AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Intrauterine blood transfusion : ಗರ್ಭದಲ್ಲಿರುವ ಭ್ರೂಣಕ್ಕೆ ರಕ್ತ ಪೂರೈಕೆ, ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ವೈದ್ಯರ ತಂಡ

ಏಳು ತಿಂಗಳ ಗರ್ಭಿಣಿ ಮಹಿಳೆಯ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ರಕ್ತಹೀನತೆ ಸಮಸ್ಯೆಯಿತ್ತು. ಇದನ್ನರಿತ ಲಕ್ನೋ ಕೆಜಿಎಂಯುನ ಕ್ವೀನ್ ಮೇರಿ ಆಸ್ಪತ್ರೆಯ ವೈದ್ಯರು ಅಲ್ಟ್ರಾಸೌಂಡ್ ಸಹಾಯದಿಂದ ರಕ್ತವನ್ನು ಸೂಜಿಯ ಮೂಲಕ ಭ್ರೂಣಕ್ಕೆ ರಕ್ತ ವರ್ಗಾಯಿಸಿದ್ದಾರೆ. ಇದೇ ಮೊದಲ ಬಾರಿಗೆ ತಾಯಿಯ ಗರ್ಭದಲ್ಲಿರುವ ಬೆಳೆಯುತ್ತಿರುವ ಮಗುವಿಗೆ ರಕ್ತ ವರ್ಗಾವಣೆ ಮಾಡಿದ್ದು, ಮೊದಲ ಪ್ರಯತ್ನದಲ್ಲೇ ವೈದ್ಯರ ತಂಡವುಯಶಸ್ವಿಯಾಗಿದೆ.

Intrauterine blood transfusion : ಗರ್ಭದಲ್ಲಿರುವ ಭ್ರೂಣಕ್ಕೆ ರಕ್ತ ಪೂರೈಕೆ, ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ವೈದ್ಯರ ತಂಡ
ಲಕ್ನೋ ಕೆಜಿಎಂಯುನ ಕ್ವೀನ್ ಮೇರಿ ಆಸ್ಪತ್ರೆಯ ವೈದ್ಯರು
TV9 Web
| Edited By: |

Updated on: Sep 12, 2024 | 2:14 PM

Share

ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣದಲ್ಲಿ ಏನಾದರೂ ಸಮಸ್ಯೆಯು ಕಂಡು ಬಂದರೆ ಪರಿಣಾಮವು ತಾಯಿಯು ಅನುಭವಿಸಬೇಕಾಗುತ್ತದೆ. ಏಳು ತಿಂಗಳ ಗರ್ಭಿಣಿಯ ಗರ್ಭದಲ್ಲಿರುವ ಬೆಳೆಯುತ್ತಿರುವ ಮಗುವಿಗೆ ರಕ್ತಹೀನತೆಯ ಸಮಸ್ಯೆಯೊಂದು ಕಾಡಿತ್ತು. ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ (ಕ್ವೀನ್ ಮೇರಿ) ವೈದ್ಯರು ರಕ್ತ ವರ್ಗಾಯಿಸಿ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಜೀವ ಉಳಿಸಿದ್ದಾರೆ.

ರಕ್ತಹೀನತೆಯಿಂದ ಬಳಲುತ್ತಿರುವ ಮಗುವಿಗೆ ಕ್ವೀನ್ ಮೇರಿ ಆಸ್ಪತ್ರೆಯ ಡಾ.ಸೀಮಾ ಮೆಹ್ರೋತ್ರಾ ಮತ್ತು ಅವರ ತಂಡವು ಗರ್ಭಾಶಯದಲ್ಲಿಯೇ ಎರಡು ಬಾರಿ ರಕ್ತವನ್ನು ನೀಡುವ ಮೂಲಕ ಮಗುವಿನ ಜೀವ ನೀಡಿದ್ದಾರೆ. ಕೆಜಿಎಂಯುನ ಭ್ರೂಣ ಔಷಧ ಘಟಕವು ತಾಯಿಯ ಗರ್ಭದಲ್ಲಿರುವ ಭ್ರೂಣಕ್ಕೆ ರಕ್ತ ನೀಡಿದ್ದು ಇದೇ ಮೊದಲಾಗಿದ್ದು, ತಮ್ಮ ಮೊದಲ ಪ್ರಯತ್ನದಲ್ಲೇ ವೈದ್ಯರು ಯಶಸ್ವಿಯಾಗಿದ್ದಾರೆ. ಈಗ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇದೇ ವೇಳೆ ಕೆಜಿಎಂಯು ವಿಸಿ ಸೋನಿಯಾ ನಿತ್ಯಾನಂದ ಅವರು ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

32 ವರ್ಷದ ಪ್ರತಿಮಾ 7 ತಿಂಗಳ ಗರ್ಭಿಣಿಯಾಗಿದ್ದು, ಏಳು ತಿಂಗಳ ಗರ್ಭಿಣಿಯಾಗಿದ್ದಾಗ ಭ್ರೂಣದಲ್ಲಿ ರಕ್ತಹೀನತೆ ಕಂಡುಬಂದ ಹಿನ್ನಲೆಯಲ್ಲಿ ಅವರನ್ನು ಕಾನ್ಪುರದಿಂದ ಕೆಜಿಎಂಯುಗೆ ಶಿಫ್ಟ್ ಮಾಡಲಾಗಿತ್ತು. ಡಾ. ಸೀಮಾ ಮೆಹ್ರೋತ್ರಾ ಅವರು ಕೇಸ್ ಹಿಸ್ಟರಿ ಪರಿಶೀಲಿಸಿದ ಬಳಿಕ ಮಹಿಳೆಯು ಈ ಹಿಂದೆ ಎರಡು ಬಾರಿ ಗರ್ಭಿಣಿಯಾಗಿರುವುದು ಕಂಡುಬಂದಿದೆ. ಅದಲ್ಲದೇ, ಈ ಬಾರಿ ಅವರು ಕೆಂಪು ರಕ್ತ ಕಣಗಳ ಅಲೋಇಮ್ಯುನೈಸೇಶನ್ ಸಮಸ್ಯೆ ಕಂಡು ಬಂದಿದೆ. ಈಗಾಗಲೇ ಭ್ರೂಣಕ್ಕೆ ಎರಡು ಬಾರಿ ಗರ್ಭಾಶಯದಲ್ಲಿಯೇ ರಕ್ತವನ್ನು ನೀಡಲಾಯಿತು. 35 ವಾರಗಳ ಬಳಿಕ ಸಿಸೇರಿಯನ್ ಮೂಲಕ 3 ಕೆಜಿ ತೂಕವುಳ್ಳ ಮಗುವನ್ನು ಹೊರತೆಗೆಯಲಾಯಿತು ಎಂದಿದ್ದಾರೆ. ಕೆಜಿಎಂಯುನ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ.ಅಂಜು ಅಗರ್ವಾಲ್ ಈ ಬಗ್ಗೆ ಮಾತನಾಡಿದ್ದು, ‘ಕೆಜಿಎಂಯುನ ಕ್ವೀನ್ ಮೇರಿ ಆಸ್ಪತ್ರೆಯು ಭ್ರೂಣ ಔಷಧಿ ಸೌಲಭ್ಯವನ್ನು ಒದಗಿಸುತ್ತಿದೆ. ಈಗ ನಾವು ಆರ್ ಎಚ್ ಐಸೊಇಮ್ಯುನೈಸೇಶನ್ ಗರ್ಭಧಾರಣೆಯ ಚಿಕಿತ್ಸೆಯಲ್ಲಿ ಯಶಸ್ಸನ್ನು ಸಾಧಿಸಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ನಿಮ್ಮ ಮಕ್ಕಳಲ್ಲಿ ಹೆಪಟೈಟಿಸ್ ತಡೆಯಲು ಡಾ. ರಾಕೇಶ್ ಹೇಳಿರುವ ಈ ಸಲಹೆಯನ್ನು ಅನುಸರಿಸಿ

ಭ್ರೂಣದಲ್ಲಿ ಕಂಡು ಬರುವ ಈ ರಕ್ತಹೀನತೆಯ ಸಮಸ್ಯೆಯ ಬಗ್ಗೆ ಡಾ. ನಮ್ರತಾ  ಅವರು ತುಂಬಾ ಸರಳವಾಗಿ ವಿವರಿಸಿದದ್ದಾರೆ, ‘ಪೋಷಕರ ರಕ್ತದ ಆರ್ ಎಚ್ ವಿರುದ್ಧವಾಗಿದ್ದಾಗ ಇಂತಹ ಪರಿಸ್ಥಿತಿ ಉಂಟಾಗುತ್ತದೆ. ನವಜಾತ ಶಿಶುವಿನ ತಾಯಿಯ ರಕ್ತದ ಗುಂಪು ಋಣಾತ್ಮಕ ಮತ್ತು ತಂದೆಯ ರಕ್ತವು Rh ಧನಾತ್ಮಕವಾಗಿರುವ ಕಾರಣ ಈ ಸ್ಥಿತಿಯು ಉಂಟಾಗುತ್ತದೆ. ಪೋಷಕರ ರಕ್ತದ ಆರ್ ಎಚ್ ವಿರುದ್ಧವಾಗಿದ್ದಾಗ ಇಂತಹ ಪರಿಸ್ಥಿತಿ ಉಂಟಾಗುತ್ತದೆ. ಈ ವಿರುದ್ಧ ರಕ್ತದ ಗುಂಪಿನಿಂದಾಗಿ ಭ್ರೂಣವು ಆರ್ ಎಚ್ ಪಾಸಿಟಿವ್ ಆಗಬಹುದು. ತಾಯಿಯಲ್ಲಿ ಪ್ರತಿಕಾಯಗಳು ಬೆಳವಣಿಗೆಯಾಗುತ್ತವೆ ಹಾಗೂ ಈ ಪ್ರತಿಕಾಯಗಳು ಭ್ರೂಣದ ಕೆಂಪು ರಕ್ತ ಕಣಗಳನ್ನು ನಾಶಮಾಡುತ್ತವೆ. ಕ್ರಮೇಣ ಇವು ಭ್ರೂಣದಲ್ಲಿ ರಕ್ತಹೀನತೆಯನ್ನು ಉಂಟುಮಾಡುತ್ತವೆ’ ಎಂದು ಹೇಳಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್