Health Care Tips in Kannada : ಮಳೆಗಾಲದಲ್ಲಿ ಈ ರೋಗ ಬರುವುದು ಖಂಡಿತ, ಮುಂಜಾಗೃತ ಕ್ರಮ ಹೀಗಿರಲಿ

ಮಳೆಗಾಲದಲ್ಲಿ ಹವಾಮಾನ ಬದಲಾಗುವುದರಿಂದ ನಾನಾ ರೀತಿಯ ಕಾಯಿಲೆಗಳು ಒಕ್ಕರಿಸಿಕೊಂಡು ಬಿಡುತ್ತವೆ. ವಾತಾವರಣದಲ್ಲಿ ಆಗುವ ಬದಲಾವಣೆಗಳಿಗೆ ದೇಹವು ಒಗ್ಗಿಕೊಳ್ಳುವುದು ಕಷ್ಟ. ತಣ್ಣಣೆಯ ವಾತಾವರಣವಿರುವ ಕಾರಣ ಶೀತ ಥಂಡಿಯಂತಹ ಸಮಸ್ಯೆಗಳು ಒಂದೆಡೆಯಾದರೆ ಸೊಳ್ಳೆಯಿಂದ ನಾನಾ ರೀತಿಯ ಕಾಯಿಲೆಗಳು ಹರಡುತ್ತವೆ. ಹೀಗಾಗಿ ರೋಗ ಬಾರದಂತೆ ಮುನ್ನಚ್ಚೆರಿಕೆ ವಹಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Health Care Tips in Kannada : ಮಳೆಗಾಲದಲ್ಲಿ ಈ ರೋಗ ಬರುವುದು ಖಂಡಿತ, ಮುಂಜಾಗೃತ ಕ್ರಮ ಹೀಗಿರಲಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: May 24, 2024 | 4:24 PM

ಬಿಸಿಲಿನ ಬೇಗೆಯಿಂದ ಬೇಸೆತ್ತ ಜನರಿಗೆ ತಂಪಿನ ವಾತಾವರಣವು ಮನಸ್ಸಿಗೆ ಮುದ ನೀಡುವುದು ಸಹಜ. ಆದರೆ ಆರೋಗ್ಯದ ಮೇಲೆ ಅಷ್ಟೇ ಪರಿಣಾಮವನ್ನು ಬೀರುತ್ತದೆ. ಆಹಾರ ಸೋಂಕುಗಳಿಂದ ಹಿಡಿದು ಸೊಳ್ಳೆಯಿಂದ ಹರಡುವ ರೋಗಗಳವರೆಗೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುವುದು. ಹೀಗಾಗಿ ಸುರಿಯುವ ಮಳೆಯಲ್ಲಿ ಸೇವಿಸುವ ಆಹಾರದಲ್ಲೂ ಕೆಲವೊಂದು ಬದಲಾವಣೆಗಳನ್ನು ಅಗತ್ಯವಾಗಿ ಮಾಡಬೇಕಾಗುತ್ತದೆ.

* ಮಲೇರಿಯಾ : ಮಳೆಗಾಲದಲ್ಲಿ ಹೆಚ್ಚು ಕಾಡುವ ಆರೋಗ್ಯ ಸಮಸ್ಯೆಯೆಂದರೆ ಮಲೇರಿಯಾ. ಅನೋಫಿಲ್ಸ್ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ರೋಗ ಬರುತ್ತದೆ. ಹೀಗಾಗಿ ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅದಲ್ಲದೇ, ಮಳೆಗಾಲದಲ್ಲಿ ಉದ್ದ ತೋಳಿನ ಬಟ್ಟೆಗಳು ಹಾಗೂ ಮೈ ಕೈಗೆ ಸೊಳ್ಳೆ ನಿಯಂತ್ರಕ ಕ್ರೀಮ್‌ಗಳನ್ನು ಹಚ್ಚಿದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದು.

* ಶೀತ ಮತ್ತು ಜ್ವರ: ಯಾವುದೇ ಹವಾಮಾನ ಬದಲಾವಣೆಯಾದ ಸಂದರ್ಭದಲ್ಲಿ ಶೀತ ಹಾಗೂ ಜ್ವರ ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಅಗತ್ಯ.

* ಅಲರ್ಜಿ ಹಾಗೂ ಉಸಿರಾಟದ ತೊಂದರೆ : ಸುರಿಯುವ ಮಳೆಗೆ ಅಲರ್ಜಿಯಂತಹ ಸಮಸ್ಯೆಗಳು ಕಾಡುವುದು ಸಹಜ. ಅಸ್ತಮಾ ಸಮಸ್ಯೆಯಿದ್ದವರಿಗೆ ಈ ಸಮಯದಲ್ಲಿ ಆರೋಗ್ಯ ಸಮಸ್ಯೆಯು ಉಲ್ಬಣವಾಗಿ ಉಸಿರಾಟದ ತೊಂದರೆ ಹಾಗೂ ಕೆಮ್ಮು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಆದಷ್ಟು ಶುದ್ಧವಾದ ಬಿಸಿ ಬಿಸಿ ಆಹಾರ ಹಾಗೂ ಬಿಸಿ ನೀರಿನ್ನು ಕುಡಿಯುವುದು. ಮೈಯನ್ನು ಬೆಚ್ಚಗೆ ಇರಿಸಿಕೊಳ್ಳುವುದು ಒಳ್ಳೆಯದು.

* ಡೆಂಗ್ಯೂ : ಸೊಳ್ಳೆಗಳಿಂದ ಹರಡುವ ಕಾಯಿಲೆಗಳಲ್ಲೂ ಈ ಡೆಂಗ್ಯೂ ಕೂಡ ಒಂದು. ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಬೇಕು. ವಿಪರೀತವಾದರೆ ಜೀವಕ್ಕೆ ಅಪಾಯವಾಗಬಹುದು. ಮನೆ ಸುತ್ತ ನೀರು ನಿಲ್ಲದಂತೆ ಹಾಗೂ ಸೊಳ್ಳೆಗಳು ಬಾರದಂತೆ ಎಚ್ಚರಿಕೆವಹಿಸುವುದು ಅಗತ್ಯ. ಸಂಜೆಯಾಗುತ್ತಿದ್ದಂತೆ ಮನೆ ಕಿಟಕಿ, ಬಾಗಿಲುಗಳನ್ನು ಮುಚ್ಚುವುದು, ಸೊಳ್ಳೆ ಪರದೆಗಳನ್ನ ಬಳಸುವುದು ಉತ್ತಮ.

* ಚಿಕನ್‌ಗುನ್ಯಾ : ಮಳೆಗಾಲದಲ್ಲಿ ಸೊಳ್ಳೆಗಳು ಕಚ್ಚುವುದರಿಂದ ಚಿಕನ್‌ ಗುನ್ಯಾ ಕಾಯಿಲೆಗಳು ಕಂಡು ಬರುತ್ತದೆ. ಚಿಕನ್‌ ಗುನ್ಯಾ ಬಾರದಿರಲು ಸೊಳ್ಳೆಗಳು ಕಚ್ಚದಂತೆ ಮುನ್ನೆಚ್ಚರಿಕೆವಹಿಸಬೇಕು. ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಇದನ್ನೂ ಓದಿ: ನಾನ್‌ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡಬೇಡಿ, ನಿಮ್ಮ ಆರೋಗ್ಯಕ್ಕೆ ನೀವೇ ಹೊಣೆ ಎಚ್ಚರಿಕೆ ನೀಡಿದ ಸರ್ಕಾರ

* ಕಾಲರಾ : ಕಲುಷಿತ ನೀರಿನಿಂದಾಗಿ ಹರಡುವ ಈ ಕಾಲರಾಕ್ಕೆ ವಿಬ್ರೋ ಕಾಲರಾ ಎಂಬ ಬ್ಯಾಕ್ಟಿರಿಯಾ ಕಾರಣವಾಗಿರುತ್ತದೆ. ಕಲುಷಿತ ಆಹಾರ ಹಾಗೂ ಕಲುಷಿತ ಆಹಾರ ಸೇವನೆಯಿಂದ ಕಾಲರಾ ಬರಬಹುದು. ಹೀಗಾಗಿ ಆಹಾರದ ಬಗ್ಗೆ ಹೆಚ್ಚು ಸ್ವಚ್ಛತೆಯನ್ನು ವಹಿಸುವುದು ಅಗತ್ಯ. ಬೀದಿ ಬದಿಯ ಆಹಾರ ಸೇವಿಸಬಾರದು. ಬಿಸಿ ಮಾಡಿದ ನೀರನ್ನು ಕುಡಿಯುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

* ಟೈಫಾಯಿಡ್: ಟೈಫಾಯಿಡ್ ಸಾಲ್ಮೋನೆಲ್ಲಾ ಬ್ಯಾಕ್ಟಿರಿಯಾದಿಂದ ಬರುವ ಕಾಯಿಲೆಯಾಗಿದೆ. ಸ್ವಚ್ಛ ಆಹಾರ, ಶುದ್ಧ ನೀರು ಸೇವಿಸದಿದ್ದರೆ ಟೈಫಾಯ್ಡ್ ಬರುತ್ತದೆ. ಹೀಗಾಗಿ ಈ ಆರೋಗ್ಯ ಸಮಸ್ಯೆಯು ಬಾರದಂತೆ ತಡೆಗಟ್ಟಲು ಶುಚಿತ್ವದ ಕಡೆಗೆ ಗಮನವಹಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್