Pre-IPO Perpetualsನಲ್ಲಿ OpenAI ಕಾಂಟ್ರಾಕ್ಟ್ ಸೇರಿಸಿದ Binance Futures; SpaceX-ಲಿಂಕ್ಡ್ ಕಾಂಟ್ರಾಕ್ಟ್ ನಂತರದ ಟ್ರೇಡಿಂಗ್ ವಾಲ್ಯೂಮ್ $280 ಮಿಲಿಯನ್ಗಿಂತ ಹೆಚ್ಚು
Binance ತನ್ನ Pre-IPO Perpetuals ವಿಭಾಗದಲ್ಲಿ OPENAIUSDT ಅನ್ನು ಲಿಸ್ಟ್ ಮಾಡಿದೆ. ಇದು OpenAI ಯ ಸಾರ್ವಜನಿಕ ಮಾರುಕಟ್ಟೆ ಮೌಲ್ಯಮಾಪನವನ್ನು ಆಧರಿಸಿದ ಡೆರಿವೇಟಿವ್ಸ್ ಕಾಂಟ್ರಾಕ್ಟ್ ಆಗಿದ್ದು, ಅರ್ಹ ಬಳಕೆದಾರರಿಗೆ IPO ಗೂ ಮುನ್ನ ಮಾರುಕಟ್ಟೆ ನಿರೀಕ್ಷೆಗಳಿಗೆ ಅನುಗುಣವಾಗಿ ವಹಿವಾಟು ನಡೆಸಲು ಅವಕಾಶ ನೀಡುತ್ತದೆ. ಆದಾಗ್ಯೂ, ಇದು ಷೇರು ಮಾಲೀಕತ್ವವಲ್ಲ ಮತ್ತು ಹೆಚ್ಚಿನ ಅಪಾಯಗಳನ್ನು ಒಳಗೊಂಡಿದೆ. SpaceX ಕಾಂಟ್ರಾಕ್ಟ್ ಯಶಸ್ಸಿನ ನಂತರ ಈ ಹೊಸ ಲಿಸ್ಟಿಂಗ್ ಬಂದಿದೆ.

Binance ತನ್ನ Binance Futures ನಲ್ಲಿ Pre-IPO Perpetuals ಕ್ಯಾಟಗರಿಯನ್ನು ಮುಂದುವರಿಸುತ್ತಾ OPENAIUSDT Pre-IPO Perpetual ನ Listing ಅನ್ನು ಘೋಷಿಸಿದೆ. ಕಂಪನಿಯ ಪ್ರಕಾರ, ಈ ಕಾಂಟ್ರಾಕ್ಟ್ OpenAI Group PBC ಯ ಅಂದಾಜು Public-Market Valuation ಆಧಾರಿತವಾಗಿದೆ ಮತ್ತು Eligible Users ಗೆ ಸಂಭಾವ್ಯ ಪಬ್ಲಿಕ್ ಲಿಸ್ಟಿಂಗ್ಗಿಂತ ಮೊದಲು Market Expectations ಆಧಾರದ ಮೇಲೆ Exposure ನೀಡಲು ರೂಪಿಸಲಾಗಿದೆ.
ಈ Product ಒಂದು Derivatives (Perpetual Futures) ಕಾಂಟ್ರಾಕ್ಟ್ ಆಗಿದೆ. ಇದು IPO ನಲ್ಲಿ ಷೇರುದಾರಿಕೆ, ಷೇರು ಅಲಾಟ್ಮೆಂಟ್, ಅಥವಾ ಈಕ್ವಿಟಿ ಓನರ್ಶಿಪ್ ಅನ್ನು ನೀಡುವುದಿಲ್ಲ. Pre-IPO Perpetuals ನ ಲಭ್ಯತೆಯು ಪ್ರದೇಶ ಮತ್ತು ಯೂಸರ್ ಎಲಿಜಿಬಿಲಿಟಿಗೆ ಅನುಗುಣವಾಗಿ ಬದಲಾಗಬಹುದು.
Binance ಪ್ರಕಾರ ಆರಂಭಿಕ ಮಾರುಕಟ್ಟೆ ಸ್ಪಂದನೆ
Binance ಪ್ರಕಾರ, Pre-IPO Perpetuals ನ ಮೊದಲ Listing ಆದ SpaceX-ಲಿಂಕ್ಡ್ ಕಾಂಟ್ರಾಕ್ಟ್ ಆರಂಭ ಆದ ಮೊದಲ ಐದು ದಿನಗಳಲ್ಲಿ ಒಟ್ಟು Cumulative Trading Volume $280 million ಗಿಂತ ಹೆಚ್ಚಾಗಿತ್ತು. ಈ ಅಂಕಿ-ಅಂಶವು Binance ನ Platform ನಲ್ಲಿ ದಾಖಲಾದ ಟ್ರೇಡಿಂಗ್ ಆ್ಯಕ್ಟಿವಿಟಿ ಆಧಾರಿತವಾಗಿದೆ.
ಆರಂಭಿಕ ಟ್ರ್ಯಾಕ್ಷನ್ ಸೂಚಿಸುವುದೇನೆಂದರೆ, ಅರ್ಹ ಯೂಸರ್ಗಳು ದೊಡ್ಡ ಮಾರ್ಕೆಟ್ ಇವೆಂಟ್ಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಟ್ರ್ಯಾಕ್ ಮಾಡಲು Crypto-Native ಪ್ರಾಡಕ್ಟ್ಸ್ ಮೂಲಕ ಹೊಸ ಆಯ್ಕೆಗಳನ್ನು ಹುಡುಕುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ.
Binance ನಲ್ಲಿ ಸ್ಪಾಟ್ ಮತ್ತು ಡಿರೈವೇಟಿವ್ಸ್ನ ಬ್ಯುಸಿನೆಸ್ ಹೆಡ್ ಆಗಿರುವ Shunyet Jan (Head of Spot and Derivatives Business at Binance) ಅವರು ಹೀಗೆ ಹೇಳಿದ್ದಾರೆ, “ಈ ಕ್ಯಾಟಗರಿ ಅನಾವರಣಗೊಂಡ ಮೊದಲ ದಿನಗಳಲ್ಲಿ ನಾವು ಕಂಡ ವೇಗವು, Users ಕ್ರಿಪ್ಟೋ-ನೇಟಿವ್ ಪ್ರೊಡಕ್ಟ್ಸ್ ಮೂಲಕ ದೊಡ್ಡ Market Narratives ವರೆಗೆ ತಲುಪಲು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎಂಬುದಕ್ಕೆ ಪಕ್ಕಾ ಸಂಕೇತವಾಗಿದೆ. ನಮ್ಮ ಮೊದಲ ಲಿಸ್ಟಿಂಗ್ನ ಐದು ದಿನಗಳ ಒಳಗಾಗಿ ಒಟ್ಟು ಟ್ರೇಡಿಂಗ್ ವಾಲ್ಯೂಮ್ $280 ಮಿಲಿಯನ್ಗಿಂತ ಹೆಚ್ಚು ತಲುಪಿದ್ದು ನಮಗೆ Pre-IPO Perpetuals ನ ನೋಟ, ಮತ್ತು Binance ಅನ್ನು ಒಂದು Financial Super App ಆಗಿ ಬದಲಾಯಿಸುವ ನಮ್ಮ ದೊಡ್ಡ ಸ್ಟ್ರಾಟಿಜಿ, ಎರಡರ ಮೇಲೂ ಭರವಸೆಯನ್ನು ನೀಡುತ್ತದೆ.”
SpaceX ನಂತರ OpenAI-ಆಧಾರಿತ ಕಾಂಟ್ರಾಕ್ಟ್
Binance ಇದಕ್ಕಿಂತ ಮೊದಲು SPCXUSDT Pre-IPO Perpetual ಲಾಂಚ್ ಮಾಡುವುದಾಗಿ ಘೋಷಿಸಿತ್ತು, ಇದನ್ನು SpaceX ನ ಅಂದಾಜು ಸಾರ್ವಜನಿಕ ಮಾರುಕಟ್ಟೆ ವ್ಯಾಲ್ಯುಯೇಶನ್ನ ಆಧಾರಿತ ಎಂದು ಹೇಳಲಾಗಿತ್ತು. ಈಗ Binance, OPENAIUSDT Pre-IPO Perpetual ನ ಲಿಸ್ಟಿಂಗ್ ಅನ್ನು ಘೋಷಿಸಿದೆ. ಇದನ್ನು ಕಂಪನಿಯು OpenAI ಗೆ ಸೇರಿದ ಮಾರ್ಕೆಟ್ ಎಕ್ಸ್ಪೆಕ್ಟೇಶನ್ ಅನ್ನು ಟ್ರ್ಯಾಕ್ ಮಾಡುವ ಒಂದು ಹೆಚ್ಚುವರಿ ಆಯ್ಕೆಯಾಗಿ ಪರಿಚಯಿಸಿದೆ.
Binance ಪ್ರಕಾರ, OPENAIUSDT Pre-IPO Perpetual ಇದು USDT ಯಲ್ಲಿ Margined ಮತ್ತು Settled ಆಗಿರುತ್ತದೆ. ಲೆವರೇಜ್, ಟಿಕ್ ಸೈಜ್, ಫಂಡಿಂಗ್ ರೇಟ್, ಮತ್ತು ಲಿಸ್ಟಿಂಗ್ ಟೈಮ್ನಂತಹ ಪಾರಾಮೀಟರ್ಗಳನ್ನು ಸಂಬಂಧಪಟ್ಟ Contract Specifications ಗಳಲ್ಲಿ ನೀಡಲಾಗುತ್ತದೆ.
Pre-IPO Perpetuals ಹೇಗೆ ಕೆಲಸ ಮಾಡುತ್ತವೆ?
Binance ಹೇಳಿರುವಂತೆ, IPO ಗಿಂತ ಮೊದಲು ಈ ಕಾಂಟ್ರಾಕ್ಟ್ಗಳು ಸಾಮಾನ್ಯವಾಗಿ ಸಾರ್ವಜನಿಕವಾಗಿ ಲಭ್ಯ ಇರುವ ಪ್ರೈಸಿಂಗ್ ಸಿಗ್ನಲ್ಗಳನ್ನು ಪ್ರತಿಬಿಂಬಿಸುವಂತೆ ಮಾಡಲು ಡಿಸೈನ್ ಮಾಡಲ್ಪಟ್ಟಿವೆ. ಇವುಗಳಲ್ಲಿ (ಎಲ್ಲಿ ಅನ್ವಯಿಸುತ್ತದೆಯೋ ಅಲ್ಲಿ) ಘೋಷಿತ ಬೆಲೆ ಶ್ರೇಣಿ ಮತ್ತು ಅಂತಿಮ ಆಫರ್ ಪ್ರೈಸ್ನಂತಹ ಸಂಕೇತಗಳು ಸೇರಿರಬಹುದು.
ಕಂಪನಿಯ ಪ್ರಕಾರ, ಒಮ್ಮೆ ಅಂಡರ್ಲೈಯಿಂಗ್ (Underlying) ಕಂಪನಿಯು ಪಬ್ಲಿಕ್ ಮಾರ್ಕೆಟ್ಸ್ನಲ್ಲಿ ಟ್ರೇಡ್ ಆಗಲು ಶುರುವಾದ ತಕ್ಷಣ, ಕಾಂಟ್ರಾಕ್ಟ್ಸ್ ಲೈವ್ ಮಾರ್ಕೆಟ್ ಕಾರ್ಯವನ್ನು ರಿಫ್ಲೆಕ್ಟ್ ಮಾಡಲು Transition ಮಾಡಬಹುದು.
ಯಾವುದಾದರೂ IPO ಮುಂದೂಡಿಕೆ ಅಥವಾ ಕ್ಯಾನ್ಸಲ್ಡ್ ಆದಲ್ಲಿ, Binance ಯಾವುದೇ Delisting ಬಗ್ಗೆ ಮುಂಗಡ ನೋಟೀಸ್ ನೀಡುವುದಾಗಿ ಮತ್ತು ಕಾಂಟ್ರಾಕ್ಟ್ಗಳನ್ನು ಒಂದು ಟ್ರಾನ್ಸ್ಪರೆಂಟ್ ಪ್ರೋಸಸ್ ಪ್ರಕಾರ ಸೆಟಲ್ ಮಾಡುವುದಾಗಿ ಹೇಳಿದೆ. ಅಂಡರ್ಲೈಯಿಂಗ್ ಅಸೆಟ್ಗಾಗಿ (Underlying Asset) ಸ್ಟೇಬಲ್ ಮಾರ್ಕ್ ಪ್ರೈಸ್ ಅನ್ನು ಹೊರತೆಗೆಯಬಹುದು ಎಂದು ನಿರ್ಧರಿಸಿದ ನಂತರ, Binance ಈ ಕಾಂಟ್ರಾಕ್ಟ್ ಅನ್ನು ಒಂದು Standard TradFi Perpetual Contract Framework ಗೆ Transition ಮಾಡಬಹುದು ಎಂದೂ ಸಹ ಹೇಳಿದೆ.
ಜವಾಬ್ದಾರಿಯುತ ಅಳವಡಿಕೆ (Responsible Adoption): ಟ್ರೇಡಿಂಗ್‌ಗೆ ಮುನ್ನ ಗಮನಿಸಬೇಕಾದ ವಿಷಯಗಳು
Perpetual Futures ನಂತಹ ಡೆರಿವೇಟಿವ್ ಪ್ರಾಡಕ್ಟ್ಗಳು ವಿಶೇಷ ಲೆವರೇಜ್ನೊಂದಿಗೆ High-Risk ಆಗಿರುತ್ತವೆ. ಟ್ರೇಡಿಂಗ್ ಮಾಡುವ ಮುನ್ನ ಯೂಸರ್ಗಳು ಕಡ್ಡಾಯವಾಗಿ ಕಾಂಟ್ರಾಕ್ಟ್ ಸ್ಪೆಸಿಫಿಕೇಶನ್ಸ್, ಮಾರ್ಜಿನ್ ರಿಕ್ವೈರ್ಮೆಂಟ್ಸ್, ಮತ್ತು ಲಿಕ್ವಿಡೇಶನ್ ರೂಲ್ಗಳನ್ನು ಅರ್ಥಮಾಡಿಕೊಳ್ಳಬೇಕು.
ಯಾವ ಯೂಸರ್ಗಳು ಈ ಕಾನ್ಸೆಪ್ಟ್ಗಳನ್ನು ಇನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಬಯಸುತ್ತಾರೋ, ಅವರು Binance Academy ನಲ್ಲಿ ಪರ್ಪೆಚುಯಲ್ ಫ್ಯೂಚರ್ಸ್, ಲೆವರೇಜ್, ಮಾರ್ಜಿನ್, ಫಂಡಿಂಗ್ ರೇಟ್ ಮತ್ತು ರಿಸ್ಕ್ ಮ್ಯಾನೇಜ್ಮೆಂಟ್ಗೆ ಸಂಬಂಧಿಸಿದ ಲರ್ನಿಂಗ್ ರಿಸೋರ್ಸಸ್ಗಳನ್ನು ನೋಡಬಹುದು.
(ಗಮನಿಸಿ: ಇದು ಪ್ರಾಯೋಜಿತ ಲೇಖನ)




