AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Blood Sugar Level: ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾದರೆ ಏನೆಲ್ಲಾ ತೊಂದರೆಯಾಗಬಹುದು?

ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರೆ ಆಗುವ ಸಮಸ್ಯೆಗಳಷ್ಟೇ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾದರೂ ಅನೇಕ ರೀತಿಯ ತೊಂದರೆಗಳು ಕಾಣಿಸಿಕೊಳ್ಳಲಿವೆ.

Blood Sugar Level: ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾದರೆ ಏನೆಲ್ಲಾ ತೊಂದರೆಯಾಗಬಹುದು?
Blood Sugar level
TV9 Web
| Edited By: |

Updated on: Jun 05, 2022 | 7:30 AM

Share

ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರೆ ಆಗುವ ಸಮಸ್ಯೆಗಳಷ್ಟೇ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾದರೂ ಅನೇಕ ರೀತಿಯ ತೊಂದರೆಗಳು ಕಾಣಿಸಿಕೊಳ್ಳಲಿವೆ. ಕಡಿಮೆ ರಕ್ತದ ಸಕ್ಕರೆ ಮಟ್ಟಗಳನ್ನು ವೈದ್ಯಕೀಯ ಪದದಲ್ಲಿ ಹೈಪೊಗ್ಲಿಸಿಮಿಯಾ ಎಂದು ಕರೆಯಲಾಗುತ್ತದೆ.

ಸಕ್ಕರೆ ಕಾಯಿಲೆ ಇರುವವರು ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಔಷಧಗಳನ್ನು ತೆಗೆದುಕೊಳ್ಳುವವರಿಗೆ ರಕ್ತದಲ್ಲಿ ನವೆಯ ಸಮಸ್ಯೆ ಹೆಚ್ಚು. ಹೈಪೋಗ್ಲಿಸಿಮಿಯಾ ಎಂಬುದು ಒಂದು ಕಾಯಿಲೆಯಲ್ಲ, ಆದರೆ ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತದೆ.

ಹೈಪೊಗ್ಲಿಸಿಮಿಯಾ ಎಂದರೇನು? : ಮೆದುಳು ಸೇರಿದಂತೆ ದೇಹದ ಎಲ್ಲಾ ಜೀವಕೋಶಗಳು ಕಾರ್ಯನಿರ್ವಹಿಸಲು ಶಕ್ತಿಯ ಅಗತ್ಯವಿದೆ. ಗ್ಲುಕೋಸ್ ಮಾತ್ರ ದೇಹಕ್ಕೆ ಶಕ್ತಿ ನೀಡುವ ಕೆಲಸ ಮಾಡುತ್ತದೆ. ಇನ್ಸುಲಿನ್ ಎಂಬುದು ಜೀವಕೋಶಗಳು ಗ್ಲೂಕೋಸ್ ಅನ್ನು ಹೀರಿಕೊಳ್ಳಲು ಸಹಾಯ ಮಾಡುವ ಒಂದು ಹಾರ್ಮೋನ್ ಆಗಿದೆ. ರಕ್ತಪ್ರವಾಹದಲ್ಲಿ ಗ್ಲುಕೋಸ್ ಪ್ರಮಾಣ ವು ಕಡಿಮೆಯಾದಾಗ, ಅದನ್ನು ಹೈಪೊಗ್ಲೈಸೀಮಿಯಾ ಎಂದು ಕರೆಯಲಾಗುತ್ತದೆ.

ರಕ್ತದಲ್ಲಿ ಗ್ಲೂಕೋಸ್ ಕಡಿಮೆಯಾದಾಗ ಏನಾಗುತ್ತದೆ – ಆಯಾಸದ ಅನುಭವ -ಕಾರಣವಿಲ್ಲದೆ, ಹೆಚ್ಚು ಕೆಲಸವಿಲ್ಲದೆ ಅತಿಯಾದ ಆಯಾಸ -ಚರ್ಮ ಹಳದಿ ಬಣ್ಣಕ್ಕೆ -ದೃಷ್ಟಿ ದೋಷ, ದೃಷ್ಟಿ ಮಂದವಾಗುವುದು. -ಹೃದಯ ಬಡಿತ ತೀವ್ರವಾಗುತ್ತದೆ -ಹಠಾತ್ ಮೂಡ್ ಬದಲಾವಣೆ -ತಲೆನೋವು ಅನುಭವ -ಹಠಾತ್ ಹಸಿವು – ತಲೆಸುತ್ತುವಿಕೆ – ತುಂಬಾ ಬೆವರುವಿಕೆ – ನಿದ್ರಾಹೀನತೆ

ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು ಹೇಗೆ?

-ವ್ಯಾಯಾಮ ಮಾಡುವ ಮುನ್ನ ಕಾರ್ಬೋಹೈಡ್ರೇಟ್ ಯುಕ್ತ ತಿಂಡಿಯನ್ನು ಸೇವಿಸಿ ಮತ್ತು ವ್ಯಾಯಾಮವು ರಕ್ತದ ಸಕ್ಕರೆಯ ಮಟ್ಟಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ತಜ್ಞರೊಂದಿಗೆ ಮಾತನಾಡಿ.

-ಕಡಿಮೆ ರಕ್ತದ ಸಕ್ಕರೆಯ ಅಪಾಯದಲ್ಲಿದ್ದರೆ, ಸಕ್ಕರೆ, ಹಣ್ಣಿನ ರಸಗಳು ಅಥವಾ ಕ್ಯಾಂಡಿ ಬಾರ್ ಗಳನ್ನು ಯಾವಾಗಲೂ ನಿಮ್ಮೊಂದಿಗೆ ಇರಿಸಿಕೊಳ್ಳಿ, ಇದರಿಂದ ರೋಗಲಕ್ಷಣಗಳು ಕಂಡುಬಂದರೆ ಸೇವಿಸಬಹುದು.

– ಸಂಕೀರ್ಣ ಕಾರ್ಬೋಹೈಡ್ರೇಟ್​ಗಳನ್ನು ಒಳಗೊಂಡಿರುವ ನಿಯಮಿತವಾದ ಊಟವನ್ನು ಮಾಡಿ. ಹೀಗೆ ಮಾಡುವುದರಿಂದ ಹೈಪೊಗ್ಲೈಸಿಮಿಯಾ ಅಂದರೆ ಕಡಿಮೆ ರಕ್ತದ ಸಕ್ಕರೆಯ ಸಮಸ್ಯೆಯನ್ನು ತಪ್ಪಿಸಬಹುದು.

– ಮಧುಮೇಹ ಇರುವವರು ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕು ಮತ್ತು ರಕ್ತದ ಸಕ್ಕರೆಯು ಅಧಿಕವಾಗದಂತೆ ತಡೆಯಲು ರೋಗಲಕ್ಷಣಗಳ ಮೇಲೆ ಕಣ್ಣಿಡಬೇಕು.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ