AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nervous System: ನರ ದೌರ್ಬಲ್ಯ ಇರುವವರು ಖಂಡಿತ ಡ್ರೈ ಫ್ರೂಟ್ಸ್ ತಿನ್ನಬೇಕು, ಆ ಪವಾಡ ನಡೆಯುತ್ತೆ!

ನರ ಮಂಡಲ: ನರ ದೌರ್ಬಲ್ಯ ಇರುವವರು ಖಂಡಿತ ಈ ಡ್ರೈ ಫ್ರೂಟ್ಸ್ ತಿನ್ನಬೇಕು.. ಪವಾಡ ನಡೆಯುತ್ತೆ.. ಅಂದರೆ.. ಆರೋಗ್ಯಕರ ಆಹಾರ ಸೇವನೆಯು ನಿಮ್ಮ ನರಗಳಿಗೆ ನೈಸರ್ಗಿಕ ಶಕ್ತಿಯನ್ನು ನೀಡುತ್ತದೆ.

Nervous System: ನರ ದೌರ್ಬಲ್ಯ ಇರುವವರು ಖಂಡಿತ ಡ್ರೈ ಫ್ರೂಟ್ಸ್ ತಿನ್ನಬೇಕು, ಆ ಪವಾಡ ನಡೆಯುತ್ತೆ!
ನರ ದೌರ್ಬಲ್ಯ ಇರುವವರು ಖಂಡಿತ ಡ್ರೈ ಫ್ರೂಟ್ಸ್ ತಿನ್ನಬೇಕು, ಆ ಪವಾಡ ನಡೆಯುತ್ತೆ!
TV9 Web
| Updated By: ಸಾಧು ಶ್ರೀನಾಥ್​|

Updated on: Aug 31, 2022 | 1:13 PM

Share

ದೈನಂದಿನ ಜೀವನದಲ್ಲಿ ನಾವೆಲ್ಲರೂ ನಮ್ಮ ಕಚೇರಿ, ಸ್ನೇಹಿತರ ಬಳಗ, ಬಂಧುಬಳಗ, ಮದುವೆ ಕಾರ್ಯ ಮತ್ತು ಇತರ ವಿಷಯಗಳಲ್ಲಿ ತುಂಬಾ ನಿರತರಾಗಿದ್ದೇವೆ.. ನಾವು ನಮ್ಮ ಬಗ್ಗೆ ನಮ್ಮ ದೇಹದ ದೇಖರೇಖಿ ಬಗ್ಗೆ ನೋಡಿಕೊಳ್ಳುವುದನ್ನು ಮರೆತುಬಿಡುತ್ತೇವೆ. ಎಷ್ಟೋ ದಿನ ಆ ಕಡೆ ವರ್ಕ್ ಔಟ್ ಮಾಡುವುದೂ ಇಲ್ಲ; ಈ ಕಡೆ ಫಾಸ್ಟ್​ ಫುಡ್​​ ಗಳಿಗೆ ಬಿದ್ದು, ದಿನವೂ ಜಂಕ್ ಫುಡ್ ತಿನ್ನುವುದು ಅಭ್ಯಾಸವಾಗಿಬಿಡುತ್ತದೆ. ಇವೆಲ್ಲವೂ ನಮ್ಮ ದೇಹದ ಮೇಲೆ ಖಚಿತವಾಗಿ ಪರಿಣಾಮ ಬೀರುತ್ತವೆ. ನಮ್ಮ ದೇಹದ ನರಗಳೂ ದುರ್ಬಲವಾಗುತ್ತವೆ. ರಕ್ತನಾಳಗಳು ದುರ್ಬಲವಾದಾಗ.. ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದಿಲ್ಲ. ಇದರಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ.

ಆದರೆ ನಿಮ್ಮ ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳುವ ಮೂಲಕ ನಿಮ್ಮ ನರಗಳನ್ನು ನೈಸರ್ಗಿಕವಾಗಿ ಬಲಪಡಿಸಬಹುದು. ನಿಮ್ಮ ಆಹಾರದಲ್ಲಿ ನೀವು ಯಾವ ವಸ್ತುಗಳನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ತಿಳಿಯಿರಿ. ನರಗಳಿಗೆ ಯಾವುದೇ ಗಾಯಬವಾಗದಂತೆ, ಮಧುಮೇಹ ಭಾದಿಸದಂತೆ, ಆಹಾರ ಪದ್ಧತಿಯಲ್ಲಿ ವ್ಯತ್ಯಯವಾಗದಂತೆ, ಪೋಷಕಾಂಶಗಳ ಕೊರತೆ ಕಾಡದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ನರಗಳು ದುರ್ಬಲವಾಗುತ್ತವೆ. ಅದರೊಂದಿಗೆ ಯಾವುದೇ ಸಣ್ಣ ಭಾರ ಎತ್ತಿದರೂ ಕೈ ನಡುಗುವುದು, ಸ್ವಲ್ಪ ದೂರ ನಡೆದರೆ ಸಾಕು ಕಾಲು ನಡುಗುವುದು, ಕೆಲಸ ಮಾಡಲು ಆಗದಿರುವುದು, ಸೆಳೆತ, ತೀವ್ರ ಆಯಾಸ, ಸ್ನಾಯು ನೋವು ಹೀಗೆ ಹಲವು ಸಮಸ್ಯೆಗಳು ಕಾಡುತ್ತವೆ.

ಡ್ರೈ ಫ್ರೂಟ್ಸ್​​ ಬೀಜಗಳನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಖಚಿತವಾಗಿ ಇದು ನಿಮ್ಮ ನರಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಒಣ ಹಣ್ಣುಗಳು ಮೆಗ್ನೀಸಿಯಮ್ನ ಉತ್ತಮ ಮೂಲವಾಗಿದೆ, ಇದು ನಿಮ್ಮ ದೇಹದ ನರಗಳಿಗೆ ಬಹಳ ಮುಖ್ಯವಾಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಬಾದಾಮಿ, ಗೋಡಂಬಿ, ವಾಲ್ ನಟ್ ಇತ್ಯಾದಿಗಳನ್ನು ಸೇರಿಸಿಕೊಳ್ಳಬೇಕು.

ಮೀನು ತಿನ್ನಬಹುದು

ಒಮೆಗಾ 3 ಕೊಬ್ಬಿನಾಂಶಗಳು ನರಗಳಿಗೆ ಬಹಳ ಮುಖ್ಯ. ಇದರಿಂದ ನರಗಳು ಬಲಗೊಳ್ಳುತ್ತವೆ. ಮೀನಿನಲ್ಲಿ ಒಮೆಗಾ 3 ಕೊಬ್ಬಿನಾಂಶಗಳು ಸಮೃದ್ಧವಾಗಿವೆ. ಅದಕ್ಕಾಗಿಯೇ ಮೀನುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು, ನರಗಳನ್ನು ಬಲಪಡಿಸಲು ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಹಸಿರು ತರಕಾರಿಗಳು

ಹಸಿರು ತರಕಾರಿಗಳು (ಗ್ರೀನ್ಸ್) ಅನೇಕ ಪ್ರಯೋಜನಗಳನ್ನು ಹೊಂದಿದೆ. ವಿಟಮಿನ್ ಬಿ, ಸಿ, ಇ, ಮೆಗ್ನೀಸಿಯಂ, ತಾಮ್ರ, ಫೋಲೇಟ್, ಕ್ಯಾಲ್ಸಿಯಂ ಹಸಿರು ತರಕಾರಿಗಳಲ್ಲಿ ಕಂಡುಬರುತ್ತವೆ, ಇದು ನಿಮ್ಮ ನರಗಳ ದೌರ್ಬಲ್ಯವನ್ನು ತಡೆಗಟ್ಟುತ್ತದೆ. ಅದಕ್ಕೇ ಅವುಗಳನ್ನು ನಿಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳಬೇಕು.

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?