AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭಾವಸ್ಥೆಯಲ್ಲಿ ಯೋಗ, ಸ್ಟ್ರೆಚಿಂಗ್ ಸುರಕ್ಷಿತವೇ? ತಜ್ಞರು ನೀಡಿರುವ ಮಾಹಿತಿ ನಿಮಗಾಗಿ

ಗರ್ಭಾವಸ್ಥೆಯಲ್ಲಿ, ದೇಹವು ಅನೇಕ ದೈಹಿಕ ಮತ್ತು ಹಾರ್ಮೋನುಗಳ ಬದಲಾವಣೆಗಳಿಗೆ ಒಳಗಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಮಹಿಳೆಯರು ತಮ್ಮನ್ನು ಸಕ್ರಿಯವಾಗಿ ಮತ್ತು ಸದೃಢವಾಗಿಡಲು ಯೋಗ ಮತ್ತು ಸ್ಟ್ರೆಚಿಂಗ್ ಮಾಡುವ ಬಗ್ಗೆ ಯೋಚಿಸುತ್ತಾರೆ. ಆದರೆ ಯಾವಾಗ ಪ್ರಾರಂಭಿಸುವುದು ಸುರಕ್ಷಿತ ಮತ್ತು ಪ್ರಾರಂಭಿಸುವ ಮೊದಲು ಯಾವ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಅದರ ಜೊತೆಗೆ ಯಾರಿಗೆ ವೈದ್ಯರ ಸಲಹೆ ಬೇಕು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಗರ್ಭಾವಸ್ಥೆಯಲ್ಲಿ ಯೋಗ, ಸ್ಟ್ರೆಚಿಂಗ್ ಸುರಕ್ಷಿತವೇ? ತಜ್ಞರು ನೀಡಿರುವ ಮಾಹಿತಿ ನಿಮಗಾಗಿ
Pregnancy Yoga BenefitsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jun 25, 2026 | 9:31 PM

Share

ಮುಖ್ಯಾಂಶಗಳು

  • ಪ್ರೆಗ್ನೆನ್ಸಿ ವೇಳೆ ಯೋಗ ಮಾಡುವ ಮುನ್ನ ತಿಳಿಯಬೇಕಾದ ಮುಖ್ಯ ಅಂಶಗಳು
  • ಗರ್ಭಾವಸ್ಥೆಯಲ್ಲಿ ಸುರಕ್ಷಿತ ಯೋಗಾಸನಗಳು ಮತ್ತು ಮುನ್ನೆಚ್ಚರಿಕೆಗಳು
  • ಗರ್ಭಧಾರಣೆಯ ಸಮಯದಲ್ಲಿ ಫಿಟ್ನೆಸ್ ಕಾಪಾಡಲು ಯೋಗದ ಪಾತ್ರ

ಗರ್ಭಾವಸ್ಥೆ (Pregnancy) ಮಹಿಳೆಯರ ಜೀವನದ ಅತ್ಯಂತ ವಿಶೇಷ ಹಂತ. ಈ ಅವಧಿಯಲ್ಲಿ ದೇಹದಲ್ಲಿ ಹಲವು ರೀತಿಯ ಹಾರ್ಮೋನಲ್ ಮತ್ತು ದೈಹಿಕ ಬದಲಾವಣೆಗಳು ನಡೆಯುತ್ತವೆ. ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆಹಾರ, ವಿಶ್ರಾಂತಿ ಹಾಗೂ ಸುರಕ್ಷಿತ ದೈಹಿಕ ಚಟುವಟಿಕೆಗಳು ಅಗತ್ಯವಾಗಿವೆ. ಆದರೆ ಗರ್ಭಿಣಿಯರು ಯೋಗ ಮತ್ತು ಸ್ಟ್ರೆಚಿಂಗ್ ಮಾಡಬಹುದೇ, ಇದರಿಂದ ಯಾವ ರೀತಿಯ ಲಾಭಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕು. ಅದರ ಜೊತೆಗೆ ಯೋಗ ಮಾಡುವಾಗ ಗಮನಿಸಬೇಕಾದ ಅಂಶಗಳು ಮತ್ತು ಯಾರಿಗೆ ವೈದ್ಯರ ಸಲಹೆ ಬೇಕು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ತಜ್ಞರ ಪ್ರಕಾರ, ಗಂಭೀರ ಆರೋಗ್ಯ ಸಮಸ್ಯೆಗಳು ಅಥವಾ ಹೈ- ರಿಸ್ಕ್ ಗರ್ಭಧಾರಣೆ ಇಲ್ಲದ ಮಹಿಳೆಯರು ವೈದ್ಯರ ಸಲಹೆಯೊಂದಿಗೆ ಯೋಗ, ಸ್ಟ್ರೆಚಿಂಗ್ ಮತ್ತು ಲಘು ವ್ಯಾಯಾಮಗಳನ್ನು ಮಾಡಬಹುದು. ಇಂತಹ ಚಟುವಟಿಕೆಗಳು ದೇಹವನ್ನು ಚುರುಕಾಗಿಡಲು, ಬೆನ್ನುನೋವು ಮತ್ತು ದಣಿವು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ಮನಸ್ಸಿಗೆ ಶಾಂತಿ ನೀಡುವುದರೊಂದಿಗೆ ಹೆರಿಗೆಗೆ ದೇಹವನ್ನು ಸಿದ್ಧಗೊಳಿಸಲು ನೆರವಾಗಬಹುದು. ಆದರೆ ಪ್ರತಿಯೊಬ್ಬ ಮಹಿಳೆಯ ಆರೋಗ್ಯ ಸ್ಥಿತಿ ವಿಭಿನ್ನವಾಗಿರುವುದರಿಂದ ಯಾವುದೇ ಹೊಸ ವ್ಯಾಯಾಮವನ್ನು ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ದೇಹದ ಅಗತ್ಯತೆಗಳು ಬದಲಾಗುವುದರಿಂದ ಅದಕ್ಕೆ ಅನುಗುಣವಾಗಿ ವ್ಯಾಯಾಮದಲ್ಲಿಯೂ ಬದಲಾವಣೆ ಮಾಡಬೇಕು.

ಯೋಗ ಮಾಡುವಾಗ ಗಮನಿಸಬೇಕಾದ ಅಂಶಗಳು:

ಸಾಮಾನ್ಯವಾಗಿ ಯೋಗ ಮತ್ತು ಸ್ಟ್ರೆಚಿಂಗ್ ಅನ್ನು ಅನುಭವಿ ತರಬೇತುದಾರರ ಮಾರ್ಗದರ್ಶನದಲ್ಲಿ ಮಾಡುವುದು ಉತ್ತಮ. ಆರಂಭದಲ್ಲಿ ಸರಳ ವ್ಯಾಯಾಮಗಳಿಂದ ಪ್ರಾರಂಭಿಸಿ, ದೇಹಕ್ಕೆ ಹೆಚ್ಚು ಒತ್ತಡ ನೀಡಬಾರದು. ಸಾಕಷ್ಟು ನೀರು ಕುಡಿಯುವುದು ಮತ್ತು ಆರಾಮದಾಯಕವಾಗಿರುವ ಉಡುಪು ಧರಿಸುವುದು ಮುಖ್ಯ. ಹೊಟ್ಟೆಯ ಮೇಲೆ ಒತ್ತಡ ಬೀರುವ ಅಥವಾ ಸಮತೋಲನ ಕಳೆದುಕೊಳ್ಳುವ ಸಾಧ್ಯತೆ ಇರುವ ಆಸನಗಳನ್ನು ತಪ್ಪಿಸಬೇಕು. ವ್ಯಾಯಾಮದ ವೇಳೆ ತಲೆಸುತ್ತು, ಉಸಿರಾಟದ ತೊಂದರೆ, ನೋವು, ರಕ್ತಸ್ರಾವ ಅಥವಾ ಅಸಹಜ ಲಕ್ಷಣಗಳು ಕಂಡುಬಂದರೆ ತಕ್ಷಣ ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ: ಮೆನೋಪಾಸ್ ಎಂದರೇನು? ಈ ಹಂತದ ನಂತರ ಮಹಿಳೆಯರು ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು?

ಯಾರಿಗೆ ವೈದ್ಯರ ಸಲಹೆ ಅಗತ್ಯ?

ಅಧಿಕ ರಕ್ತದೊತ್ತಡ, ಹೃದಯದ ಕಾಯಿಲೆ, ತೀವ್ರ ರಕ್ತಹೀನತೆ, ಗರ್ಭಾವಸ್ಥೆಯ ರಕ್ತಸ್ರಾವ, ಪ್ಲಾಸೆಂಟಾ ಸಮಸ್ಯೆಗಳು ಅಥವಾ ಅವಧಿಗೂ ಮುನ್ನ ಹೆರಿಗೆಯ ಅಪಾಯ ಇರುವ ಮಹಿಳೆಯರು ಯೋಗ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಅವಳಿ ಗರ್ಭಧಾರಣೆ, ಹಿಂದಿನ ಗರ್ಭಪಾತದ ಇತಿಹಾಸ ಅಥವಾ ಹೈ- ರಿಸ್ಕ್ ಗರ್ಭಧಾರಣೆ ಇರುವವರು ಸ್ವಯಂಪ್ರೇರಿತವಾಗಿ ಹೊಸ ವ್ಯಾಯಾಮಗಳನ್ನು ಆರಂಭಿಸಬಾರದು. ಸರಿಯಾದ ಮಾರ್ಗದರ್ಶನದಲ್ಲಿ ಯೋಗ ಮತ್ತು ಸ್ಟ್ರೆಚಿಂಗ್ ಮಾಡಿದರೆ ಗರ್ಭಾವಸ್ಥೆಯನ್ನು ಹೆಚ್ಚು ಆರೋಗ್ಯಕರ ಹಾಗೂ ಆರಾಮದಾಯಕವಾಗಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಎರಡನೇ ಆಷಾಢ ಶುಕ್ರವಾರ ಚಾಮುಂಡೇಶ್ವರಿ ತಾಯಿಯ ಅಲಂಕಾರ ಹೇಗಿದೆ ನೋಡಿ
ಎರಡನೇ ಆಷಾಢ ಶುಕ್ರವಾರ ಚಾಮುಂಡೇಶ್ವರಿ ತಾಯಿಯ ಅಲಂಕಾರ ಹೇಗಿದೆ ನೋಡಿ
ಆಷಾಢ ಮಾಸದ ಈ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಸಮರ್ಪಿಸಿ!
ಆಷಾಢ ಮಾಸದ ಈ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಸಮರ್ಪಿಸಿ!
ಪಾಲ್ಘರ್‌ನ ಧಾಮಣಿ ಡ್ಯಾಂನ 5 ಗೇಟ್ ಓಪನ್; ಧುಮ್ಮುಕ್ಕುವ ನೀರಿನ ರೌದ್ರಾವತಾರ
ಪಾಲ್ಘರ್‌ನ ಧಾಮಣಿ ಡ್ಯಾಂನ 5 ಗೇಟ್ ಓಪನ್; ಧುಮ್ಮುಕ್ಕುವ ನೀರಿನ ರೌದ್ರಾವತಾರ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..