AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಳಹೊಟ್ಟೆಯ ನೋವನ್ನು ನಿರ್ಲಕ್ಷಿಸಬೇಡಿ; ಇದು ಗಂಭೀರ ಕಾಯಿಲೆಗಳ ಸೂಚನೆಯಾಗಿರಬಹುದು

ಮಹಿಳೆಯರಿಗೆ ಕೆಲವೊಮ್ಮೆ ಹೊಟ್ಟೆಯ ಕೆಳಭಾಗದಲ್ಲಿ ನೋವು ಕಂಡುಬರುತ್ತದೆ, ಈ ಸಮಸ್ಯೆ ಮಾಸಿಕ ಚಕ್ರದ ಸಮಯದಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಪೀರಿಯಡ್ಸ್‌ ಇಲ್ಲದ ಸಮಯದಲ್ಲೂ ನಿರಂತರವಾಗಿ ನೋವು ಕಾಣಿಸಿದರೆ ಅದನ್ನು ಲಘುವಾಗಿ ತೆಗೆದುಕೊಳ್ಳುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಈ ರೀತಿಯಾಗುವುದು ಯಾವ ಕಾಯಿಲೆ ಬರುವ ಮುನ್ಸೂಚನೆ, ಈ ಆರೋಗ್ಯ ಸಮಸ್ಯೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕೆಳಹೊಟ್ಟೆಯ ನೋವನ್ನು ನಿರ್ಲಕ್ಷಿಸಬೇಡಿ; ಇದು ಗಂಭೀರ ಕಾಯಿಲೆಗಳ ಸೂಚನೆಯಾಗಿರಬಹುದು
Lower Stomach Pain
ಪ್ರೀತಿ ಭಟ್​, ಗುಣವಂತೆ
|

Updated on: Apr 25, 2026 | 9:27 PM

Share

ಮಹಿಳೆಯರಲ್ಲಿ ಕೆಲವೊಮ್ಮೆ ಕೆಳ ಹೊಟ್ಟೆ ಭಾಗದಲ್ಲಿ ನೋವು (Lower Stomach Pain) ಕಾಣಿಸಿಕೊಳ್ಳುವುದು ಸಾಮಾನ್ಯ. ವಿಶೇಷವಾಗಿ ಮಾಸಿಕ ಚಕ್ರದ (Periods) ಸಮಯದಲ್ಲಿ ಈ ನೋವು ಕಾಣಿಸಿಕೊಳ್ಳಬಹುದು. ಆದರೆ ಪೀರಿಯಡ್ಸ್‌ ಇಲ್ಲದ ಸಮಯದಲ್ಲೂ ನಿರಂತರವಾಗಿ ನೋವು ಕಾಣಿಸಿದರೆ ಅದನ್ನು ಲಘುವಾಗಿ ತೆಗೆದುಕೊಳ್ಳುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಾರೆ. ಹೌದು ಹೊಟ್ಟೆಯ ಕೆಳಭಾಗದಲ್ಲಿ ನೋವು ಕಂಡುಬರುವುದು ಗಂಭೀರ ಕಾಯಿಲೆ ಬರುವ ಲಕ್ಷಣವಾಗಿರಬಹುದು. ಹಾಗಾಗಿ ಬಹಳ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ಹಾಗಾದರೆ ಈ ರೀತಿಯಾಗುವುದು ಯಾವ ಕಾಯಿಲೆ ಬರುವ ಮುನ್ಸೂಚನೆ, ಈ ಆರೋಗ್ಯ ಸಮಸ್ಯೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ಕಾಯಿಲೆಗಳ ಸೂಚನೆ ಇರಬಹುದು?

  • ತಜ್ಞರ ಪ್ರಕಾರ, ಕೆಳ ಹೊಟ್ಟೆ ನೋವು ಹಲವು ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಪ್ರಮುಖವಾಗಿ ಪೆಲ್ವಿಕ್ ಇನ್ಫ್ಲಮೇಟರಿ ಡಿಸೀಸ್ (PID) ಎನ್ನುವ ಸೋಂಕಿನಿಂದ ಕೆಳ ಹೊಟ್ಟೆ ಮತ್ತು ನಾಭಿಯ ಸುತ್ತ ನೋವು ಕಾಣಿಸಬಹುದು. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
  • ಇದೇ ರೀತಿ, ಒವೆರಿಯನ್ ಸಿಸ್ಟ್ ಸಮಸ್ಯೆಯೂ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ವಿಶೇಷವಾಗಿ PCOD ಮತ್ತು PCOS ಇರುವವರಲ್ಲಿ ಈ ಸಮಸ್ಯೆ ಸಾಮಾನ್ಯ. ಇದರ ಪರಿಣಾಮವಾಗಿ ಕೆಳ ಹೊಟ್ಟೆ ಭಾಗದಲ್ಲಿ ನಿರಂತರ ನೋವು ಕಾಣಿಸಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಇದು ಗಂಭೀರವಾಗಬಹುದು.
  • ಮತ್ತೊಂದು ಗಂಭೀರ ಸಮಸ್ಯೆ ಎಂಡೋಮೆಟ್ರಿಯೊಸಿಸ್. ಈ ಸ್ಥಿತಿಯಲ್ಲಿ ಗರ್ಭಾಶಯದ ಒಳಗಿನ ಪದರ ಹೊರಭಾಗದಲ್ಲೂ ಬೆಳೆಯಲು ಪ್ರಾರಂಭಿಸುತ್ತದೆ. ಇದರಿಂದ ಪೀರಿಯಡ್ಸ್ ಸಮಯದಲ್ಲಿ ತೀವ್ರ ನೋವು ಮತ್ತು ಕೆಳ ಹೊಟ್ಟೆಯಲ್ಲಿ ನಿರಂತರ ಅಸ್ವಸ್ಥತೆ ಉಂಟಾಗಬಹುದು. ಚಿಕಿತ್ಸೆ ವಿಳಂಬವಾದರೆ ಸಂತಾನಹೀನತೆಯ ಅಪಾಯವೂ ಹೆಚ್ಚುತ್ತದೆ.
  • ಉರಿಯೂತ, ಪದೇಪದೇ ಮೂತ್ರ ವಿಸರ್ಜನೆ ಮತ್ತು ಕೆಳ ಹೊಟ್ಟೆ ನೋವು ಯೂರಿನ್ ಇನ್ಫೆಕ್ಷನ್ ಲಕ್ಷಣಗಳಾಗಿರಬಹುದು. ವೈಯಕ್ತಿಕ ಸ್ವಚ್ಛತೆ ಕೊರತೆಯಿಂದ ಈ ಸಮಸ್ಯೆ ಉಂಟಾಗುತ್ತದೆ.

ಇದನ್ನೂ ಓದಿ: ಋತುಚಕ್ರದ ಸಮಯದಲ್ಲಿ ಈ ಆಹಾರಗಳನ್ನು ಕಡ್ಡಾಯವಾಗಿ ಸೇವಿಸಬೇಕು!

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಕೆಳ ಹೊಟ್ಟೆ ನೋವು ಹಲವು ದಿನಗಳವರೆಗೆ ಮುಂದುವರಿದರೆ, ನೋವು ತೀವ್ರವಾಗಿದ್ರೆ ಅಥವಾ ಜೊತೆಗೆ ಬೇರೆ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಸ್ವಯಂ ಚಿಕಿತ್ಸೆ ಮಾಡುವುದನ್ನು ತಪ್ಪಿಸಬೇಕು.

ತಡೆಗಟ್ಟುವ ಕ್ರಮಗಳು:

  • ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಿ
  • ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ
  • ಯಾವುದೇ ನೋವನ್ನು ನಿರ್ಲಕ್ಷಿಸಬೇಡಿ

ತಜ್ಞರ ಅಭಿಪ್ರಾಯದಂತೆ, ಸಮಯಕ್ಕೆ ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವುದರಿಂದ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸತತ 4 ಸಿಕ್ಸರ್; ಪ್ರಫುಲ್ ಹಿಂಗೆ ವಿರುದ್ಧ ಸೇಡು ತೀರಿಸಿಕೊಂಡ ವೈಭವ್
ಸತತ 4 ಸಿಕ್ಸರ್; ಪ್ರಫುಲ್ ಹಿಂಗೆ ವಿರುದ್ಧ ಸೇಡು ತೀರಿಸಿಕೊಂಡ ವೈಭವ್
ರಾಹುಲ್ ಗಾಂಧಿಯ ಪ್ರತಿಕೃತಿ ದಹನದ ವೇಳೆ ಬಿಜೆಪಿ ಶಾಸಕಿಗೆ ಗಾಯ
ರಾಹುಲ್ ಗಾಂಧಿಯ ಪ್ರತಿಕೃತಿ ದಹನದ ವೇಳೆ ಬಿಜೆಪಿ ಶಾಸಕಿಗೆ ಗಾಯ
ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ
ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ
ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ, ವಿತಂಡ ವಾದ ಮುಂದುವರೆಸಿದ ಚೇತನ್
ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ, ವಿತಂಡ ವಾದ ಮುಂದುವರೆಸಿದ ಚೇತನ್
ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, SSLC ಫಲಿತಾಂಶ ಏರಿಕೆ ಆಗಿದ್ಹೇಗೆ? ವಿಶ್ವನಾಥ್
ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, SSLC ಫಲಿತಾಂಶ ಏರಿಕೆ ಆಗಿದ್ಹೇಗೆ? ವಿಶ್ವನಾಥ್
ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು
ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು
3 ತಿಂಗಳ ಕಂದನನ್ನ ತನ್ನದೇ ಮಗು ಎಂಬಂತೆ ಅಪ್ಪಿಕೊಂಡು ಮುದ್ದಾಡಿದ ಮಂಗ
3 ತಿಂಗಳ ಕಂದನನ್ನ ತನ್ನದೇ ಮಗು ಎಂಬಂತೆ ಅಪ್ಪಿಕೊಂಡು ಮುದ್ದಾಡಿದ ಮಂಗ
ಪಂದ್ಯ ಶ್ರೇಷ್ಠ ಕಿಂಗ್ ಕೊಹ್ಲಿಗೆ ಟಿವಿ, ಮೊಬೈಲ್ ಗಿಫ್ಟ್
ಪಂದ್ಯ ಶ್ರೇಷ್ಠ ಕಿಂಗ್ ಕೊಹ್ಲಿಗೆ ಟಿವಿ, ಮೊಬೈಲ್ ಗಿಫ್ಟ್
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ
ತೆಲಂಗಾಣದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕವಿತಾ!
ತೆಲಂಗಾಣದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕವಿತಾ!