AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳು ಪದೇಪದೇ ಬೀಳುವುದರಿಂದ ಮೆದುಳಿಗೆ ಅಪಾಯವಾಗುತ್ತದೆಯೇ? ವೈದ್ಯರನ್ನು ಯಾವಾಗ ಸಂಪರ್ಕ ಮಾಡಬೇಕು?

ಚಿಕ್ಕ ಮಕ್ಕಳು ಆಟವಾಡುವಾಗ ಹೆಚ್ಚಾಗಿ ಬೀಳುತ್ತಾರೆ. ಇದು ಬಹಳ ಸಾಮಾನ್ಯ. ಆದರೆ ಪದೇ ಪದೇ ಬೀಳುವುದು, ಬಿದ್ದು ತಲೆಯ ಭಾಗಕ್ಕೆ ಗಾಯ ಅಥವಾ ನೋವಾಗುವುದು ಮಗುವಿನ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಹಾಗಾದರೆ ಪದೇಪದೇ ಬೀಳುವುದರಿಂದ ಮೆದುಳಿಗೆ ಯಾವ ರೀತಿಯ ಸಮಸ್ಯೆಯಾಗುತ್ತದೆ, ಈ ರೀತಿಯಾದಾಗ ವೈದ್ಯರ ಸಂಪರ್ಕ ಮಾಡಬೇಕಾಗುತ್ತದೆಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಕ್ಕಳು ಪದೇಪದೇ ಬೀಳುವುದರಿಂದ ಮೆದುಳಿಗೆ ಅಪಾಯವಾಗುತ್ತದೆಯೇ? ವೈದ್ಯರನ್ನು ಯಾವಾಗ ಸಂಪರ್ಕ ಮಾಡಬೇಕು?
Toddler Falling OftenImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: May 04, 2026 | 7:14 PM

Share

ಮಕ್ಕಳು ಆಟವಾಡುವಾಗ ಬೀಳುವುದು ಸಾಮಾನ್ಯ ಸಂಗತಿಯೇ ಸರಿ. ಅವರು ಹೊಸ ಕೌಶಲ್ಯಗಳನ್ನು ಕಲಿಯುವ ಹಂತದಲ್ಲಿರುವುದರಿಂದ ಈ ರೀತಿ ಆಗುವುದು ಸಹಜ. ಆದರೆ ಮಗು ಪದೇಪದೇ ಬೀಳುತ್ತಿರುವುದನ್ನು ಪೋಷಕರು ಗಮನಿಸಿದರೆ, ಅದು ಕೇವಲ ಆಟದ ಭಾಗವೇ ಅಥವಾ ಆರೋಗ್ಯ ಸಮಸ್ಯೆಯ ಸೂಚನೆಯೇ ಎಂಬುದನ್ನು ಅರಿಯುವುದು ಅಗತ್ಯವಾಗಿದೆ. ಹೌದು, ತಜ್ಞರು ಹೇಳುವ ಪ್ರಕಾರ, ಸಾಮಾನ್ಯವಾಗಿ ಬಿದ್ದಾಗ ಸಣ್ಣಪುಟ್ಟ ಗಾಯವಾಗುವುದರಿಂದ ಯಾವುದೇ ತೊಂದರೆಯಿಲ್ಲ ಇದರಿಂದ ಗಂಭೀರ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಮಗು ತಲೆ ಭಾಗಕ್ಕೆ ಆಗಾಗ ಹೊಡೆತ ಬೀಳುತ್ತಿದ್ದರೆ ಅಥವಾ ಬಿದ್ದಾಗ ತಲೆಯ ಭಾಗಕ್ಕೆ ಹೆಚ್ಚು ಪೆಟ್ಟಾಗುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ಪದೇ ಪದೇ ತಲೆಯ ಭಾಗದಲ್ಲಿ ಗಾಯ ಅಥವಾ ನೋವು ಕಂಡುಬಂದರೆ ಅದು ಮೆದುಳಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿಯೊಂದು ಘಟನೆಯನ್ನು ಗಮನದಿಂದ ಪರಿಗಣಿಸುವುದು ಮುಖ್ಯವಾಗಿದೆ. ಹಾಗಾದರೆ ಪದೇಪದೇ ಬೀಳುವುದರಿಂದ ಮೆದುಳಿಗೆ (Brain Health) ಯಾವ ರೀತಿಯ ಸಮಸ್ಯೆಯಾಗುತ್ತದೆ, ಈ ರೀತಿಯಾದಾಗ ವೈದ್ಯರ ಸಂಪರ್ಕ ಮಾಡಬೇಕಾಗುತ್ತದೆಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಎಚ್ಚರಿಕೆ ಸೂಚನೆಗಳು ಯಾವುವು?

ಮಗು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಪದೇಪದೇ ಬೀಳುತ್ತಿದ್ದರೆ ಅದು ಗಮನಿಸಬೇಕಾದ ವಿಷಯ. ಜೊತೆಗೆ ತಲೆಸುತ್ತು, ದೌರ್ಬಲ್ಯ, ನಡೆಯುವಲ್ಲಿ ಅಸ್ಥಿರತೆ ಅಥವಾ ಸಮತೋಲನ ಕಳೆದುಕೊಳ್ಳುವ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಬಿದ್ದ ನಂತರ ಮಗು ಅಸಹಜವಾಗಿ ಮೌನವಾಗುವುದು, ಹೆಚ್ಚು ಅಳುವುದು ಅಥವಾ ವರ್ತನೆಯಲ್ಲಿ ಬದಲಾವಣೆ ಕಾಣಿಸುವುದೂ ಕೂಡ ಎಚ್ಚರಿಕೆ ಸೂಚನೆಗಳಾಗಬಹುದು.

ಇದನ್ನೂ ಓದಿ: ಈ ಅಭ್ಯಾಸಗಳು ನಿಮ್ಮ ಮೆದುಳಿಗೆ ಹಾನಿ ಮಾಡಬಹುದು!

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಮಗು ಪದೇಪದೇ ಬೀಳುತ್ತಿದ್ದು ಪ್ರತೀ ಸಲ ತಲೆಗೆ ಗಾಯವಾಗುತ್ತಿದ್ದರೆ ಅಥವಾ ಬಿದ್ದ ಬಳಿಕ ವಾಂತಿ, ತೀವ್ರ ತಲೆನೋವು ಮುಂತಾದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಸಹಾಯ ಅಗತ್ಯ. ಜೊತೆಗೆ ಮಗು ನಡೆಯುವ ರೀತಿಯಲ್ಲಿ ಬದಲಾವಣೆ ಕಂಡುಬಂದರೂ ತಜ್ಞರ ಸಲಹೆ ಪಡೆಯಬೇಕು. ಮಕ್ಕಳು ಬೀಳುವುದು ಸಾಮಾನ್ಯವಾದರೂ, ಪದೇಪದೇ ಬೀಳುವುದು ಅಥವಾ ತಲೆಗಾಯಗಳಾಗುವುದು ಗಂಭೀರ ಸಮಸ್ಯೆಯಾಗಿರಬಹುದು. ಪೋಷಕರು ಎಚ್ಚರಿಕೆಯಿಂದ ಗಮನಿಸಿ, ಅಗತ್ಯವಿದ್ದರೆ ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸುವುದು ಮಗುವಿನ ಆರೋಗ್ಯ ಕಾಪಾಡಲು ಸಹಕಾರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!