ಕೊವಿಡ್ ಸೋಂಕಿನಿಂದ ಗರ್ಭಿಣಿಯರಿಗೆ ಉಂಟಾಗಬಹುದಾದ ಸಮಸ್ಯೆಗಳೇನು? ಅವಕ್ಕೆ ಪರಿಹಾರಗಳೇನು?
ಜಮಾ ಪೀಡಿಯಾಟ್ರಿಕ್ಸ್ ಪ್ರಕಟಿಸಿದ ಹೊಸ ಅಧ್ಯಯನದ ಪ್ರಕಾರ, ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಪ್ರಿಕ್ಲಾಂಪ್ಸಿಯಾ, ಎಕ್ಲಾಂಪ್ಸಿಯಾದಂತಹ ತೊಂದರೆಗಳು ಉಂಟಾಗುವ ಅಪಾಯವಿದೆ.
ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳಯ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯ ಕುರಿತಾಗಿ ದೇಶಾದ್ಯಂತ ಮಾರಣಾಂತಿಕ ರೋಗದಿಂದ ಮುಕ್ತರಾಗುವುದು ಹೇಗೆ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಏತನ್ಮಧ್ಯೆ, ಹೊಸ ಅಧ್ಯಯನ ನಡೆದಿದ್ದು, ಇದರ ಪ್ರಕಾರ ಕೊರೊನಾ ಗರ್ಭಿಣಿ ಮಹಿಳೆಯರಿಗೂ ಅಪಾಯವನ್ನು ಉಂಟುಮಾಡುತ್ತಿದೆ.
ಜಮಾ ಪೀಡಿಯಾಟ್ರಿಕ್ಸ್ ಪ್ರಕಟಿಸಿದ ಹೊಸ ಅಧ್ಯಯನದ ಪ್ರಕಾರ, ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಪ್ರಿಕ್ಲಾಂಪ್ಸಿಯಾ, ಎಕ್ಲಾಂಪ್ಸಿಯಾದಂತಹ ತೊಂದರೆಗಳು ಉಂಟಾಗುವ ಅಪಾಯವಿದೆ.
ಪಿಕ್ಲಾಂಪ್ಸಿಯಾ ಎಂದರೇನು? ಇದು ಗರ್ಭಿಣಿಯರು ಅಧಿಕ ರಕ್ತದ ಒತ್ತಡವನ್ನು ಎದುರಿಸುವ ಒಂದು ತೊಡಕಾಗಿದೆ. ಇದರಿಂದ ಯಕೃತ್ತು ಮತ್ತು ಮೂತ್ರಪಿಂಡಗಳು ಸಹ ಹಾನಿಗೊಳಗಾಗುತ್ತದೆ.
ಎಕ್ಲಾಂಪ್ಸಿಯಾ ಎಂದರೇನು? ಎಕ್ಲಾಂಪ್ಸಿಯಾ ಎನ್ನುವುದು ತಾಯಿ ಮತ್ತು ಆಕೆಯ ಮಗುವಿಗೆ ರೋಗಗ್ರಸ್ತವಾಗುವಿಕೆಯ ಅಪಾಯ ಉಂಟಾಗುವುದು. ಅಂದರೆ ಹೊಟ್ಟೆ ನೋವು, ಅಧಿಕ ರಕ್ತದೊತ್ತಡದಂತಹ ಸಮಸ್ಯೆಯನ್ನು ಮಹಿಳೆಯರು ಎದುರಿಸಬೇಕಾಗುತ್ತದೆ.
ಗರ್ಭಾವಸ್ಥೆಯಲ್ಲಿರುವಾಗ ಉಂಟಾಗುವ ಅಪಾಯಗಳು ಯಾವುವು? ರೋಗ ನಿಯಂತ್ರಣ ಮತ್ತು ರೋಗ ತಡೆಗಟ್ಟುವಿಕೆ ವಿಚಾರದ ಪ್ರಕಾರ, ಗರ್ಭಿಣಿಯರಿಗೆ ಉಸಿರಾಟದ ತೊಂದರೆಗಳು ಎದುರಾಗುವ ಅಪಾಯವಿದೆ. ಕೊರೊನಾ ಸೋಂಕು ಹೊಂದಿರುವ ಮಹಿಳೆಯರಿಗೆ ಅಕಾಲಿಗ ಜನನವಾಗುವ ಸಾಧ್ಯತೆಯಿದೆ ಎಂದು ಅಧ್ಯಯನವು ಸೂಚಿಸುತ್ತದೆ.
ಕೊವಿಡ್19 ಅಭಿವೃದ್ಧಿ ಹೊಂದುತ್ತಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ? ಅಧ್ಯಯನದ ಪ್ರಕಾರ, ತಾಯಿಯಿಂದ ಮಗುವಿಗೆ ಕೊರೊನಾ ವೈರಸ್ ಹರಡುವ ಅಪಾಯ ತುಂಬಾ ಕಡಿಮೆ. ಕೊರೊನಾ ಸೋಂಕು ಹೊಂದಿರುವ ತಾಯಿಯಿಂದ ಜನಿಸಿದ ಶಿಶುವಿಗೆ ಜನನದ ನಂತರ ಕೊರೊನಾ ಪಾಸಿಟಿವ್ ಕಂಡುಬರುವುದಿಲ್ಲ ಎಂದು ಸಂಶೋಧನೆ ಸೂಚಿಸುತ್ತದೆ.
ಗರ್ಭಿಣಿ ಮಹಿಳೆಗೆ ಕೊವಿಡ್ ಹರಡದಂತೆ ಹೇಗೆ ತಡೆಯಬಹುದು? ಗರ್ಭಿಣಿಯರು ಮುಖ್ಯವಾಗಿ ಸ್ತ್ರೀರೋಗ ತಜ್ಞರು ಸೂಚಿಸಿದ ಔಷಧವನ್ನು ಅನುಸರಿಸಬೇಕು. ಅವರು ತಮ್ಮ ಸ್ತ್ರೀರೋಗ ತಜ್ಞರನ್ನು ದೂರವಾಣಿಯ ಮೂಲಕ ಸಂಪರ್ಕಿಸಬೇಕು. ಗರ್ಭಿಣಿಯರು ಎಲ್ಲರ ಜೊತೆ ಬೆರೆಯದೇ ಪ್ರತ್ಯೇಕತೆ ಕಾಪಾಡಿಕೊಳ್ಳುವುದು ಉತ್ತಮ. ಆಗಾಗ ಕೈತೊಳೆಯುವುದು, ಮುಖಗವಸು ಧರಿಸುವುದು, ಜೊತೆಗೆ ಸೂಚಿಸಿದ ಕೊವಿಡ್ ನಿಯಂತ್ರಣ ಕ್ರಮಗಳನ್ನು ಪಾಲಿಸಲೇಬೇಕು.
ಇದಲ್ಲದೇ, ಕೊರೊನಾ ಸೋಂಕು ಹೊಂದಿರುವ ಗರ್ಭಿಣಿಯರು ಉಸಿರಾಟದ ತೊಂದರೆ ಎದುರಿಸುತ್ತಿದ್ದರೆ, ಅವರು ತಜ್ಞರ ಸಲಹೆಯ ಮೇರೆಗೆ ಉಸಿರಾಟದ ವ್ಯಾಯಾಮ ಅಭ್ಯಾಸ ಮಾಡಬೇಕು. ಆದರೂ ತೀವ್ರವಾದ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ತಕ್ಷಣ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸುವುದು ಉತ್ತಮ.
ಇದನ್ನೂ ಓದಿ: World Coronavirus Update: ಬ್ರೆಜಿಲ್ನಲ್ಲಿ ಹೆಚ್ಚಿದ ಕೊವಿಡ್ ಸೋಂಕು; ಮೂರು ಲಕ್ಷಕ್ಕೆ ತಲುಪಿದ ಮೃತರ ಸಂಖ್ಯೆ