ಸೀನುವುದು ಒಂದು ರೋಗವಾ? ಇದನ್ನು ನಿಯಂತ್ರಿಸುವುದು ಹೇಗೆ?
Sneezing Home Remedies: ಸೀನುವಾಗ ಸೂಕ್ಷ್ಮಾಣುಗಳ ಹರಡುವಿಕೆಯನ್ನು ತಡೆಯಲು ನಿಮ್ಮ ಮೂಗು ಮತ್ತು ಬಾಯಿಯನ್ನು ಬಟ್ಟೆ ಅಥವಾ ಕೈಗಳಿಂದ ಮುಚ್ಚಿಕೊಳ್ಳುವುದು ಉತ್ತಮ ಅಭ್ಯಾಸ. ಹಲವು ದಿನಗಳಾದರೂ ಸೀನುವಿಕೆ ನಿಲ್ಲದಿದ್ದರೆ ವೈದ್ಯರನ್ನು ಭೇಟಿಯಾಗಲು ಮರೆಯಬೇಡಿ.
ಕೆಲವರು ಬೆಳಗ್ಗೆ ಎದ್ದತಕ್ಷಣ ಸ್ವಲ್ಪ ಹೊತ್ತು ಅಕ್ಷೀ… ಎಂದು ಒಂದರ ಮೇಲೊಂದು ಸೀನುತ್ತಲೇ ಇರುತ್ತಾರೆ. ಬಿಸಿಲು ಮೈಮೇಲೆ ಬಿದ್ದಕೂಡಲೆ ಈ ಸೀನುವಿಕೆ ಕೂಡ ಕಡಿಮೆಯಾಗಿಬಿಡುತ್ತದೆ. ಸೀನುವಿಕೆಯು ಬಾಯಿ ಮತ್ತು ಮೂಗಿನ ಮೂಲಕ ಹಾದುಹೋಗುವ ಗಾಳಿಯ ಹಠಾತ್ ಮತ್ತು ಅನಿಯಂತ್ರಿತ ಸ್ಫೋಟವಾಗಿದೆ. ಮೂಗು ಮತ್ತು ಗಂಟಲಿನ ಲೋಳೆಯ ಪೊರೆಯ ಕಿರಿಕಿರಿಯಿಂದ ಸೀನುವಿಕೆ ಉಂಟಾಗುತ್ತದೆ. ಸೀನುವಿಕೆಯು ಜನರಿಗೆ ಕಿರಿಕಿರಿ ನೀಡಬಹುದು. ಆದರೆ ಇದು ಯಾವುದೇ ರೋಗದ ಗಂಭೀರ ಲಕ್ಷಣವಲ್ಲ.
ಸೀನುವಾಗ ಸೂಕ್ಷ್ಮಾಣುಗಳ ಹರಡುವಿಕೆಯನ್ನು ತಡೆಯಲು ನಿಮ್ಮ ಮೂಗು ಮತ್ತು ಬಾಯಿಯನ್ನು ಬಟ್ಟೆ ಅಥವಾ ಕೈಗಳಿಂದ ಮುಚ್ಚಿಕೊಳ್ಳುವುದು ಉತ್ತಮ ಅಭ್ಯಾಸ. ಹಲವು ದಿನಗಳಾದರೂ ಸೀನುವಿಕೆ ನಿಲ್ಲದಿದ್ದರೆ ವೈದ್ಯರನ್ನು ಭೇಟಿಯಾಗಲು ಮರೆಯಬೇಡಿ.
ಸೀನುವಿಕೆಗೆ ಕಾರಣವೇನು?:
ಸೀನುವಿಕೆಯು ನಿಮ್ಮ ಮೂಗು ಅಥವಾ ಗಂಟಲಿನಿಂದ ಕಿರಿಕಿರಿಯನ್ನು ತೆಗೆದುಹಾಕುವ ನಿಮ್ಮ ದೇಹದ ಮಾರ್ಗವಾಗಿದೆ. ಇದು ಸಾಕಷ್ಟು ಕಿರಿಕಿರಿ ಉಂಟುಮಾಡಬಹುದು, ಇದು ಸಾಮಾನ್ಯವಾಗಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯಲ್ಲ.
ಇದನ್ನೂ ಓದಿ: ವಾಸನೆಯೆಂದು ಮುಖ ತಿರುಗಿಸಬೇಡಿ; ಮೂಲಂಗಿಯಿಂದ ಏನೆಲ್ಲ ಉಪಯೋಗವಿದೆ ಗೊತ್ತಾ?
ನೀವು ಉಸಿರಾಡುವ ಗಾಳಿಯನ್ನು ಸ್ವಚ್ಛಗೊಳಿಸುವುದು, ಅದು ಕೊಳಕು ಮತ್ತು ಬ್ಯಾಕ್ಟೀರಿಯಾದಿಂದ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಕೆಲವೊಮ್ಮೆ ನಿಮ್ಮ ಮೂಗು ಲೋಳೆಯಲ್ಲಿ ಕೊಳಕು ಮತ್ತು ಬ್ಯಾಕ್ಟೀರಿಯಾವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಿಮ್ಮ ಹೊಟ್ಟೆಯು ನಂತರ ಲೋಳೆಯನ್ನು ಜೀರ್ಣಿಸಿಕೊಳ್ಳುತ್ತದೆ. ಇದರಿಂದ ಯಾವುದೇ ತೊಂದರೆಯಿಲ್ಲ.
ಅಲರ್ಜಿ, ಶೀತ ಅಥವಾ ಜ್ವರದಂತಹ ವೈರಸ್‌ಗಳು, ಮೂಗಿನ ಉದ್ರೇಕಕಾರಿಗಳು, ಮೂಗಿನ ಸ್ಪ್ರೇ, ಕೆಲವು ಔಷಧಗಳು, ಚಳಿ, ತಂಪಾದ ಗಾಳಿ, ಧೂಳು, ಜ್ವರ, ಮಸಾಲೆಯುಕ್ತ ಆಹಾರದಿಂದಲೂ ಸೀನು ಉಂಟಾಗುತ್ತದೆ.
ಇದನ್ನೂ ಓದಿ: ಹುಣಸೆಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯ ಕೆಟ್ಟೀತು ಎಚ್ಚರ!
ಸೀನುವಿಕೆಗೆ ಕಾರಣವಾಗಬಹುದಾದ ಅಲರ್ಜಿಯನ್ನು ತೊಡೆದುಹಾಕಲು ನೀವು ಬಳಸಬಹುದಾದ ಕೆಲವು ಮನೆಮದ್ದುಗಳು ಇಲ್ಲಿವೆ.
1. ಜೇನುತುಪ್ಪ
2. ಅರಿಶಿನ
3. ಕಾಳು ಮೆಣಸು
4. ಶುಂಠಿ
5. ಏರ್ ಫಿಲ್ಟರ್‌ಗಳನ್ನು ಬಳಸುವುದು
6. ಹಾಸಿಗೆಗಳು ಮತ್ತು ಬೆಡ್ಶೀಟ್ಗಳನ್ನು ಸರಿಯಾಗಿ ಮತ್ತು ಆಗಾಗ ತೊಳೆಯುವುದು
7. ಸಾಕುಪ್ರಾಣಿಗಳ ಮೈಯನ್ನು ಕ್ಲೀನ್ ಮಾಡುತ್ತಿರುವುದು, ಪ್ರಾಣಿಗಳನ್ನು ಮುಟ್ಟಿದ ಬಳಿಕ ಕೈ ತೊಳೆಯುವುದು
8. ಧೂಳಿನಲ್ಲಿ ನಿಮ್ಮ ಬಟ್ಟೆಯನ್ನು ಒಣಗಿಸಬೇಡಿ, ಧೂಳು ಮುಟ್ಟಿದ ಕೈಯಿಂದ ಮೂಗು ಮುಟ್ಟಿಕೊಳ್ಳಬೇಡಿ
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ