AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thumb Sucking Habit: ನಿಮ್ಮ ಮಕ್ಕಳು ಬಾಯಿಗೆ ಬೆರಳು ಹಾಕುವ ಅಭ್ಯಾಸ ಬೆಳೆಸಿಕೊಂಡಿದ್ದಾರಾ, ಇದಕ್ಕೆ ಕಾರಣವೇನು?

ಮಕ್ಕಳು ಪದೇ ಪದೇ ಬಾಯಿಯಲ್ಲಿ ಬೆರಳುಗಳನ್ನು ಹಾಕುವುದರಿಂದ ಹಲ್ಲು ರಚನೆಯಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು. ಕೆಲವೊಮ್ಮೆ ಮುಖದ ಆಕಾರವೂ ಬದಲಾಗುವ ಸಾಧ್ಯತೆಯಿದೆ. ಅಲ್ಲದೆ ಈ ಅಭ್ಯಾಸವು ಬ್ಯಾಕ್ಟೀರಿಯಾ ಬಾಯಿಯನ್ನು ಪ್ರವೇಶಿಸಲು ಕಾರಣವಾಗುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಮಕ್ಕಳು ತಮ್ಮ ಬೆರಳುಗಳನ್ನು ಬಾಯಿಯಲ್ಲಿ ಹಾಕುವ ಅಭ್ಯಾಸವನ್ನು ನಿಲ್ಲಿಸಬೇಕು. ಹಾಗಾದರೆ ಮಕ್ಕಳಲ್ಲಿ ಈ ಅಭ್ಯಾಸ ಆರಂಭವಾಗಲು ಕಾರಣವೇನು? ಇದರಿಂದ ಮಕ್ಕಳಿಗೆ ಉಂಟಾಗುವ ತೊಂದರೆಗಳೇನು? ಇಲ್ಲಿದೆ ಮಾಹಿತಿ.

Thumb Sucking Habit: ನಿಮ್ಮ ಮಕ್ಕಳು ಬಾಯಿಗೆ ಬೆರಳು ಹಾಕುವ ಅಭ್ಯಾಸ ಬೆಳೆಸಿಕೊಂಡಿದ್ದಾರಾ, ಇದಕ್ಕೆ ಕಾರಣವೇನು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jul 20, 2024 | 2:29 PM

Share

ಮಕ್ಕಳು ಬಾಯಿಯಲ್ಲಿ ತಮ್ಮ ಬೆರಳು ಇಟ್ಟುಕೊಳ್ಳುವುದು ಸಾಮಾನ್ಯ. ಅನೇಕ ಮಕ್ಕಳಲ್ಲಿ ಈ ಅಭ್ಯಾಸವಿರುತ್ತದೆ. ತಜ್ಞರು ಹೇಳುವ ಪ್ರಕಾರ, ಚಿಕ್ಕ ವಯಸ್ಸಿನಲ್ಲಿಯೇ, ಅಂದರೆ 4 ರಿಂದ 5 ವರ್ಷಕ್ಕಿಂತ ಮೊದಲು ಮಕ್ಕಳನ್ನು ಈ ಅಭ್ಯಾಸದಿಂದ ತಡೆಯಲು ಪ್ರಯತ್ನಿಸುವುದು ಉತ್ತಮ. ಏಕೆಂದರೆ ಪದೇ ಪದೇ ಬಾಯಿಯಲ್ಲಿ ಬೆರಳುಗಳನ್ನು ಹಾಕುವುದರಿಂದ ಹಲ್ಲು ರಚನೆಯಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು. ಕೆಲವೊಮ್ಮೆ ಮುಖದ ಆಕಾರವೂ ಬದಲಾಗುವ ಸಾಧ್ಯತೆಯಿದೆ. ಅಲ್ಲದೆ ಈ ಅಭ್ಯಾಸವು ಬ್ಯಾಕ್ಟೀರಿಯಾ ಬಾಯಿಯನ್ನು ಪ್ರವೇಶಿಸಲು ಕಾರಣವಾಗುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಮಕ್ಕಳು ತಮ್ಮ ಬೆರಳುಗಳನ್ನು ಬಾಯಿಯಲ್ಲಿ ಹಾಕುವ ಅಭ್ಯಾಸವನ್ನು ನಿಲ್ಲಿಸಬೇಕು. ಹಾಗಾದರೆ ಮಕ್ಕಳಲ್ಲಿ ಈ ಅಭ್ಯಾಸ ಆರಂಭವಾಗಲು ಕಾರಣವೇನು? ಇದರಿಂದ ಮಕ್ಕಳಿಗೆ ಉಂಟಾಗುವ ತೊಂದರೆಗಳೇನು? ಇಲ್ಲಿದೆ ಮಾಹಿತಿ.

ವೈದ್ಯರು ಹೇಳುವ ಪ್ರಕಾರ, ಮಕ್ಕಳಿಗೆ ಒಂಟಿತನದ ಅನುಭವಾದಾಗ ಈ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ಸಾಮಾನ್ಯವಾಗಿ, ಮಕ್ಕಳು ತಮ್ಮ ಹೆಬ್ಬೆರಳನ್ನು ಬಾಯಿಯಲ್ಲಿ ಹಾಕಿಕೊಂಡಿದ್ದರೆ ಅವರಿಗೆ ಹಸಿವಾಗುವುದಿಲ್ಲ. ಜೊತೆಗೆ ಹಾಲು ಅಥವಾ ಯಾವುದೇ ರೀತಿಯ ಆಹಾರವನ್ನು ಕೇಳುವುದಿಲ್ಲ. ಇದು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಅಲ್ಲದೆ, ಮಕ್ಕಳು ಆಟವಾಡುವಾಗ ಅವರ ಕೈಯಲ್ಲಿ ಕೊಳಕು, ಧೂಳು ತಾಗಬಹುದು. ಆ ಬೆರಳನ್ನು ಬಾಯಿಯಲ್ಲಿ ಹಾಕಿದಾಗ ಅದರಲ್ಲಿರುವ ಕೊಳಕು, ಕೈಗಳ ಮೂಲಕ ಬಾಯಿಯಿಂದ ದೇಹವನ್ನು ಸೇರುತ್ತದೆ.

ಇದನ್ನೂ ಓದಿ: ಅತಿಯಾಗಿ ಬೆವರುವುದನ್ನು ತಡೆಯಲು ಇಲ್ಲಿದೆ ಸರಳ ಮನೆಮದ್ದು

ಹಂತ ಹಂತವಾಗಿ ಬಿಡಿಸಿ

ಬಾಲ್ಯದಲ್ಲಿ ಈ ಅಭ್ಯಾಸ ಇರುವ ಮಕ್ಕಳು ದುರ್ಬಲ ಮತ್ತು ಆಲಸ್ಯ ಜೀವನವನ್ನು ರೂಢಿಸಿಕೊಳ್ಳುತ್ತಾರೆ. ಜೊತೆಗೆ ಹಲ್ಲುಗಳ ಬೆಳವಣಿಗೆ ಸರಿಯಾಗಿ ಆಗದೆಯೇ ಹೊರಬರುತ್ತವೆ. ತುಟಿಗಳು ಸಹ ದಪ್ಪವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಕೆಲವು ಮನೆಗಳಲ್ಲಿ ಮಕ್ಕಳಿಂದ ಈ ಅಭ್ಯಾಸ ಬಿಡಿಸಲು ಅಲೋವೆರಾ ರಸ, ಬೇವಿನ ಎಲೆಯ ರಸ, ಹಾಗಲಕಾಯಿ ರಸ ಮತ್ತು ಮೆಣಸಿನಕಾಯಿಯನ್ನು ಮಕ್ಕಳ ಕೈಗಳಿಗೆ ಹಚ್ಚುತ್ತಾರೆ. ಆದರೆ ಇದನ್ನು ಮಾಡುವುದು ತಪ್ಪು ಎಂದು ವೈದ್ಯರು ಹೇಳುತ್ತಾರೆ. ಏಕೆಂದರೆ ಇದು ಒಂದು ಅಥವಾ ಎರಡು ದಿನಗಳಲ್ಲಿ ಬಿಡಿಸಲು ಸಾಧ್ಯವಿಲ್ಲ. ಇಂತಹ ಅಭ್ಯಾಸವಿರುವ ಮಕ್ಕಳಿಗೆ ಪೋಷಕರೇ ಹೆಚ್ಚಿನ ತಾಳ್ಮೆ ವಹಿಸಿ ಇದನ್ನು ಮರೆಸಬೇಕಾಗುತ್ತದೆ, ಜೊತೆಗೆ ಮಕ್ಕಳ ಗಮನ ಬೇರೆ ಕಡೆ ಹೋಗುವಂತೆ ಮಾಡಿ ಈ ಅಭ್ಯಾಸವನ್ನು ಹಂತ ಹಂತವಾಗಿ ಬಿಡಿಸಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ