AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Side Effects Of Curd: ರಾತ್ರಿ ವೇಳೆ ಮೊಸರು ಸೇವನೆ ಆರೋಗ್ಯಕ್ಕೆ ಒಳ್ಳೆಯದೇ?, ಆಯುರ್ವೇದ ಹೇಳುವುದೇನು?

ಭಾರತೀಯರಲ್ಲಿ ಶೇ.90ರಷ್ಟು ಮಂದಿ ಊಟದ ಕೊನೆಯಲ್ಲಿ ಮೊಸರು ತಿನ್ನದಿದ್ದರೆ ಊಟ ಅಪೂರ್ಣವೆಂದೇ ಭಾವಿಸುತ್ತಾರೆ. ಮೊಸರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸುತ್ತದೆ. 

Side Effects Of Curd:  ರಾತ್ರಿ ವೇಳೆ ಮೊಸರು ಸೇವನೆ ಆರೋಗ್ಯಕ್ಕೆ ಒಳ್ಳೆಯದೇ?, ಆಯುರ್ವೇದ ಹೇಳುವುದೇನು?
Curd
TV9 Web
| Updated By: ನಯನಾ ರಾಜೀವ್|

Updated on: Aug 11, 2022 | 1:34 PM

Share

ಭಾರತೀಯರಲ್ಲಿ ಶೇ.90ರಷ್ಟು ಮಂದಿ ಊಟದ ಕೊನೆಯಲ್ಲಿ ಮೊಸರು ತಿನ್ನದಿದ್ದರೆ ಊಟ ಅಪೂರ್ಣವೆಂದೇ ಭಾವಿಸುತ್ತಾರೆ. ಮೊಸರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸುತ್ತದೆ.  ಅದು ಹಾಲಿನಲ್ಲಿರುವ ಲ್ಯಾಕ್ಟೋಸ್‌ನಿಂದ ಲ್ಯಾಕ್ಟಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ಆ್ಯಂಟಿಬಯೋಟಿಕ್‌ಗಳನ್ನು ಸೇವಿಸುವಾಗ ಮೊಸರು ಸೇವನೆಯು ಅತಿಸಾರದಂತಹ ಸಮಸ್ಯೆಯನ್ನು ತಡೆಯುತ್ತದೆ.

ನೀವು ರಾತ್ರಿಯಲ್ಲಿ ಮೊಸರು ಸೇವಿಸಿದರೆ ಏನಾಗುತ್ತೆ? -ಹೌದು ಮೊಸರು ಹಲವಾರು ಪ್ರಯೋಜನಗಳನ್ನು ಹೊಂದಿದೆ ಆದರೆ ಇದು ಕೆಲವು ಅಡ್ಡ ಪರಿಣಾಮಗಳನ್ನು ಹೊಂದಿದೆ. ಆಯುರ್ವೇದದ ಪ್ರಕಾರ ನೀವು ರಾತ್ರಿಯಲ್ಲಿ ಮೊಸರನ್ನು ಸೇವಿಸದಿರಲು ಕೆಲವು ಕಾರಣಗಳಿವೆ.

ರಾತ್ರಿಯಲ್ಲಿ ಮೊಸರು ಸೇವನೆಯನ್ನು ಆಯುರ್ವೇದವು ಶಿಫಾರಸು ಮಾಡುವುದಿಲ್ಲ ಏಕೆಂದರೆ ಇದು ಲೋಳೆಯ ರಚನೆಗೆ ಕಾರಣವಾಗುತ್ತದೆ. ಮೊಸರು ಸಿಹಿ ಮತ್ತು ಹುಳಿ ಎರಡನ್ನೂ ಹೊಂದಿರುವುದರಿಂದ, ರಾತ್ರಿಯಲ್ಲಿ ಇದನ್ನು ತಿನ್ನುವುದರಿಂದ ಮೂಗಿನ ಮಾರ್ಗದಲ್ಲಿ ಲೋಳೆಯ ರಚನೆಗೆ ಕಾರಣವಾಗಬಹುದು.

ಸಂಧಿವಾತದಿಂದ ಬಳಲುತ್ತಿರುವವರು ಮೊಸರನ್ನು ಪ್ರತಿನಿತ್ಯ ಸೇವಿಸಬಾರದು. ಮೊಸರು ಒಂದು ಹುಳಿ ಆಹಾರವಾಗಿದೆ, ಮತ್ತು ಹುಳಿ ಆಹಾರಗಳು ಕೀಲು ನೋವಿನ ಹೆಚ್ಚಳಕ್ಕೆ ಕಾರಣವಾಗಬಹುದು.

ದುರ್ಬಲ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿರುವ ಜನರು ರಾತ್ರಿಯಲ್ಲಿ ಮೊಸರು ತಿನ್ನುವುದನ್ನು ತಪ್ಪಿಸಬೇಕು. ನೀವು ಆಗಾಗ್ಗೆ ಆಮ್ಲೀಯತೆ, ಅಜೀರ್ಣ ಅಥವಾ ಆಸಿಡ್ ರಿಫ್ಲಕ್ಸ್‌ನಿಂದ ಬಳಲುತ್ತಿದ್ದರೆ, ನಿಮ್ಮ ಜೀರ್ಣಕ್ರಿಯೆಯು ನಿಧಾನವಾಗಿದ್ದಾಗ ನೀವು ಮೊಸರು ತಿನ್ನುವುದನ್ನು ತಪ್ಪಿಸಬೇಕು.

ಮೊಸರಿನಲ್ಲಿ ದೇಹಕ್ಕೆ ಮಾರಕವಾದ ಯಾವುದೇ ಅಂಶವಿಲ್ಲ. ಇದರಲ್ಲಿರುವ ಸಕಲ ಅಂಶಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿವೆ. ವಿಶೇಷವಾಗಿ ರಕ್ತದಲ್ಲಿರುವ ಬಿಳಿರಕ್ತಕಣಗಳನ್ನು ಹೆಚ್ಚಿಸಲು ಮತ್ತು ಪ್ರತಿಕಣದ ಸಾಮರ್ಥ್ಯ ಹೆಚ್ಚಿಸಲು ಮೊಸರು ನೆರವಾಗುತ್ತದೆ. ಈ ಕಣಗಳು ರೋಗಕಾರಕ ಕಣಗಳನ್ನು ಸದೆಬಡಿದು ದೇಹದ ಆರೋಗ್ಯವನ್ನು ಕಾಪಾಡುತ್ತದೆ.

ಅಧ್ಯಾನದ ಪ್ರಕಾರ ಪ್ರತಿದಿನವು ಒಂದು ಟೇಬಲ್ ಚಮಚದಷ್ಟು ಮೊಸರನ್ನು ಸೇವಿಸುತ್ತಿದ್ದಲ್ಲಿ, ಅದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ. ಬಾಯಿಯ ಹುಣ್ಣು ಸನಸ್ಯೆಯಿಂದ ಬಳಲುತ್ತಿದ್ದರೆ ಒಂದು ವೇಳೆ ಸತತವಾಗಿ ಬಾಯಿಯ ಹುಣ್ಣು ಅಥವಾ ಮೌಥ್ ಅಲ್ಸರ್ ನಿಂದ ಬಳಲುತ್ತಿದ್ದರೆ ರಾತ್ರಿ ಮಲಗುವ ಮುನ್ನ ಮತ್ತು ಬೆಳಿಗ್ಗೆದ್ದ ತಕ್ಷಣ ಗಟ್ಟಿ ಮೊಸರನ್ನು ಬಾಯಿಯ ಒಳಭಾಗದಲ್ಲಿ ಸವರಿಕೊಂಡರೆ ಶೀಘ್ರವೇ ಗುಣವಾಗುತ್ತದೆ.

ಇದರ ಜೀರ್ಣಕ್ರಿಯೆಯು ಹೆಚ್ಚು ಹೊತ್ತು ತೆಗೆದುಕೊಳ್ಳಲಿದ್ದು, ಜೀರ್ಣ ಕ್ರಿಯೆಯು ಇತರೆ ಆಹಾರಗಳ ಜೀರ್ಣ ಕ್ರಿಯೆಗಿಂತ ಸ್ವಲ್ಪ ಕಷ್ಟವೇ ಸರಿ. ಇದರಿಂದ ಬೊಜ್ಜು, ಕಫ, ಪಿತ್ತ ಹೆಚ್ಚಾಗಿ ಜೀರ್ಣದ ಸಾಮರ್ಥ್ಯವನ್ನೂ ಸಹ ಹೆಚ್ಚಿಸುತ್ತದೆ. ನಿಮಗೆ ಹೊಟ್ಟೆಯ ಊತ ಅಥವಾ ಉರಿಯು ಬಂದ ಸಂದರ್ಭಗಳಲ್ಲಿ ಮೊಸರನ್ನು ಸೇವಿಸಿದರೆ ಸಮಸ್ಯೆ ಇನ್ನೂ ಬಿಗಡಾಯಿಸಲಿದೆ. ಈ ಗುಣಲಕ್ಷಣವು ಹುಳಿಯಾದ ಮೊಸರಿನಲ್ಲಿ ಅಧಿಕವಿರುತ್ತದೆ.

ಹುಳಿ ಮೊಸರನ್ನು ಯಾವುದೇ ಕಾರಣಕ್ಕೂ ಬಿಸಿ ಮಾಡಿ ಸೇವಿಸಬಾರದು. ಇದನ್ನು ರಾತ್ರಿ ಸಮಯದಲ್ಲಿ, ವಸಂತ ಋತುವಿನಲ್ಲಿ ಮತ್ತು ಬೇಸಿಗೆಯಲ್ಲಿ ಸೇವಿಸುವುದು ನಿಷಿದ್ಧ. ಆದರೆ ಹುಳಿ ಮೊಸರಿಗೆ ಹೆಸರಿನ ಕಾಳಿನ ಸೂಪ್, ಜೇನು, ತುಪ್ಪ, ಸಕ್ಕರೆ ಮತ್ತು ಆಮ್ಲ ಬೆರೆಸಿಕೊಂಡು ಸೇವಿಸಿದರೆ ಉರಿಮೂತ್ರ ನಿವಾರಣೆ ಮತ್ತು ಅಜೀರ್ಣದ ಕಡಿಮೆಯಾಗುತ್ತದೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ