AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸ ನಿಮಗಿದ್ಯಾ? ಇದು ವೆರಿಕೋಸ್ ವೇನ್ಸ್‌ಗೆ ಕಾರಣವಾಗುತ್ತಾ?

ಹಿಂದಿನ ಕಾಲದಲ್ಲಿ ದೊಡ್ಡವರ ಮುಂದೆ ಯಾರೂ ಕೂಡ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುತ್ತಿರಲಿಲ್ಲ. ಆದರೆ ಈಗ ಹಾಗಲ್ಲ, ಕುಳಿತುಕೊಳ್ಳಲು ಅದೊಂದು ಕಂಫರ್ಟ್ ಪೊಸಿಷನ್ ಆಗಿಬಿಟ್ಟಿದೆ. ಆದರೆ ಈ ರೀತಿ ಕುಳಿತುಕೊಳ್ಳುವವರಿಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತದೆ ಎನ್ನಲಾಗುತ್ತಿತ್ತು. ಅದರಲ್ಲಿಯೂ ಈ ರೀತಿ ಕುಳಿತುಕೊಂಡರೆ ವೆರಿಕೋಸ್ ವೇನ್ಸ್‌ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಇದು ಸತ್ಯವೇ? ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಅಪಾಯಕಾರಿಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸ ನಿಮಗಿದ್ಯಾ? ಇದು ವೆರಿಕೋಸ್ ವೇನ್ಸ್‌ಗೆ ಕಾರಣವಾಗುತ್ತಾ?
Crossed Legs Side Effects: Myths and Medical FactsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Apr 21, 2026 | 5:06 PM

Share

ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು (‘ಕ್ರಾಸ್ ಲೆಗ್ ಪೋಷಿಷನ್) ಬಹಳ ಸಾಮಾನ್ಯವಾಗಿದೆ. ಮೊದಲೆಲ್ಲಾ ಈ ರೀತಿ ದೊಡ್ಡವರ ಮುಂದೆ ಕುಳಿತುಕೊಳ್ಳುವುದು ಸರಿಯಲ್ಲ ಎಂದು ಹೇಳುತ್ತಿದ್ದರು. ಆದರೆ ಈಗ ಹಾಗಲ್ಲ, ತಮಗಿಷ್ಟವಾದ ರೀತಿ ಕುಳಿತುಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಈ ರೀತಿ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು (Crossed Legs) ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಲಾಗುತ್ತಿತ್ತು. ಈ ರೀತಿಯಾಗಿ ಕೂತರೆ ಬೆನ್ನೆಲುಬು ವಕ್ರವಾಗುತ್ತದೆ, ರಕ್ತ ಸಂಚಲನ ಕುಂಠಿತವಾಗುತ್ತದೆ ಮತ್ತು ವೆರಿಕೋಸ್ ವೇನ್ಸ್ (Varicose Veins) ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ಅಧ್ಯಯನಗಳು ಮತ್ತು ವೈದ್ಯರ ಅಭಿಪ್ರಾಯಗಳು ಈ ವಿಚಾರಕ್ಕೆ ಬೇರೆ ಚಿತ್ರಣವನ್ನೇ ನೀಡಿದೆ. ಹಾಗಾದರೆ ಯಾವುದು ಸತ್ಯ, ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಅಪಾಯಕಾರಿಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೆನ್ನೆಲುಬಿನ ಮೇಲೆ ಪರಿಣಾಮ ಬೀರುತ್ತದೆಯೇ?

ತಜ್ಞರ ಪ್ರಕಾರ, ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ ನರಗಳ ಮೇಲೆ ಸ್ವಲ್ಪ ಒತ್ತಡ ಬೀಳಬಹುದು. ಇದರಿಂದ ಕೆಲವೊಮ್ಮೆ ಕಾಲಿನಲ್ಲಿ ಜುಮ್ ಎಂಬ ಅನುಭವ ಅಥವಾ ಸಣ್ಣ ನೋವು ಕಾಣಿಸಬಹುದು. ಆದರೆ ಇದು ಸಾಮಾನ್ಯವಾಗಿ ತಾತ್ಕಾಲಿಕವಾಗಿದ್ದು, ದೀರ್ಘಕಾಲಿಕ ಹಾನಿಗೆ ಕಾರಣವಾಗುವುದಿಲ್ಲ. ಅನೇಕರು ಈ ಭಂಗಿಯಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ ಎಂದು ಭಾವಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಮಾನವ ದೇಹದ ಬೆನ್ನೆಲುಬು ಬಹಳ ಬಲವಾದ ಮತ್ತು ನವೀನತೆಯುಳ್ಳ ರಚನೆಯಾಗಿದೆ. ಇದು ವಿವಿಧ ರೀತಿಯ ಕುಳಿತ ಭಂಗಿಗಳನ್ನು ಸಹಿಸಬಲ್ಲದು. ಬೆನ್ನುನೋವು ಅಥವಾ ಸೊಂಟದ ನೋವಿಗೆ ಪ್ರಮುಖ ಕಾರಣ ಒಂದೇ ಭಂಗಿಯಲ್ಲಿ ಹೆಚ್ಚು ಸಮಯ ಕೂತಿರುವುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ನೀವು ಕೆಲಸ ಮಾಡುವಾಗ ಕುಳಿತುಕೊಳ್ಳುವಂತಹ ಭಂಗಿಯಿಂದಲೂ ಬರಬಹುದು ಬೆನ್ನು ನೋವು ಎಚ್ಚರಿಕೆ ನೀಡಿದ ಡಾ ಅಜಯ್‌ ಹೆಗ್ಡೆ

ವೆರಿಕೋಸ್ ವೇನ್ಸ್‌ಗೆ ಕಾರಣವೇ?

ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ ವೆರಿಕೋಸ್ ವೇನ್ಸ್ ಉಂಟಾಗುತ್ತದೆ ಎಂಬ ಭಾವನೆ ಸಾಮಾನ್ಯವಾಗಿದೆ. ಆದರೆ ತಜ್ಞರು ಹೇಳುವಂತೆ, ಈ ಸಮಸ್ಯೆಯ ಮುಖ್ಯ ಕಾರಣ ರಕ್ತನಾಳಗಳ ವಾಲ್ವ್ ಸರಿಯಾಗಿ ಕೆಲಸ ಮಾಡದಿರುವುದು. ವಯಸ್ಸು, ಜೀನ್ಸ್, ಅತಿಯಾದ ಕೊಬ್ಬು ಅಥವಾ ಬೊಜ್ಜು, ಗರ್ಭಾವಸ್ಥೆ ಮತ್ತು ದೀರ್ಘಕಾಲ ನಿಂತಿರುವುದು ಇದರ ಪ್ರಮುಖ ಕಾರಣಗಳು. ಕುಳಿತ ಭಂಗಿ ಮಾತ್ರ ಇದಕ್ಕೆ ನೇರ ಕಾರಣವಲ್ಲ.

ತಜ್ಞರ ಸಲಹೆ ಏನು?

ನೀವು ಯಾವ ರೀತಿಯಲ್ಲಿ ಕೂತರೂ, ಒಂದೇ ಭಂಗಿಯಲ್ಲಿ ಹೆಚ್ಚು ಸಮಯ ಇರಬಾರದು. ಮಧ್ಯ ಮಧ್ಯದಲ್ಲಿ ಭಂಗಿ ಬದಲಾಯಿಸುವುದು ಮತ್ತು ಸ್ವಲ್ಪ ನಡೆಯುವುದು ರಕ್ತ ಸಂಚಲನ ಸುಧಾರಿಸಲು ಸಹಾಯ ಮಾಡುತ್ತದೆ. ಒಟ್ಟಿನಲ್ಲಿ, ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಹಾನಿಕರವಾಗಿಲ್ಲ. ಆದರೆ ದೀರ್ಘಕಾಲ ಒಂದೇ ಸ್ಥಿತಿಯಲ್ಲಿ ಕೂತಿರುವುದನ್ನು ತಪ್ಪಿಸುವುದೇ ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us