ಪದೇ ಪದೇ ಹಸಿವಾಗುವುದು ಮಧುಮೇಹದ ಆರಂಭಿಕ ಲಕ್ಷಣವೇ? ಇಲ್ಲಿದೆ ತಜ್ಞರ ಉತ್ತರ
ಊಟ ಮಾಡಿದ ಮೂರ್ನಾಲ್ಕು ಗಂಟೆಗಳ ನಂತರ ಹಸಿವಾಗುವುದು ಸಹಜ, ಆದರೆ ಊಟ ಮಾಡಿದ ಕೂಡಲೇ ಹಸಿವಾಗುವುದು ಸಾಮಾನ್ಯವಲ್ಲ. ಹೌದು, ಇದು ಮಧುಮೇಹದ ಸೂಚನೆಯೂ ಆಗಿರಬಹುದು. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ, ಆಗಾಗ ಹಸಿವಾಗುವುದು ದೇಹದಲ್ಲಿನ ಸಕ್ಕರೆ ಮಟ್ಟದಲ್ಲಿ ವ್ಯತ್ಯಾಸ ಉಂಟಾಗಿ ಇನ್ಸುಲಿನ್ ಕಾರ್ಯ ದುರ್ಬಲಗೊಂಡಿದೆ ಎಂಬುದರ ಸಂಕೇತ ಎಂದು ಹೇಳುತ್ತದೆ. ಹಾಗಾದರೆ ಯಾವ ಯಾವ ಲಕ್ಷಣಗಳು ಮಧುಮೇಹದ ಎಚ್ಚರಿಕೆಯ ಸೂಚನೆಗಳಾಗಿರುತ್ತವೆ, ಈ ರೀತಿಯ ಸಮಸ್ಯೆಯನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಊಟ ಮಾಡಿದ ಕೆಲವೇ ಗಂಟೆಗಳಲ್ಲಿ ಹಸಿವಾಗುವುದು ಅಥವಾ ಆಗಾಗ ಏನನ್ನಾದರೂ ತಿನ್ನಬೇಕೆಂಬ ಆಸೆಯಾಗುವುದು ಸಾಮಾನ್ಯವಲ್ಲ. ಇದು ದೇಹದಲ್ಲಿ ಇನ್ಸುಲಿನ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದರ ಸಂಕೇತವಾಗಿದೆ. ಹೌದು, ಇದು ಮಧುಮೇಹದ (Diabetes) ಸೂಚನೆಯೂ ಆಗಿರಬಹುದು. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ, ಆಗಾಗ ಹಸಿವಾಗುವುದು ದೇಹದಲ್ಲಿನ ಸಕ್ಕರೆ ಮಟ್ಟದಲ್ಲಿ ವ್ಯತ್ಯಾಸ ಉಂಟಾಗಿ ಇನ್ಸುಲಿನ್ ಕಾರ್ಯ ದುರ್ಬಲಗೊಂಡಿದೆ ಎಂಬುದರ ಸಂಕೇತವಾಗಿದೆ. ಅಂದರೆ ದೇಹದಲ್ಲಿರುವ ಇನ್ಸುಲಿನ್ ಹಾರ್ಮೋನ್, ರಕ್ತದಲ್ಲಿನ ಗ್ಲೂಕೋಸ್ ಅನ್ನು ಜೀವಕೋಶಗಳಿಗೆ ಸರಿಯಾಗಿ ತಲುಪಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ, ದೇಹಕ್ಕೆ ಸರಿಯಾದ ಶಕ್ತಿ ಸಿಗುವುದಿಲ್ಲ ಇದರಿಂದ ಮೆದುಳು ಪದೇ ಪದೇ ಹಸಿವನ್ನು ಸಂಕೇತಿಸುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ, ಇದನ್ನು ಪಾಲಿಫೇಜಿಯಾ ಎಂದು ಕರೆಯಲಾಗುತ್ತದೆ. ಹಾಗಾದರೆ ಯಾವ ಯಾವ ಲಕ್ಷಣಗಳು ಮಧುಮೇಹದ ಎಚ್ಚರಿಕೆಯ ಸೂಚನೆಗಳಾಗಿರುತ್ತವೆ, ಈ ರೀತಿಯ ಸಮಸ್ಯೆಯನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ದೇಹದಲ್ಲಿ ಮಧುಮೇಹ ಆರಂಭವಾಗುವ ಮೊದಲು ಕೆಲವು ಲಕ್ಷಣಗಳು ಕಂಡುಬರುತ್ತವೆ. ಅನೇಕರು ಈ ಸಮಸ್ಯೆಯನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಆದರೆ ಈ ರೀತಿ ಮಾಡುವುದು ಒಳ್ಳೆಯದಲ್ಲ, ಆರಂಭಿಕ ಹಂತದಲ್ಲಿದ್ದಾಗ ಆಹಾರದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಈ ರೀತಿಯ ಕಾಯಿಲೆಗಳನ್ನು ತಡೆಯಬಹುದು. ಇಲ್ಲವಾದಲ್ಲಿ ಮಧುಮೇಹ ನಿಮ್ಮ ಜೀವನವನ್ನೇ ಹಾಳು ಮಾಡುತ್ತದೆ. ಅದಕ್ಕೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲದಿರುವುದರಿಂದ ನೀವು ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಅದರ ಹೊರತಾಗಿ ಅದರಿಂದ ಮುಕ್ತಿ ಪಡೆಯಲು ಸಾಧ್ಯವಾಗುವುದಿಲ್ಲ ಹಾಗಾಗಿ ಕೆಲವು ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಮಧುಮೇಹ ಸೂಚಿಸುವ ಲಕ್ಷಣಗಳು:
- ಹಸಿವು ಹೆಚ್ಚಾಗುವುದರ ಜೊತೆಗೆ ಬಾಯಾರಿಕೆ ಹೆಚ್ಚಾಗುತ್ತದೆ.
- ಆಗಾಗ ಮೂತ್ರ ವಿಸರ್ಜನೆ.
- ದೌರ್ಬಲ್ಯ.
- ದೃಷ್ಟಿ ಮಂದವಾಗುವುದು.
ಇದನ್ನೂ ಓದಿ: ಹೈಬಿಪಿ, ಡಯಾಬಿಟಿಸ್ ಕಿಡ್ನಿಗೆ ಹಾನಿ ಮಾಡುತ್ತದೆಯೇ? ನೀವು ತಿಳಿಯಬೇಕಾದ ವಿಷಯಗಳಿವು!
ಯಾರಿಗೆ ಹೆಚ್ಚಿನ ಅಪಾಯವಿದೆ?
- ಕುಟುಂಬದಲ್ಲಿ ಯಾರಿಗಾದರೂ ಮಧುಮೇಹವಿದ್ದರೆ
- ಬಹಳಷ್ಟು ಸಿಹಿತಿಂಡಿಗಳನ್ನು ತಿನ್ನುವುದು
- ಅಧಿಕ ತೂಕ ಇರುವುದು
- ವ್ಯಾಯಾಮ ಮಾಡದಿರುವುದು
- ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತು ಕೆಲಸ ಮಾಡುವುದು
ತಡೆಯುವುದು ಹೇಗೆ?
- ಆಹಾರದಲ್ಲಿ ಕಡಿಮೆ ಕೊಬ್ಬಿನಂಶ ಮತ್ತು ಹೆಚ್ಚು ಪ್ರೋಟೀನ್ ಸೇವಿಸಿ
- ಪ್ರತಿದಿನ ಕನಿಷ್ಠ 15 ನಿಮಿಷ ವ್ಯಾಯಾಮ ಮಾಡಿ
- ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡಿ
- ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ
- ಸಕ್ಕರೆ ಮಟ್ಟವನ್ನು ಪರಿಶೀಲಿಸುತ್ತಿರಿ, ಹೆಚ್ಚಿದ್ದರೆ, ವೈದ್ಯರನ್ನು ಸಂಪರ್ಕಿಸಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




