ಅನಾರೋಗ್ಯಕರ ಆಹಾರ ಕ್ರಮ ಮತ್ತು ನಮ್ಮ ಜೀವನಶೈಲಿಯು ನಮಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತರಬಹುದು. ಅಕಾಲಿಕವಾಗಿ ಕೂದಲು ಬಿಳಿಯಾಗುವುದು (hair whitening) ಯುವಕರಲ್ಲಿ ಸಾಮಾನ್ಯವಾದ ಸಮಸ್ಯೆಯಾಗಿದೆ. ನಾವು ನಮ್ಮ 40ರ ಹರೆಯವನ್ನು ತಲುಪಿದಾಗ ನಾವು ಬೂದು ಬಣ್ಣದ ಕೂದಲು ಹೊಂದುತ್ತೇವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ನಮ್ಮ 20-30 ವಯಸ್ಸಿನಲ್ಲೇ ಅವುಗಳು ಕಂಡುಬರುವ ಅನೇಕ ಬಾರಿ, ಬೂದು ಕೂದಲನ್ನು ಆನುವಂಶಿಕ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಮತ್ತು ಚಿಕಿತ್ಸೆ ನೀಡದೆ ಹಾಗೆ ಬಿಡಲಾಗುತ್ತದೆ. ಆದರೆ ಸರಿಯಾದ ಆಹಾರ, ಕೂದಲ ರಕ್ಷಣೆ ಮತ್ತು ಕೆಲವು ಅದ್ಭುತ ಗಿಡಮೂಲಿಕೆಗಳು ಮತ್ತು ಮನೆಮದ್ದುಗಳೊಂದಿಗೆ, ನಿಮ್ಮ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಬಹುದಾಗಿದೆ.
ನೆಲ್ಲಿಕಾಯಿ: ಕೂದಲಿನ ಒಟ್ಟಾರೆ ಆರೋಗ್ಯಕ್ಕೆ ನೆಲ್ಲಿಕಾಯಿ ಅತ್ಯುತ್ತಮ ಪದಾರ್ಥಗಳಲ್ಲಿ ಒಂದಾಗಿದೆ. ವಿಟಮಿನ್ ಸಿಯನ್ನು ಹೊಂದಿರುವ ನೆಲ್ಲಿಕಾಯಿ ಬೂದು ಕೂದಲನ್ನು ತಡೆಯಲು ಸಹಾಯ ಮಾಡುವುದರೊಂದಿಗೆ ಕೂದಲಿನ ನೈಸರ್ಗಿಕ ಬಣ್ಣವನ್ನು ಹೆಚ್ಚಿಸುತ್ತದೆ.
ಕರಿಬೇವಿನ ಎಲೆಗಳು: ಕರಿಬೇವಿನ ಎಲೆಗಳು ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಕಾರಣ ನೆತ್ತಿ ಮತ್ತು ಕೂದಲಿಗೆ ತೇವಾಂಶವನ್ನು ನೀಡುತ್ತದೆ. ಕರಿಬೇವಿನ ಎಲೆಗಳು ಬಿ–ಕ್ಯಾರೋಟಿನ್ ಮತ್ತು ಪ್ರೋಟೀನ್ ಅಂಶಗಳಿಂದ ಸಮೃದ್ಧವಾಗಿವೆ, ಇದು ಕೂದಲು ಉದುರುವಿಕೆ ಮತ್ತು ಕೂದಲು ತೆಳುವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಬೂದು ಕೂದಲನ್ನು ತಡೆಯಲು ಉತ್ತಮ ಮೂಲವಾಗಿದೆ.
ಚಹಾ ಮತ್ತು ಕಾಫಿ: ಚಹಾ ಮತ್ತು ಕಾಫಿ ಕೂದಲಿನ ಬಣ್ಣವನ್ನು ಕಾಪಾಡಲು ಸಹಾಯ ಮಾಡುತ್ತದೆ. ಒಬ್ಬರ ನೈಸರ್ಗಿಕ ಕೂದಲಿನ ಬಣ್ಣವನ್ನು ಕಾಪಾಡಿಕೊಳ್ಳಲು ಚಹಾ ಮತ್ತು ಕಾಫಿ ಅತ್ಯುತ್ತಮ ಘಟಕಾಂಶವಾಗಿದೆ.
ಹರಿವೆ ಸೊಪ್ಪು: ಹರಿವೆ ಸೊಪ್ಪನ್ನ ಕೂದಲಿನ ಆರೈಕೆಯಲ್ಲಿ ಬಳಸಲಾಗುತ್ತದೆ. ನಿಮ್ಮ ನೈಸರ್ಗಿಕ ಕೂದಲಿನ ಬಣ್ಣವನ್ನು ಉಳಿಸಿಕೊಳ್ಳಲು ನೀವು ಬಯಸಿದರೆ ನಿಮ್ಮ ಹೇರ್ ಪ್ಯಾಕ್‌ಗೆ ಬಳಸಬಹುದು. ಹರಿವೆ ಸೊಪ್ಪು ಕೂದಲು ತನ್ನ ಕಪ್ಪು ವರ್ಣದ್ರವ್ಯವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಶಿಕಾಕಾಯಿ: ಶಿಕಾಕಾಯಿ ನಿಮ್ಮ ಕೂದಲಿಗೆ ಚಿಕಿತ್ಸೆ ನೀಡಲು ನೀವು ಕಂಡುಕೊಳ್ಳಬಹುದಾದ ಅತ್ಯುತ್ತಮ ಪದಾರ್ಥವಾಗಿದೆ. ಇದು ತಲೆಹೊಟ್ಟು, ಯಾವುದೇ ನೆತ್ತಿಯ ಸೋಂಕನ್ನು ಗುಣಪಡಿಸುವುದು. ಕೂದಲು ಉದುರುವಿಕೆಯನ್ನು ತಡೆಯುವುದು ಮುಂತಾದ ಅನೇಕ ಕೂದಲಿನ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಅಲ್ಲದೆ, ಇದು ಕೂದಲನ್ನು ದಪ್ಪವಾಗಿ, ಬಲವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಕೂದಲು ಬಿಳಿಯಾಗುವುದನ್ನು ನಿಧಾನಗೊಳಿಸುತ್ತದೆ.
ಈರುಳ್ಳಿ: ಈರುಳ್ಳಿ ಸಾಕಷ್ಟು ಕಡಿಮೆ ಮೌಲ್ಯದ ಅಂಶವಾಗಿದ್ದು, ಅದು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಕೂದಲು ಉದುರುವುದನ್ನು ತಡೆಯಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಕೂದಲಿನ ವಿನ್ಯಾಸ ಮತ್ತು ಅದರ ನೈಸರ್ಗಿಕ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇಲ್ಲಿರುವ ಸಲಹೆಗಳು ಟಿವಿ 9 ಡಿಜಿಟಲ್ ಅಭಿಪ್ರಾಯವಾಗಿರುವುದಿಲ್ಲಿ. ನ್ಯೂಸ್ 18 ವೆಬ್ಸೈಟ್ ಆಧರಿಸಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ:
100 ಕೋಟಿ ರೂ. ಗಳಿಸಿದ ‘ಗಂಗೂಬಾಯಿ ಕಾಠಿಯಾವಾಡಿ’; ಪಾರ್ಟಿ ಮೂಡ್ನಲ್ಲಿ ಆಲಿಯಾ ಭಟ್-ರಣಬೀರ್
Published On - 8:00 am, Fri, 11 March 22