AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs GT: ಏ.24ರ ಸಂಜೆ ನಡೆಯುವ IPL ಪಂದ್ಯದಲ್ಲಿ ಗೆಲ್ಲೋದ್ಯಾರು? ಜ್ಯೋತಿಷ್ಯ ಹೇಳೋದೇನು?

ಏಪ್ರಿಲ್ 24ರಂದು ನಡೆಯಲಿರುವ RCB vs GT IPL ಪಂದ್ಯದ ಬಗ್ಗೆ ಗ್ರಹಗತಿಗಳ ಪ್ರಕಾರ, ಕುಜ, ಬುಧ ಮತ್ತು ಶನಿಯ ಯುತಿ ತೀವ್ರ ಸ್ಪರ್ಧೆಯನ್ನು ಸೂಚಿಸುತ್ತದೆ. ಶುಕ್ರ ಮತ್ತು ಗುರುವಿನ ಪ್ರಭಾವದಿಂದ ಆರ್‌ಸಿಬಿಗೆ ಅನಿರೀಕ್ಷಿತ ತಿರುವು ಸಿಗಲಿದೆ. ಚಂದ್ರನ ಬಲವು ನಾಯಕತ್ವಕ್ಕೆ ಶಕ್ತಿ ತುಂಬಲಿದೆ. ಈ ರೋಚಕ ಪಂದ್ಯದಲ್ಲಿ ಅಂತಿಮವಾಗಿ ಈ ತಂಡವೇ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಆ ಕುರಿತ ಮಾಹಿತಿ ಇಲ್ಲಿದೆ.

RCB vs GT: ಏ.24ರ ಸಂಜೆ ನಡೆಯುವ IPL ಪಂದ್ಯದಲ್ಲಿ ಗೆಲ್ಲೋದ್ಯಾರು? ಜ್ಯೋತಿಷ್ಯ ಹೇಳೋದೇನು?
ಸಾಂದರ್ಭಿಕ ಚಿತ್ರImage Credit source: shutterstock.com
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Apr 23, 2026 | 5:18 PM

Share

ಅತ್ಯಂತ ಕುತೂಹಲದ ಸಂಗತಿಗಳನ್ನು ಜ್ಯೋತಿಷ್ಯದ ಮೂಲಕ ಪಡೆಯಬಹುದು. ಸದ್ಯ ವಿಶ್ವದಾದ್ಯಂತ ರೋಚಕತೆಯನ್ನು ಸೃಷ್ಟಿಸಿರುವುದು IPL. ಏಪ್ರಿಲ್ 24ರ ಸಂಜೆ ನಡೆಯಲಿರುವ ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು ಮತ್ತು ಗುಜರಾತ್​​ ಟೈಟಾನ್ಸ್​​ ನಡುವಿನ ಪಂದ್ಯವು ಅತ್ಯಂತ ರೋಚಕ ಮತ್ತು ಸಂಘರ್ಷಮಯವಾಗಿರಲಿದೆ. ಅಂದು ಯಾವ ತಂಡ ಜಯಗಳಿಸಲಿದೆ ಎಂದು ಆರಂಭದ ಗ್ರಹಗತಿಗಳ ಆಧಾರದ ಮೇಲೆ ಹೇಳಬಹುದಾಗಿದೆ.

ತ್ರಿಗ್ರಹಗಳ ಯುತಿ

ತುಲಾ ರಾಶಿಯಿಂದ ​ಆರನೇ ಮನೆಯಲ್ಲಿ ಕುಜ, ಬುಧ ಮತ್ತು ಶನಿ ಒಂದೇ ಮನೆಯಲ್ಲಿದ್ದಾರೆ. ಆರನೇ ಮನೆಯು ಜ್ಯೋತಿಷ್ಯದಲ್ಲಿ ಶತ್ರು ಮತ್ತು ಸ್ಪರ್ಧೆಯ ಸ್ಥಾನ. ​ಇಲ್ಲಿ ಕುಜ ಇರುವುದು ಆಟಗಾರರಲ್ಲಿ ತೀವ್ರವಾದ ಗೆಲುವಿನ ಹಪಾಹಪಿಯನ್ನು ನೀಡುತ್ತದೆ. ಬೌಲರ್‌ಗಳು ಮತ್ತು ಬ್ಯಾಟರ್‌ಗಳ ನಡುವೆ ತೀವ್ರ ಘರ್ಷಣೆ ನಡೆಯಲಿದೆ. ಶನಿ ಮತ್ತು ಕುಜನ ಯುತಿಯು ಪಂದ್ಯವನ್ನು ಕೊನೆಯ ಓವರ್‌ವರೆಗೂ ಎಳೆದುಕೊಂಡು ಹೋಗುವಂತೆ ಮಾಡುತ್ತದೆ. ಸ್ಕೋರ್ 175-190ರ ಆಸುಪಾಸಿನಲ್ಲಿರಬಹುದು.

​ಶುಕ್ರ ಮತ್ತು ಗುರುವಿನಿಂದ ಭಾಗ್ಯ

ಎಂಟನೇ ಮನೆಯಾದ ವೃಷಭದಲ್ಲಿ ಲಗ್ನಾಧಿಪತಿ ಶುಕ್ರ ಮತ್ತು ಧನಕಾರಕ ಗುರು ಯುತಿಯಾಗಿದ್ದಾರೆ. ಶುಕ್ರನು ಸ್ವಕ್ಷೇತ್ರದಲ್ಲಿದ್ದು ಗುರುವಿನೊಂದಿಗೆ ಇರುವುದು ತಂಡಕ್ಕೆ ಅನಿರೀಕ್ಷಿತ ತಿರುವುಗಳನ್ನು ನೀಡುತ್ತದೆ. ಪಂದ್ಯವು ಕೈತಪ್ಪಿ ಹೋಯಿತು ಎನ್ನುವಾಗಲೇ ಒಬ್ಬ ಪ್ರಮುಖ ಆಟಗಾರ ಪಂದ್ಯದ ದಿಕ್ಕನ್ನು ಬದಲಿಸಿ ಆರ್‌ಸಿಬಿ ಪರವಾಗಿ ಜಯ ತಂದುಕೊಡಲಿದ್ದಾನೆ.

​ದಶಮ ಚಂದ್ರನ ಬಲ

ಕುಂಡಲಿಯ ಹತ್ತನೇ ಮನೆಯಲ್ಲಿ ಚಂದ್ರನು ಸ್ವಕ್ಷೇತ್ರದಲ್ಲಿದ್ದಾನೆ. ಇದು ಅತ್ಯಂತ ಶುಭ ಸಂಕೇತ. ಹತ್ತನೇ ಮನೆಯು ಯಶಸ್ಸು ಮತ್ತು ಕೀರ್ತಿಯ ಸ್ಥಾನ. ಚಂದ್ರನು ಇಲ್ಲಿ ಬಲಿಷ್ಠನಾಗಿರುವುದು ಆರ್‌ಸಿಬಿ ತಂಡದ ನಾಯಕತ್ವ ಮತ್ತು ನಿರ್ಧಾರಗಳು ಮೈದಾನದಲ್ಲಿ ಫಲ ನೀಡಲಿವೆ ಎಂಬುದನ್ನು ಖಚಿತಪಡಿಸುತ್ತದೆ.

ಜಯ ಯಾರಿಗೆ?

ಮೇಷದಲ್ಲಿರುವ ರವಿ ಮತ್ತು ಹತ್ತನೇ ಮನೆಯಲ್ಲಿರುವ ಚಂದ್ರನು ತಂಡಕ್ಕೆ ರಾಜಕೀಯ ಮತ್ತು ಮೈದಾನದ ಬಲ ನೀಡುತ್ತಾರೆ. ಮೀನದಲ್ಲಿರುವ ಶನಿ-ಕುಜರ ಯುತಿಯು ಎದುರಾಳಿಗಳಿಗೆ ಕಠಿಣ ಸವಾಲು ನೀಡಲಿದೆ. ಆಟ ಆರಂಭದ ಸಮಯದ ಪ್ರಕಾರ ಲಗ್ನಾಧಿಪತಿ ಶುಕ್ರ ಮತ್ತು ಗುರುಗಳ ಸಮ್ಮಿಲನ ಹಾಗೂ ದಶಮದಲ್ಲಿರುವ ಚಂದ್ರನ ಬಲದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಜಯಗಳಿಸುವ ಸಾಧ್ಯತೆ ಹೆಚ್ಚಿದೆ. ಅಂತಿಮ ಕ್ಷಣದವರೆಗೂ ಕುತೂಹಲ ಉಳಿಯುವ ಈ ಪಂದ್ಯದಲ್ಲಿ ಆರ್‌ಸಿಬಿ ವಿಜಯದ ನಗೆ ಬೀರಲಿದೆ.

​ ​-ಲೋಹಿತ ಹೆಬ್ಬಾರ್

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:18 pm, Thu, 23 April 26

Follow Us