Ashwagandha Benefits: ಅಶ್ವಗಂಧ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ

ಆಯುರ್ವೇದದಲ್ಲಿ ಅಶ್ವಗಂಧವನ್ನು ಪ್ರಮುಖ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ. ಅಶ್ವಗಂಧ ಹಳದಿ ಹೂವುಗಳನ್ನು ಹೊಂದಿರುವ ಸಣ್ಣ ಸಸ್ಯದಿಂದ ಪಡೆಯಲಾಗಿದೆ.

Ashwagandha Benefits: ಅಶ್ವಗಂಧ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ
ಅಶ್ವಗಂಧ (ಸಂಗ್ರಹ ಚಿತ್ರ)
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Oct 12, 2022 | 9:07 PM

ಆಯುರ್ವೇದದಲ್ಲಿ ಅಶ್ವಗಂಧಕ್ಕೆ ಅದರದ್ದೇ ಪ್ರಾಮುಖ್ಯತೆಯಿದೆ. ಇದು ಅನೇಕ ಆರೋಗ್ಯ (Health) ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಅದಕ್ಕಾಗಿಯೇ ಆಯುರ್ವೇದದಲ್ಲಿ ಅಶ್ವಗಂಧ (Ashwagandha) ವನ್ನು ಪ್ರಮುಖ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ. ಅಶ್ವಗಂಧ ಹಳದಿ ಹೂವುಗಳನ್ನು ಹೊಂದಿರುವ ಸಣ್ಣ ಸಸ್ಯದಿಂದ ಪಡೆಯಲಾಗಿದೆ. ಈ ಸಸ್ಯವು ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಸಸ್ಯದ ಬೇರು, ಎಲೆಗಳ ಸಾರ ಮತ್ತು ಪುಡಿಯನ್ನು ಬಳಸಲಾಗುತ್ತದೆ. ಅಶ್ವಗಂಧ ಎಂಬ ಹೆಸರು ಸಂಸ್ಕೃತ ಪದದಿಂದ ಬಂದಿದೆ. ಅಶ್ವಗಂಧವನ್ನು ಪುಡಿ ರೂಪದಲ್ಲಿ ಅಥವಾ ಮಾತ್ರೆ ರೂಪದಲ್ಲಿ ತೆಗೆದುಕೊಳ್ಳಬಹುದು. ಆದಾಗ್ಯೂ, ಇದನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು ಉತ್ತಮ. ಏಕೆಂದರೆ ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದು ವ್ಯಕ್ತಿಯ ದೇಹವನ್ನು ಅವಲಂಬಿಸಿರುತ್ತದೆ.

ಅಶ್ವಗಂಧದ ಪ್ರಯೋಜನಗಳು: 

  1. ಒತ್ತಡವನ್ನು ಕಡಿಮೆ ಮಾಡುತ್ತದೆ: ಅಶ್ವಗಂಧವನ್ನು ಅಡಾಪ್ಟೋಜೆನ್ ಎಂದು ಪರಿಗಣಿಸಲಾಗುತ್ತದೆ. ಇದು ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮನುಷ್ಯನಲ್ಲಿ ಉಂಟಾಗುವ ಆತಂಕವನ್ನು ಕಡಿಮೆ ಮಾಡುತ್ತದೆ. ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿರುವವರು ಅಶ್ವಗಂಧ ಸೇವನೆಯಿಂದ ಸಮಸ್ಯೆ ಮುಕ್ತರಾಗಬಹುದು.
  2. ಸಕ್ಕರೆ ಮಟ್ಟ ನಿಯಂತ್ರಣ: ಅಶ್ವಗಂಧ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಅಶ್ವಗಂಧವು ಇನ್ಸುಲಿನ್ ಸ್ರವಿಸುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್​ನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
  3. ಒಳ್ಳೆಯ ನಿದ್ರೆ: ಅಶ್ವಗಂಧವು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಅಶ್ವಗಂಧ ಸೇವನೆಯಿಂದ ಆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆಳವಾದ ಮತ್ತು ಶಾಂತಿಯುತ ನಿದ್ರೆಗೆ ಸಹಕಾರಿಯಾಗಿದೆ. ಮಾನಸಿಕ ನೆಮ್ಮದಿ ನೀಡುತ್ತದೆ.
  4. ಊತ ತಡೆಗಟ್ಟುವಿಕೆ: ನೀವು ಉರಿಯೂತದ ಸಮಸ್ಯೆಯಿಂದ ಬಳಲುತ್ತಿದ್ದರೆ ಅಶ್ವಗಂಧವು ನಿಮಗೆ ಉತ್ತಮ. ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
  5. ಲೈಂಗಿಕ ಸಾಮರ್ಥ್ಯ: ಅಶ್ವಗಂಧವನ್ನು ಆಯುರ್ವೇದ ತಜ್ಞರು ಕಡಿಮೆ ಲೈಂಗಿಕ ಕಾರ್ಯಕ್ಷಮತೆ ಹೊಂದಿರುವವರಿಗೆ ನೀಡಲಾಗುತ್ತದೆ. ಇದು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಸಂತಾನೋತ್ಪತ್ತಿ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

(ಗಮನಿಸಿ: ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ.)

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:00 pm, Wed, 12 October 22

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ