Guru Purnima 2024: ಗುರು ಪೂರ್ಣಿಮೆಯ ದಿನ ಈ ವಿಶೇಷ ಕೆಲಸ ಮಾಡಿ ನಿಮ್ಮ ಗುರುಗಳಿಗೆ ಗೌರವ ನೀಡಿ

ಗುರುಗಳಿಗೆ ಗೌರವ ಸಲ್ಲಿಸುವುದು ನಮ್ಮ ಸಂಸ್ಕ್ರತಿ. ಇನ್ನೇನು ಗುರು ಪೂರ್ಣಿಮೆಯ ಆಚರಣೆ ಹತ್ತಿರದಲ್ಲಿದೆ ಆ ದಿನ ಯಾವುದಾದರೂ ಒಂದು ವಿಶೇಷ ಕೆಲಸ ಮಾಡುವ ಮೂಲಕ ನಮ್ಮ ಗುರುಗಳಿಗೆ ಗೌರವ ಸಲ್ಲಿಸುವುದು ಒಳಿತು. ಈ ಆಚರಣೆ ಹೀಗೆ ಇರಬೇಕೆಂದಿಲ್ಲ. ನಿಮ್ಮ ಮನಸ್ಸಿಗೆ ತೃಪ್ತಿ ಸಿಗುವ ಕೆಲಸ ಯಾವುದಾದರೂ ಒಳ್ಳೆಯದೇ. ಹಾಗಾಗಿ ನಿಮ್ಮ ಗುರುಗಳಿಗೆ ಗೌರವ ಸೂಚಿಸಲು ಉತ್ತಮ ಕೆಲಸ ಮಾಡಿ.

Guru Purnima 2024: ಗುರು ಪೂರ್ಣಿಮೆಯ ದಿನ ಈ ವಿಶೇಷ ಕೆಲಸ ಮಾಡಿ ನಿಮ್ಮ ಗುರುಗಳಿಗೆ ಗೌರವ ನೀಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 20, 2024 | 11:05 AM

ಗುರು ಯಾವ ಕ್ಷೇತ್ರದಲ್ಲಿದ್ದರೂ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಸಂಸ್ಕ್ರತಿ. ಇನ್ನೇನು ಗುರು ಪೂರ್ಣಿಮೆಯ ಆಚರಣೆ ಹತ್ತಿರದಲ್ಲಿದೆ ಆ ದಿನ ಯಾವುದಾದರೂ ಒಂದು ವಿಶೇಷ ಕೆಲಸ ಮಾಡುವ ಮೂಲಕ ನಮ್ಮ ಗುರುಗಳಿಗೆ ಗೌರವ ಸಲ್ಲಿಸುವುದು ಒಳಿತು. ಈ ಆಚರಣೆ ಹೀಗೆ ಇರಬೇಕೆಂದಿಲ್ಲ. ನಿಮ್ಮ ಮನಸ್ಸಿಗೆ ತೃಪ್ತಿ ಸಿಗುವ ಕೆಲಸ ಯಾವುದಾದರೂ ಒಳ್ಳೆಯದೇ. ಹಾಗಾಗಿ ನಿಮ್ಮ ಗುರುಗಳಿಗೆ ಗೌರವ ಸೂಚಿಸಲು ಉತ್ತಮ ಕೆಲಸ ಮಾಡಿ.

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ ಕೆಲವು ಹಳ್ಳಿಗಳಲ್ಲಿ ಅಥವಾ ನಮ್ಮ ಸುತ್ತಮುತ್ತಲಿರುವ ಜನರಿಗೆ ಕೆಲವು ರೋಗಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅದೂ ಅಲ್ಲದೆ ಕೆಲವು ಭಾಗದಲ್ಲಿ ರೋಗಗಳ ಬಗ್ಗೆ ಇರುವ ತಪ್ಪು ತಿಳುವಳಿಕೆ ಆಸ್ಪತ್ರೆಗೆ ಹೋಗುವುದನ್ನು ತಡೆಯುತ್ತದೆ, ಇದು ಕಾಯಿಲೆಯ ಉಲ್ಬಣಕ್ಕೆ ಕಾರಣವಾಗಬಹುದು. ಹಾಗಾಗಿ ಈ ಗುರು ಪೂರ್ಣಿಮೆಯ ದಿನ ಸಾಧ್ಯವಾದಷ್ಟು ನಮ್ಮ ನೆರೆಹೊರೆಯವರಿಗೆ ಈ ಸಮಯದಲ್ಲಿ ಹೆಚ್ಚಾಗುತ್ತಿರುವ ರೋಗಗಳ ಬಗ್ಗೆ ಮಾಹಿತಿ ನೀಡಿ. ಯಾವ ರೀತಿಯ ಆಹಾರ ಸೇವನೆ ಮಾಡಬೇಕು? ಮಾಡಬಾರದು? ಅಥವಾ ಕಾಯಿಲೆಗಳು ಹೆಚ್ಚಾಗುತ್ತಿರಲು ಕಾರಣವೇನು ಎಂಬ ಬಗ್ಗೆ ತಿಳಿ ಹೇಳಿ.

ಇದನ್ನೂ ಓದಿ: ಆರೋಗ್ಯದ ವಿಷಯದಲ್ಲಿ ಗುರು, ಶಿಷ್ಯನಿಗೆ ನೀಡುವ ಆರೋಗ್ಯಕರ ಸಲಹೆಗಳು

ಸಾಮಾನ್ಯವಾಗಿ ಡೆಂಗ್ಯೂ, ಚಿಕನ್ ಗುನ್ಯ, ವಿಷಮಶೀತ ಜ್ವರ, ಕಾಲರಾ, ಮಲೇರಿಯಾ, ಚರ್ಮದ ಸಮಸ್ಯೆ ಹೀಗೆ ಅನೇಕ ರೋಗಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇದನ್ನು ಹೇಗೆ ನಿಯಂತ್ರಣ ಮಾಡಬೇಕು? ಇದಕ್ಕೆ ಕಾರಣವೇನು? ಹೀಗೆ ಕೆಲವು ಅಗತ್ಯ ಮಾಹಿತಿಗಳನ್ನು ನೀಡುವುದರಿಂದ ಕಾಯಿಲೆ ಹೆಚ್ಚಾಗುವುದನ್ನು ಸಣ್ಣ ಮಟ್ಟದಲ್ಲಿ ನಿಯಂತ್ರಣ ಮಾಡಬಹುದು ಜೊತೆಗೆ ಸಮಾಜಕ್ಕೆ ನಮ್ಮ ಕಡೆಯಿಂದ ಚಿಕ್ಕ ಅಳಿಲು ಸೇವೆಯೂ ಆಗುತ್ತದೆ. ನಮಗೆ ಗೊತ್ತಿರುವ ಆರೋಗ್ಯ ಸಲಹೆಗಳನ್ನು ಅದರ ಬಗ್ಗೆ ತಿಳಿಯದವರೊಂದಿಗೆ ಹಂಚಿಕೊಳ್ಳುವುದರಿಂದ ಅವರಿಗೂ ಆ ರೋಗದ ಬಗ್ಗೆ ಮಾಹಿತಿ ನೀಡಿದಂತಾಗುತ್ತದೆ. ಇದರಿಂದ ನಿಮ್ಮ ಸುತ್ತಮುತ್ತಲಿರುವ ಜನರ ಆರೋಗ್ಯ ಕಾಪಾಡಬಹುದು, ಈ ಒಳ್ಳೆಯ ಕೆಲಸ ನಿಮ್ಮ ಗುರುಗಳಿಗೂ ಗೌರವ ನೀಡಿದಂತಾಗುತ್ತದೆ. ಆದರೆ ನೀವು ಆರೋಗ್ಯ ಸಲಹೆಗಳನ್ನು ನೀಡುವ ಮೊದಲು ಆರೋಗ್ಯ ತಜ್ಞರನ್ನು ಸಂಪರ್ಕಿಸಿ, ಬಳಿಕ ಸರಿಯಾದ ಮಾಹಿತಿಯನ್ನು ನೀಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್