AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾವೆಲ್ ಮಾಡುವಾಗ ವಾಂತಿಯಾಗುತ್ತಾ? ಹಾಗಿದ್ರೆ ಈ ಸಮಸ್ಯೆ ತಡೆಗಟ್ಟಲು ಈ ರೀತಿ ಮಾಡಿ

ಪ್ರಯಾಣ ಮಾಡುವುದಕ್ಕೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಕೆಲವರಿಗೆ ಪ್ರಯಾಣ ಎಂದರೆ ವಾಕರಿಕೆಯ ಅನುಭವ. ಬಸ್ಸಿನಲ್ಲಿ ಅಥವಾ ಕಾರಿನಲ್ಲಿ, ಹೊಟ್ಟೆಯಲ್ಲಿ ಸಂಕಟವಾಗುವುದು, ಅಸ್ವಸ್ಥತೆ ಮತ್ತು ವಾಂತಿ ಬರುವಂತಹ ಭಾವನೆ ಪ್ರಯಾಣವನ್ನು ಕ್ಲಿಷ್ಟಕರವಾಗಿಸುತ್ತದೆ. ಆದರೆ ಸರಿಯಾದ ಸಲಹೆಗಳನ್ನು ಅನುಸರಿಸುವ ಮೂಲಕ ಇಂತಹ ಸಮಸ್ಯೆಗ ಪರಿಹಾರ ಕಂಡುಕೊಳ್ಳಬಹುದು. ಪ್ರಯಾಣ ಮಾಡುವ ಮೊದಲು ಕೆಲವು ಸಣ್ಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಈ ರೀತಿಯಾಗದಂತೆ ತಡೆಯಬಹುದು.

ಟ್ರಾವೆಲ್ ಮಾಡುವಾಗ ವಾಂತಿಯಾಗುತ್ತಾ? ಹಾಗಿದ್ರೆ ಈ ಸಮಸ್ಯೆ ತಡೆಗಟ್ಟಲು ಈ ರೀತಿ ಮಾಡಿ
Travel Nausea CausesImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jun 13, 2026 | 8:05 PM

Share

ಪ್ರಯಾಣ (Travel) ಎಂದರೆ ಬಹುತೇಕರಿಗೆ ಸಂತೋಷ. ಆದರೆ ಕೆಲವರಿಗೆ ಬಸ್‌, ಕಾರು ಅಥವಾ ಘಾಟ್‌ ರಸ್ತೆ ಪ್ರಯಾಣ ಎಂದರೆ ವಾಂತಿ, ತಲೆಸುತ್ತು, ಹೊಟ್ಟೆಯಲ್ಲಿ ಒಂದು ರೀತಿಯ ಸಂಕಟ ಆರಂಭವಾಗುತ್ತದೆ. ಈ ಸ್ಥಿತಿಯನ್ನು ‘ಮೋಶನ್ ಸಿಕ್ನೆಸ್’ (Motion Sickness) ಎಂದು ಕರೆಯಲಾಗುತ್ತದೆ. ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಪ್ರಯಾಣದ ಉತ್ಸಾಹವೇ ಕಡಿಮೆಯಾಗಬಹುದು. ಜೊತೆಗೆ ಸುಸ್ತು ಸೇರಿದಂತೆ ಮತ್ತಿತರ ಸಮಸ್ಯೆ ಕಂಡುಬರಬಹುದು. ಹಾಗಾಗಿ ಈ ರೀತಿ ಸಮಸ್ಯೆಗೆ ಕಾರಣವೇನು, ಲಕ್ಷಣಗಳು ಹೇಗಿರುತ್ತವೆ ಮತ್ತು ವಾಂತಿಯಾಗದಂತೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೋಶನ್ ಸಿಕ್ನೆಸ್ ಗೆ ಕಾರಣವೇನು?

ನಮ್ಮ ದೇಹದಲ್ಲಿ ಕಣ್ಣು, ಒಳಕಿವಿ ಮತ್ತು ಮೆದುಳು ಪರಸ್ಪರ ಸಂಪರ್ಕ ಹೊಂದಿದ್ದು ದೇಹದ ಸಮತೋಲನವನ್ನು ಕಾಪಾಡುತ್ತವೆ. ಪ್ರಯಾಣದ ವೇಳೆ ಒಳಕಿವಿ ವಾಹನದ ಚಲನೆಯನ್ನು ಗುರುತಿಸುತ್ತದೆ. ಆದರೆ ಕಣ್ಣುಗಳು ಫೋನ್‌, ಪುಸ್ತಕ ಅಥವಾ ವಾಹನದ ಒಳಭಾಗದ ಸ್ಥಿರ ವಸ್ತುಗಳನ್ನು ನೋಡುತ್ತಿರುವಾಗ ಮೆದುಳಿಗೆ ಗೊಂದಲ ಉಂಟಾಗುತ್ತದೆ. ಇದರಿಂದ ವಾಂತಿ, ತಲೆಸುತ್ತು, ಬೆವರುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಸಾಮಾನ್ಯ ಲಕ್ಷಣಗಳು:

  • ವಾಂತಿ
  • ತಲೆಸುತ್ತು
  • ಬೆವರುವುದು
  • ಮುಖ ಬಿಳಿಯಾಗಿ ಕಾಣುವುದು
  • ದೌರ್ಬಲ್ಯ
  • ಹೊಟ್ಟೆಯಲ್ಲಿ ಸಂಕಟ ಮೈಗ್ರೇನ್ ಸಮಸ್ಯೆ ಇರುವವರು ಹಾಗೂ ಮಕ್ಕಳಲ್ಲಿ ಈ ತೊಂದರೆ ಹೆಚ್ಚು ಕಾಣಿಸಬಹುದು.

ಇದನ್ನೂ ಓದಿ: ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಗೆ ಆಹಾರ ಮಾತ್ರವಲ್ಲ, ನಿಮ್ಮ ಈ ಅಭ್ಯಾಸಗಳು ಕಾರಣವಾಗಿರಬಹುದು!

ವಾಂತಿಯಾಗದಂತೆ ತಡೆಯಲು ಏನು ಮಾಡಬೇಕು?

ಪ್ರಯಾಣಕ್ಕೂ ಮೊದಲು ತುಂಬಾ ಎಣ್ಣೆ ಅಥವಾ ಹೊಟ್ಟೆ ಬಿರಿಯುವಷ್ಟು ಆಹಾರ ಸೇವನೆ ಮಾಡಬಾರದು. ಹಗುರವಾದ ಆಹಾರ ಸೇವಿಸಬೇಕು. ಪ್ರಯಾಣದ ವೇಳೆ ಸಾಕಷ್ಟು ನೀರು ಕುಡಿಯಬೇಕು. ವಾಹನದಲ್ಲಿ ಸಾಧ್ಯವಾದರೆ ಕಿಟಕಿಯ ಪಕ್ಕ ಕುಳಿತು ಹೊರಗಿನ ದೂರದ ದೃಶ್ಯಗಳನ್ನು ನೋಡುತ್ತಿರಬೇಕು. ಜೊತೆಗೆ ಪ್ರಯಾಣದ ವೇಳೆ ಮೊಬೈಲ್ ಬಳಸುವುದು ಅಥವಾ ಪುಸ್ತಕ ಓದುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಹಾಗಾಗಿ ಕಣ್ಣು ಮತ್ತು ಒಳಕಿವಿ ನೀಡುವ ಸಂದೇಶಗಳಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ಪುದೀನಾ ಮತ್ತು ನಿಂಬೆಹಣ್ಣು ಪ್ರಯಾಣ ಮಾಡುವಾಗ ಆಗುವ ವಾಂತಿ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಪ್ರಯಾಣಕ್ಕೂ ಮೊದಲು ಸ್ವಲ್ಪ ನಿಂಬೆ ರಸ ಸೇವಿಸುವುದು ಒಳ್ಳೆಯದು. ಪುದೀನಾ ಚಹಾ ಕೂಡ ಸಮಸ್ಯೆ ತಡೆಗಟ್ಟಲು ಸಹಾಯ ಮಾಡಬಹುದು.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಪ್ರತಿ ಪ್ರಯಾಣದಲ್ಲೂ ತೀವ್ರ ವಾಂತಿ, ತಲೆಸುತ್ತು ಅಥವಾ ಅಸ್ವಸ್ಥತೆ ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯಬೇಕು. ಕೆಲ ಸಂದರ್ಭಗಳಲ್ಲಿ ವೈದ್ಯರು ಆಂಟಿ- ಮೋಶನ್ ಸಿಕ್ನೆಸ್ ಮಾತ್ರೆಗಳನ್ನು ಸೂಚಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ