AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chickpeas Benefits: ಕಡಲೆ ತಿನ್ನುವುದರಿಂದಾಗುವ ಅಧ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ?

ಮಹಾಗಣಪತಿಗೆ ನೈವೇದ್ಯ ಮಾಡುವ ವಸ್ತುಗಳಲ್ಲಿ ಅತ್ಯಂತ ಮುಖ್ಯವಾದ ಅಂತಹ ಶ್ರೀ ಮಹಾಗಣಪತಿಯ ಅತ್ಯಂತ ಪ್ರಿಯವಾದಂತಹ ವಸ್ತು ಕಡ್ಲೆ .

Chickpeas Benefits: ಕಡಲೆ ತಿನ್ನುವುದರಿಂದಾಗುವ ಅಧ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ?
Chickpeas
TV9 Web
| Edited By: |

Updated on: Sep 05, 2022 | 9:50 AM

Share

ಮಹಾಗಣಪತಿಗೆ ನೈವೇದ್ಯ ಮಾಡುವ ವಸ್ತುಗಳಲ್ಲಿ ಅತ್ಯಂತ ಮುಖ್ಯವಾದ ಅಂತಹ ಶ್ರೀ ಮಹಾಗಣಪತಿಯ ಅತ್ಯಂತ ಪ್ರಿಯವಾದಂತಹ ವಸ್ತು ಕಡ್ಲೆ . ಮಹಾಗಣಪತಿ ಹೇಗೆ ಶಕ್ತಿ ಮತ್ತು ಸಾಮರ್ಥ್ಯದ ಪ್ರತಿಕವಾದ ಅಂತಹ ದೇವರು ಅದೇ ಈ ದೇವರಿಗೆ ಪ್ರಿಯವಾದಂತ ವಸ್ತು ಕಡ್ಲೆ ಅಂದರೆ ಅದನ್ನು ಕೂಡ ಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಿಸಲು ಖಂಡಿತವಾಗಿಯೂ ಉಪಯೋಗಕ್ಕೆ ಬರುತ್ತದೆ.

ಹಲವು ಗಣಪತಿ ದೇವಾಲಯಗಳಲ್ಲಿ ತೀರ್ಥ ಮತ್ತು ಹೂವಿನ ಪ್ರಸಾದ ಕೊಟ್ಟ ನಂತರ ನಾಲ್ಕು ಕಡಲೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ. ಅಲ್ಲದೆ ಪಂಚಕಾಧ್ಯದಲ್ಲಿ ಪ್ರಮುಖವಾದಂತಹ ಘಟಕ ಕಡ್ಲೇನೆ ಆಗಿದೆ. ಆದರೆ ಕಡ್ಲೆ ಇರುವಂತ ಪದಾರ್ಥಗಳನ್ನ ಪ್ರಸಾದವೆಂದು ಕೊಟ್ಟಾಗ ಈಗಿನ ಮಕ್ಕಳು ಸೇವಿಸಲು ಹಿಂಜರಿರುವ ಸಂಗತಿ ಕಂಡು ಬಂದಿದೆ.

ಏಷ್ಯನ್ ಗೇಮ್ಸ್ ಅಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಅನೇಕ ಭಾರತೀಯರು ಕ್ರೀಡಾಪಟುಗಳು ಪದಕ ಗಳಿಸಿದ್ದಾರೆ. ಇವರ ಅದ್ಭುತ ಗೆಲುವಿನ ನಂತರ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಬೇರೆಬೇರೆ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಿಂದ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದೇನೆ ಎಂಬ ಮಾತು ಕೆಲವು ಕ್ರೀಡಾಪಟುಗಳದ್ದು.

ಅಂದ್ರೆ ಪೇಟೆಯಲ್ಲಿ ಸಿಗುವ ಉತ್ಪನ್ನಗಳನ್ನು ತಿಂದು ಸಾಮರ್ಥ್ಯ ಹೆಚ್ಚಿಸಿಲ್ಲ. ಅಂತ ಉತ್ತರಭಾರತದ ಹಲವು ಕ್ರೀಡಾಪಟುಗಳು ತಮ್ಮ ಸಂದರ್ಶನಗಳಲ್ಲಿ ಹೇಳಿದ್ದಾರೆ. ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಗುಡಚನಾ ಸೇವಿಸಿದ್ದಾರೆ. ಗುಡ ಅಂದರೆ ಬೆಲ್ಲ ಚನಾ ಕಡ್ಲೆ. ಬೆಲ್ಲ ತಕ್ಷಣ ಶಕ್ತಿ ಬರುವಂತೆ ಮಾಡುತ್ತದೆ.

ಕಡ್ಲೆಯಲ್ಲಿಯ ಪ್ರೋಟೀನ್ ಸ್ನಾಯುಗಳಿಗೆ ,ಮಾಂಸಖಂಡಗಳಿಗೆ ಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಿಸಲು ಉತ್ತಮ, ಕಡ್ಲೆಯ ಪದಾರ್ಥಗಳನ್ನು ತಿನ್ನುವಾಗ ತುಪ್ಪದ ಜೊತೆಗೆ ತಿನ್ನುವುದು ವಾಡಿಕೆ.

ಈ ವಾಡಿಕೆ ಯಾಕೆ ಮುಂದುವರಿದು ಬಂದಿದೆ ಎಂದು ಯೋಚಿಸಿದರೆ ಕಡ್ಲೆ ಜೀರ್ಣ ಆಗ್ಲಿಕ್ಕೆ ಜೊತೆಗೆ ನಯ ವಸ್ತು ಬೇಕು ಅದರಲ್ಲಿ ಈ ತುಪ್ಪ ಕಡಲೆ ಜೀರ್ಣ ಆಗಲಿಕ್ಕೆ ಹೆಚ್ಚಿನ ಸಹಾಯ ಮಾಡುತ್ತದೆ ಅಲ್ಲದೆ ಕಡಲೆಯಿಂದ ಆಗುವಂಥ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಆ ಕಾರಣಕ್ಕೆ ಹೋಳಿಗೆ ತುಪ್ಪ , ಕಡ್ಲೆ ಮಡ್ಡಿ ತುಪ್ಪ, ಪಂಚಕಖಾಧ್ಯವನ್ನು ತುಪ್ಪದ ಜೊತೆಗೆ ತಿನ್ನುವುದು.

ಬರಹ: ಡಾ. ರವಿಕಿರಣ ಪಟವರ್ಧನ್, ಶಿರಸಿ, ಆಯುರ್ವೇದ ವೈದ್ಯರು

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ