ಕರುಳು ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ತಿನ್ನಬೇಕಾದ ಆಹಾರಗಳೇನು?

ಕರುಳು ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ತಿನ್ನಬೇಕಾದ ಆಹಾರಗಳೇನು?
ಕರುಳು ಆರೋಗ್ಯ

ಕರುಳು( Gut) ಎಂಬುದು ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ ಪ್ರಮುಖ ಭಾಗವಾಗಿದ್ದು, ಒಂದೊಮ್ಮೆ ಕರುಳು ಕೆಲಸ ಮಾಡದಿದ್ದರೆ ಇಡೀ ಜೀರ್ಣಾಂಗ ವ್ಯವಸ್ಥೆಯೇ ನಿಂತಂತೆ. ಜೀರ್ಣಕ್ರಿಯೆ(Digestion)ಯಲ್ಲಿ ದೊಡ್ಡ ಕರುಳು ಹಾಗೂ ಸಣ್ಣ ಕರುಳು ಎರಡರ ಪಾತ್ರವೂ ಪ್ರಮುಖವೇ.

TV9kannada Web Team

| Edited By: Nayana Rajeev

May 12, 2022 | 10:13 AM

ಕರುಳು( Gut) ಎಂಬುದು ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ ಪ್ರಮುಖ ಭಾಗವಾಗಿದ್ದು, ಒಂದೊಮ್ಮೆ ಕರುಳು ಕೆಲಸ ಮಾಡದಿದ್ದರೆ ಇಡೀ ಜೀರ್ಣಾಂಗ ವ್ಯವಸ್ಥೆಯೇ ನಿಂತಂತೆ. ಜೀರ್ಣಕ್ರಿಯೆ(Digestion)ಯಲ್ಲಿ ದೊಡ್ಡ ಕರುಳು ಹಾಗೂ ಸಣ್ಣ ಕರುಳು ಎರಡರ ಪಾತ್ರವೂ ಪ್ರಮುಖವೇ. ಕರುಳು ನಮ್ಮ ಆಹಾರದಿಂದ ಆರೋಗ್ಯಕರ ಮತ್ತು ಪೌಷ್ಟಿಕ ವಸ್ತುಗಳನ್ನು ಜೀರ್ಣಿಸಿಕೊಳ್ಳುತ್ತದೆ, ಉಳಿದ ವಸ್ತುಗಳನ್ನು ಕರುಳು ದೇಹದಿಂದ ಹೊರಗೆ ಹಾಕುತ್ತದೆ. ಹಾಗೆಯೇ ಇದು ನಮ್ಮ ದೇಹದಾದ್ಯಂತ ಪೋಷಕಾಂಶಗಳನ್ನು ಸರಬರಾಜು ಮಾಡುತ್ತದೆ. ಈ ಸಂದರ್ಭದಲ್ಲಿ ಕರುಳಿನಲ್ಲಿ ಸಮಸ್ಯೆ ಇದ್ದರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮವನ್ನೇ ಬೀರುತ್ತದೆ.

ಬಾಳೆಹಣ್ಣುಗಳಲ್ಲಿ ಪ್ರೋಟೀನ್, ಪೊಟ್ಯಾಷಿಯಮ್, ಫೈಬರ್ ಕಾರ್ಬೋಹೈಡ್ರೇಟ್‌ಗಳು ಮತ್ತು ಪೋಷಕಾಂಶಗಳು ಹೇರಳವಾಗಿ ಇರುತ್ತವೆ. ಆದರೆ ಈ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿರುವವರು ಮತ್ತು ಮಧುಮೇಹದಿಂದ ಬಳಲುತ್ತಿರುವ ರೋಗಿಗಳು ಈ ಹಣ್ಣಿನಲ್ಲಿರುವ ಸಕ್ಕರೆ ಅಂಶದಿಂದಾಗಿ ಇದನ್ನು ಹೆಚ್ಚಾಗಿ ತಿನ್ನುವುದಿಲ್ಲ. ತಜ್ಞರು ಈ ಕೊಬ್ಬು ರಹಿತ ಹಣ್ಣನ್ನು ನಿಮ್ಮ ಜೀರ್ಣಕ್ರಿಯೆಗೆ ಉತ್ತಮ ಎಂದು ಹೇಳಿದ್ದಾರೆ. ಜೀರ್ಣ ವ್ಯವಸ್ಥೆ ಸರಿ ಇಲ್ಲದಿದ್ದರೆ ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತದೆ, ಹಾಗೆಯೇ ದೇಹ ದುರ್ಬಲವಾದಾಗ ಹಲವು ಸೋಂಕುಗಳು ತಗುಲುವ ಸಾಧ್ಯತೆ ಇರುತ್ತದೆ.

  1. ಬಾಳೆಹಣ್ಣು ಜೀರ್ಣಕ್ರಿಯೆಗೆ ಸಹಕಾರಿ: ಬಾಳೆಹಣ್ಣು ಜೀರ್ಣಕ್ರಿಯೆಯಲ್ಲಿ ತುಂಬಾ ಸಹಕಾರಿಯಾಗಿದೆ, ಜೀವನದ ಮೊದ ಮೊದಲು ನಾವು ತೆಗೆದುಕೊಳ್ಳುವ ಆಹಾರ ಪದಾರ್ಥಗಳು ಜೀವನದ ನಂತರದ ಹಂತದಲ್ಲಿ ರೋಗ ಅಥವಾ ಸಾವಿನ ಅಪಾಯ ನಿರ್ಧರಿಸುತ್ತವೆ ಎಂದು ಹೇಳಲಾಗುತ್ತದೆ. ಬಾಲ್ಯ ಅಥವಾ ಹದಿಹರೆಯದಲ್ಲಿ ಸಂಸ್ಕರಿಸಿದ, ಹೆಚ್ಚಿನ ಕೊಬ್ಬು ಮತ್ತು ಸಕ್ಕರೆಯುಕ್ತ ಆಹಾರಗಳ ಹೆಚ್ಚುವರಿ ಸೇವನೆಯಿಂದ ಕರುಳಿಗೆ ಸಂಬಂಧಿಸಿದ ಕಾಯಿಲೆಗಳು ಬರಬಹುದು, ಸಂಸ್ಕರಿಸಿದ ಆಹಾರಗಳು, ಪ್ರಾಣಿಗಳ ಕೊಬ್ಬುಗಳು, ಕರುಳಿನ ಉರಿಯೂತ ಪ್ರಚೋದಿಸುವ ಮತ್ತು ಕರುಳಿನ ಆರೋಗ್ಯಕ್ಕೂ ಹಾನಿಯಾಗಬಹುದು ಎಂದು ಹೇಳಲಾಗಿದೆ.
  2. ಆ್ಯಪಲ್ ಸೀಡರ್ ವಿನೇಗರ್: ಆ್ಯಪಲ್ ಸೀಡರ್ ವಿನೇಗರ್​ನಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಆ್ಯಂಟಿಬಯೋಟಿಕ್ ಗುಣಗಳು ಇವೆ. ಕರುಳಿನಲ್ಲಿ ಆರೋಗ್ಯಕಾರಿ ಬ್ಯಾಕ್ಟೀರಿಯಾಗಳು ಬೆಳೆಯಲು ಇದು ಸಹಾಯ ಮಾಡುತ್ತದೆ ಹಾಗೆಯೇ ಕರುಳನ್ನು ಶುದ್ಧೀಕರಿಸುವುದು. ಅಸೆಟೋಬ್ಯಾಕ್ಟರ್ ಇದ್ದು, ಜೀರ್ಣಕ್ರಿಯೆಗೆ ಇದು ತುಂಬಾ ಸಹಕಾರಿಯಾಗಿದೆ.
  3. ಉಪ್ಪು ನೀರು ಕುಡಿಯಿರಿ: ನಿತ್ಯ ಉಪ್ಪು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ತುಂಬಾ ಸಹಕಾರಿ, ಕರುಳು ತುಂಬಾ ಪರಿಣಾಮಕಾರಿಯಾಗಿ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ. ನೀವು ನೀರು ಕುಡಿಯುವುದಾದರೆ ಆಗ 6-8 ಲೋಟ ಉಗುರುಬೆಚ್ಚಗಿನ ನೀರು ಕುಡಿಯಿರಿ.  ಮಲಬದ್ಧತೆ ಮತ್ತು ಕರುಳಿನ ಕ್ರಿಯೆಯು ಸರಾಗವಾಗಿರದವರಿಗೆ ಉಪ್ಪು ನೀರು ತುಂಬಾ ಪರಿಣಾಮಕಾರಿ. ಬೆಳಗ್ಗೆ ಉಪಾಹಾರಕ್ಕೆ ಮೊದಲು ಎರಡು ಚಮಚ ಕಲ್ಲುಪ್ಪು ಉಗುರುಬೆಚ್ಚಗಿನ ನೀರಿಗೆ ಹಾಕಿಕೊಂಡು, ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
  4. ನಾರಿನಾಂಶ ಅಧಿಕವಿರುವ ಆಹಾರ: ನಾರಿನಾಂಶ ಅಧಿಕವಿರುವ ಆಹಾರಗಳಾದ ತರಕಾರಿ, ಹಣ್ಣುಗಳು ಧಾನ್ಯಗಳು, ಸಸ್ಯಜನ್ಯ ಆಹಾರದಲ್ಲಿರುವಂತಹ ಸೆಲ್ಲುಲೊಸ್ ಮತ್ತು ನಾರಿನಾಂಶವು ಮಲಬದ್ಧತೆಯನ್ನು ನಿಯಂತ್ರಿಸುವುದು ಮತ್ತು ಕರುಳು ಅತಿಯಾಗಿ ಕಾರ್ಯನಿರ್ವಹಿಸದಂತೆ ಮಾಡುತ್ತದೆ. ಕರುಳಿನಲ್ಲಿ ಆರೋಗ್ಯಕಾರಿ ಬ್ಯಾಕ್ಟೀರಿಯಾ ನಿರ್ಮಾಣಕ್ಕೆ ನೆರವಾಗುವುದು. ನಿಮ್ಮ ದೈನಂದಿನ ಆರೋಗ್ಯ ಕ್ರಮದಲ್ಲಿ ನಾರಿನಾಂಶವು ಅಧಿಕವಾಗಿರುವ ಆಹಾರಗಳನ್ನು ಸ್ವೀಕರಿಸಿ.
  5. ಅವಕಾಡೋ ಹಣ್ಣು: ಅವಕಾಡೋ ಹಣ್ಣು ಈ ಎಲ್ಲಾ ಹಣ್ಣಿನ ಅಂಗಡಿಗಳಲ್ಲಿ, ಫುಡ್ ಬಜಾರ್ ಗಳಲ್ಲಿ ದೊರೆಯುವುದು. ಈ ಹಣ್ಣು ಅಧಿಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣು. ಅಧ್ಯಯನದಲ್ಲಿ ಸಾಮಾನ್ಯವಾಗಿ ದಿನ ನಿತ್ಯ ತಿನ್ನುವ ಸುಮಾರು 27 ಹಣ್ಣುಗಳನ್ನು ತೆಗೆದುಕೊಂಡು ಪರೀಕ್ಷಿಸಿದಾಗ ಅದರಲ್ಲಿ ಕಿವಿ ಹಣ್ಣು ಇತರ ಎಲ್ಲಾ ಹಣ್ಣುಗಳಿಗಿಂತ ಅತ್ಯಧಿಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಎಂದು ತಿಳಿದು ಬಂದಿದೆ.
  6. ನಿಂಬೆ ಹಣ್ಣಿನ ಜ್ಯೂಸ್: ನಿಂಬೆ ಹಣ್ಣಿನಲ್ಲಿರುವ ಸಿ ಅಂಶಯು ನಿಮ್ಮ ದೇಹದಲ್ಲಿನ ಆಹಾರದ ಚಯಾಪಚಯ ಕ್ರಿಯೆಗೆ ವೇಗ ನೀಡುವುದು ಮತ್ತು ನಿರ್ವಿಷಗೊಳಿಸಲು ನೆರವಾಗುವುದು. ಇದರಲ್ಲಿ ಇರುವಂತಹ ಸಿಟ್ರಿಕ್ ಆಮ್ಲವು ಜೀರ್ಣಕ್ರಿಯೆ ರಸವನ್ನು ಉತ್ಪತ್ತಿ ಮಾಡಲು ನೆರವಾಗಿ, ಸರಿಯಾಗಿ ಜೀರ್ಣಕ್ರಿಯೆಯು ಆಗುವಂತೆ ನೋಡಿಕೊಳ್ಳುವುದು. ಲಿಂಬೆರಸವು ಕರುಳನ್ನು ಶುದ್ಧೀಕರಿಸಲು ತುಂಬಾ ಪರಿಣಾಮಕಾರಿ.
  7. ಹಸಿ ತರಕಾರಿ ಜ್ಯೂಸ್​ಗಳನ್ನು ಕುಡಿಯಿರಿ: ತರಕಾರಿ ಜ್ಯೂಸ್ ಅಥವಾ ಸ್ಮೂಥಿಯಲ್ಲಿ ನಾರಿನಾಂಶ ಮತ್ತು ಪೋಷಕಾಂಶಗಳು ಇವೆ. ಜೀರ್ಣಕ್ರಿಯೆ ಕಾರ್ಯಕ್ಕೆ ಇದು ನೆರವಾಗುವುದು. ಜ್ಯೂಸ್ ನ ಹೆಚ್ಚಿನ ಲಾಭ ಪಡೆಯಲು ಕುಡಿಯುವಾಗ ಅದರ ಸಿಪ್ಪೆ ಮತ್ತು ತಿರುಳು ಹಾಗೆ ಇರಲಿ. ಕ್ಯಾರೆಟ್, ಬೀಟ್ ರೂಟ್, ಸೌತೆಕಾಯಿ, ಟೊಮೆಟೊ ಅಥವಾ ಬಸಲೆಯನ್ನು ಕರುಳನ್ನು ಶುದ್ಧೀಕರಿಸಲು ಬಳಸಬಹುದಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada