Earphone Side Effects: ನಿಮ್ಮ ಮಕ್ಕಳು ಸದಾ ಇಯರ್ ಪೋನ್ ಬಳಕೆ ಮಾಡ್ತಾರಾ? ಪೋಷಕರೇ ಎಚ್ಚರ!
ನಿಮ್ಮ ಮಕ್ಕಳು ಸದಾ ಇಯರ್ ಫೋನ್( Earphone) ಬಳಕೆ ಮಾಡುತ್ತಾರಾ, ಡಿಜೆಹಾಗೂ ಅಬ್ಬರದ ಮ್ಯೂಸಿಕ್ ಕೇಳುತ್ತಿರುತ್ತಾರಾ? ಹಾಗಾದರೆ ಪೋಷಕರು ಎಚ್ಚೆತ್ತುಕೊಳ್ಳಲೇ ಬೇಕು.
ನಿಮ್ಮ ಮಕ್ಕಳು ಸದಾ ಇಯರ್ ಫೋನ್( Earphone) ಬಳಕೆ ಮಾಡುತ್ತಾರಾ, ಡಿಜೆ ಹಾಗೂ ಅಬ್ಬರದ ಮ್ಯೂಸಿಕ್ ಕೇಳುತ್ತಿರುತ್ತಾರಾ? ಹಾಗಾದರೆ ಪೋಷಕರು ಎಚ್ಚೆತ್ತುಕೊಳ್ಳಲೇ ಬೇಕು. ಕೋವಿಡ್ ನಂತರ ಮಕ್ಕಳು ಇಯರ್ ಫೋನ್ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ, ಆನ್ಲೈನ್ ತರಗತಿಗಳಿಂದಾಗಿ ಅಭ್ಯಾಸ ಶುರುವಾಗಿದ್ದು, ಇದೀಗ ಶಾಲೆ ಆರಂಭವಾದರೂ ಆ ಅಭ್ಯಾಸ ಬಿಡುತ್ತಿಲ್ಲ. ಸದಾ ಇಯರ್ ಫೋನ್ ಬಳಕೆ ಮಾಡುತ್ತಿದ್ದರೆ ಶಾಶ್ವತ ಕಿವುಡುತನ ಉಂಟಾಗಬಹುದು.
ಈ ಮೊದಲು ಕಾಲೇಜು ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೊಬೈಲ್, ಇಯರ್ ಫೋನ್ಗಳ ಬಳಕೆ ಮಾಡುತ್ತಿದ್ದರು, ಆದರೆ ಇದೀಗ ಹೈಸ್ಕೂಲ್, ಪ್ರೈಮರಿ ಶಾಲೆಯ ವಿದ್ಯಾರ್ಥಿಗಳು ಕೂಡ ಹೆಚ್ಚಾಗಿ ಇಯರ್ ಫೋನ್ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ.
ನಿರಂತರ ಇಯರ್ ಫೋನ್ ಬಳಕೆಯಿಂದ ಶಾಶ್ವತ ಕಿವುಡುತನ ಸಮಸ್ಯೆ ಹೆಚ್ಚೆಚ್ಚು ಇಯರ್ ಫೋನ್ ಬಳಕೆ ಮಾಡಿದರೆ ವೃದ್ಯಾಪಕ್ಕೂ ಮುನ್ನವೇ ಅಂದ್ರೆ 40-45 ವಯಸ್ಸಿಗೆ ಕಿವುಡುತನ ಸಮಸ್ಯೆ ಎದುರಾಗಲಿದೆ. ಕಳೆದ ಎರಡು ವರ್ಷದಲ್ಲಿ ಇಯರ್ ಪೋನ್ ಬಳಕೆ ಮಾಡುವ ಮಕ್ಕಳು ಹಾಗೂ ಯುವಕರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಹೆಚ್ಚು ಬಳಕೆಯಿಂದ ಶ್ರವಣ ಸಮಸ್ಯೆ ಎದುರಾಗುತ್ತದೆ, ಯುವಕರು ಶಾಶ್ವತ ಕಿವುಡುತನಕ್ಕೂ ಬಲಿಯಾಗುತ್ತಿದ್ದಾರೆ.
ಯುವಕರು ಹಾಗೂ ಹದಿಯರಿಯದ ವಯಸ್ಸಿನವರಲ್ಲಿ ಹೆಚ್ಚಾಗಿ ಕಿವುಡುತನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕಳೆದ ಎರಡು ವರ್ಷದಿಂದ ಶ್ರವಣದೋಷದಿಂದ ಕಿವುಡುತನಕ್ಕೆ ತುತ್ತಾಗುವರ ಪ್ರಮಾಣ 20-25% ಏರಿಕೆಯಾಗಿದೆ. 40 ರಿಂದ 50% ವಯಸ್ಸು ಮೇಲ್ಪಟ್ಟವರಲ್ಲಿ ಶಬ್ದಮಾಲಿನ್ಯದಿಂದ ಕಿವುಡುತನದ ಪ್ರಮಾಣ ಶೇ 65-70% ರಷ್ಟು ಹೆಚ್ಚಾಗಿದೆ.
ಇಯರ್ ಪೋನ್ ಹೆಚ್ಚಾದ ಬಳಕೆಯಿಂದ ಕಿವಿಯ ತಮಟೆಗೆ ಗಂಭಿರ ಸಮಸ್ಯೆಯುಂಟಾಗುತ್ತದೆ. ಇಯರ್ ಫೋನ್ ನಿಂದ ಏನ್ನೆಲ್ಲಾ ಸಮಸ್ಯೆ? NIHL( ನಾಯ್ಸ್ ಇನ್ಡ್ಯೂಸ್ಡ್ ಲಾಸ್) ಶ್ರವಣ ದೋಷ ಸುಸ್ತು ಕಿವಿ ಸೋರಿಕೆ ಕಿವಿ ನೋವು
ಹಾಗಿದ್ದರೆ ಇಯರ್ ಫೋನ್ ಎಷ್ಟು ಬಳಕೆ ಸೇಫ್? ಮನುಷ್ಯ ದಿನದಲ್ಲಿ 60 ನಿಮಿಷಗಳಿಗಿಂತ ಹೆಚ್ಚು ಹೊತ್ತು ಇಯರ್ ಫೋನ್ ಬಳಕೆ ಮಾಡಬಾರದು ಎಂದು ಅಧ್ಯಯನ ಹೇಳುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ