Celebrity Health Life: 90ರ ಹರೆಯದಲ್ಲಿರುವ ಎಚ್‌ ಡಿ ದೇವೇಗೌಡರ ಆಹಾರ ಕ್ರಮ ಹೇಗಿರುತ್ತೆ ನೋಡಿ

ಎಚ್‌. ಡಿ. ದೇವೇಗೌಡರು, ತಮ್ಮ ಇಳಿವಯಸ್ಸಿನಲ್ಲೂ ಆರೋಗ್ಯ ಕಾಪಾಡಿಕೊಂಡಿರುವ ರೀತಿ ಅವರ ಕಳೆಗುಂದದ ಉತ್ಸಾಹ ಎಲ್ಲವೂ ಸಾಮಾನ್ಯವಾಗಿ ಯುವಕರಿಗೆ ಅಚ್ಚರಿ ಮೂಡಿಸುತ್ತದೆ. ಈಗಿನ ಒತ್ತಡದ ಜೀವನಶೈಲಿಯಲ್ಲಿ ಅವರ ಆಹಾರ ಕ್ರಮ, ಆರೋಗ್ಯ ಕಾಪಾಡಿಕೊಳ್ಳುವ ರೀತಿ ನಿಜಕ್ಕೂ ಎಲ್ಲರಿಗೂ ಮಾದರಿಯಾಗುವುದರಲ್ಲಿ ಸಂಶಯವಿಲ್ಲ. ಅವರು ಈ ಹಿಂದೆ ಒಂದು ಸಂದರ್ಶನದಲ್ಲಿ ಮಾತನಾಡುತ್ತಾ ನಿಮ್ಮ ಆರೋಗ್ಯದ ಗುಟ್ಟೇನು ಎಂದು ಕೇಳಿದಾಗ "ಆಹಾರ, ವ್ಯಾಯಾಮ, ದೇವರ ಆಶೀರ್ವಾದ ಈ ಮೂರು ನನ್ನ ಜೀವನದ ಗುಟ್ಟು" ಎಂದು ಹೇಳಿದ್ದರು. ಹಾಗಾದರೆ 90 ರ ಹರೆಯದಲ್ಲಿರುವ ಅವರ ಆಹಾರ ಕ್ರಮ ಹೇಗಿರುತ್ತದೆ? ತಿಳಿದುಕೊಳ್ಳಿ.

Celebrity Health Life: 90ರ ಹರೆಯದಲ್ಲಿರುವ ಎಚ್‌ ಡಿ ದೇವೇಗೌಡರ ಆಹಾರ ಕ್ರಮ ಹೇಗಿರುತ್ತೆ ನೋಡಿ
ಎಚ್‌. ಡಿ. ದೇವೇಗೌಡ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 15, 2024 | 4:48 PM

ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ ಎಚ್‌. ಡಿ. ದೇವೇಗೌಡರು, ತಮ್ಮ ಇಳಿವಯಸ್ಸಿನಲ್ಲೂ ಆರೋಗ್ಯ ಕಾಪಾಡಿಕೊಂಡಿರುವ ರೀತಿ ಅವರ ಕಳೆಗುಂದದ ಉತ್ಸಾಹ ಎಲ್ಲವೂ ಸಾಮಾನ್ಯವಾಗಿ ಯುವಕರಿಗೆ ಅಚ್ಚರಿ ಮೂಡಿಸುತ್ತದೆ. ಈಗಿನ ಒತ್ತಡದ ಜೀವನಶೈಲಿಯಲ್ಲಿ ಅವರ ಆಹಾರ ಕ್ರಮ, ಆರೋಗ್ಯ ಕಾಪಾಡಿಕೊಳ್ಳುವ ರೀತಿ ನಿಜಕ್ಕೂ ಎಲ್ಲರಿಗೂ ಮಾದರಿಯಾಗುವುದರಲ್ಲಿ ಸಂಶಯವಿಲ್ಲ. ಅವರು ಈ ಹಿಂದೆ ಒಂದು ಸಂದರ್ಶನದಲ್ಲಿ ಮಾತನಾಡುತ್ತಾ ನಿಮ್ಮ ಆರೋಗ್ಯದ ಗುಟ್ಟೇನು ಎಂದು ಕೇಳಿದಾಗ “ಆಹಾರ, ವ್ಯಾಯಾಮ, ದೇವರ ಆಶೀರ್ವಾದ ಈ ಮೂರು ನನ್ನ ಜೀವನದ ಗುಟ್ಟು” ಎಂದು ಹೇಳಿದ್ದರು. ಹಾಗಾದರೆ 90 ರ ಹರೆಯದಲ್ಲಿರುವ ಅವರ ಆಹಾರ ಕ್ರಮ ಹೇಗಿರುತ್ತದೆ? ತಿಳಿದುಕೊಳ್ಳಿ.

ಆಹಾರದಲ್ಲಿ ಕಟ್ಟುಪಾಡು

ದೇವೇಗೌಡರು, ಹಿಂದಿನಿಂದಲೂ ಆಹಾರ ಸೇವನೆಯಲ್ಲಿ ಕೆಲ ಕಟ್ಟುಪಾಡುಗಳನ್ನು ಮಾಡಿಕೊಂಡು ಅದನ್ನು ಬಿಡದೆ ಪಾಲಿಸಿಕೊಂಡು ಬಂದಿದ್ದಾರೆ. ಬೆಳಗಿನ ಸಮಯದಲ್ಲಿ ಅವರು ಲಘು ಉಪಹಾರ ಸೇವನೆ ಮಾಡುತ್ತಾರಂತೆ, ಅದೂ ಅಲ್ಲದೆ ಫಿಲ್ಟರ್ ಕಾಫಿ ಅವರಿಗೆ ತುಂಬಾ ಇಷ್ಟ ಎಂದು ಹೇಳಲಾಗುತ್ತದೆ. ಪ್ರಚಾರಗಳಿಗೆ ಹೋಗುತ್ತಿದ್ದ ಸಮಯದಲ್ಲೂ ಅವರು ಸ್ವಲ್ಪ ಪ್ರಮಾಣದಲ್ಲಿ ಕಾಫಿ ಸೇವನೆ ಮಾಡುವುದನ್ನು ಮರೆಯುತ್ತಿರಲಿಲ್ಲವಂತೆ. ಊಟದ ಸಮಯದಲ್ಲಿ ಮುದ್ದೆ, ರಾತ್ರಿ ಇಚ್ಚಿಸಿದರಷ್ಟೇ ಮಿತಾಹಾರ ಇಲ್ಲವಾದಲ್ಲಿ, ಗಂಜಿ, ಮಜ್ಜಿಗೆ ಸೇವಿಸುತ್ತಾರಂತೆ. ಪ್ರಚಾರಕ್ಕೆ ಹೋಗುತ್ತಿದ್ದಾಗ ದೇವಾಲಯ, ಮಠಗಳಲ್ಲಿ ಊಟ, ಉಪಹಾರ ಮಾಡುವುದಕ್ಕೆ ಹೆಚ್ಚು ಒಲವು ತೋರಿಸುತ್ತಿದ್ದರಂತೆ. ದೇವರ ಪ್ರಸಾದ ಸೇವನೆ ಮಾಡುವುದನ್ನು ತುಂಬಾ ಇಷ್ಟಪಡುತ್ತಿದ್ದರಂತೆ. ಅವರ ಪಕ್ಷದ ಮುಖಂಡರ ಮನೆಗಳಿಗೆ ಊಟಕ್ಕೆ ತೆರಳಿದಾಗಲೂ ಅವರು ಸರಳವಾದ ಊಟ ಮಾಡಲು ಬಯಸುತ್ತಿದ್ದರಂತೆ. ಮುದ್ದೆ, ಗಂಜಿಯೇ ಅವರಿಗೆ ಮೃಷ್ಟಾನ್ನ ಭೋಜನವಿದ್ದಂತೆ. ಸರಳ ವ್ಯಕ್ತಿ ತಮ್ಮ ಆಹಾರ ಕ್ರಮಗಳನ್ನು ಎಷ್ಟು ಸರಳವಾಗಿ ಇಟ್ಟುಕೊಂಡಿದ್ದರು ಎಂಬುದಕ್ಕೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕಿಲ್ಲ.

ಇದನ್ನೂ ಓದಿ: ಸುಧಾಮೂರ್ತಿ ಅವರು ತಮ್ಮ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಅನುಸರಿಸುವ ನಿಯಮಗಳಿವು!

ವಯೋ ಸಹಜವಾಗಿ ಕಾಡುವ ಆರೋಗ್ಯ ಸಮಸ್ಯೆಗಳಿಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೂ ಅವರು ಹಿಂದಿನಿಂದ ರೂಢಿಸಿಕೊಂಡು ಬಂದ ಆಹಾರ ಪದ್ಧತಿ, ಜೀವನಕ್ರಮ ಅವರನ್ನು ಮತ್ತಷ್ಟು ಉತ್ಸಾಹಿಯನ್ನಾಗಿ ಮಾಡಿದೆ. ಬದುಕಿನ ಬಗ್ಗೆ ಇರುವ ಪ್ರೀತಿಯ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಕಟ್ಟುನಿಟ್ಟಿನ ನಿಯಮ ಅನುಸರಿಸುವವರಿಗೆ ಯಾವುದೇ ರೋಗ ಭಯವಿರುವುದಿಲ್ಲ ಎನ್ನುವದಕ್ಕೆ ದೇವೇಗೌಡರೇ ಸಾಕ್ಷಿ. ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಹದಗೆಟ್ಟಾಗಲು ತಮ್ಮ ಕರ್ತವ್ಯ ನಿಭಾಯಿಸಲು ಅವರು ದೂರದ ಊರುಗಳಿಗೆ ಪ್ರಯಾಣ ಬೆಳೆಸಿದ್ದರು. ಅವರ ಆರೋಗ್ಯ ವಿಚಾರಿಸಿಕೊಳ್ಳುವುದಕ್ಕೆ ಹಲವಾರು ಜನರಿದ್ದರು ಅವರ ಉತ್ಸಾಹ, ಜೀವನ ಮತ್ತು ವೃತ್ತಿಯ ಬಗೆಗಿನ ಪ್ರೀತಿಯನ್ನು ತೋರಿಸುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ