AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಿಮೆ ಜನನ ತೂಕ ಹೊಂದಿರುವ ಮಗುವಿನ ಬಗ್ಗೆ ಚಿಂತಿತರಾಗಿದ್ದೀರಾ? ತೂಕ ಹೆಚ್ಚಿಸಲು ತಜ್ಞರ ಸಲಹೆ ಇಲ್ಲಿದೆ

ಕಡಿಮೆ ಜನನ ತೂಕ ಹೊಂದಿರುವ ಮಗು ಆರೋಗ್ಯ ತೊಡಕುಗಳು ಮತ್ತು ಬೆಳವಣಿಗೆಯ ಸವಾಲುಗಳನ್ನು ಎದುರಿಸುತ್ತದೆ. ಇದನ್ನು ತಡೆಯಲು ತೂಕ ಹೆಚ್ಚಿಸುವ ಮಾರ್ಗಗಳನ್ನು ನೀವು ಹುಡುಕುತ್ತಿದ್ದರೆ,ನಿಮಗೆ ಸಹಾಯ ಮಾಡಲು ತಜ್ಞರು 10 ಸಲಹೆಗಳನ್ನು ನೀಡಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಡಿಮೆ ಜನನ ತೂಕ ಹೊಂದಿರುವ ಮಗುವಿನ ಬಗ್ಗೆ ಚಿಂತಿತರಾಗಿದ್ದೀರಾ? ತೂಕ ಹೆಚ್ಚಿಸಲು ತಜ್ಞರ ಸಲಹೆ ಇಲ್ಲಿದೆ
ಕಡಿಮೆ ಜನನ ತೂಕ ಹೊಂದಿರುವ ಮಗುImage Credit source: Shutterstock
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on: Aug 18, 2023 | 6:25 AM

Share

ಕಡಿಮೆ ಜನನ ತೂಕದ ಹೊಂದಿರುವ ಶಿಶುಗಳ ತೂಕವನ್ನು ಹೆಚ್ಚಿಸುವುದು ಪೋಷಕರು ಮತ್ತು ಆರೈಕೆ ಮಾಡುವವರಿಗೆ ಅತ್ಯಂತ ಜವಾಬ್ಧಾರಿ ಮತ್ತು ಕಷ್ಟದ ಕೆಲಸ. ಜನನದ ಸಮಯದಲ್ಲಿ ಸಾಮಾನ್ಯವಾಗಿ 5.5 ಪೌಂಡ್ (2500 ಗ್ರಾಂ ಅಥವಾ 2.5 ಕೆಜಿ) ಗಿಂತ ಕಡಿಮೆ ತೂಕವಿರುವ ಕಡಿಮೆ ಜನನ ತೂಕ (ಎಲ್ಬಿಡಬ್ಲ್ಯು) ಇರುವ ಶಿಶುಗಳು ಹೆಚ್ಚಿನ ಆರೋಗ್ಯ ತೊಡಕುಗಳು ಮತ್ತು ಬೆಳವಣಿಗೆಯ ಸವಾಲುಗಳನ್ನು ಎದುರಿಸುತ್ತಾರೆ. ಅವರ ಬೆಳವಣಿಗೆಯ ಪಥವು ನಿಧಾನವಾಗಿದ್ದರೂ, ಅವರ ಆರೋಗ್ಯಕರ ತೂಕ ಹೆಚ್ಚಳ ಮತ್ತು ಒಟ್ಟಾರೆ ಬೆಳವಣಿಗೆಯನ್ನು ಬೆಂಬಲಿಸಲು ಹಲವಾರು ಪರಿಣಾಮಕಾರಿ ವಿಧಾನಗಳಿವೆ.

ಕಡಿಮೆ ತೂಕ ಹೊಂದಿರುವ ಮಗುವಿನ ತೂಕವನ್ನು ಹೆಚ್ಚಿಸುವುದು ಹೇಗೆ?

1. ಎದೆ ಹಾಲು ಸರಿಯಾಗಿ ನೀಡಿ:

ಎಲ್ಬಿಡಬ್ಲ್ಯು ಹೊಂದಿರುವವರು ಸೇರಿದಂತೆ ಶಿಶುಗಳಿಗೆ ಆಹಾರ ನೀಡಲು ಪ್ರತ್ಯೇಕ ಸ್ತನ್ಯಪಾನ ಒಂದು ವರದಾನ. ಎದೆ ಹಾಲಿನಲ್ಲಿ ಪೋಷಕಾಂಶಗಳು ಮತ್ತು ಪ್ರತಿಕಾಯಗಳು ಸಮೃದ್ಧವಾಗಿವೆ, ಇದು ಶಿಶುಗಳಲ್ಲಿ ಆರೋಗ್ಯಕರ ತೂಕ ಹೆಚ್ಚಳವನ್ನು ಬೆಂಬಲಿಸುತ್ತದೆ. ಎದೆ ಹಾಲು ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ, ಆದ್ದರಿಂದ ತಾಯಂದಿರನ್ನು ಸಾಧ್ಯವಾದಷ್ಟು ಕಾಲ ಎದೆ ಹಾಲನ್ನು ನೀಡಿ.

2. ಎದೆಹಾಲಿನ ಬಲವರ್ಧನೆ:

ಫೋರ್ಟಿಫೈಯರ್ ಗಳು ಹೆಚ್ಚುವರಿ ಕ್ಯಾಲೊರಿಗಳು, ಪ್ರೋಟೀನ್ ಗಳು ಮತ್ತು ಅಗತ್ಯ ಪೋಷಕಾಂಶಗಳನ್ನು ಸೇರಿಸುವ ಮೂಲಕ ಸ್ತನ್ಯಪಾನಕ್ಕೆ ಸೂಕ್ತವಾದ ಪೂರಕವನ್ನು ನೀಡುತ್ತವೆ. ಹಾಗಾಗಿ ದನ ಅಥವಾ ಎಮ್ಮೆ ಹಾಲು ಸಿಗುತ್ತಿದ್ದಲ್ಲಿ ಅಮ್ಮಂದಿರು ದಿನಕ್ಕೆ ಎರಡು ಲೋಟ ಹಾಲು ಕುಡಿಯುವುದು ಉತ್ತಮ. ಇದು ಮಕ್ಕಳಿಗೆ ಶಕ್ತಿ ನೀಡುತ್ತದೆ. ಆದಷ್ಟು ಪ್ಯಾಕೆಟ್ ಹಾಲು ಬಳಸುವುದನ್ನು ಕಡಿಮೆ ಮಾಡಿ.

3. ಆಗಾಗ ಆಹಾರ ನೀಡುವುದು ಉತ್ತಮ:

ಆಹಾರದ ಆವರ್ತನವನ್ನು ಹೆಚ್ಚಿಸಿ. ಅಂದರೆ ಎಲ್ಬಿಡಬ್ಲ್ಯು ಶಿಶುಗಳಿಗೆ ಏಕಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಆಹಾರವನ್ನು ನೀಡಲು ಸಾಧ್ಯವಾಗದಿರಬಹುದು. ಹಾಗಾಗಿ ಮಗುವಿಗೆ ಸಮಯಕ್ಕೆ ತಕ್ಕಂತೆ ಅನೇಕ ಬಾರಿ ಸ್ವಲ್ಪ ಸ್ವಲ್ಪವೇ ಆಹಾರ ನೀಡಿ, ಹೀಗೆ ಆಹಾರವನ್ನು ನೀಡುವುದು ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

4. ಚರ್ಮದಿಂದ ಚರ್ಮದ ಸಂಪರ್ಕ:

ಮಗು ಮತ್ತು ಪೋಷಕರು ಅಥವಾ ಆರೈಕೆದಾರರ ನಡುವೆ ಆಗಾಗ ಚರ್ಮದಿಂದ ಚರ್ಮದ ಸಂಪರ್ಕ ಬೆಳೆಯಲು ಪ್ರೋತ್ಸಾಹ ನೀಡಿ. ಈ ಮಾದರಿಯನ್ನು ನಾವು ಕಾಂಗರೂ ಆರೈಕೆ ಎಂದೂ ಕರೆಯುತ್ತೇವೆ. ಅಲ್ಲದೆ ಈ ಅಭ್ಯಾಸವು ತೂಕ ಹೆಚ್ಚಳ ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಇದು ತಾಯಿ ಮತ್ತು ಮಗುವಿನ ನಡುವೆ ಭಾವನಾತ್ಮಕ ಮತ್ತು ದೈಹಿಕ ಉಷ್ಣತೆಯನ್ನು ಒದಗಿಸುತ್ತದೆ, ಆ ಮೂಲಕ ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.

5. ಕ್ಯಾಲೋರಿ ಪೂರಕ ಆಹಾರ:

ಬೆಳವಣಿಗೆಗೆ ಕ್ಯಾಲೊರಿಗಳು ಅತ್ಯಗತ್ಯ, ಮತ್ತು ವಿಶೇಷ ಸ್ತನ್ಯಪಾನದ ಮೂಲಕ ಸಾಕಷ್ಟು ತೂಕವನ್ನು ಪಡೆಯಲು ಸಾಧ್ಯವಾಗದ ಶಿಶುಗಳಿಗೆ, ವೈದ್ಯರು ಮಗುವಿನ ಕ್ಯಾಲೊರಿ ಸೇವನೆಯನ್ನು ಹೆಚ್ಚಿಸುವ ಉತ್ಪನ್ನಗಳನ್ನು ಸಹ ಶಿಫಾರಸು ಮಾಡಬಹುದು. ಹಾಗಾಗಿ ಅವರು ತಿಳಿಸಿದ ಸೂಚನೆಗಳನ್ನು ತಪ್ಪದೇ ಫಾಲೋ ಮಾಡಿ.

6. ನಿಯಮಿತ ತಪಾಸಣೆ ಅಗತ್ಯ:

ತೂಕ ಹೆಚ್ಚಳ ಮತ್ತು ಬೆಳವಣಿಗೆಯನ್ನು ನಿರ್ಣಯಿಸಲು ನಿಯಮಿತ ತಪಾಸಣೆಗಳು, ಮಗುವಿನ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ಯಾವುದರಲ್ಲಾದರೂ ಸ್ಥಿರವಾದ ಕೊರತೆಯಿದ್ದರೆ, ವೈದ್ಯಕೀಯ ಸಲಹೆಯನ್ನು ಪಡೆಯಬೇಕು.

7. ಜಲವಿಚ್ಛೇದಿತ ಪ್ರೋಟೀನ್ ಆಧಾರಿತ ಸೂತ್ರಗಳು:

ಗೋವಿನ ಹಾಲಿನ ಪ್ರೋಟೀನ್ ಜೀರ್ಣಿಸಿಕೊಳ್ಳಲು ಕಷ್ಟಪಡುವ ಶಿಶುಗಳಿಗೆ ಜಲವಿಚ್ಛೇದಿತ ಪ್ರೋಟೀನ್ ಆಧಾರಿತ ಸೂತ್ರಗಳನ್ನು ಶಿಶು ವೈದ್ಯರು ಹೆಚ್ಚಾಗಿ ಶಿಫಾರಸು ಮಾಡುತ್ತಾರೆ. ಅವು ಸಹ ಗೋವಿನ ಹಾಲು ಆಧಾರಿತವಾಗಿದ್ದರೂ, ಸುಲಭವಾಗಿ ಜೀರ್ಣವಾಗುವುದನ್ನು ಸೂಚಿಸುತ್ತಾರೆ. ಅವು ಹೆಚ್ಚಿನ ಸಂಸ್ಕರಣೆಗೆ ಒಳಗಾಗುತ್ತವೆ ಮತ್ತು ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.

8. ಆಹಾರ ತಜ್ಞರಿಂದ ಸಲಹೆ ಪಡೆಯಿರಿ:

ಕೆಲವೊಮ್ಮೆ, ತಾಯಿ ಅಥವಾ ಮಗುವಿನೊಂದಿಗಿನ ಕೆಲವು ಮೂಲಭೂತ ಸಮಸ್ಯೆಗಳಿಂದಾಗಿ ಶಿಶುವಿಗೆ ಆಹಾರವನ್ನು ನೀಡಲು ತೊಂದರೆಯಾಗಬಹುದು. ಅಂತಹ ಸಂದರ್ಭಗಳಲ್ಲಿ, ಅರ್ಹ ಚಿಕಿತ್ಸಕರೊಂದಿಗೆ ಸಮಾಲೋಚನೆ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ.

9. ಸೋಂಕುಗಳನ್ನು ತಪ್ಪಿಸಿ:

ಎಲ್ಬಿಡಬ್ಲ್ಯು ಶಿಶುಗಳು, ಸಾಮಾನ್ಯವಾಗಿ ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಾರೆ, ಇದು ತೂಕ ಹೆಚ್ಚಳಕ್ಕೆ ಅಡ್ಡಿಯಾಗಬಹುದು. ಸ್ವಚ್ಛ ಪರಿಸರವನ್ನು ಕಾಪಾಡಿಕೊಳ್ಳುವುದು, ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡುವುದು ಮತ್ತು ಅನಾರೋಗ್ಯ ವಿರುವ ವ್ಯಕ್ತಿಗಳೊಂದಿಗೆ ಸಂಪರ್ಕ ಇಟ್ಟು ಕೊಂಡು ಮಿತಿಗೊಳಿಸುವುದು ಪ್ರಮುಖ ಮುನ್ನೆಚ್ಚರಿಕೆಗಳಾಗಿವೆ.

10. ಕ್ರಮೇಣ ತೂಕ ಹೆಚ್ಚಿಸುವ ಗುರಿಗಳು:

ತ್ವರಿತ ತೂಕ ಹೆಚ್ಚಳವು ಮುಂದಿನ ಗುರಿಯಂತೆ ತೋರಿದರೂ, ಕ್ರಮೇಣ ಮತ್ತು ಸ್ಥಿರವಾದ ತೂಕ ಹೆಚ್ಚಳವು ಎಲ್ಬಿಡಬ್ಲ್ಯು ಶಿಶುಗಳಿಗೆ ಆರೋಗ್ಯಕರವಾಗಿದೆ. ಮಕ್ಕಳ ವೈದ್ಯರೊಂದಿಗೆ ಸಮಾಲೋಚಿಸಿ ವಾಸ್ತವಿಕ ಗುರಿಗಳನ್ನು ನಿಗದಿಪಡಿಸುವುದು ಮಗುವಿನ ಬೆಳವಣಿಗೆ ಸ್ಥಿರ ಮತ್ತು ಸೂಕ್ತವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಕಡಿಮೆ ಜನನ ತೂಕ (ಎಲ್ಬಿಡಬ್ಲ್ಯು) ಹೊಂದಿರುವ ಶಿಶುಗಳಿಗೆ ವಿಶೇಷ ಆರೈಕೆ ಮತ್ತು ಎಚ್ಚರಿಕೆಯ ಆಹಾರ ಮೇಲ್ವಿಚಾರಣೆಯ ಅಗತ್ಯವಿದೆ. ಸ್ತನ್ಯಪಾನದಿಂದ ಹಿಡಿದು ತಾಯಿಯ ಹಾಲಿನಿಂದ ಪಡೆದ ಫೋರ್ಟಿಫೈಯರ್ ಗಳನ್ನು ಬಳಸುವವರೆಗೆ ಮೇಲೆ ತಿಳಿಸಿದ ಪ್ರತಿಯೊಂದು ಸಲಹೆಗಳು ಆರೋಗ್ಯಕರ ತೂಕ ಹೆಚ್ಚಳವನ್ನು ವಿಭಿನ್ನ ರೀತಿಯಲ್ಲಿ ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿವೆ. ಆರೋಗ್ಯಕರ ತೂಕ ಹೆಚ್ಚಳಕ್ಕೆ ಮಗುವಿನ ಸಾಮಾನ್ಯ ಆರೋಗ್ಯ, ಗರ್ಭಾವಸ್ಥೆಯ ವಯಸ್ಸು ಮತ್ತು ವೈಯಕ್ತಿಕ ಪೌಷ್ಠಿಕಾಂಶದ ಅವಶ್ಯಕತೆಗಳು ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ. ನಿಮ್ಮ ಮಗುವಿಗೆ ಬೆಳವಣಿಗೆಯನ್ನು ನಿರ್ಧರಿಸಲು, ಆರೋಗ್ಯ ತಜ್ಞರೊಂದಿಗೆ ಸಮಾಲೋಚಿಸುವುದು ಅತ್ಯಗತ್ಯ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ