AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Diabetes Control: ರಾಗಿ ಸೇವೆನೆಯ ಮೂಲಕ ಮಧುಮೇಹ ಸಮಸ್ಯೆ ನಿಯಂತ್ರಣ ಸಾಧ್ಯ

ರಾಗಿ ಸೇವನೆಯಿಂದ ಮಧುಮೇಹ ಸಮಸ್ಯೆ ನಿಂಯಂತ್ರಣಕ್ಕೆ ತರಬಹುದು ಎಂದರೆ ನೀವು ನಂಬುತ್ತೀರಾ? ರಾಗಿಯಲ್ಲಿ, ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯವಿದೆ.

Diabetes Control: ರಾಗಿ ಸೇವೆನೆಯ ಮೂಲಕ ಮಧುಮೇಹ ಸಮಸ್ಯೆ ನಿಯಂತ್ರಣ ಸಾಧ್ಯ
ರಾಗಿ
TV9 Web
| Edited By: |

Updated on: Nov 21, 2021 | 11:43 AM

Share

ಇತ್ತೀಚಿನ ದಿನಗಳಲ್ಲಿ ಮಧುಮೇಹ ಸಮಸ್ಯೆ ಜನರಲ್ಲಿ ಹೆಚ್ಚು ಕಾಡುತ್ತಿದೆ. ಅದರಲ್ಲಿಯೂ 50 ವರ್ಷ ಮೇಲ್ಪಟ್ಟವರಲ್ಲಿ ಮಧುಮೇಹ (Diabetes) ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ ಅಂದರೆ ತಪ್ಪಾಗಲಾರದು. ಈ ವಯಸ್ಸಿನಲ್ಲಿ ಆಹಾರ (Food) ಪದ್ಧತಿಯಲ್ಲಿನ ಕೆಲವು ಬದಲಾವಣೆಗಳು ಮತ್ತು ಜೀವನ ಶೈಲಿಯಲ್ಲಿನ (Lifestyle) ಕೆಲವು ಬದಲಾವಣೆಯ ಮೂಲಕ ನಿಮ್ಮಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರಬಹುದು. ಜೊತೆಗೆ ನಿಮ್ಮಲ್ಲಿ ಶಕ್ತಿ ಸಾಮರ್ಥ್ಯವನ್ನು (Energy) ಹೆಚ್ಚಿಸಿಕೊಳ್ಳಲು ಸಹ ಈ ಆಹಾರ ಪದಾರ್ಥಗಳು ಸಹಾಯಕ. ಅವು ಯಾವುವು ಎಂಬುದನ್ನು ತಿಳಿಯೋಣ.

ರಾಗಿ ಸೇವನೆಯಿಂದ ಮಧುಮೇಹ ಸಮಸ್ಯೆ ನಿಂಯಂತ್ರಣಕ್ಕೆ ತರಬಹುದು ಎಂದರೆ ನೀವು ನಂಬುತ್ತೀರಾ? ರಾಗಿಯಲ್ಲಿ, ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯವಿದೆ. ಇದಲ್ಲದೇ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ರಾಗಿಯಿಂದ ತಯಾರಿಸಿದ ವಿವಿಧ ತಿಂಡಿಗಳನ್ನು ಸೇವಿಸುವ ಅಭ್ಯಾಸ ರೂಢಿಯಲ್ಲಿಟ್ಟುಕೊಂಡರೆ ಬುಹುಬೇಗ ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರಬಹುದು. ಜೊತೆಗೆ ಮಧುಮೇಹ ಸಮಸ್ಯೆಯಿಂದ ದೇಹದ ತೂಕ ಹೆಚ್ಚಾಗಿದ್ದರೆ ರಾಗಿ ಸೇವನೆಯು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಬಿಪಿ ಸಮಸ್ಯೆ ನಿಯಂತ್ರಣಕ್ಕೆ ತರಬಹುದು.

ಮಧುಮೇಹ ಸಮಸ್ಯೆಯು ಕೇಲವ ದೇಹದ ದುರ್ಬಲತೆ ಜೊತೆಗೆ ಮಾನಸಿಕ ಸ್ಥಿತಿಯನ್ನೂ ಬದಲಾಯಿಸುತ್ತದೆ. ಮನಸ್ಸಿಗೆ ಕಿರಿಕಿರಿ, ಒತ್ತಡ ಮತ್ತು ವಿಪರೀತ ಚಿಂತೆಯಂತಹ ಸಮಸ್ಯೆಗಳು ನಿಮ್ಮನ್ನು ಹೆಚ್ಚು ಕಾಡುತ್ತವೆ. ಹೆಚ್ಚು ಆಯಾಸ, ದೇಹದ ದರ್ಬಲತೆ, ಕೈಕಾಲು ಸೆಳೆತ, ಕೋಪ ಇವು ನಿಮ್ಮ ದೇಹವನ್ನು ಹೆಚ್ಚು ಹೆಚ್ಚು ದುರ್ಬಲಗೊಳಿಸುತ್ತದೆ. ಹಾಗಾಗಿ ಮಧುಮೇಹ ಸಮಸ್ಯೆಯಿಂದ ಆಹಾರ ಪದ್ಧತಿಯದಲ್ಲಿನ ಕೆಲವು ಬದಲಾವಣೆ ಮುಖ್ಯ. ನಿಮ್ಮ ಆಹಾರದಲ್ಲಿ ರಾಗಿ ಸೇರಿಸುವ ಮೂಲಕ ನಿಮ್ಮ ಮಧುಮೇಹ ಸಮಸ್ಯೆಯನ್ನು ಆದಷ್ಟು ಬೇಗ ನಿಯಂತ್ರಣಕ್ಕೆ ತರಬಹುದಾಗಿದೆ.

ಅಕ್ಕಿ, ಗೋಧಿ, ಮೈದಾ ಹಿಟ್ಟು ಇವುಗಳನ್ನು ಬಳಸುವ ಬದಲು ನೀವು ರಾಗಿಯನ್ನು ಬಳಸಬಹುದು. ಅಡುಗೆ ಸಕ್ಕರೆ, ಎಣ್ಣೆಯ ಪದಾರ್ಥಗಳು, ಹೆಚ್ಚು ಸಿಹಿ ಇವುಗಳನ್ನೆಲ್ಲಾ ಪಕ್ಕಕ್ಕಿಟ್ಟು ಹಿತಮಿತವಾದ ಆಹಾರ ಸೇವನೆ ಜೊತೆಗೆ ರಾಗಿಯಿಂದ ವಿವಿಧ ತಿಂಡಿಗಳನ್ನು ತಯಾರಿಸಿ ನೀವು ಸವಿಯಬಹುದು. ರುಚಿಯಾದ ಆಹಾರದ ಜೊತೆಗೆ ಮಧುಮೇಹ ನಿಯಂತ್ರಣವಾಗುತ್ತದೆ. ಹೆಚ್ಚಿನ ಫೈಬರ್ ಅಂಶವಿರುವ ಕಾರಣ ರಾಗಿಯಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುತ್ತದೆ. ಇದು ಸಕ್ಕರೆ ಮಟ್ಟ ಹೆಚ್ಚಲು ದಾರಿ ಮಾಡಿಕೊಡುವುದಿಲ್ಲ. ಜೊತೆಗೆ ರಾಗಿಗಳಲ್ಲಿ ವಿವಿಧ ರಾಗಿಗಳನ್ನೂ ಸಹ ನೀವು ಬಳಸಬಹುದಾಗಿದೆ.

ಫಾಕ್ಸ್ಟೈಲ್ ರಾಗಿ: ಇದು ಫೈಬರ್, ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳನ್ನು ಹೊಂದಿರುತ್ತದೆ. ಕೊಬ್ಬು ಕಡಿಮೆ ಪ್ರಮಾಣದಲ್ಲಿರುತ್ತದೆ. ಇದು ರಂಜಕ, ಮೆಗ್ನೀಶಿಯಮ್ ಮತ್ತು ವಿಟಮಿನ್ ಬಿ3 ಯಿಂದ ಸಮೃದ್ಧವಾಗಿರುತ್ತದೆ. ಕಡಿಮೆ ಕ್ಯಾಲೊರಿ, ಕಬ್ಬಿಣದ ಅಂಶ ಹಾಗೂ ಫೈಟಿಕೆಮಿಕಲ್ಸ್, ಫೈಟೇಟ್ಸ್ ಮತ್ತು ಪ್ರೋಟೀನ್ ಸಮೃದ್ಧವಾಗಿರುತ್ತದೆ. ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮೆಗ್ನೀಶಿಯಮ್ ಮತ್ತು ಖನಿಜಗಳಿಂದ ಕೂಡಿರುತ್ತದೆ. ರುಚಿಯಾಗಿ ರಾಗಿಯಿಂದ ಹೊಸ ಹೊಸ ಖಾದ್ಯಗಳನ್ನು ಮಾಡಿ ಸವಿಯಬಹುದು ಜೊತೆಗೆ ನಿಮ್ಮ ಆರೋಗ್ಯ ಸಮಸ್ಯೆಯನ್ನೂ ದೂರಮಾಡಿಕೊಳ್ಳಬಹುದಾಗಿದೆ.

ಯಾವುದೇ ಆಹಾರವಾಗಲಿ ನಿಯಮಿತವಾಗಿ ಸೇವಿಸಿದರೆ ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳಬಹುದಾಗಿದೆ. ಹಾಗಾಗಿ ಊಟಕ್ಕೆ 25 ಗ್ರಾಂಗಳಿಗಿಂತ ಹೆಚ್ಚು ರಾಗಿಯ ಸೇವನೆ ಒಳ್ಳೆಯದಲ್ಲ. ನೀವು ರಾಗಿಯ ಜೊತೆಗೆ ತಾಜಾ ತರಕಾರಿ ಹಣ್ಣುಗಳನ್ನು ಸೇವಿಸಿ. ನಿಯಮಿತ ಆಹಾರ ವ್ಯವಸ್ಥೆಯಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ದೀಸೆ, ಮೈದಾ, ಗೋಧಿಯನ್ನೆಲ್ಲಾ ಅಡುಗೆ ಮನೆಯಲ್ಲಿ ಪಕ್ಕಕ್ಕಿಟ್ಟು ರಾಗಿಯಿಂದ ತಯಾರಿಸಿದ ಖಾದ್ಯವನ್ನು ಸವಿಯಿರಿ. ನಾಲ್ಕು ತಿಂಗಳ ಕಾಲ ಆಹಾರದಲ್ಲಿ ನಿಯಂತ್ರಣ ಮತ್ತು ರಾಗಿ ಸೇವೆನೆಯ ಮೂಲಕ ಮಧುಮೇಹ ಸಮಸ್ಯೆಯನ್ನು ನಿಯಂತ್ರಿಸಬಹುದು.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನೀವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಮೊದಲು ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ. ನೀವು ಸೇವಿಸುವ ಆಹಾರದ ಬಗ್ಗೆ ವೈದ್ಯರ ಸಲಹೆ ಪಡೆದು ಬಳಿಕ ಆಹಾರ ಪದ್ದತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ನಿಮ್ಮ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು.

ಇದನ್ನೂ ಓದಿ:

Lady Finger: ಆಹಾರದಲ್ಲಿ ಬೆಂಡೆಕಾಯಿಯನ್ನು ಹೆಚ್ಚು ಸೇವಿಸಿ, ಇದು ಮಧುಮೇಹದಿಂದ ಮುಕ್ತಿ ನೀಡುತ್ತದೆ

Eye Health: ದೃಷ್ಟಿ ಸುಧಾರಿಸಿಕೊಳ್ಳಲು ಈ ಕೆಲವು ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ