಥಾನ ದೊರೆತಿದೆ. ಪವನ್ ಬಿಟ್ಟು ಇನ್ನೂ ಇಬ್ಬರು ಭಾರತದ ನಟಿಯರಿದ್ದಾರೆ.

ವಿಶ್ವದಲ್ಲೇ ಹೆಚ್ಚು ಹುಡುಕಲ್ಪಟ್ಟ ನಟರಲ್ಲಿ ಪವನ್ ಕಲ್ಯಾಣ್​ಗೆ ಎರಡನೇ ಸ್ಥಾನ
Pawan Kalyan
ಮಂಜುನಾಥ ಸಿ.
|

Updated on:Dec 19, 2024 | 11:35 AM

Share

2024 ಮುಗಿಯುತ್ತಾ ಬಂದಿದೆ. ಈ ವರ್ಷ ಭಾರತ ಮತ್ತು ವಿಶ್ವದಾದ್ಯಂತ ಹಲವು ಪ್ರಮುಖ ಘಟನೆಗಳು ನಡೆದಿವೆ. ಮನೊರಂಜನಾ ಕ್ಷೇತ್ರದಲ್ಲಿಯೂ ಸಹ ಸಾಕಷ್ಟು ಬದಲಾವಣೆಗಳು ನಡೆದಿವೆ. ಹೊಸ ಸ್ಟಾರ್​ಗಳು ಹುಟ್ಟಿದ್ದಾರೆ, ಕೆಲವು ಅದ್ಭುತ ಸಿನಿಮಾಗಳು ಬಂದಿವೆ. ಇದೀಗ ಗೂಗಲ್, ಈ ವರ್ಷ ಜನ ಅತಿ ಹೆಚ್ಚು ಹುಡುಕಾಟಿದ ನಟ, ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶೇಷವೆಂದರೆ ವಿಶ್ವದಲ್ಲಿಯೇ ಈ ವರ್ಷ ಅತಿ ಹೆಚ್ಚು ಹುಡುಕಾಡಲ್ಪಟ್ಟ ನಟರ ಪಟ್ಟಿಯಲ್ಲಿ ತೆಲುಗಿನ ಸ್ಟಾರ್ ನಟ ಪವನ್​ ಕಲ್ಯಾಣ್​ಗೆ ಎರಡನೇ ಸ್ಥಾನ ದೊರೆತಿದೆ.

ಹಾಲಿವುಡ್ ನಟ ಕೇಟ್ ವಿಲಿಯಮ್ಸ್​ ವಿಶ್ವದಲ್ಲೇ ಅತಿ ಹೆಚ್ಚು ಹುಡುಕಲ್ಪಟ್ಟ ನಟರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ನಟ ಪವನ್ ಕಲ್ಯಾಣ್ ಇದ್ದಾರೆ. ವಿಶೇಷವೆಂದರೆ 2024 ರಲ್ಲಿ ಪವನ್ ಕಲ್ಯಾಣ್ ಅವರ ಒಂದೇ ಒಂದು ಸಿನಿಮಾ ಸಹ ಬಿಡುಗಡೆ ಆಗಿಲ್ಲ. ಆದರೂ ಸಹ ಅವರ ಜನಪ್ರಿಯ ತಗ್ಗಿಲ್ಲ ಬದಲಿಗೆ ವಿಶ್ವಮಟ್ಟದಲ್ಲಿ ಹೆಚ್ಚಿದೆ. ಇದಕ್ಕೆ ಕಾರಣ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ.

ಜನಸೇನಾ ಪಕ್ಷದ ಸಂಸ್ಥಾಪಕರೂ ಆಗಿರುವ ಪವನ್ ಕಲ್ಯಾಣ್, ಈ ಬಾರಿ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ಮಾಡಿದ್ದರು. ಚುನಾವಣೆ ನಡೆಯುವವರೆಗೂ ಪ್ರತಿದಿನ ಸುದ್ದಿಯಲ್ಲಿದ್ದ ಪವನ್ ಕಲ್ಯಾಣ್, ಆ ನಂತರ ಚುನಾವಣೆ ಫಲಿತಾಂಶ ಬಂದ ಬಳಿಕ ಗೆದ್ದು ಆಂಧ್ರ ಪ್ರದೇಶದ ಡಿಸಿಎಂ ಸಹ ಆಗಿದ್ದು, ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಾಗಿ ಸಹಜವಾಗಿಯೇ ಪವನ್ ಕಲ್ಯಾಣ್ ಬಗ್ಗೆ ಹೆಚ್ಚಿನ ಜನ ನಿಯಮಿತವಾಗಿ ಗೂಗಲ್​ನಲ್ಲಿ ಹುಡುಕಾಟ ನಡೆಸಿದ್ದು ಪವನ್ ಕಲ್ಯಾಣ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟವರ ಪಟ್ಟಿಯಲ್ಲಿಯೂ ಸಹ ಪವನ್ ಕಲ್ಯಾಣ್ ಇದ್ದಾರೆ.

ಇದನ್ನೂ ಓದಿ:‘ಪುಷ್ಪ 2’ ಭಾರಿ ಯಶಸ್ಸು ಪವನ್ ಕಲ್ಯಾಣ್​ಗೆ ಧನ್ಯವಾದ ಹೇಳಿದ ಅಲ್ಲು ಅರ್ಜುನ್

ಇನ್ನು ಈ ಗ್ಲೋಬಲ್ ಪಟ್ಟಿಯಲ್ಲಿ ಭಾರತದ ಇನ್ನಿಬ್ಬರು ನಟಿಯರು ಸಹ ಇದ್ದಾರೆ. ಈ ಪಟ್ಟಿಯಲ್ಲಿ ನಟಿ ಹಿನಾ ಖಾನ್ ಹೆಸರು ಐದನೇ ಸ್ಥಾನದಲ್ಲಿದೆ. ಹಿನಾ ಖಾನ್, ಸ್ತನ ಕ್ಯಾನ್ಸರ್​ನಿಂದ ಬಳಲಿದ್ದರು. ಇದೇ ಕಾರಣಕ್ಕೆ ಅವರು ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದರು. ಕೆಲ ವಾರಗಳ ಹಿಂದೆ ಹಿಂದಿ ಬಿಗ್​ಬಾಸ್​ಗೆ ಅತಿಥಿಯಾಗಿಯೂ ಸಹ ಹಿನಾ ಖಾನ್ ಬಂದಿದ್ದರು. ಆಗಲೂ ಸಹ ಹಿನಾ ಖಾನ್ ಹೆಚ್ಚು ಸುದ್ದಿಗೆ ಬಂದಿದ್ದರು.

‘ದಸ್ವಿ’,‘ಏರ್​ಲಿಫ್ಟ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ನಿಮ್ರತ್ ಕೌರ್ ಸಹ ಅತಿ ಹೆಚ್ಚು ಹುಡುಕಲ್ಪಟ್ಟವರ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ನಿಮ್ರತ್ ಕೌರ್ ಸುದ್ದಿಗೆ ಬಂದಿದ್ದು, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರಿಂದ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಿದ್ದು, ಈ ವಿಚ್ಛೇದನಕ್ಕೆ ನಿಮ್ರತ್ ಕೌರ್ ಕಾರಣ ಎಂಬ ಸುದ್ದಿ ಹರಿದಾಡಿತ್ತು. ಅಭಿಷೇಕ್ ಬಚ್ಚನ್ ಬಾಳಿನಲ್ಲಿ ನಿಮ್ರತ್ ಎಂಟ್ರಿ ಕೊಟ್ಟ ಕಾರಣದಿಂದಲೇ ವಿಚ್ಛೇದನ ಆಗುತ್ತಿದೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:09 am, Thu, 19 December 24

ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?