Lung Cancer Vaccine : ಯುಕೆ ವ್ಯಕ್ತಿಯ ಮೇಲೆ ಮೊದಲ ಶ್ವಾಸಕೋಶದ ಕ್ಯಾನ್ಸರ್ ವ್ಯಾಕ್ಸಿನ್ ಪ್ರಯೋಗ, ತಜ್ಞರು ಹೇಳುವುದೇನು?
ವಿಶ್ವದಾದ್ಯಂತ ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಶ್ವಾಸಕೋಶದ ಕ್ಯಾನ್ಸರ್ ಪ್ರಮುಖವೇ ಆಗಿದೆ. ಈಗಾಗಲೇ ಈ ಕ್ಯಾನ್ಸರ್ 40-50 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದೀಗ ಈ ಮಹಾಮಾರಿಯ ವಿರುದ್ಧ ಹೋರಾಡುವ ಹೊಸ ಪ್ರಾಯೋಗಿಕ ಲಸಿಕೆಯನ್ನು ವ್ಯಕ್ತಿಯೊಬ್ಬರಿಗೆ ನೀಡಿದ್ದಾರೆ. ಯುಕೆಯ 67 ವರ್ಷ ವಯಸ್ಸಿನ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಯ ಮೇಲೆ ಈ ಲಸಿಕೆಯನ್ನು ಪ್ರಯೋಗ ಮಾಡಲಾಗಿದೆ. ಈ ಲಸಿಕೆಯು ಕ್ಯಾನ್ಸರ್ ವಿರುದ್ಧ ಹೇಗೆ ಹೋರಾಡುತ್ತದೆ ಎನ್ನುವ ಬಗ್ಗೆ ತಜ್ಞರು ಹೇಳುವುದೇನು? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ಯಾನ್ಸರ್ ಎನ್ನುವ ಹೆಸರು ಕೇಳಿದ ತಕ್ಷಣ ಮೈ ಜುಮ್ಮ್ ಎನ್ನುತ್ತದೆ. ಈ ಮಾರಣಾಂತಿಕ ಕ್ಯಾನ್ಸರ್‌ಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕೂಡ ಒಂದಾಗಿದ್ದು ಇದು ಉಸಿರಾಟದ ಅಂಗದಲ್ಲಿ ಜೀವಕೋಶಗಳು ಅಸಹಜವಾಗಿ ಬೆಳೆಯುವುದಾಗಿದೆ. ಈಗಾಗಲೇ ಧೂಮಪಾನ ಮಾಡದವರಲ್ಲಿಯು ಈ ಭಯಾನಕ ರೋಗವು ಕಾಣಿಸಿಕೊಳ್ಳುತ್ತಿದೆ. ಇದೀಗ ಯುಕೆಯ ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಯ ಮೇಲೆ ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಡುವ ಹೊಸ ಪ್ರಾಯೋಗಿಕ ಲಸಿಕೆಯನ್ನು ಪ್ರಯೋಗ ಮಾಡಲಾಗಿದೆ.
BNT116 ಎನ್ನುವ ಹೆಸರಿನ ಲಸಿಕೆಯನ್ನು ಬಯೋಎನ್‌ಟೆಕ್ ಅದೇ mRNA ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಲಾಗಿದೆ. ಈ ಲಸಿಕೆಯನ್ನು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ 67 ವರ್ಷದ ಜನುಸ್ಜ್ ರಾಕ್ಜ್ ವ್ಯಕ್ತಿಗೆ ನೀಡಲಾಗಿದೆ. ಈ ವ್ಯಕ್ತಿಗೆ ಕನಿಷ್ಠ ಆರು ಸಿರಿಂಜ್‌ಗಳನ್ನು ನೀಡಲಾಗಿದ್ದು, ಈ ಲಸಿಕೆಯೂ ಪ್ರತಿಯೊಂದು ಗೆಡ್ಡೆಯ ವಿಭಿನ್ನ ಭಾಗಕ್ಕೆ ತಲುಪಿ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಹೆಚ್ಚಿಸಿ ಐದು ಶತಕೋಟಿ ಕ್ಯಾನ್ಸರ್ ಕೋಶಗಳನ್ನು ನಾಶ ಪಡಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಡುವ ಲಸಿಕೆಯ ಪ್ರಯೋಗಕ್ಕೆ ಒಳಗಾದ ಜನುಸ್ಜ್ ರಾಕ್ಜ್ ಈ ಬಗ್ಗೆ ಮಾತನಾಡಿದ್ದು, ‘ಶ್ವಾಸಕೋಶದ ಕ್ಯಾನ್ಸರ್ ಹೊಂದಿರುವ 100 ಕ್ಕೂ ಹೆಚ್ಚು ರೋಗಿಗಳು ಪ್ರಯೋಗದಲ್ಲಿ ಭಾಗವಹಿಸುತ್ತಾರೆ. ಲಸಿಕೆಯ ಪ್ರಯೋಗಕ್ಕೆ ಒಳಗಾಗ ನಾನು ಮೊದಲ ಅಥವಾ ನೂರನೇಯ ವ್ಯಕ್ತಿಯಾಗಿರಬಹುದು. ಆದರೆ ಈ ಲಸಿಕೆಯು ನನಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಕೋವಿಡ್ 19 ಲಸಿಕೆಗಳು ಲಕ್ಷಾಂತರ ಜನರಿಗೆ ಸಹಾಯ ಮಾಡಿದೆ. ಅದೇ ರೀತಿ ಈ ಲಸಿಕೆಯು ಲಕ್ಷಾಂತರ ಜನರಿಗೆ ಸಹಾಯ ಮಾಡುತ್ತದೆ” ಎಂದಿದ್ದಾರೆ.
ಇದನ್ನೂ ಓದಿ: ಮುಟ್ಟಿನ ಅವಧಿಯಲ್ಲಿ ಎಷ್ಟು ಗಂಟೆಗಳಿಗೊಮ್ಮೆ ಸ್ಯಾನಿಟರಿ ಪ್ಯಾಡ್ ಬದಲಾಯಿಸಬೇಕು?
ಕ್ಯಾನ್ಸರ್ ಗೆಡ್ಡೆಗಳ ಮೇಲೆ ಈ ಲಸಿಕೆ ಹೇಗೆ ಕಾರ್ಯ ನಿರ್ವಹಿಸುತ್ತದೆ?
ವೈದ್ಯರು, ಈ ಪ್ರಾಯೋಗಿಕ ಲಸಿಕೆಯು ಕೀಮೋಥೆರಪಿಗಿಂತ ಹೆಚ್ಚು ನಿಖರವಾಗಿದೆ. ಹೀಗಾಗಿ ಆರೋಗ್ಯಕರ ಜೀವಕೋಶಗಳ ಮೇಲೆ ಯಾವುದೇ ಹಾನಿಯಾಗುವುದಿಲ್ಲ. ಈ ಲಸಿಕೆಯು ರೋಗಿಯ ಪ್ರತಿರಕ್ಷಣಾ ವ್ಯವಸ್ಥೆಗೆ ಗೆಡ್ಡೆಗಳ ಸಾಮಾನ್ಯ ಗುರುತುಗಳನ್ನು ಪತ್ತೆ ಹಚ್ಚುವ ಮೂಲಕ ಕಾರ್ಯನಿರ್ವಹಿಸುತ್ತದೆ. ಕ್ಯಾನ್ಸರ್ ಕೋಶಗಳನ್ನು ಗುರುತಿಸಲು ಮತ್ತು ಹೋರಾಡಲು ರೋಗಿಗಳ ಪ್ರತಿರಕ್ಷಣಾ ವ್ಯವಸ್ಥೆಗಳಿಗೆ ತರಬೇತಿ ನೀಡಲು ಇದು ಸಹಾಯ ಮಾಡುತ್ತದೆ. ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ನಿಗ್ರಹಿಸುವ ಕೋಶಗಳನ್ನು ಸಮರ್ಥವಾಗಿ ತೆಗೆದುಹಾಕುತ್ತದೆ. ಗೆಡ್ಡೆಯ ಗಾತ್ರ ಮತ್ತು ಮರುಕಳಿಸುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಲಸಿಕೆಯಿಂದಾಗುವ ಯಾವುದೇ ಪ್ರಮುಖ ಅಡ್ಡ ಪರಿಣಾಮಗಳ ಬಗ್ಗೆ ಕಂಡುಕೊಳ್ಳಬಹುದು ಎಂದಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ