AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ಮೊಸರು ತಿಂದರೆ ಶೀತ, ಕೆಮ್ಮು ಹೆಚ್ಚುತ್ತಾ? ಈ ವಿಚಾರದಲ್ಲಿ ತಜ್ಞರು ಹೇಳುವುದೇನು?

ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಕೇವಲ ಒಂದು ಆಹಾರವನ್ನು ತಪ್ಪಿಸುವುದಕ್ಕಿಂತ ತಾಜಾ, ಸ್ವಚ್ಛ ಮತ್ತು ಸರಿಯಾಗಿ ಸಂಗ್ರಹಿಸಿದ ಆಹಾರ ಸೇವಿಸುವುದು ಮುಖ್ಯ. ಸಾಕಷ್ಟು ನೀರು ಕುಡಿಯುವುದು, ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು ಮತ್ತು ಸಮತೋಲಿತ ಆಹಾರ ಸೇವಿಸುವುದಕ್ಕೂ ಆದ್ಯತೆ ನೀಡಿ. ಹೀಗಾಗಿ, ಮಳೆಗಾಲದಲ್ಲಿ ಮೊಸರು ತಿನ್ನಲೇಬಾರದು ಎಂಬುದು ಎಲ್ಲರಿಗೂ ಅನ್ವಯಿಸುವ ನಿಯಮವಲ್ಲ. ತಾಜಾ ಮೊಸರನ್ನು ಸಾಮಾನ್ಯ ತಾಪಮಾನದಲ್ಲಿ, ಸೂಕ್ತ ಪ್ರಮಾಣದಲ್ಲಿ ಸೇವಿಸುವುದು ಬಹುತೇಕ ಜನರಿಗೆ ಆಹಾರದ ಭಾಗವಾಗಿರಬಹುದು. ಆದರೆ ಮೊಸರು ಸೇವಿಸಿದ ನಂತರ ನಿರಂತರವಾಗಿ ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಮಳೆಗಾಲದಲ್ಲಿ ಮೊಸರು ತಿಂದರೆ ಶೀತ, ಕೆಮ್ಮು ಹೆಚ್ಚುತ್ತಾ? ಈ ವಿಚಾರದಲ್ಲಿ ತಜ್ಞರು ಹೇಳುವುದೇನು?
Curd During MonsoonImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Aug 09, 2026 | 1:20 PM

Share

ಮುಖ್ಯಾಂಶಗಳು

  • ಮಳೆಗಾಲದಲ್ಲಿ ಮೊಸರು ತಿಂದರೆ ಶೀತ-ಕೆಮ್ಮು ಬರುತ್ತದೆಯೇ?
  • ಮಳೆಗಾಲದಲ್ಲಿ ಮೊಸರು ಸೇವಿಸುವ ಸರಿಯಾದ ವಿಧಾನ
  • ಮೊಸರು ತಿನ್ನುವಾಗ ಯಾರು ಎಚ್ಚರಿಕೆ ವಹಿಸಬೇಕು?

ಮಳೆಗಾಲ ಆರಂಭವಾಗುತ್ತಿದ್ದಂತೆ ಆಹಾರ ಸೇವನೆಯ ಬಗ್ಗೆ ಹಲವು ರೀತಿಯಲ್ಲಿ ಕಾಳಜಿ ವಹಿಸಬೇಕಾಗುತ್ತದೆ. ಅದರಲ್ಲಿಯೂ ಮಳೆಗಾಲದಲ್ಲಿ ಮೊಸರು ತಿಂದರೆ ಶೀತ, ಕೆಮ್ಮು ಅಥವಾ ಕಫ ಹೆಚ್ಚಾಗುತ್ತದೆ ಎಂಬ ಮಾತನ್ನು ಅನೇಕರು ನಂಬುತ್ತಾರೆ. ಹೀಗಾಗಿ ಕೆಲವರು ಈ ಋತುವಿನಲ್ಲಿ ಮೊಸರು, ಮಜ್ಜಿಗೆ ಸೇರಿದಂತೆ ಕೆಲವು ಆಹಾರಗಳಿಂದ ದೂರವಿರುತ್ತಾರೆ. ಆದರೆ ನಿಜಕ್ಕೂ ಮಳೆಗಾಲದಲ್ಲಿ ಮೊಸರು ತಿನ್ನುವುದರಿಂದ ಎಲ್ಲರಿಗೂ ಶೀತ-ಕೆಮ್ಮು ಬರುತ್ತದೆಯೇ ಎಂಬುದನ್ನು ತಿಳಿಯುವುದು ಒಳ್ಳೆಯದು. ತಜ್ಞರ ಪ್ರಕಾರ, ಮಳೆಗಾಲದಲ್ಲಿ ಮೊಸರು ತಿನ್ನಬಾರದು ಎಂಬುದು ಎಲ್ಲರಿಗೂ ಅನ್ವಯಿಸುವ ನಿಯಮವಲ್ಲ. ಮೊಸರಿನ ತಾಪಮಾನ, ತಾಜಾತನ ಮತ್ತು ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೇವಿಸಿದರೆ, ಇದು ಆಹಾರದ ಭಾಗವಾಗಿರಬಹುದು. ಹಾಗಾದರೆ ಮಳೆಗಾಲದಲ್ಲಿ ಮೊಸರು ಹೇಗೆ ತಿನ್ನಬೇಕು? ಯಾರು ಎಚ್ಚರ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಳೆಗಾಲದಲ್ಲಿ ಮೊಸರು ತಿಂದರೆ ಶೀತ-ಕೆಮ್ಮು ಬರುತ್ತದೆಯೇ?

ಅಪೋಲೋ ಸ್ಪೆಕ್ಟ್ರಾ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಸೀನಿಯರ್ ಕನ್ಸಲ್ಟೆಂಟ್, ಡಾ. ಆಶಿಶ್ ಮೆಹ್ರೋತ್ರಾ ಅವರ ಪ್ರಕಾರ ಮಳೆಗಾಲದಲ್ಲಿ ಮೊಸರು ತಿಂದರೆ ಪ್ರತಿಯೊಬ್ಬರಿಗೂ ಶೀತ-ಕೆಮ್ಮು ಉಂಟಾಗುತ್ತದೆ ಎಂಬ ನಂಬಿಕೆ ಸರಿಯಲ್ಲ. ಮೊಸರನ್ನು ನೇರವಾಗಿ ಫ್ರಿಜ್‌ನಿಂದ ತೆಗೆದು ತಿನ್ನುವ ಬದಲು ರೂಮ್ ಟೆಂಪರೇಚರ್‌ಗೆ ತಂದ ನಂತರ ಸೇವಿಸುವುದು ಉತ್ತಮ. ವ್ಯಕ್ತಿಯ ದೇಹದ ಸ್ಥಿತಿ ಮತ್ತು ಮೊಸರಿನ ತಾಜಾತನವೂ ಇಲ್ಲಿ ಮುಖ್ಯವಾಗುತ್ತದೆ.

ಮೊಸರಿನಲ್ಲಿ ಇರುವ ಪ್ರೊಬಯೋಟಿಕ್ಸ್‌ನಿಂದ ಏನು ಪ್ರಯೋಜನ?

ಮೊಸರಿನಲ್ಲಿ ಪ್ರೊಬಯೋಟಿಕ್ಸ್, ಅಂದರೆ ದೇಹಕ್ಕೆ ಉಪಯುಕ್ತವಾಗಿರುವ ಕೆಲವು ಜೀವಂತ ಬ್ಯಾಕ್ಟೀರಿಯಾಗಳು ಇರುತ್ತವೆ. ಇವು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡಬಹುದು. ಜೀರ್ಣಕ್ರಿಯೆ ಸರಿಯಾಗಿ ಆಗದವರು ತಮ್ಮ ಆಹಾರದಲ್ಲಿ ಸೂಕ್ತ ಪ್ರಮಾಣದ ಮೊಸರನ್ನು ಸೇರಿಸಿಕೊಳ್ಳಬಹುದು. ಸಮತೋಲಿತ ಆಹಾರದ ಭಾಗವಾಗಿ ಮೊಸರು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿರಬಹುದು.

ಮಳೆಗಾಲದಲ್ಲಿ ಮೊಸರು ತಿನ್ನುವಾಗ ಕೆಲವು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ. ತುಂಬಾ ತಣ್ಣಗಿರುವ ಮೊಸರು, ಬಹಳ ಸಮಯ ಫ್ರಿಜ್‌ನಲ್ಲಿ ಇಟ್ಟಿರುವ ಮೊಸರು ಅಥವಾ ಬಾಸಿಯಾದ ಮೊಸರು ಸೇವಿಸುವುದರಿಂದ ಕೆಲವರಿಗೆ ಗಂಟಲಿನಲ್ಲಿ ಅಸಹಜತೆ ಉಂಟಾಗಬಹುದು. ಈ ರೀತಿಯ ತೊಂದರೆ ವಿಶೇಷವಾಗಿ ಈಗಾಗಲೇ ಸೈನಸ್, ಅಲರ್ಜಿ ಅಥವಾ ಪದೇಪದೇ ಶೀತದ ಸಮಸ್ಯೆ ಇರುವವರಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಮೊಸರು ನೇರವಾಗಿ ಶೀತ ಅಥವಾ ಕೆಮ್ಮಿಗೆ ಕಾರಣವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಇದನ್ನೂ ಓದಿ: ರಕ್ತದೊತ್ತಡ ಹೆಚ್ಚಾಗದಿರಲು ಉಪ್ಪಿನ ಪ್ರಮಾಣ ಎಷ್ಟಿರಬೇಕು? ಇಲ್ಲಿದೆ ತಜ್ಞರ ಸಲಹೆ

ಮಳೆಗಾಲದಲ್ಲಿ ಮೊಸರು ತಿನ್ನುವ ಸರಿಯಾದ ವಿಧಾನ:

ಮೊಸರನ್ನು ಫ್ರಿಜ್‌ನಿಂದ ತೆಗೆದ ತಕ್ಷಣ ಸೇವಿಸುವ ಬದಲು ಸ್ವಲ್ಪ ಸಮಯ ಹೊರಗಿಟ್ಟು ಸಾಮಾನ್ಯ ತಾಪಮಾನಕ್ಕೆ ಬಂದ ನಂತರ ತಿನ್ನಬಹುದು. ರುಚಿಗಾಗಿ ಮೊಸರಿಗೆ ಹುರಿದ ಜೀರಿಗೆ, ಕಾಳುಮೆಣಸು ಅಥವಾ ಸೂಕ್ತ ಪ್ರಮಾಣದ ಉಪ್ಪು ಸೇರಿಸಬಹುದು. ಆದರೆ ಮಸಾಲೆಗಳನ್ನು ಅತಿಯಾಗಿ ಸೇರಿಸುವ ಅಗತ್ಯವಿಲ್ಲ. ಮುಖ್ಯವಾಗಿ ತಾಜಾ ಮೊಸರನ್ನೇ ಸೇವಿಸುವುದು ಉತ್ತಮ. ಬಣ್ಣ, ವಾಸನೆ ಅಥವಾ ರುಚಿಯಲ್ಲಿ ಬದಲಾವಣೆ ಕಂಡುಬಂದಿರುವ ಮೊಸರನ್ನು ಸೇವಿಸಬಾರದು.

ಯಾರು ಮೊಸರು ಸೇವಿಸುವಾಗ ಎಚ್ಚರಿಕೆ ವಹಿಸಬೇಕು?

ಮೊಸರು ತಿಂದ ನಂತರ ಪದೇಪದೇ ಗಂಟಲು ಕಿರಿಕಿರಿ, ಕಫದ ಅನುಭವ ಅಥವಾ ಇತರ ತೊಂದರೆಗಳು ಕಂಡುಬಂದರೆ ಅದರ ಸೇವನೆಯನ್ನು ಕಡಿಮೆ ಮಾಡಿ ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರು ಅಥವಾ ಡಯಟಿಷಿಯನ್‌ಗಳ ಸಲಹೆ ಪಡೆಯುವುದು ಉತ್ತಮ. ಅದೇ ರೀತಿ ಹಾಲು ಅಥವಾ ಡೈರಿ ಉತ್ಪನ್ನಗಳಿಂದ ಅಲರ್ಜಿ ಅಥವಾ ಅಸಹಿಷ್ಣುತೆ ಇರುವವರು ಮೊಸರು ಸೇವಿಸುವ ಮೊದಲು ತಜ್ಞರ ಸಲಹೆ ಪಡೆಯಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ನನ್ನ ಕನಸನ್ನು ಹೆಗಲ ಮೇಲೆ ಹೊತ್ತುಕೊಂಡ ಯಶ್: ಗೀತು ಮೋಹನ್​​ದಾಸ್ ಭಾವುಕ
‘ನನ್ನ ಕನಸನ್ನು ಹೆಗಲ ಮೇಲೆ ಹೊತ್ತುಕೊಂಡ ಯಶ್: ಗೀತು ಮೋಹನ್​​ದಾಸ್ ಭಾವುಕ
ಟೆಕ್ಕಿ ಅದ್ವೈತ್ ಶಿವಗಂಗೆ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆ!
ಟೆಕ್ಕಿ ಅದ್ವೈತ್ ಶಿವಗಂಗೆ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆ!
ಆಗಸ್ಟ್ 10 ರಿಂದ 16 ರವರೆಗಿನ ದ್ವಾದಶ ರಾಶಿಗಳ ಸಂಪೂರ್ಣ ವಾರಭವಿಷ್ಯ ಇಲ್ಲಿದೆ
ಆಗಸ್ಟ್ 10 ರಿಂದ 16 ರವರೆಗಿನ ದ್ವಾದಶ ರಾಶಿಗಳ ಸಂಪೂರ್ಣ ವಾರಭವಿಷ್ಯ ಇಲ್ಲಿದೆ
ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್​​ಡಿಕೆ
ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್​​ಡಿಕೆ
ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ
ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ
ದೆಹಲಿಯಲ್ಲಿ ಭಾರೀ ಮಳೆ; ಪಾರ್ಕಿಂಗ್ ಗೋಡೆ ಕುಸಿದು 8 ಕಾರುಗಳು ಪೂರ್ತಿ ಜಖಂ
ದೆಹಲಿಯಲ್ಲಿ ಭಾರೀ ಮಳೆ; ಪಾರ್ಕಿಂಗ್ ಗೋಡೆ ಕುಸಿದು 8 ಕಾರುಗಳು ಪೂರ್ತಿ ಜಖಂ
ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ
ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ
ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ
ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ
ಮೂರೇ ವಾರಕ್ಕೆ ಕುಸಿದ 4,700 ಕೋಟಿ ವೆಚ್ಚದ ಲಕ್ನೋ-ಕಾನ್ಪುರ ಹೆದ್ದಾರಿ
ಮೂರೇ ವಾರಕ್ಕೆ ಕುಸಿದ 4,700 ಕೋಟಿ ವೆಚ್ಚದ ಲಕ್ನೋ-ಕಾನ್ಪುರ ಹೆದ್ದಾರಿ
ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್
ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್