AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀರಿಯಲ್​​ನಲ್ಲೂ ಬಂತು ಎಐ; ಹೊಸ ಪ್ರಯೋಗಕ್ಕೆ ಇಳಿದ ಜೀ

ಜೀ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಗೂಗಲ್ ಜೊತೆ ಕೈಜೋಡಿಸಿದ್ದು, ಗೂಗಲ್ ಸರ್ಚ್‌ನ ಹೊಸ ಎಐ ಮೋಡ್ ಅನ್ನು ತನ್ನ ಜನಪ್ರಿಯ ಧಾರಾವಾಹಿಗಳ ಕಥಾಹಂದರದಲ್ಲಿ ಪರಿಚಯಿಸುತ್ತಿದೆ. ಧಾರಾವಾಹಿ ಪಾತ್ರಗಳು ತಮ್ಮ ನಿತ್ಯದ ನಿರ್ಧಾರಗಳಿಗೆ ಎಐ ಮೋಡ್ ಬಳಸುವುದನ್ನು ತೋರಿಸುವ ಮೂಲಕ ಪ್ರೇಕ್ಷಕರಿಗೆ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಸುಲಭವಾಗಿ ತಲುಪಿಸಲು ಪ್ರಯತ್ನಿಸುತ್ತಿದೆ.

ಸೀರಿಯಲ್​​ನಲ್ಲೂ ಬಂತು ಎಐ; ಹೊಸ ಪ್ರಯೋಗಕ್ಕೆ ಇಳಿದ ಜೀ
ಧಾರಾವಾಹಿಗಳಲ್ಲಿ ಎಐ
ರಾಜೇಶ್ ದುಗ್ಗುಮನೆ
|

Updated on: Sep 01, 2026 | 3:01 PM

Share

ಇತ್ತೀಚೆಗೆ ಎಲ್ಲೆಲ್ಲೂ ಎಐ ಹವಾ ಜೋರಾಗಿದೆ. ಯಾವುದೇ ಸಣ್ಣ ಪ್ರಶ್ನೆ ಎದುರಾದರೂ ಅದಕ್ಕೆ ಎಐನಲ್ಲಿ ಉತ್ತರ ಸಿಗುತ್ತದೆ. ಎಂತಹುದೇ ಕಠಿಣ ಪ್ರಶ್ನೆ ಇದ್ದರೂ ಅದಕ್ಕೆ ಎಐನಲ್ಲಿ ಉತ್ತರ ಸಿಗುತ್ತದೆ. ಈಗ ಸೀರಿಯಲ್​​ಗಳಲ್ಲೂ ಎಐ ಬಳಕೆ ಆಗುತ್ತಿದೆ. ಧಾರಾವಾಹಿಗಳಲ್ಲಿ ಬರೋ ಪಾತ್ರಧಾರಿಗಳು ಎಐ ಬಳಕೆ ಮಾಡಿಕೊಂಡು ಉತ್ತರ ಕಂಡುಕೊಳ್ಳುವ ಹೊಸ ಪ್ರಕ್ರಿಯೆ ಶುರುವಾಗಿದೆ! ಜೀ ಸಂಸ್ಥೆ ಹೀಗೊಂದು ಪ್ರಯೋಗಕ್ಕೆ ಮುಂದಾಗಿದೆ. ಇದನ್ನು ಪರಿಚಯಿಸುವುದರ ಹಿಂದೆ ಒಂದು ದೊಡ್ಡ ಉದ್ದೇಶ ಇದೆ.

ತಂತ್ರಜ್ಞಾನ ಹಾಗೂ ಮನರಂಜನಾ ಕ್ಷೇತ್ರವನ್ನು ಒಂದೆಡೆ ತರುವ ಉದ್ದೇಶದಿಂದ ಜೀ ಈ ಪ್ರಯೋಗಕ್ಕೆ ಮುಂದಾಗಿದೆ. ಗೂಗಲ್ ಜೊತೆ ಕೈಜೋಡಿಸಿರೋ ಜೀ ತನ್ನ ಜನಪ್ರಿಯ ಧಾರಾವಾಹಿಗಳ ಕಥಾಹಂದರದಲ್ಲೇ ಎಐ ಮೂಡ್​ನ ಉಪಯೋಗ ಹಾಗೂ ಬಳಕೆ ಬಗ್ಗೆ ಹೇಳುತ್ತಿದೆ.

ಸದ್ಯ ಹಿಂದಿಯಲ್ಲಿ ‘ಗಂಗಾ ಮಾಯಿ ಕೀ ಬೇಟಿಯಾ’ ಹಾಗೂ ‘ತುಮ್ ಸೇ ತುಮ್ ತಕ್’ ನಂತಹ ಪ್ರಸಿದ್ಧ ಧಾರಾವಾಹಿಗಳ ಪಾತ್ರಗಳು ತಮ್ಮ ದಿನನಿತ್ಯದ ಸಮಸ್ಯೆಗಳು ಹಾಗೂ ನಿರ್ಧಾರಗಳಿಗೆ ಎಐ ಮೋಡ್ ಬಳಸಿ ಪರಿಹಾರ ಕಂಡುಕೊಳ್ಳುವುದನ್ನು ತೋರಿಸಲಾಗುತ್ತದೆ.

ಇದನ್ನೂ ಓದಿ: ರಾಜಮೌಳಿ ವಾರಾಣಸಿ  ಸಿನಿಮಾದ ಡಬ್ಬಿಂಗ್‌ಗೆ ಎಐ ಬದಲು 1500 ಧ್ವನಿಗಳ ಆಡಿಷನ್

ಕನ್ನಡಕ್ಕೂ ಬರುತ್ತಾ?

ಶೀಘ್ರವೇ ಇದು ಕನ್ನಡಕ್ಕೂ ಬರುವ ನಿರೀಕ್ಷೆ ಇದೆ. ಧಾರಾವಾಹಿಗಳು ಹಳ್ಳಿ ಹಳ್ಳಿಯನ್ನು ತಲುಪುತ್ತವೆ. ಈ ಧಾರಾವಾಹಿಯನ್ನು ನೋಡುವ ಜನಸಾಮಾನ್ಯರು ತಮ್ಮ ಮೊಬೈಲ್​ನಲ್ಲಿ ಇಂತಹ ಒಂದು ಫೀಚರ್ ಇದೆ ಎಂಬುದನ್ನು ಅರಿತುಕೊಳ್ಳಬಹುದು. ಹಳ್ಳಿಗಳಲ್ಲಿ ಎದುರಾಗುವ ಅನೇಕ ತೊಂದರೆ ಹಾಗೂ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು ಎಂಬುದು ಇದರ ಮುಖ್ಯ ಉದ್ದೇಶ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us