AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿವರ್ ಸಂಬಂಧಿತ ಕಾಯಿಲೆಯ ಲಕ್ಷಣಗಳು ಪುರುಷರಿಗಿಂತ ಮಹಿಳೆಯರಲ್ಲಿ ಭಿನ್ನವಾಗಿರುತ್ತದೆಯೇ?

ಕಳೆದ ಕೆಲವು ವರ್ಷಗಳಿಂದ, ಯಕೃತ್ತಿನ ಕಾಯಿಲೆ ಅಂದರೆ ಲಿವರ್ ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಇದು ಪುರುಷರು ಮತ್ತು ಮಹಿಳೆಯರು ಇಬ್ಬರಲ್ಲಿಯೂ ಕಂಡುಬರುತ್ತದೆ. ಆದರೆ ನಿಮಗೆ ಗೊತ್ತಾ? ಈ ಕಾಯಿಲೆ ಬರುವ ಮೊದಲು ಕಂಡು ಬರುವ ಕೆಲವು ಲಕ್ಷಣಗಳು ಪುರುಷರಿಗಿಂತ ಭಿನ್ನವಾಗಿರುತ್ತದೆ. ಹೌದು, ಕೆಲವು ಸಾಮಾನ್ಯವಾಗಿದ್ದರೂ ಕೂಡ ಮತ್ತೊಂದಿಷ್ಟು ಲಕ್ಷಣಗಳು ಕೇವಲ ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತದೆ. ಹಾಗಾದರೆ ಯಾಕೆ ಹೀಗೆ ಆಗುತ್ತದೆ, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಲಿವರ್ ಸಂಬಂಧಿತ ಕಾಯಿಲೆಯ ಲಕ್ಷಣಗಳು ಪುರುಷರಿಗಿಂತ ಮಹಿಳೆಯರಲ್ಲಿ ಭಿನ್ನವಾಗಿರುತ್ತದೆಯೇ?
Women And Liver DiseaseImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on:Apr 20, 2026 | 5:29 PM

Share

ಇತ್ತೀಚಿನ ವರ್ಷಗಳಲ್ಲಿ ಲಿವರ್ (Liver) ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಪುರುಷರಲ್ಲಿ ಮಾತ್ರವಲ್ಲ ಮಹಿಳೆಯರೂ ಇದರಿಂದ ಪ್ರಭಾವಿತರಾಗುತ್ತಿದ್ದಾರೆ. ಹಾಗಾಗಿ ಈ ರೀತಿಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಸಮಯಕ್ಕೆ ಸರಿಯಾಗಿ ಗುರುತಿಸುವುದು ಮುಂದಿನ ದೊಡ್ಡ ಅನಾಹುತವನ್ನು ತಡೆಯಬಹುದಾಗಿದೆ. ಅದರಲ್ಲಿಯೂ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚು ಕಂಡು ಬರುತ್ತಿದ್ದು ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದನ್ನು ತಡೆಗಟ್ಟುವುದು ಮುಖ್ಯವಾಗಿದೆ. ತಜ್ಞರು ಹೇಳುವ ಪ್ರಕಾರ, ಪುರುಷರಿಗಿಂತ ಮಹಿಳೆಯರಲ್ಲಿ ಕೆಲವು ಕಾರಣಗಳಿಂದ ಲಿವರ್ ರೋಗದ ಅಪಾಯ ಹೆಚ್ಚಾಗಬಹುದು ಎನುತ್ತಾರೆ. ಹಾಗಾದರೆ ಈ ರೀತಿ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗುವುದಕ್ಕೆ ಕಾರಣವೇನು, ಲಕ್ಷಣಗಳು ಪುರುಷರಿಗಿಂತ ಹೇಗೆ ಭಿನ್ನವಾಗಿರುತ್ತದೆ. ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಲಿವರ್ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಲು ಕಾರಣಗಳೇನು?

ಮಹಿಳೆಯರಲ್ಲಿ ಮೆನೋಪಾಸ್, ಹಾರ್ಮೋನ್ ಬದಲಾವಣೆಗಳು, ಬೊಜ್ಜು ಮತ್ತು ಡಯಾಬಿಟಿಸ್ ಮುಂತಾದ ಕಾರಣಗಳು ಲಿವರ್ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಹಾರ್ಮೋನಲ್ ಅಸಮತೋಲನ ದೇಹದ ಮೆಟಾಬಾಲಿಸಂ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಲಿವರ್ ಕಾರ್ಯಕ್ಷಮತೆ ಕಡಿಮೆಯಾಗಬಹುದು.

ಲಕ್ಷಣಗಳು ಪುರುಷರಿಗಿಂತ ಭಿನ್ನವೇ?

ತಜ್ಞರು ಹೇಳುವಂತೆ, ಲಿವರ್ ಸಂಬಂಧಿತ ಕಾಯಿಲೆಗಳ ಸಾಮಾನ್ಯ ಲಕ್ಷಣಗಳು ಪುರುಷರು ಮತ್ತು ಮಹಿಳೆಯರಲ್ಲಿ ಒಂದೇ ರೀತಿಯಲ್ಲಿರುತ್ತವೆ. ಆದರೆ ಮಹಿಳೆಯರಲ್ಲಿ ಕೆಲವು ವಿಶೇಷ ಸೂಚನೆಗಳು ಕಾಣಿಸಬಹುದು. ಉದಾಹರಣೆಗೆ, ಮಾಸಿಕ ಚಕ್ರದಲ್ಲಿ ಅಸಮರ್ಪಕತೆ, ನಿರಂತರ ದಣಿವು, ದುರ್ಬಲತೆ, ಹೊಟ್ಟೆಯಲ್ಲಿ ಉಬ್ಬರ ಅಥವಾ ಭಾರವಾಗಿರುವ ಭಾವನೆ, ಕಣ್ಣುಗಳಲ್ಲಿ ಹಳದಿ ಬಣ್ಣ (ಜಾಂಡಿಸ್) ಮತ್ತು ತೂಕ ಕಡಿಮೆಯಾಗುವುದು ಇವು ಸಾಮಾನ್ಯ ಲಕ್ಷಣಗಳಾಗಿವೆ. ಹಲವಾರು ಮಹಿಳೆಯರು ಈ ಲಕ್ಷಣಗಳನ್ನು ಸಾಮಾನ್ಯ ದಣಿವು ಅಥವಾ ಹಾರ್ಮೋನಲ್ ಬದಲಾವಣೆ ಎಂದು ನಿರ್ಲಕ್ಷಿಸುತ್ತಾರೆ.

ಇದನ್ನೂ ಓದಿ: ಲಿವರ್ ಡಿಟಾಕ್ಸ್ ಡ್ರಿಂಕ್ಸ್: ನಿಜವಾಗಿಯೂ ಪ್ರಯೋಜನಕಾರಿಯೇ ಅಥವಾ ಕೇವಲ ಟ್ರೆಂಡಿ ಪಾನೀಯವೇ?

ಲಿವರ್ ಒಂದು ಪ್ರಮುಖ ಅಂಗವಾಗಿದ್ದು, ಇದು ಹೆಚ್ಚು ಸಮಯದವರೆಗೆ ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೇ ಕಾರ್ಯನಿರ್ವಹಿಸಬಹುದು. ಇದರಿಂದ ಕಾಯಿಲೆ ತಡವಾಗಿ ಪತ್ತೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಇದು ಲಿವರ್ ಸಿರೋಸಿಸ್ ನಂತಹ ಗಂಭೀರ ಹಂತಕ್ಕೆ ತಲುಪಬಹುದು. ಆದ್ದರಿಂದ ಈ ರೀತಿಯಾದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ತಡೆಗಟ್ಟಲು ಏನು ಮಾಡಬೇಕು?

ಲಿವರ್ ಆರೋಗ್ಯ ಕಾಪಾಡಲು ಸಮತೋಲನಯುತ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ತೂಕ ನಿಯಂತ್ರಣ ಬಹಳ ಮುಖ್ಯ. ವಿಶೇಷವಾಗಿ ಗರ್ಭಾವಸ್ಥೆ ಮತ್ತು ಮೆನೋಪಾಸ್ ಸಮಯದಲ್ಲಿ ಹೆಚ್ಚುವರಿ ಗಮನ ಕೊಡಬೇಕು. ಒಟ್ಟಿನಲ್ಲಿ, ಮಹಿಳೆಯರು ತಮ್ಮ ದೇಹದ ಸಣ್ಣ ಬದಲಾವಣೆಗಳನ್ನೂ ಗಮನಿಸಿ, ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಲಿವರ್ ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಅತ್ಯುತ್ತಮ ಮಾರ್ಗವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Mon, 20 April 26

Follow Us
ರಾತ್ರಿ ವೇಳೆಯೂ ಉಷ್ಣ ಅಲೆ, ಹೆಚ್ಚಲಿದೆ ತಾಪಮಾನ: ಹವಾಮಾನ ತಜ್ಞ ಮುನ್ಸೂಚನೆ
ರಾತ್ರಿ ವೇಳೆಯೂ ಉಷ್ಣ ಅಲೆ, ಹೆಚ್ಚಲಿದೆ ತಾಪಮಾನ: ಹವಾಮಾನ ತಜ್ಞ ಮುನ್ಸೂಚನೆ
ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ
ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ
ಬಳ್ಳಾರಿಯಲ್ಲಿ ಭಾರಿ ಬಿಸಿಲು, ತಾಪಮಾನ ತಾಳಲಾರದೆ ಮಡಿಕೆಗಳ ಮೊರೆ ಹೋದ ಜನ!
ಬಳ್ಳಾರಿಯಲ್ಲಿ ಭಾರಿ ಬಿಸಿಲು, ತಾಪಮಾನ ತಾಳಲಾರದೆ ಮಡಿಕೆಗಳ ಮೊರೆ ಹೋದ ಜನ!
ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗನಿಗೂ ಬಿಟ್​ಕಾಯಿನ್ ನಂಟು!
ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗನಿಗೂ ಬಿಟ್​ಕಾಯಿನ್ ನಂಟು!
ನಾನು ಸರ್ಕಾರ ಅಲ್ಲ, ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ
ನಾನು ಸರ್ಕಾರ ಅಲ್ಲ, ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ
ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!
ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!
ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!
ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!
ಸಿಎಂ ನಾಯ್ಡು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಕುಸಿದ ಬಿದ್ದ ಕಮಾಂಡೋ
ಸಿಎಂ ನಾಯ್ಡು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಕುಸಿದ ಬಿದ್ದ ಕಮಾಂಡೋ
ಕನ್ನಡಿಗ ಪೊಲೀಸ್​​ ಅಧಿಕಾರಿಗಳ ಮೇಲೆ ದೌರ್ಜನ್ಯ!, ಆರೋಪ ಯಾರ ಮೇಲೆ?
ಕನ್ನಡಿಗ ಪೊಲೀಸ್​​ ಅಧಿಕಾರಿಗಳ ಮೇಲೆ ದೌರ್ಜನ್ಯ!, ಆರೋಪ ಯಾರ ಮೇಲೆ?
ರಣಬಿಸಿಲಿನಿಂದ ರಕ್ಷಣೆಗೆ ಶ್ವಾನದಳಕ್ಕೆ ವಿಶೇಷ 'ಕೂಲ್' ಟ್ರೀಟ್ಮೆಂಟ್!
ರಣಬಿಸಿಲಿನಿಂದ ರಕ್ಷಣೆಗೆ ಶ್ವಾನದಳಕ್ಕೆ ವಿಶೇಷ 'ಕೂಲ್' ಟ್ರೀಟ್ಮೆಂಟ್!