Home Remedies: ಅತಿಯಾಗಿ ಬೆವರುವುದನ್ನು ತಡೆಯಲು ಇಲ್ಲಿದೆ ಸರಳ ಮನೆಮದ್ದು
ಬೇಸಿಗೆಯಲ್ಲಿ ಮಾತ್ರವಲ್ಲ ಎಲ್ಲಾ ಕಾಲದಲ್ಲಿಯೂ ತುಂಬಾ ಬೆವರುವರಿದ್ದಾರೆ. ಸ್ವಲ್ಪ ಸೆಕೆಯಾದರೂ ಅವರಿಗೆ ತಡೆಯಲು ಆಗುವುದಿಲ್ಲ. ಬೆವರುವಿಕೆ ಒಳ್ಳೆಯದೆ. ಆದರೆ ಎಷ್ಟು ಬೆವರುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಆದರೆ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸದೆ, ಡಿಯೊಡ್ರೆಂಟ್ ಉಪಯೋಗಿಸುತ್ತಾ ನಿರ್ಲಕ್ಷ್ಯವಹಿಸುತ್ತಾರೆ.
ಕೆಲವರು ಬೇಸಿಗೆಯಲ್ಲಿ ಮಾತ್ರವಲ್ಲ ಎಲ್ಲಾ ಕಾಲದಲ್ಲಿಯೂ ತುಂಬಾ ಬೆವರುತ್ತಾರೆ. ಸ್ವಲ್ಪ ಸೆಕೆಯಾದರೂ ಅವರಿಗೆ ತಡೆಯಲು ಆಗುವುದಿಲ್ಲ. ಬೆವರುವಿಕೆ ಒಳ್ಳೆಯದೆ. ಆದರೆ ಎಷ್ಟು ಬೆವರುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಆದರೆ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸದೆ, ಡಿಯೊಡ್ರೆಂಟ್ ಉಪಯೋಗಿಸುತ್ತಾ ನಿರ್ಲಕ್ಷ್ಯವಹಿಸುತ್ತಾರೆ.
ಆದರೆ ಅತಿಯಾಗಿ ಬೆವರುವುದರಿಂದ ದೇಹದಲ್ಲಿ ನಿಶ್ಯಕ್ತಿ ಕಾಡಬಹುದು. ಜೊತೆಗೆ ದೇಹದಿಂದ ದುರ್ಗಂಧ ಬರಬಹುದು. ಅತಿಯಾಗಿ ಬೆವರುವುದನ್ನು ತಡೆಯಲು ನಾನಾ ರೀತಿಯ ಔಷಧಗಳ ಮೊರೆ ಹೋಗುವುದಕ್ಕಿಂತ ಮನೆಮದ್ದನ್ನು ಮಾಡಬಹುದು. ರಾತ್ರಿ 10 ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ. ಇದು ಅತಿಯಾಗಿ ಬೆವರುವುದನ್ನು ತಡೆಯುತ್ತದೆ.
ಲಾವಂಚದ ಬೇರನ್ನು ಸೇವನೆ ಮಾಡುವುದರಿಂದ ದೇಹದ ಬೆವರುವಿಕೆಯನ್ನು ಕಡಿಮೆ ಮಾಡಬಹುದು. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. 2ಲೀ ನೀರಿಗೆ ಒಂದು ಚಮಚ ಲಾವಂಚವನ್ನು ಸೇರಿಸಿ ಚೆನ್ನಾಗಿ ಕುದಿಸಿ ಬಳಿಕ ಸೇವನೆ ಮಾಡಿ. ಇಡೀ ದಿನ ಈ ಲಾವಂಚದ ನೀರನ್ನು ಸೇವನೆ ಮಾಡಬಹುದು.
ನಿಮ್ಮ ಆಹಾರಕ್ಕೂ, ಬೆವರುವುದಕ್ಕೂ ಪರಸ್ಪರ ಸಂಬಂಧವಿದೆ. ಅಧಿಕ ಸೋಡಿಯಂ ಇರುವ ಆಹಾರವು ಉಪ್ಪನ್ನು ಹೆಚ್ಚುವರಿ ಮೂತ್ರ ಮತ್ತು ಬೆವರಿನ ರೂಪದಲ್ಲಿ ನಿರ್ವಿಷಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಉಪ್ಪು ಮತ್ತು ಮಸಾಲೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಹಾಗಾಗಿ ಆಹಾರದ ಕಡೆ ಗಮನವಿರಲಿ.
ಇದನ್ನೂ ಓದಿ: ಗುರು ಪೂರ್ಣಿಮೆಯ ದಿನ ಈ ವಿಶೇಷ ಕೆಲಸ ಮಾಡಿ ನಿಮ್ಮ ಗುರುಗಳಿಗೆ ಗೌರವ ನೀಡಿ
ನಿಮ್ಮ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಅತಿಯಾದ ಬೆವರುವುದನ್ನು ತಪ್ಪಿಸಲು ನಿಂಬೆ ನೀರು, ತಾಜಾ ಹಣ್ಣಿನ ರಸ ಮತ್ತು ಎಳನೀರನ್ನು ಕುಡಿಯಿರಿ ಇದೆಲ್ಲದರ ಜೊತೆಗೆ ಯಥೇಚ್ಛವಾಗಿ ನೀರನ್ನು ಕುಡಿಯಿರಿ. ಸಾಕಷ್ಟು ನೀರು ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ ಮತ್ತು ಅತಿಯಾಗಿ ಬೆವರುವುದನ್ನು ತಡೆಯುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ