Kidney Health: ಕಿಡ್ನಿ ವೈಫಲ್ಯದ ಬಗ್ಗೆ ಜನರಲ್ಲಿರುವ 5 ತಪ್ಪುಕಲ್ಪನೆಗಳಿವು

ಮೂತ್ರಪಿಂಡಗಳು ದೇಹದ ತ್ಯಾಜ್ಯವನ್ನು ತೆಗೆಯುವುದು, ಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸುವುದು, ಪಿಹೆಚ್ ಮತ್ತು ಪೊಟ್ಯಾಸಿಯಮ್ ಮಟ್ಟವನ್ನು ನಿಯಂತ್ರಿಸುವುದು ಇತ್ಯಾದಿಗಳನ್ನು ನಿರ್ವಹಿಸುವ ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಕಿಡ್ನಿ ವೈಫಲ್ಯ ಅಥವಾ ಮೂತ್ರಪಿಂಡದ ಹಾನಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಜಡ ಜೀವನಶೈಲಿಯು ಅದಕ್ಕೆ ಮುಖ್ಯ ಕಾರಣವಾಗಿದೆ. ಈ ಕಿಡ್ನಿ ವೈಫಲ್ಯದ ಬಗ್ಗೆ ಜನರಲ್ಲಿರುವ 5 ತಪ್ಪುಕಲ್ಪನೆಗಳು ಇಲ್ಲಿವೆ.

Kidney Health: ಕಿಡ್ನಿ ವೈಫಲ್ಯದ ಬಗ್ಗೆ ಜನರಲ್ಲಿರುವ 5 ತಪ್ಪುಕಲ್ಪನೆಗಳಿವು
ಕಿಡ್ನಿ ವೈಫಲ್ಯImage Credit source: iStock
Follow us
ಸುಷ್ಮಾ ಚಕ್ರೆ
|

Updated on: Mar 16, 2024 | 4:40 PM

ಕಿಡ್ನಿ ವೈಫಲ್ಯದ ಬಗ್ಗೆ ಜನರು ಸರಿಯಾದ ತಿಳಿವಳಿಕೆ ಹೊಂದುವುದು ಮುಖ್ಯವಾಗಿದೆ. ಮೂತ್ರಪಿಂಡ ವೈಫಲ್ಯ ಮತ್ತು ಮೂತ್ರಪಿಂಡದ ಕಾಯಿಲೆಗಳು ಹೆಚ್ಚುತ್ತಿರುವಾಗ ಅವುಗಳ ಸುತ್ತ ಸುತ್ತುತ್ತಿರುವ ತಪ್ಪುಗ್ರಹಿಕೆಗಳು ಸಹ ಹೆಚ್ಚಾಗುತ್ತಿವೆ. ಭಾರತ ದೇಶದಲ್ಲಿ ಶೇ.50ಕ್ಕೂ ಹೆಚ್ಚು ಮೂತ್ರಪಿಂಡದ ಕಾಯಿಲೆಗಳು ಮಧುಮೇಹದಿಂದ ಉಂಟಾಗುತ್ತವೆ. ಕನಿಷ್ಠ ಶೇ. 20-25ರಷ್ಟು ರೋಗಿಗಳು ಅಧಿಕ ರಕ್ತದೊತ್ತಡದಿಂದ ಮೂತ್ರಪಿಂಡದ ಕಾಯಿಲೆಯನ್ನು ಅನುಭವಿಸುತ್ತಾರೆ. ಹೆಚ್ಚಿನ ಜನರು ಕಿರಿಯ ವಯಸ್ಸಿನಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ಅನುಭವಿಸುತ್ತಿದ್ದಾರೆ. 30ರಿಂದ 45 ವಯಸ್ಸಿನ ಜನರಲ್ಲಿ ಮೂತ್ರಪಿಂಡದ ಕಾಯಿಲೆಯನ್ನು ಹೆಚ್ಚಿಸುವ ಪ್ರವೃತ್ತಿ ಹೆಚ್ಚಾಗಿದೆ. ಮೂತ್ರಪಿಂಡದ ಸಮಸ್ಯೆಗಳ ಸುತ್ತಲಿನ ಕೆಲವು ಸಾಮಾನ್ಯ ತಪ್ಪುಕಲ್ಪನೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಕಿಡ್ನಿ ವೈಫಲ್ಯದ ಕುರಿತಾಗಿರುವ 5 ತಪ್ಪುಕಲ್ಪನೆಗಳಿವು:

ಮಿಥ್ಯ: ಮೂತ್ರಪಿಂಡದ ಕಾಯಿಲೆ ಅಪರೂಪ:

ಸತ್ಯ: ಮೂತ್ರಪಿಂಡದ ಕಾಯಿಲೆ ಅಪರೂಪದ ಸಮಸ್ಯೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಆದರೆ, ಅಂಕಿಅಂಶಗಳು ಬೇರೆ ರೀತಿಯಲ್ಲಿ ತೋರಿಸುತ್ತವೆ. ಇತ್ತೀಚಿನ ಮಾಹಿತಿಯು ಭಾರತದಲ್ಲಿ ಶೇ. 17ಕ್ಕಿಂತ ಹೆಚ್ಚು ಜನಸಂಖ್ಯೆಯು ಮೂತ್ರಪಿಂಡ ಕಾಯಿಲೆಯಿಂದ ಪ್ರಭಾವಿತವಾಗಿದೆ ಎಂದು ಸೂಚಿಸುತ್ತದೆ. ಕಿಡ್ನಿ ಕಾಯಿಲೆಗೆ ಸಂಬಂಧಿಸಿದ ತೊಡಕುಗಳು ಪ್ರತಿ ವರ್ಷ ಕೊಲೊನ್ ಮತ್ತು ಸ್ತನ ಕ್ಯಾನ್ಸರ್ ಸೇರಿ ಹೆಚ್ಚು ವ್ಯಕ್ತಿಗಳನ್ನು ಬಲಿ ಪಡೆಯುತ್ತಿದೆ.

ಇದನ್ನೂ ಓದಿ: World Kidney Day 2024: ವಿಶ್ವ ಕಿಡ್ನಿ ದಿನ; ಕಿಡ್ನಿ ಸಮಸ್ಯೆಯ ಲಕ್ಷಣಗಳು, ಚಿಕಿತ್ಸೆಯ ವಿಧಾನವೇನು?

ಮಿಥ್ಯ: ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತವೆ.

ಸತ್ಯ: ಮೂತ್ರಪಿಂಡದ ಕಲ್ಲು ಮೂತ್ರಪಿಂಡದ ಕಾರ್ಯನಿರ್ವಹಣೆಯ ಮೇಲೆ ತಾತ್ಕಾಲಿಕವಾಗಿ ಪರಿಣಾಮ ಬೀರಬಹುದು. ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡಗಳಿಗೆ ಶಾಶ್ವತ ಹಾನಿಯನ್ನುಂಟುಮಾಡುವ ಪ್ರಕರಣಗಳು ಬಹಳ ಅಪರೂಪ. ಅವು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗುವ ಅಂಶವಲ್ಲ. ಆದರೆ, ರೋಗಿಯು ಮೂತ್ರಪಿಂಡ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ವಿಫಲವಾದರೆ ಅಥವಾ ಮೂತ್ರಪಿಂಡದ ಕಲ್ಲುಗಳು ಮರುಕಳಿಸಿದರೆ, ಅದು ಮೂತ್ರಪಿಂಡದ ಕಾಯಿಲೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಮಿಥ್ಯ: ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಆನುವಂಶಿಕವಾಗಿದ್ದು, ಅದನ್ನು ತಡೆಯಲಾಗದು.

ಸತ್ಯ: ಸಿಕೆಡಿ ಅಪಾಯವನ್ನು ಉಂಟುಮಾಡುವಲ್ಲಿ ಜೆನೆಟಿಕ್ಸ್ ಪಾತ್ರವನ್ನು ವಹಿಸುತ್ತದೆ. ಆದರೆ ಹಲವಾರು ಇತರ ಜೀವನಶೈಲಿ ಅಂಶಗಳು ಕೂಡ ಮೂತ್ರಪಿಂಡದ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಆಹಾರ, ವ್ಯಾಯಾಮ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಂಬಂಧಿತ ಆರೋಗ್ಯ ಸಮಸ್ಯೆಗಳಂತಹ ಅಂಶಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಆದ್ದರಿಂದ, ಜೆನೆಟಿಕ್ಸ್ ಮೂತ್ರಪಿಂಡದ ಕಾಯಿಲೆಗೆ ಏಕೈಕ ಮತ್ತು ಅಂತಿಮ ಕಾರಣವಲ್ಲ. ಆರೋಗ್ಯಕರ ಜೀವನಶೈಲಿಯನ್ನು ನಿರ್ವಹಿಸುವ ಮೂಲಕ ಅದರ ಬೆಳವಣಿಗೆಯನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: Kidney Health: ನಮ್ಮ ಕಿಡ್ನಿಯನ್ನು ಆರೋಗ್ಯವಾಗಿಡುವ ಬೆಸ್ಟ್ ಆಹಾರಗಳಿವು

ಮಿಥ್ಯ: ಮೂತ್ರಪಿಂಡದ ಕಾಯಿಲೆಯು ಬೆನ್ನು ಮತ್ತು ಬದಿಯಲ್ಲಿ ನೋವನ್ನು ಉಂಟುಮಾಡುತ್ತದೆ.

ಸತ್ಯ: ಮೂತ್ರಪಿಂಡದ ವೈಫಲ್ಯ ಮತ್ತು ಮೂತ್ರಪಿಂಡದ ಕಾಯಿಲೆಯು ಪಾರ್ಶ್ವ ಮತ್ತು ಬೆನ್ನುನೋವಿನೊಂದಿಗೆ ಇರುತ್ತದೆ ಎಂಬುದು ಸಾಮಾನ್ಯವಾಗಿ ಪ್ರಚಲಿತದಲ್ಲಿರುವ ನಂಬಿಕೆಗಳಲ್ಲಿ ಒಂದಾಗಿದೆ. ನೀವು ಸೋಂಕು ಅಥವಾ ಮೂತ್ರಪಿಂಡದ ಅಡಚಣೆಯನ್ನು ಹೊಂದಿದ್ದರೆ ಮೂತ್ರಪಿಂಡದ ಕಾಯಿಲೆಯಿಂದ ಬೆನ್ನು ನೋವು ಬರಬಹುದು. ಮೂತ್ರಪಿಂಡದ ಕಾಯಿಲೆಯ ಇತರ ರೂಪಗಳು ವಿರಳವಾಗಿ ಬೆನ್ನು ನೋವನ್ನು ಉಂಟುಮಾಡುತ್ತವೆ. ಬೆನ್ನುನೋವಿಗೆ ಸಾಮಾನ್ಯ ಕಾರಣವೆಂದರೆ ಸ್ನಾಯುಗಳು ಅಥವಾ ಬೆನ್ನುಮೂಳೆಯ ರೋಗ ಮತ್ತು ಮೂತ್ರಪಿಂಡದ ಕಾಯಿಲೆಯಲ್ಲ.

ಮಿಥ್ಯ: ಮೂತ್ರಪಿಂಡದ ಕಾಯಿಲೆಯ ಪರೀಕ್ಷೆಯು ಸಂಕೀರ್ಣವಾಗಿದೆ.

ಸತ್ಯ: ಕಿಡ್ನಿ ಕಾಯಿಲೆಯ ಹರಡುವಿಕೆಯನ್ನು ಕೇವಲ 2 ಸರಳ ಹಂತಗಳ ಮೂಲಕ ಕಂಡುಹಿಡಿಯಬಹುದು. ಮೂತ್ರಪಿಂಡದ ಕಾರ್ಯ ಮತ್ತು ಪರಿಣಾಮಕಾರಿತ್ವವನ್ನು ಅರ್ಥಮಾಡಿಕೊಳ್ಳಲು, ಅವರು ಗ್ಲೋಮೆರುಲರ್ ಶೋಧನೆ ದರವನ್ನು (GFR) ನಿರ್ಧರಿಸುವ ಸರಳ ರಕ್ತ ಪರೀಕ್ಷೆಯ ಅಗತ್ಯವಿರುತ್ತದೆ. CKDಯ ಮಾರ್ಕರ್ ಆಗಿರುವ ಮೂತ್ರದಲ್ಲಿನ ಪ್ರೋಟೀನ್ ಪ್ರಮಾಣವನ್ನು ಪತ್ತೆಹಚ್ಚಲು, ಮೂತ್ರ ಪರೀಕ್ಷೆಯ ಅಗತ್ಯವಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು