AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃತಕ ಬಣ್ಣಗಳಿರುವ ಆಹಾರಕ್ಕಿಂತ ಈ ಫುಡ್ ಸೇವನೆ ಮಾಡುವುದು ಬೆಸ್ಟ್ ಅಂತಾರೆ ಡಾ. ಸಂಧ್ಯಾ ಸಿಂಗ್

ಕೃತಕ ಬಣ್ಣಗಳನ್ನು ಆಹಾರ, ಔಷಧ ಮತ್ತು ಸೌಂದರ್ಯವರ್ಧಕಗಳಿಗೆ ಆಕರ್ಷಕ ಕಲರ್ ನೀಡಲು ವ್ಯಾಪಕವಾಗಿ ಬಳಸಲಾಗುತ್ತದೆ. ರೆಸ್ಟೋರೆಂಟ್ ಗಳಲ್ಲಿ ನೀಡಲಾಗುವ ಸಾಮಾನ್ಯ ಆಹಾರದಲ್ಲೂ ಬಣ್ಣಗಳನ್ನು ಬಳಸಲಾಗುತ್ತಿದೆ. ಇವು ಆಹಾರವನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ, ಆದರೆ ಯಾವುದೇ ಪೌಷ್ಟಿಕ ಮೌಲ್ಯವನ್ನು ನೀಡುವುದಿಲ್ಲ. ಈ ಕುರಿತು, ಬೆಂಗಳೂರು ಅಪೋಲೋ ಆಸ್ಪತ್ರೆಯ ಎಚ್‌ಒಡಿ ಮತ್ತು ಮುಖ್ಯ ಕ್ಲಿನಿಕಲ್ ಡಯೆಟೀಶಿಯನ್ ಡಾ. ಸಂಧ್ಯಾ ಸಿಂಗ್ ಎಸ್ ಅವರು ಟಿವಿ9 ಕನ್ನಡ ಜೊತೆ ಮಾತನಾಡಿದ್ದು, ಈ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದ್ದಾರೆ. ಈ ಬಗೆಗಿನ ಸಂಪೂರ್ಣ ವಿವರ ಸ್ಟೋರಿಯಲ್ಲಿದೆ.

ಕೃತಕ ಬಣ್ಣಗಳಿರುವ ಆಹಾರಕ್ಕಿಂತ ಈ ಫುಡ್ ಸೇವನೆ ಮಾಡುವುದು ಬೆಸ್ಟ್ ಅಂತಾರೆ ಡಾ. ಸಂಧ್ಯಾ ಸಿಂಗ್
Experts Say Eat These Natural Foods Instead of Artificial Colors
ಪ್ರೀತಿ ಭಟ್​, ಗುಣವಂತೆ
|

Updated on: Apr 22, 2026 | 8:22 PM

Share

ಕೃತಕ ಬಣ್ಣಗಳು (Artificial Colors) ನಮ್ಮ ದೈನಂದಿನ ಆಹಾರದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಹೊಳೆಯುವ ಬಣ್ಣಗಳಿರುವ ಕ್ಯಾಂಡಿಗಳು, ವಿವಿಧ ಬಣ್ಣದ ಪಾನೀಯಗಳು ಮಾತ್ರವಲ್ಲದೆ, ರೆಸ್ಟೋರೆಂಟ್ ಗಳಲ್ಲಿ ನೀಡಲಾಗುವ ಸಾಮಾನ್ಯ ಆಹಾರದಲ್ಲೂ ಬಣ್ಣಗಳನ್ನು ಬಳಸಲಾಗುತ್ತಿದೆ. ಇವು ಆಹಾರವನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ, ಆದರೆ ಯಾವುದೇ ಪೌಷ್ಟಿಕ ಮೌಲ್ಯವನ್ನು ನೀಡುವುದಿಲ್ಲ. ಇಂತಹ ಆಹಾರವನ್ನು ನಿರಂತರವಾಗಿ ಸೇವಿಸುವುದರಿಂದ ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಈ ಕುರಿತು, ಬೆಂಗಳೂರು ಅಪೋಲೋ ಆಸ್ಪತ್ರೆಯ ಎಚ್‌ಒಡಿ ಮತ್ತು ಮುಖ್ಯ ಕ್ಲಿನಿಕಲ್ ಡಯೆಟೀಶಿಯನ್ ಡಾ. ಸಂಧ್ಯಾ ಸಿಂಗ್ (Dr.Sandhya Singh) ಎಸ್ ಅವರು ಟಿವಿ9 ಕನ್ನಡ ಜೊತೆ ಮಾತನಾಡಿದ್ದು, ಮತ್ತಷ್ಟು ಮಾಹಿತಿ ನೀಡಿದ್ದಾರೆ. ಈ ಬಗೆಗಿನ ಸಂಪೂರ್ಣ ವಿವರ ಸ್ಟೋರಿಯಲ್ಲಿದೆ.

ಪೌಷ್ಟಿಕ ಮೌಲ್ಯ ನೀಡುವ ನೈಸರ್ಗಿಕ ಆಹಾರಗಳು:

ಪ್ರಕೃತಿ ಮಾನವ ಸೇವನೆಗೆ ನೀಡುವ ಬಹುತೇಕ ಆಹಾರಗಳಲ್ಲಿ ಎಲ್ಲ ಬಣ್ಣಗಳನ್ನೂ ಹೊಂದಿದೆ. ಹಣ್ಣು, ತರಕಾರಿ, ಮಸಾಲೆಗಳು, ಹಸಿರು ಸೊಪ್ಪುಗಳು, ಹೂವು, ಪರಾಗಕಣಗಳು ಇತ್ಯಾದಿ ಸಹಜ ಬಣ್ಣಗಳ ಉತ್ತಮ ಮೂಲಗಳಾಗಿವೆ. ಈ ಸಹಜ ಬಣ್ಣಗಳು ಕೇವಲ ಆಹಾರಕ್ಕೆ ಬಣ್ಣ ನೀಡುವುದಲ್ಲದೆ, ಅದರ ಪೌಷ್ಟಿಕ ಮೌಲ್ಯವನ್ನು ಹೆಚ್ಚಿಸುತ್ತವೆ. ಅವುಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು, ಖನಿಜಗಳು, ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ಫೈಟೋನ್ಯೂಟ್ರಿಯಂಟ್ಸ್‌ಗಳಂತಹ ಆರೋಗ್ಯಕರ ಸಂಯುಕ್ತಗಳು ಇರುತ್ತವೆ. ಇವು ದೇಹದಲ್ಲಿನ ಆಕ್ಸಿಡೇಟಿವ್ ಸ್ಟ್ರೆಸ್‌ನ್ನು ಕಡಿಮೆ ಮಾಡಿ, ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

ಉದಾಹರಣೆಗೆ, ಪಾಲಕ್ ಮತ್ತು ಹಸಿರು ಸೊಪ್ಪುಗಳು ಹಸಿರು ಬಣ್ಣ ನೀಡುತ್ತವೆ, ಅರಿಶಿನ ಹಳದಿ ಬಣ್ಣ ನೀಡುತ್ತದೆ, ಕೇಸರಿ ಹಳದಿ-ಕಿತ್ತಳೆ ಬಣ್ಣ ನೀಡುತ್ತದೆ, ಬೀಟ್ರೂಟ್ ಕೆಂಪು ಬಣ್ಣ ನೀಡುತ್ತದೆ, ಪರ್ಪಲ್ ಕ್ಯಾಬೇಜ್ ಮತ್ತು ಬಟರ್‌ಫ್ಲೈ ಪೀ ಹೂವುಗಳು ನೀಲಿ ಮತ್ತು ನೇರಳೆ ಬಣ್ಣವನ್ನು ನೀಡುತ್ತವೆ. ಆದ್ದರಿಂದ, ನಮ್ಮ ಆಹಾರದಲ್ಲಿ ಕೃತಕ ಬಣ್ಣ ಸೇರಿಸುವ ಅವಶ್ಯಕತೆಯೇ ಬರುವುದಿಲ್ಲ. ಹಾಗಾಗಿ ಬಣ್ಣಬಣ್ಣದ ಆಹಾರಗಳ ಸೇವನೆ ಮಾಡುವುದನ್ನು ತಪ್ಪಸಿವುದು ಒಳ್ಳೆಯದು. ಸಹಜ ಬಣ್ಣಗಳಿರುವ, ಪೌಷ್ಟಿಕ ಆಹಾರ ಪದಾರ್ಥಗಳನ್ನು ಬಳಸುವುದು ನಮ್ಮ ಆಹಾರವನ್ನು ರುಚಿಕರವಾಗಿಯೂ, ಆರೋಗ್ಯಕರವಾಗಿಯೂ ಮಾಡುತ್ತದೆ.

ಇದನ್ನೂ ಓದಿ: ಬಣ್ಣ ಬಣ್ಣದ ಕೇಕ್​​ ತಿನ್ನೋ ಮುನ್ನ ಜೋಕೆ: ಯಾಮಾರಿದ್ರೆ ಬರಬಹುದು ಭೀಕರ ಕಾಯಿಲೆ!

ಬಣ್ಣಬಣ್ಣದ ಆಹಾರಕ್ಕೆ ಗುಡ್ ಬೈ ಹೇಳಿ!

ಆಹಾರವನ್ನು ಆಕರ್ಷಕವಾಗಿಸುವುದು ಮುಖ್ಯವಾದರೂ, ಅದರ ಪ್ರಮುಖ ಉದ್ದೇಶ ಪೌಷ್ಟಿಕಾಂಶಗಳ ಸಮೃದ್ಧ ಮೂಲವಾಗಿರಬೇಕು. ಅದು ಮ್ಯಾಕ್ರೋನ್ಯೂಟ್ರಿಯಂಟ್ಸ್ ಮತ್ತು ಮೈಕ್ರೋನ್ಯೂಟ್ರಿಯಂಟ್ಸ್ಗಳ ಸಮತೋಲನ ಹೊಂದಿರಬೇಕು. ಸಹಜ ಬಣ್ಣಗಳನ್ನು ಆಹಾರದಲ್ಲಿ ಬಳಸುವುದು ಪ್ರತಿಯೊಂದು ಅಡಿಗೆ ಮನೆಯ ಜವಾಬ್ದಾರಿಯಾಗಿದೆ. ಇದು ಆಹಾರದ ಆಕರ್ಷಕತೆಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುತ್ತದೆ. ಹಾಗಾಗಿ ಕೃತಕ ಬಣ್ಣಗಳನ್ನು ತ್ಯಜಿಸುವುದು ನಮ್ಮ ಆಹಾರದಲ್ಲಿ ಸರಳತೆ ಮತ್ತು ನೈಜತೆಯನ್ನು ಮತ್ತೆ ತರುವಂತಾಗಿದೆ. ನೆನಪಿಡಿ, ಆರೋಗ್ಯಕರವಾದದ್ದು ಯಾವಾಗಲೂ ಬಹಳ ಬಣ್ಣಬಣ್ಣವಾಗಿರಬೇಕೆಂದಿಲ್ಲ, ಮತ್ತು ಬಣ್ಣಬಣ್ಣವಾಗಿರುವುದೇ ಆರೋಗ್ಯಕರವೆಂದು ಅರ್ಥವಲ್ಲ. ಆದ್ದರಿಂದ, ಉತ್ತಮ ಆರೋಗ್ಯಕ್ಕಾಗಿ ಸರಿಯಾದ ಆಯ್ಕೆಗಳನ್ನು ಮಾಡುವ ಸಮಯ ಬಂದಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ