ಬಿಗ್‌ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಕುಡಿಯುವ ಪಾನೀಯದಲ್ಲಿದೆ ಆರೋಗ್ಯದ ಗುಟ್ಟು
ನಟ ಕಿಚ್ಚ ಸುದೀಪ್ ಅವರಿಗೆ ಬ್ಲಾಕ್ ಕಾಫಿ ಎಂದರೆ ಬಲು ಇಷ್ಟ. ಇದನ್ನು ನೀವೂ ಗಮನಿಸಿರಬಹುದು. ಅದರಲ್ಲಿಯೂ ಬಿಗ್‌ಬಾಸ್ ವೇದಿಕೆಯಲ್ಲಿ ನಿರೂಪಣೆ ಮಾಡುವಾಗ ಪ್ರತೀ ದಿನ ಬ್ಲಾಕ್ ಕಾಫಿ ಕುಡಿಯುತ್ತಿರುತ್ತಾರೆ. ಅದನ್ನು ಹಲವಾರು ಮಂದಿ ನೋಡಿರುತ್ತಾರೆ. ಹಾಗಾದರೆ ಬ್ಲಾಕ್ ಕಾಫಿಯಲ್ಲಿರುವ ವಿಶೇಷತೆ ಏನು? ಆರೋಗ್ಯಕ್ಕೆ ಒಳ್ಳೆಯದಾ? ಪ್ರಯೋಜನಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಿಚ್ಚ ಸುದೀಪ್ ಅವರು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅವರ ಮಾತು, ಸ್ಟೈಲ್ ಎಲ್ಲವೂ ಅಭಿಮಾನಿಗಳಿಗೆ ಇಷ್ಟ ಆಗುವಂತದ್ದು. ಅದರಲ್ಲಿಯೂ ಕನ್ನಡದ ಬಿಗ್‌ಬಾಸ್ 11 ರ ನಿರೂಪಣೆ ಜನರಿಗೆ ಇಷ್ಟವಾಗದೇ ಇರೋದಿಲ್ಲ. ಹಾಗಾಗಿಯೇ ಅವರ ಬಟ್ಟೆ, ಹೇರ್ ಸ್ಟೈಲ್ ಎಲ್ಲವನ್ನೂ ಅನುಕರಣೆ ಮಾಡುವವರಿದ್ದಾರೆ. ಅದರಲ್ಲಿಯೂ ನಟ ಕಿಚ್ಚ ಸುದೀಪ್ ಅವರಿಗೆ ಬ್ಲಾಕ್ ಕಾಫಿ ಎಂದರೆ ಬಲು ಇಷ್ಟ. ಇದನ್ನು ನೀವೂ ಗಮನಿಸಿರಬಹುದು. ಅದರಲ್ಲಿಯೂ ಬಿಗ್‌ಬಾಸ್ ವೇದಿಕೆಯಲ್ಲಿ ನಿರೂಪಣೆ ಮಾಡುವಾಗ ಪ್ರತೀ ದಿನ ಬ್ಲಾಕ್ ಕಾಫಿ ಕುಡಿಯುತ್ತಿರುತ್ತಾರೆ. ಅದನ್ನು ಹಲವಾರು ಮಂದಿ ನೋಡಿರುತ್ತಾರೆ. ಹಾಗಾದರೆ ಬ್ಲಾಕ್ ಕಾಫಿಯಲ್ಲಿರುವ ವಿಶೇಷತೆ ಏನು? ಆರೋಗ್ಯಕ್ಕೆ ಒಳ್ಳೆಯದಾ? ಪ್ರಯೋಜನಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬ್ಲಾಕ್ ಕಾಫಿ ಸ್ವಲ್ಪ ಕಹಿಯಾಗಿದ್ದರು ಆರೋಗ್ಯಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ ಎಂದರೆ ನಂಬುತ್ತೀರಾ? ಹೌದು ಇದು ನಿಜ. ಬ್ಲಾಕ್ ಕಾಫಿ ಕುಡಿಯುವುದರಿಂದ ದೇಹಕ್ಕೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಇದಕ್ಕೆ ಹಾಲು ಮತ್ತು ಸಕ್ಕರೆ ಸೇರಿಸದ ಕಾರಣ ಇದರಲ್ಲಿ ಕೊಬ್ಬು, ಕಾರ್ಬೋಹೈಡ್ರೇಟ್ಗಳು ಅಥವಾ ಪ್ರೋಟೀನ್ಗಳು ಇರುವುದಿಲ್ಲ. ಹಾಗಾದರೆ ಇದನ್ನು ಕುಡಿಯುವುದರಿಂದ ದೇಹಕ್ಕೆ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.
-ಸಾಮಾನ್ಯವಾಗಿ ಬ್ಲಾಕ್ ಕಾಫಿ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಕ್ಯಾಲೋರಿ ಮುಕ್ತ ಪಾನೀಯವಾಗಿದೆ. ಅಲ್ಲದೆ ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ನಿಮ್ಮ ಹಸಿವನ್ನು ನಿಗ್ರಹಿಸಲು ನಿಮಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಜೊತೆಗೆ ಇದು ಹೊಟ್ಟೆಯ ಕೊಬ್ಬನ್ನು ಕೂಡ ಕರಗಿಸುತ್ತದೆ.
-ಕಾಫಿ ಖಿನ್ನತೆಯನ್ನು ಶಮನ ಮಾಡುವಂತಹ ಗುಣವನ್ನು ಹೊಂದಿದೆ. ಏಕೆಂದರೆ ಇದು ಮೆದುಳಿನ ಸಿರೊಟೋನಿನ್ ಮಟ್ಟವನ್ನು ಮತ್ತು ಡೋಪಮೈನ್ ಅನ್ನು ಹೆಚ್ಚಿಸುತ್ತದೆ, ಇದರಿಂದ ದುಃಖ ಮತ್ತು ಒಂಟಿತನ ಸೇರಿದಂತೆ ಖಿನ್ನತೆಯ ಭಾವನೆಗಳು ಕಡಿಮೆಯಾಗುತ್ತದೆ.
-ನಿಯಮಿತವಾಗಿ ಬ್ಲಾಕ್ ಕಾಫಿ ಕುಡಿಯುವುದರಿಂದ ರಕ್ತದ ವಿಷಕಾರಿ ಕಿಣ್ವಗಳ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕ್ಯಾನ್ಸರ್, ಕೊಬ್ಬಿನ ಯಕೃತ್ತು, ಹೆಪಟೈಟಿಸ್ ಮತ್ತು ಆಲ್ಕೊಹಾಲ್ಯುಕ್ತ ಸಿರೋಸಿಸ್ ಸೇರಿದಂತೆ ಹಲವಾರು ಯಕೃತ್ತಿನ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
-ಬ್ಲಾಕ್ ಕಾಫಿ ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ವಯಸ್ಸಾದಂತೆ ನಮ್ಮ ಅರಿವಿನ ಸಾಮರ್ಥ್ಯಗಳು ಕ್ಷೀಣಿಸುತ್ತವೆ ಮತ್ತು ಆಲ್ಝೈಮರ್ಸ್, ಬುದ್ಧಿಮಾಂದ್ಯತೆ ಹಾಗೂ ಪಾರ್ಕಿನ್ಸನ್ ಕಾಯಿಲೆಯಂತಹ ಮೆಮೊರಿ ಸಂಬಂಧಿತ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ನಿಯಮಿತವಾಗಿ ಬ್ಲಾಕ್ ಕಾಫಿಯನ್ನು ಸೇವಿಸುವುದರಿಂದ ನರಗಳನ್ನು ಸಕ್ರಿಯವಾಗಿ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸುವ ಮೂಲಕ ಇಂತಹ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
-ಕಪ್ಪು ಕಾಫಿ ಅಥವಾ ಬ್ಲಾಕ್ ಕಾಫಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ B2, B3 ಮತ್ತು B5 ಮತ್ತು ಮ್ಯಾಂಗನೀಸ್‌ನಂತಹ ಪ್ರಬಲವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಈ ಹಲವಾರು ಜೀವಸತ್ವಗಳು ದೇಹದ ಚಯಾಪಚಯ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತವೆ.
ಇದನ್ನೂ ಓದಿ: ನೀವು 35 ರಿಂದ 40 ವರ್ಷ ವಯಸ್ಸಿನವರಾಗಿದ್ದರೆ, ಈ ವಿಷಯಗಳನ್ನು ನೆನಪಿನಲ್ಲಿಡಿ
ಆದರೆ ಬ್ಲಾಕ್ ಕಾಫಿಯ ಅತಿಯಾದ ಸೇವನೆ ಮಾಡಬಾರದು. ಅದರಲ್ಲಿಯೂ ರಾತ್ರಿ ಸಮಯದಲ್ಲಿ ಇದನ್ನು ಸೇವನೆ ಮಾಡದಿರುವುದು ಒಳ್ಳೆಯದು. ಅಲ್ಲದೆ ಕಾಫಿಯ ಕೆಫೀನ್ ಅಂಶವನ್ನು ಅತಿಯಾಗಿ ಸೇವಿಸಿದರೆ ಹೈಪರ್ ಆಸಿಡಿಟಿಗೆ ಕಾರಣವಾಗಬಹುದು. ಹಾಗಾಗಿ ಕಾಫಿ ಸೇವನೆ ಇತಿ -ಮಿತಿಯಲ್ಲಿದ್ದರೆ ಬಹಳ ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ