AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆ ಸಮಯದಲ್ಲಿ ನೀವು ತಿಳಿದುಕೊಳ್ಳಬೇಕಾದ ಆರೋಗ್ಯ ಜಾಗೃತೆಗಳು

ಇನ್ನೇನು ಲೋಕಸಭಾ ಚುನಾವಣೆ ಬಾಗಿಲು ತಟ್ಟುತ್ತದೆ ಚುನಾವಣಾ ಪೂರ್ವ ತಯಾರಿಗಳು ಅತಿ ವೇಗದಿಂದ ಸಾಗಿದೆ ರಾಜಕೀಯ ವ್ಯಕ್ತಿಗಳು ಪೊಲೀಸ್ ಇಲಾಖೆ ಹಾಗೂ ಚುನಾವಣಾ ಗಾಗಿ ಈಗಾಗಲೇ ಸೂಚಿತವಾಗಿರುವಂತಹ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು, ಪತ್ರಕರ್ತರು, ಆರೋಗ್ಯ ವಿಷಯವಾಗಿ ಕೆಲವು ಪೂರ್ವ ತಯಾರಿಗಳನ್ನ ಮಾಡಿಟ್ಟುಕೊಳ್ಳುವುದು ಉತ್ತಮ 

ಚುನಾವಣೆ ಸಮಯದಲ್ಲಿ ನೀವು ತಿಳಿದುಕೊಳ್ಳಬೇಕಾದ ಆರೋಗ್ಯ ಜಾಗೃತೆಗಳು
TV9 Web
| Edited By: |

Updated on: Mar 29, 2024 | 12:38 PM

Share

ಚುನಾವಣೆ ಯಾವಾಗಲು ಬೇಸಿಗೆಯಲ್ಲಿ ಬರುತ್ತದೆ ಹಾಗಾಗಿ ಬಿಸಿಲಿನಿಂದ ಆಗುವಂಥ ಎಲ್ಲ ತೊಂದರೆಗಳ ಮುಂಜಾಗ್ರತೆ ಇಟ್ಟುಕೊಳ್ಳುವುದು ಅವಶ್ಯ ಇದರಲ್ಲಿ ಮುಖ್ಯವಾಗಿ ನೀರು. ಸಾಧ್ಯವಾದಷ್ಟು ತಮ್ಮ ಮನೆಯಿಂದಲೇ ನೀರನ್ನು ತೆಗೆದುಕೊಂಡು ಹೋಗಿ . ಮೂಲಸ್ಥಳದಿಂದ ಹೊರಡುವಾಗ ಸಕ್ಕರೆ, ಉಪ್ಪು, ನೀರು ಸೇವಿಸಿ ಹೊರಡುವ ರೂಢಿ ಈಗಿಂದಲೇ ರೂಢಿಸಿ. ಹೆಚ್ಚಿನ ಉಪ್ಪು ಸೇವನೆ ಆರೋಗ್ಯಕ್ಕೆ ಉತ್ತಮ ಅಲ್ಲ ಆದರೆ ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಹಿಡಿದಿಟ್ಟುಕೊಳ್ಳಲು ಅವಶ್ಯಕ.

ಒಂದು ಲೀಟರ್ ನೀರಿಗೆ 20 ಗ್ರಾಂನಷ್ಟು ಹವೀಜ(ಕೊತ್ತಂಬರಿ ಬೀಜ,ಧನಿಯಾ) ಪುಡಿಯನ್ನು ಹಾಕಿ 15ರಿಂದ 20 ನಿಮಿಷಗಳವರೆಗೆ ಕುದಿಸಿ, ಅದಕ್ಕೆ 6 ಚಮಚ ಸಕ್ಕರೆ 2 ಚಮಚೆಯಷ್ಟು ಉಪ್ಪನ್ನು ಹಾಕಿ ಇದನ್ನ ಆಗಾಗ ಸೇವಿಸಬಹುದು. 3-4 ಬಾಟಲಿ ನೀರು ತೆಗೆದುಕೊಂಡು ಹೋಗುವುದು ತಪ್ಪಿಸಿ 2 ಲೀಟರ್ ನಿಂದ ಅವಶ್ಯಕತೆಯನ್ನು ಪೂರೈಸುವಂತೆ ಮಾಡುತ್ತದೆ. ಇದು ಮಾಡುವ ವಿಧಾನವನ್ನು ಯೂಟ್ಯೂಬ್ನಲ್ಲಿ ಡಾ ರವಿ ಪಟವರ್ಧನ್ ಓಆರೆಸ್ ಎಂದು ಹುಡುಕಿದಾಗ ಮಾಹಿತಿ ಲಭ್ಯವಿದೆ. ರಕ್ತದೊತ್ತಡವಿದ್ದವರು ,ಮಧುಮೇಹದ ರೋಗಿಗಳು ಅದರ ತಕ್ಕಹಾಗೆ ಸೂಕ್ತ ಜಾಗ್ರತೆಯನ್ನು ಯೋಚಿಸಿ ಈ ಮೇಲಿನ ಉಪಾಯಗಳನ್ನು ವೈದ್ಯರ ಸಲಹೆ ಮೇರೆಗೆ ಉಪಯೋಗಿಸಿ.

  • ತಲೆಗೆ ಅಂಪಾಯರ್ ಕ್ಯಾಪನ್ನು ಬಳಸಿ ಅದು ಆದಷ್ಟು ಬಿಳಿ ಬಣ್ಣದ್ದು ಇದ್ದರೆ ಉತ್ತಮ.
  • ಬೇರೆ ಊರುಗಳಿಗೆ ಹೋದಾಗ ಆದಷ್ಟು ಎಣ್ಣೆಯಲ್ಲಿ ಕರಿದ, ಅತ್ಯಂತ ಹುಳಿ ಅತ್ಯಂತ ಖಾರದ ಪದಾರ್ಥಗಳನ್ನು ಸೇವಿಸುವುದು ಬೇಡ.
  • ನಿರಂತರ ಔಷಧೋಪಚಾರದವರು ಮೊದಲೇ ಔಷಧಿ ಸಂಗ್ರಹಿಸಿ,ಕೂನೆಯಕ್ಷಣದ ಗಡಿಬಿಡಿಬೇಡ.ಎರಡು ಮೂರುದಿನ ಚುನಾವಣಾ ಕರ್ತವ್ಯದ ವೇಳೆ ಅಲ್ಲಿ ಆಹಾರದ ವ್ಯವಸ್ಥೆ ಇದ್ದರೂ ತಾವು ಮನೆಯಿಂದ ಸಿದ್ದಪಡಿಸಿ ಆಹಾರ ಸಂಗ್ರಹ ಅವಶ್ಯಕ. ಕನಿಷ್ಟ ಬಿಸ್ಕೆಟ್ನ ಆದರೂ ಇರಲಿ ಅಥವಾ ಕಟಕ್ ಜೋಳದ ರೊಟ್ಟಿ,ಖಾಕ್ರಾ
  • ಕೆಲವು ಸಂದರ್ಭಗಳಲ್ಲಿ ನೇರ 48 ಘಂಟೆ ಕರ್ತವ್ಯ ದ ವೇಳೆ ಆಹಾರ ಸ್ವೀಕಾರದ ಕಡೆ ವಿಶೇಷ ಗಮನ ಅಗತ್ಯ.
  • ಕಂಪ್ಯೂಟರ್ ಸ್ಕ್ರೀನ್ ಹಲವು ಘಂಟೆಗಳ ಕಾಲ ವೀಕ್ಷಿಸುವ ಅವಶ್ಯಕತೆ ಇರುವವರು ಪದೇಪದೇ ಕಣ್ಣು ಮುಚ್ಚುವ,ತೆಗೆಯುವ ರೂಢಿ ಮಾಡಬೇಕು.
  • ವಿಶೇಷವಾಗಿ ಮಧುಮೇಹ ರೋಗಿಗಳು ವಿಶೇಷ ಗಮನವಿರಲಿ.ಕರ್ತವ್ಯವೇಳೆ ಸರಿಯಾಗಿ ಆಹಾರ ಸೇವಿಸದೇ ಕೇವಲ ಔಷಧಿ ಸೇವನೆ ತೊಂದರೆಗೆ ಕಾರಣವಾಗಬಹುದು.ಇದರಿಂದ ರಕ್ತದಲ್ಲಿಯ ಸಕ್ಕರೆ ಪ್ರಮಾಣ ಕಡಿಮೆಯಾಗಬಹುದು.

ಒಂದು ಉದಾಹರಣೆಯ ಘಟನೆ ಕೇಂದ್ರ ಸಚಿವರು ಒಂದು ಸಭೆಯಲ್ಲಿ ಮಾತನಾಡುತ್ತಲೇ ಕುಸಿದದ್ದು ಇದು ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಆದಂತಹ ಪರಿಣಾಮ. ಆಗ ಸಮಾರಂಭದಲ್ಲಿ ಇಟ್ಟಂತಹ ಒಣಹಣ್ಣು ಅವರಿಗೆ ನೀಡಲಾಯಿತು. ಇದು ಭಾರಿ ಪ್ರಮಾದಕ್ಕೆ ಕಾರಣವಾಗಬಹುದಾಗಿತ್ತು.ಇಂತಹ ಸಂದರ್ಭದಲ್ಲಿ ಸಕ್ಕರೆ ಪುಡಿ ನೀಡುವುದು ಸುರಕ್ಷಿತ.ಕಾರಣ ಒಂದಿಷ್ಟು ಸಕ್ಕರೆ ಪುಡಿ, ಉಪ್ಪು ಇಟ್ಟುಕೊಳ್ಳುವುದು ಇಂತಹ ಸಂದರ್ಭದಲ್ಲಿ ಉತ್ತಮ. ಇದನ್ನು ವಿಶೇಷವಾಗಿ ಈ ಗಣ್ಯ ವ್ಯಕ್ತಿಗಳ ಅಂಗರಕ್ಷಕರು ತಮ್ಮ ಕಿಸೆಯಲ್ಲಿಯೇ ಸಂಗ್ರಹಿಸಿ ಇಟ್ಟುಕೊಳ್ಳುವುದು ಅವಶ್ಯ. ಗಣ್ಯರಿಗೆ ಗಣ್ಯರಿಗೆ ಏನೇ ತೊಂದರೆ ತಾಪತ್ರೆಯ ಕಂಡರು ಮೊಟ್ಟ ಮೊದಲು ಗಲಿಬಿಲಿ ಕೊಳ್ಳುವವರು ಅಂಗರಕ್ಷಕ ಪಡೆಯ ಸಿಬ್ಬಂದಿ.

ತಮ್ಮ ಸಂಗ್ರಹದಲ್ಲಿ ಸ್ಪಟಿಕ ಅಂದರೆ ಪೊಟಾಷ್ ಆಲ್ಲಂ( alum) ಇರಲಿ. ನಿಯೋಜನೆ ಇರುವ ಸ್ಥಳದ ನೀರು ಮಣ್ಣುಯುಕ್ತ ವಾಗಿದ್ದರೆ ಈ ಸ್ಫಟಿಕದ ಬಳಕೆಯಿಂದ ನೀರು ಶುದ್ಧವಾಗುತ್ತದೆ.ಅಲ್ಲದೇ ಯಾವುದೇ ಕಾರಣಕ್ಕೆ ಗಾಯ ಆಗಿ ರಕ್ತಸ್ರಾವ ಆದರೆ ಈ ಸ್ಫಟಿಕದ ಸ್ವಲ್ಪ ಪುಡಿ ರಕ್ತಸ್ರಾವದ ಭಾಗಕ್ಕೆ ಹಾಕಿದರೆ ರಕ್ತಸ್ರಾವ ತಕ್ಷಣ ನಿಲ್ಲುತ್ತದೆ.

ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ