Leech: ಉಂಬಳ ಕಚ್ಚಿದಾಗ ಆಗುವ ರಕ್ತಸ್ರಾವ ತಡೆಯಲು ಏನು ಮಾಡಬೇಕು?

ಮಳೆಗಾಲ ಅಂದರೆ ಸಾಕು, ನೆನಪಿಗೆ ಬರುವುದು ಮಲೆನಾಡಿನ ಉಂಬಳಗಳು, ಮಲೆನಾಡಿನ ಬೆಟ್ಟ, ಗುಡ್ಡ ಮುಂತಾದ ಪ್ರದೇಶಗಳಲ್ಲಿ,ವಿವಿಧ ಜಲಪಾತ ನೋಡಲು ಓಡಾಡುವ ಜನರ ರಕ್ತ ಹೀರಲು ಆರಂಭಿಸಿಬಿಡುತ್ತವೆ.

Leech: ಉಂಬಳ ಕಚ್ಚಿದಾಗ ಆಗುವ ರಕ್ತಸ್ರಾವ ತಡೆಯಲು ಏನು ಮಾಡಬೇಕು?
Leech
Follow us
TV9 Web
| Updated By: ನಯನಾ ರಾಜೀವ್

Updated on:Jul 18, 2022 | 11:13 AM

ಮಳೆಗಾಲ ಅಂದರೆ ಸಾಕು, ನೆನಪಿಗೆ ಬರುವುದು ಮಲೆನಾಡಿನ ಉಂಬಳಗಳು, ಮಲೆನಾಡಿನ ಬೆಟ್ಟ, ಗುಡ್ಡ ಮುಂತಾದ ಪ್ರದೇಶಗಳಲ್ಲಿ,ವಿವಿಧ ಜಲಪಾತ ನೋಡಲು ಓಡಾಡುವ ಜನರ ರಕ್ತ ಹೀರಲು ಆರಂಭಿಸಿಬಿಡುತ್ತವೆ. ಉಂಬಳಗಳು ಮನುಷ್ಯನ ವಾಸನೆಯನ್ನು ಗ್ರಹಿಸಿ , ಹುಡುಕಿ ಕಚ್ಚುತ್ತವೆ. ಈ ಸಮಯದಲ್ಲೆಲ್ಲ ಬೆಟ್ಟ, ಗುಡ್ಡಗಳಲ್ಲಿ ಓಡಾಡಿದರಂತೂ ಮುಗಿದೇ ಹೋಯಿತು. ಒಂದಲ್ಲ ಎರಡಲ್ಲ ನಾಲ್ಕಾರು ಉಂಬಳಗಳು ಕಚ್ಚಿ ರಕ್ತಹೀರುತ್ತವೆ.

ಕೆಲವೊಮ್ಮೆ ಅವು ಕಚ್ಚಿದ್ದು ಗೊತ್ತಾಗದೇ ಹೊಟ್ಟೆತುಂಬಾ ಕುಡಿದು ಅವೇ ಉದುರಿ ಬೀಳುತ್ತವೆ. ಪ್ರವಾಸಿ ಸ್ಥಳಗಳಿಗೆ ಬರುವ ಪ್ರವಾಸಿಗರಿಗೆ ಉಂಬಳ ಕಚ್ಚಿದರೆ ಅವರ ಸ್ಥಿತಿಯಂತೂ ಯಾರಿಗೂ ಬೇಡ ಇನ್ನೂ ಅವರು ಮಲೆನಾಡಿನ ಕಡೆ ಮುಖಮಾಡುವದಿಲ್ಲ.

ಚಿಕ್ಕಗಾತ್ರದ ರಬ್ಬರ್ ನಂತಹ ದೇಹದ ಜೀವಿ ಕೇವಲ 2-4 ಇಂಚು ಉದ್ದ ಇರುವ ಈ ಜೀವಿಯು ತನ್ನ ದೇಹದ ತುದಿಭಾಗದ ಬಾಯಿಯಿಂದ ಮನುಷ್ಯರ ಅಥವಾ ಪ್ರಾಣಿಗಳ ಕಾಲುಗಳನ್ನು ಹಿಡಿದು ದೇಹಕ್ಕೆ ಅಂಟಿಕೊಂಡು ಬಿಡುತ್ತದೆ. ಈ ಜೀವಿ ದೇಹಕ್ಕೆ ಅಂಟಿಕೊಂಡಿರುವುದು ಗೊತ್ತಾಗುವುದೇ ಇಲ್ಲ.

ಸ್ವಲ್ಪವೂ ನೋವಾಗದಂತೆ ರಕ್ತ ಹೀರುವ ಈ ಜೀವಿಗಿರುವ ವೈಶಿಷ್ಟ್ಯತೆ ಇನ್ಯಾವ ಜೀವಿಗೂ ಇಲ್ಲ,. ಆದರೆ ಈ ಜೀವ ರಕ್ತ ಹೀರಿದ್ದರಿಂದ ಸ್ವಲ್ಪ ರಕ್ತ ನಷ್ಟವಾಗುತ್ತದೆಂಬುದನ್ನು ಬಿಟ್ಟರೆ ಕಚ್ಚಿಸಿಕೊಂಡವರಿಗೆ ಬೇರೆ ಯಾವ ಅಪಾಯವೂ ಇಲ್ಲ. ಆದರೆ ಈ ಜೀವಿ ರಕ್ತ ಹೀರಿ ಬಿದ್ದು ಹೋದ ಮೇಲೆ ರಕ್ತಸ್ರಾವ ಆಗುತ್ತದೆ.

ಇದು ಕಾಲಿಗೆ ಏರದಂತೆ ಮಾಡಿಕೊಳ್ಳುವುದು ಹೆಚ್ಚು ಜಾಣತನ. ಇನ್ನು ಕೆಲವು ಹಳ್ಳಿಗರು ತೋಟದ ಗದ್ದೆಯ ಕೆಲಸಕ್ಕೆ ಹೋಗುವಾಗ ತಂಬಾಕಿನ ಎಲೆಯಿಂದ ಮಾಡಿದಂತಹ ಎಣ್ಣೆ ಹಚ್ಚಿಕೊಂಡು ಹೋಗುವ ವಾಡಿಕೆ ಇದೆ. ಇನ್ನು ಕೆಲವರು ತಂಬಾಕು ಎಸಳನ್ನ ನೆನೆಸಿಕೊಂಡು ಕಾಲಿಗೆ ಹಚ್ಚುತ್ತಾ ಹೋಗುವುದು ಇದೆ.

ಇದು ಕಚ್ಚಿದಾಗ ಹಿರುಡಿನ್ ಎಂಬ ರಾಸಾಯನಿಕವನ್ನು ಉಂಬಳ ಮನುಷ್ಯನ ದೇಹದಲ್ಲಿ ಸ್ರವಿಸುತ್ತದೆ ಇದರಿಂದ ರಕ್ತಸ್ರಾವ ಕೂಡಲೇ ನಿಲ್ಲುವುದಿಲ್ಲ. ಇದು ಕಚ್ಚಿದ ಸ್ಥಳದಲ್ಲಿ ಸಾಮಾನ್ಯವಾಗಿ ಸುಣ್ಣವನ್ನು ಹಚ್ಚುತ್ತಾರೆ.

ಉಂಬಳ ಕಚ್ಚಿದಾಗ ಆಗುವ ರಕ್ತಸ್ರಾವ ನಿಲ್ಲದಂತೆ ಕಂಡರೆ ರಕ್ತಸ್ರಾವ ನಿಲ್ಲಲು ಅತ್ಯಂತ ಸುಲಭ ಉಪಾಯ ಎಂದರೆ ಪಟಕದ ಪುಡಿಯನ್ನು ಹಾಕುವುದು. ಪಟಕ ಎಂದರೆ ಪೊಟ್ಯಾಷ್ ಆಲಮ್ ಇದನ್ನು ಸಾಮಾನ್ಯವಾಗಿ ಗಣಕು ನೀರನ್ನ ಶುದ್ಧ ಮಾಡಲು ಉಪಯೋಗಿಸುತ್ತಾರೆ. (ಡಾ. ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯರು)

Published On - 10:25 am, Mon, 18 July 22

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ