Daily Horoscope 12 August 2024: ನಿಮ್ಮ ಸೃಜನಶೀಲತೆ ಇತರರಿಗೆ ಇಷ್ಟವಾಗುವುದು, ಈ ದಿನ ಉತ್ಸಾಹದಿಂದ ಕೂಡಿರುತ್ತದೆ

ಆಗಸ್ಟ್​ 12,​ 2024ರ​​ ನಿಮ್ಮ ರಾಶಿಭವಿಷ್ಯ: ಸ್ವಾಮ್ಯತೆಯ ಸ್ವಭಾವ ಮತ್ತು ಕೋಪ ಅನಗತ್ಯ ಜಗಳಗಳಿಗೆ ಕಾರಣವಾಗಬಹುದು. ನೀವು ಆತ್ಮಾವಲೋಕನ ಮಾಡಲು ಆಲೋಚಿಸುತ್ತೀರಿ, ಏಕೆಂದರೆ ಅದೊಂದೇ ನಿಮ್ಮ ಬಹುತೇಕ ಸಮಸ್ಯೆಗಳಿಗೆ ಉತ್ತರ ತಂದುಕೊಡುವ ದಾರಿಯಾಗಿದೆ. ಕೆಲಸದ ಸ್ಥಳದಲ್ಲಿ ನಿಷ್ಠೆಯಿಂದ ಕೆಲಸ ಮಾಡುವಿರಿ. ಹಾಗಾದರೆ ಆಗಸ್ಟ್​ 12ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope 12 August 2024: ನಿಮ್ಮ ಸೃಜನಶೀಲತೆ ಇತರರಿಗೆ ಇಷ್ಟವಾಗುವುದು, ಈ ದಿನ ಉತ್ಸಾಹದಿಂದ ಕೂಡಿರುತ್ತದೆ
ದಿನಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 12, 2024 | 12:02 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸೋಮವಾರ (ಆಗಸ್​​ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಶ್ರಾವಣ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಶುಕ್ಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:56 ಗಂಟೆ, ರಾಹು ಕಾಲ ರಾತ್ರಿ 07:54 ರಿಂದ 09:29, ಯಮಘಂಡ ಕಾಲ ಬೆಳಿಗ್ಗೆ 11:03 ರಿಂದ ಮಧ್ಯಾಹ್ನ 12:38ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:12 ರಿಂದ 03:47ರ ವರೆಗೆ.

ಮೇಷ ರಾಶಿ: ನಿಮ್ಮ ಜೀವನದ ಅತ್ಯಂತ ನಿರ್ಣಾಯಕ ಕ್ಷಣವನ್ನು ಎದುರಿಸುವಾಗ ಜಾಗರೂಕರಾಗಿರಿ. ನಿಮ್ಮ ಮನೆಯವರು ಊಹಿಸಿದ್ದಕ್ಕಿಂತ ಹೆಚ್ಚನ್ನು ನೀವು ಸಾಧಿಸುವಿರಿ. ನೀವು ಲೆಕ್ಕಾಚಾರದ ವ್ಯಕ್ತಿಯಾದರೂ ರಿಸ್ಕ್ ತೆಗೆದುಕೊಳ್ಳಲು ತಯಾರಾಗುವಿರಿ. ಚಂಚಲವಾದ ಮನಸ್ಸಿನಿಂದ ನೀವು ಗುರಿಯನ್ನು ಸಾಧಿಸಲು ಕಷ್ಟಪಡುವಿರಿ. ನಿಮ್ಮಂತಹ ಮಾನಸಿಕವಾಗಿ ಬಲವುಳ್ಳವರು ಹೃದಯಶೂನ್ಯ ಆಗಬಾರದು. ಇಡೀ ಕುಟುಂಬದ ಹೊರೆ ನಿಮ್ಮ ಮೇಲೆ ಇಂದು ಬರಬಹುದು. ಮನಸ್ಸಿನಲ್ಲಿ ಭವಿಷ್ಯದ ಬಗ್ಗೆ ಹೆಚ್ಚು ಯೋಚನೆಗಳು ಸುಳಿದಾಡಬಹುದು. ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ನೀವು ಉತ್ಸಾಹದಿಂದ ಸಿದ್ಧರಾಗಿರುವಿರಿ. ಸಹೋದ್ಯೋಗಿಗಳ ವರ್ತನೆಯು ಇಷ್ಟವಾಗದೇ ಸಿಟ್ಟಾಗುವಿರಿ. ಆಕಸ್ಮಿಕ ದ್ರವ್ಯ ಲಾಭದಿಂದ ಖುಷಿ ಪಡುವಿರಿ. ನಿಮ್ಮ ಉಪಕರಣಗಳು ದುರಸ್ತಿಗೆ ಬರಬಹುದು.

ವೃಷಭ ರಾಶಿ: ನಿಮ್ಮ ಉದಾರ ಮತ್ತು ಬೆಂಬಲದ ಸ್ವಭಾವದಿಂದ, ಜನರು ನಿಮ್ಮ ಬಳಿ ಬಂದು ನಿಮ್ಮ ಕೆಲಸದಲ್ಲಿ ನೆರವಾಗುತ್ತಾರೆ. ನಿಮ್ಮ ಸೃಜನಶೀಲ ಪ್ರತಿಕ್ರಿಯೆಯು ಇಷ್ಟವಾಗುವುದು. ನಿಮ್ಮ ಪ್ರೀತಿಪಾತ್ರರು ಸುತ್ತುವರಿದಿದ್ದು, ನಿಮ್ಮ ದಿನವೂ ಉತ್ಸಾಹದಿಂದ ಮುಗಿಯುತ್ತದೆ. ಮನಸ್ಸನಲ್ಲಿ ಯಾವುದನ್ನೂ ಇಟ್ಟುಕೊಳ್ಳದೇ ಹಳೆಯ ಮನಸ್ತಾಪಗಳನ್ನು ಬಿಟ್ಟು ಸಂಬಂಧವನ್ನು ಮಧುರವಾಗಿಸಿ. ದಾಂಪತ್ಯದ ಸುಖವು ಇಂದು ಸ್ವಲ್ಪ ಮಾತ್ರ ಸಿಗಬಹುದು. ಆತುರದ ಕಾರ್ಯಗಳಿಂದ ನಷ್ಟವಾಗುವ ಸಾಧ್ಯತೆ. ರಾಜಕಾರಣಿಗಳ ಜೊತೆ ಆತ್ಮೀಯತೆ ಹೆಚ್ಚಾಗಬಹುದು. ಉದ್ಯೋಗದಲ್ಲಿ ಸಹೋದ್ಯೋಗಿಯ ವರ್ತನೆಯಿಂದ ತೊಂದರೆ ಉಂಟಾಗಬಹುದು. ಎಲ್ಲ ಸಮಸ್ಯೆಯೂ ನಿಮ್ಮದೇ ಎಂಬಂತೆ ಇರುವಿರಿ. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು.

ಮಿಥುನ ರಾಶಿ: ನಿಮ್ಮ ಈ ದಿನ ಚೆನ್ನಾಗಿ ಪ್ರಾರಂಭವಾಗಿರಲಿದ್ದು, ನಿಮ್ಮ ಸಾಮರ್ಥ್ಯಗಳಿಂದ ಪ್ರತಿಯೊಬ್ಬರನ್ನೂ ಅಚ್ಚರಿಗೊಳಿಸುವಿರಿ. ಉತ್ಪಾದನೆ ಹೆಚ್ಚಿಸಲು ನಿಮ್ಮ ಕೆಲಸದ ವಿಧಾನವನ್ನು ಬದಲಾಯಿಸುವುದು ಸೂಕ್ತ. ಹೆಚ್ಚಾದ ವಿಶ್ವಾಸದಿಂದ ಮತ್ತು ಅನುಕೂಲಕರ ಫಲಿತಾಂಶಗಳಿಂದ ಭರವಸೆ ಹೆಚ್ಚಾಗುವುದು. ನಿಮ್ಮ ಇಂದಿನ ಕರ್ತವ್ಯಗಳನ್ನು ನಿರ್ಲಕ್ಷಿಸದೇ ಮಾಡಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ನಿಮ್ಮ ಒಳ್ಳೆಯ ಭಾವನೆಗಳು ಕಾರ್ಯದಲ್ಲಿ ಯಶಸ್ಸನ್ನು ತರುತ್ತವೆ. ಪ್ರಮುಖ ಉದ್ದೇಶಕ್ಕಾಗಿ ಕೈಗೊಂಡ ಪ್ರಯಾಣದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಕೆಟ್ಟ ಮತ್ತು ಎದುರು ಹೊಗಳುವ ಸ್ವಭಾವದ ಜನರ ಸಹವಾಸದಿಂದ ನಿಮಗೆ ತೊಂದರೆ ಆಗಲಿದೆ. ಪ್ರಭಾವೀವ್ಯಕ್ತಿಗಳು ನಿಮ್ಮನ್ನು ಭೇಟಿಯಾಗಲು ಬರಬಹುದು. ಉದ್ಯಮದಲ್ಲಿ ಕ್ರಿಯಾಶೀಲತೆಯನ್ನು ಬಯಸುವಿರಿ. ನೂತನ ವಸ್ತುಗಳಿಂದ ಸಂತೋಷವು ಸಿಗುವುದು.

ಕಟಕ ರಾಶಿ: ನಿಮ್ಮ ಸುತ್ತಲಿನ ಮಾತುಕತೆಗಳನ್ನು ಗಮನಿಸುತ್ತಿರಿ. ಕೆಲವು ನಿಮಗೆ ಅನ್ವಯವಾಗುವಂತಹವು ಇರಬಹುದು. ಪ್ರಶ್ನೆ ಮತ್ತು ತರ್ಕ ಎಂದು ನೀವು ಆಲೋಚಿಸುತ್ತೀರಿ ಮತ್ತು ಎಲ್ಲ ಅಂಶಗಳನ್ನು ಪರಿಗಣಿಸಿಯೇ ಸೂಕ್ತ ಆಯ್ಕೆ ಮಾಡಿ. ಅಂತಿಮ ತೀರ್ಮಾನ ನಿಮ್ಮದೇ ಆಗಿರಲಿ. ಹಳೆಯ ಘಟನೆಗಳ ನೆನಪಿನಿಂದ ಮನಸ್ಸು ಭಾರವಾಗಬಹುದು. ಕುಟುಂಬದಲ್ಲಿ ಘನತೆಯನ್ನು ಕಾಪಾಡಿಕೊಳ್ಳಲು ನೀವು ತಾಳ್ಮೆಯನ್ನೂ ಇಟ್ಟುಕೊಳ್ಳಬೇಕಾಗುತ್ತದೆ. ಯಾವ ಬಂಧಗಳನ್ನೂ ಬಯಸದೇ ಮನಸ್ಸಿಗೆ ಒಂಟಿತನ ಬೇಕು ಎನಿಸಬಹುದು. ಕ್ರಿಯಾತ್ಮಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಿರಲಿದೆ. ಆಕಸ್ಮಿಕವಾದ ಕೆಲವು ಸಂತೋಷಕರ ಸುದ್ದಿಗಳಿಂದ ಮನಸ್ಸು ಅರಳುವುದು. ಸಮಾರಂಭಗಳಲ್ಲಿ ಬಂಧುಗಳು ನಿಮ್ಮನ್ನು ಭೇಟಿಯಾಗುವರು. ನಿಮ್ಮ ವಿರೋಧಿಗಳಗೆ ಮಾತಿನಿಂದ ಉತ್ತರಿಸಿ ಉಪಯೋಗವಿಲ್ಲ. ಕೃತಿಯಿಂದ ತೋರಿಸಿ.

ಸಿಂಹ ರಾಶಿ: ನೀವು ಪುರಸ್ಕಾರಗಳ ಕುರಿತು ಆಲೋಚನೆ ಮಾಡದೇ ಸತತವಾಗಿ ಕಠಿಣ ಪರಿಶ್ರಮಪಡುವಿರಿ. ಕೆಲಸದ ವಿಷಯದಲ್ಲಿ ಸದಾ ಸನ್ನದ್ಧರಾಗಿರುವಿರಿ. ನೀವು ಯಾರದ್ದಾದರೂ ಸಹಯೋಗದಲ್ಲಿ ಕೆಲಸ ಮಾಡಲು ಬಯಸಿದರೆ, ನೀವು ತಾಳ್ಮೆ ತಂದುಕೊಳ್ಳಬೇಕು. ನಿಮ್ಮ ಪ್ರಯತ್ನಗಳಿಗೆ ಮಾನ್ಯತೆ ದೊರೆಯಲು ಕಾಯಬೇಕು. ನೀವು ಚಾತುರ್ಯದಿಂದ ಸಂಬಂಧದ ಪ್ರಯೋಜನವನ್ನು ಪಡೆದುಕೊಳ್ಳುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ವಾಕ್ಚಾತುರ್ಯದಿಂದ ಲಾಭವನ್ನು ನೀವು ಪಡೆದುಕೊಳ್ಳುವಿರಿ. ಮನಸ್ತಾಪವನ್ನು ತಣಿಸಲು ಸಂಗಾತಿಯ ಜೊತೆ ಹೆಚ್ಚು ಕಾಲ ಕಳೆಯುವಿರಿ. ಅನನುಕೂಲದ ಸ್ಥಿತಿಯಲ್ಲಿಯೂ ಲಾಭವನ್ನು ಪಡೆಯವ ಕಲೆಯನ್ನು ನೀವು ತಿಳಿದಿರುವಿರಿ. ಕೆಲಸಗಳ ನಡೆವೆಯೂ ನೀವು ನಿಮ್ಮ ಸಂಗಾತಿಯ ಕುರಿತು ಆಲೋಚನೆ ಮಾಡುವಿರಿ. ಪ್ರಭಾವಿ ವ್ಯಕ್ತಿತ್ವವು ನಿಮಗೆ ಅನುಸರಣೀಯ ಆಗಬಹುದು. ಮಕ್ಕಳ ಪ್ರೀತಿಯನ್ನು ಪಡೆದುಕೊಳ್ಳುವಿರಿ. ಪ್ರೀತಿಯಲ್ಲಿ ಸಣ್ಣ ಕಲಹವಾಗಬಹುದು.

ಕನ್ಯಾ ರಾಶಿ: ನಿಮ್ಮ ಸುತ್ತಲಿನ ಎಲ್ಲರೂ ನಿಮ್ಮ ಆಲೋಚನೆಗಳಿಗೆ ಪ್ರಶಂಸಿಸುವರು. ನೀವು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅವಕಾಶವನ್ನು ಕಂಡುಕೊಳ್ಳುವಿರಿ. ನೀವು ಹಣಕಾಸಿನ ವಿಷಯದಲ್ಲಿ ಸ್ವಾವಲಂಬಿಯಾಗಿ ಗುರಿಯನ್ನು ಸಾಧಿಸುವಿರಿ. ಯೋಜಿತ ಕೆಲಸಗಳು ಫಲಪ್ರದವಾಗಲಿವೆ. ನೈತಿಕ ಮತ್ತು ಅನೈತಿಕತೆಯ ಬಗ್ಗೆ ಯೋಚಿಸುವ ಮನಸ್ಸು ಭೌತಿಕ ಪರಿಸರದೊಂದಿಗೆ ಹೆಜ್ಜೆ ಹಾಕಲು ಸಾಧ್ಯವಾಗುವುದಿಲ್ಲ. ರಹಸ್ಯ ಶತ್ರುಗಳ ಬಗ್ಗೆ ಎಚ್ಚರದಿಂದಿರಿ. ಹೊಸ ವ್ಯಾಪಾರ ಸಂಬಂಧಗಳು ತೀವ್ರಗೊಳ್ಳಬಹುದು. ಇಂದು ಹಿರಿಯರ ಬೆಂಬಲ ನಿಮಗೆ ಸಿಗಲಿದೆ. ಕೆಲಸದ ವಾತಾವರಣವು ಆಹ್ಲಾದಕರವಾಗಿರುತ್ತದೆ. ನಿಮ್ಮ ಅಹಂಕಾರಕ್ಕೆ ಪೆಟ್ಟುಬೀಳುವುದು. ಯಾವ ವಿವರಗಳನ್ನೂ ಕೊಡಬೇಡಿ. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು.

ತುಲಾ ರಾಶಿ: ನಿಮ್ಮ ವಿಶ್ವಾಸ ನಿಮಗೆ ಸುಲಭವಾಗಿ ಗೊತ್ತಿಲ್ಲದ ದಾರಿಗಳಲ್ಲಿ ಸಂಚರಿಸಲು ನೆರವಾಗುತ್ತದೆ. ಇಂದು, ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮ ವ್ಯಾಪಾರ ಸಾಮರ್ಥ್ಯಗಳನ್ನು ಕೂಡಾ ಪರೀಕ್ಷಿಸಲಾಗುತ್ತದೆ. ಪರಿಹಾರವಾಗದ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಲು ನೀವು ಆವಿಷ್ಕಾರಕ ವಿಧಾನಗಳನ್ನು ಆಲೋಚಿಸುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಅನೂಹ್ಯ ಸನ್ನಿವೇಶಗಳು ಅಡ್ಡಿಯಾಗಬಹುದು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ನಿಷ್ಕಾಳಜಿಯಿಂದ ಇರಬಾರದು. ಧಾರ್ಮಿಕ ನಾಯಕರಿಗೆ ಹೆಚ್ಚು ಲಾಭ ಹಾಗೂ ಯಶಸ್ಸು ಸಿಗಬಹುದು. ಪುಣ್ಯಸ್ಥಳಕ್ಕೆ ನೀವು ಹೋಗಲಿದ್ದೀರಿ. ಮಕ್ಕಳ ವಿಚಾರದಲ್ಲಿ ಮನಸ್ಸು ವ್ಯಾಕುಲತೆಯಿಂದ ಇರಲಿದೆ. ಇಂದು ಆಧ್ಯಾತ್ಮಿಕ ಭಾವನೆಗಳು ನಿಮ್ಮ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಬಹುದು. ಸುಮ್ಮನೇ ಕುಳಿತು ಸಮಯವನ್ನು ವ್ಯರ್ಥಮಾಡಬೇಡಿ. ಆರ್ಥಿಕ ವಿಚಾರಕ್ಕೆ ಯಾರಾದರೂ ಮಧ್ಯ ಪ್ರವೇಶಿಸುವುದರಿಂದ ಸಿಟ್ಟಾಗುವಿರಿ.

ವೃಶ್ಚಿಕ ರಾಶಿ; ನೀವು ಇಂದು ಯಾವುದೇ ಅವಕಾಶವನ್ನೂ ಬಿಡಬೇಡಿ. ನಿಮ್ಮ ಗುರಿಗಳಿಗೆ ನೀವು ಬದ್ಧರಾಗಿರುವ ಮತ್ತು ನಿಮ್ಮ ಸಹೋದ್ಯೋಗಿಗಳಿಗೆ ಅವರ ಕರ್ತವ್ಯಗಳಲ್ಲಿ ಕೊರತೆಯಾಗಲು ಅವಕಾಶ ನೀಡಬೇಡಿ. ನಿಮ್ಮ ಜೀವನದಲ್ಲಿ ಸಂತೋಷ ತರಲು, ನೀವು ಕೊಂಚ ಸಮಯ ತೆಗೆದುಕೊಳ್ಳಬೇಕಾಗಬಹುದು. ನಿಮ್ಮ ಮೇಲಧಿಕಾರಿಗಳ ನಿಮಗೆ ನೆರವವು ಸಿಗುತ್ತದೆ. ಉದ್ಯೋಗದಲ್ಲಿ ನಿಮಗೆ ಉಂಟಾದ ಗೊಂದಲವನ್ನು ಮೇಲಧಿಕಾರಿಗಳಿಗೆ ತಿಳಿಸಿ. ಪರಿಹಾರವನ್ನು ಕಂಡುಕೊಳ್ಳಿ. ತಿಳಿಸದೇ ಇರಬೇಡಿ. ನೀವು ಇತರರನ್ನು ಟೀಕಿಸುವುದನ್ನು ನಿಲ್ಲಿಸಿದರೆ, ಸಂಬಂಧಗಳಿಂದ ಉತ್ತಮ ಪ್ರಯೋಜನವನ್ನು ಪಡೆಯುತ್ತೀರಿ. ಎಲ್ಲವೂ ಸಾಮಾನ್ಯವಾಗಿದ್ದರೂ ಮನಸ್ಸು ನಿರಾಸಕ್ತಿಯಿಂದ ಬಳಲುತ್ತದೆ. ನಿಮ್ಮ ಕಡಿಮೆಯಾಗುವ ಭಯವು ಕಾಡಬಹುದು. ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳುವಿರಿ. ತಂದೆಯ ಮಾತು ನಿಮಗೆ ಸರಿ ಕಾಣಿಸದೇ ಇರುವುದು. ಅದು ನಿಮ್ಮನ್ನು ಹೈರಾಣ ಮಾಡುವುದು. ಗೃಹನಿರ್ಮಾಣದ ದಾಖಲಾತಿಗೆ ನೀವು ಓಡಾಟ ಮಾಡಬೇಕಾಗುವುದು. ಸಾರ್ವಜನಿಕ ಮನ್ನಣೆಯನ್ನು ಗಳಿಸವಿರಿ.

ಧನು ರಾಶಿ: ಇಂದು ನಿಮಗೆ ಯಾರಿಂದಲಾದರೂ ಹಿರಿಯರಿಂದ ದಿವ್ಯಾಶೀರ್ವಾದ ಪ್ರಾಒ್ತವಾಗಲಿದೆ. ಇಂದು, ನಿಮ್ಮ ಸೃಜನಶೀಲ ವ್ಯಕ್ತಿತ್ವವು ಗೊತ್ತಾಗಲಿದೆ. ವಿವಾಹದ ಚಿಂತೆಯು ನಿಮ್ಮನ್ನು ಕಾಡಬಹುದು. ಆಪ್ತರನ್ನು ನೀವು ಕಳೆದುಕೊಳ್ಳುವಿರಿ. ಆಸ್ತಿಯನ್ನು ಭಾಗ ಮಾಡಿಕೊಳ್ಳಲು ನೀವು ಇಂದು ಮುಂದಾಗುವಿರಿ. ಮನೆಯರ ಸಣ್ಣ ಮಾತಿಗೆ ಬೇಸರಿಸಬೇಡಿ. ಕುಟುಂಬದ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಖರ್ಚು ಸಾಧ್ಯ. ನೀವು ಭೌತಿಕ ಸೌಕರ್ಯಗಳನ್ನು ಸಂಗ್ರಹಿಸುವ ಬಗ್ಗೆ ಚಿಂತಿಸುತ್ತೀರಿ. ಸರ್ಕಾರಿ ನೌಕರರು ಇಂದು ಹೆಚ್ಚಿನ ಕೆಲಸದಲ್ಲಿ ತೊಡಗುವರು. ಮನೆಯಲ್ಲಿ ಹಿರಿಯರ ಅನಾರೋಗ್ಯದಿಂದ ಮನಸ್ಸು ವಿಚಲಿತಗೊಳ್ಳುವುದು. ಧಾರ್ಮಿಕ ಕಾರ್ಯಗಳನ್ನು ಮಾಡಲು ಒಲವು ಬರಲಿದೆ. ಕುಟುಂಬದವರು ನಿಮ್ಮನ್ನು ಬಹಳ ಪ್ರೀತಿಸುವರು. ಅವರಿಗೆ ಸ್ವಲ್ಪ ಸಮಯ ಕೊಡಿ. ಹಣವನ್ನು ಉಳಿಸಲು ಪ್ರಯತ್ನಶೀಲರಾಗುವಿರಿ.

ಮಕರ ರಾಶಿ: ನಿಮಗೆ ಇಂದು ದಣಿವಾಗುವ ಸಾಧ್ಯತೆ ಹೆಚ್ಚಿದೆ. ಆದರೆ ನಿಮ್ಮ ಪ್ರೀತಿಪಾತ್ರರ ಮೇಲೆ ಪರಿಣಾಮ ಉಂಟುಮಾಡುವುದು ಬೇಡ. ನಿಮ್ಮ ಕೋಪ ಅನಗತ್ಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟು ಇತರರಿಗೆ ನೋವುಂಟು ಮಾಡುವುದರಿಂದ ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ನೀವು ಇಡೀ ದಿನ ನಿಮ್ಮನ್ನು ನಿಯಂತ್ರಣದಲ್ಲಿರಿಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೀರಿ. ವ್ಯಾಪಾರದಲ್ಲಿ ನೀವು ಹೆಚ್ವು ಲಾಭವನ್ನು ಗಳಿಸಿಸುವಿರಿ. ನಿಮ್ಮ ಮತ್ತು ಸಹೋದರರ ನಡುವೆ ಸಣ್ಣ ವಿರಸು ಏರ್ಪಡಬಹುದು. ಆರ್ಥಿಕತೆಯನ್ನು ಸುಧಾರಿಸಿಕೊಳ್ಳಲು ಪ್ರಯತ್ನಶೀಲರಾಗುವಿರಿ. ಖಾಸಗಿ ಉದ್ಯೋಗಿಗಳನ್ನು ಕೈ ಬಿಡಲು ಸಂಸ್ಥೆ ನಿರ್ಧರಿಸಬಹುದು. ಕಳೆದ ದಿನಗಳನ್ನು ನೀವು ಮೆಲುಕು ಹಾಕಿ ಸಂತೋಷಗೊಳ್ಳುವಿರಿ. ಮಕ್ಕಳಿಂದ‌ ಶುಭವಾರ್ತೆ ಇರಲಿದೆ. ಯಾರನ್ನೂ ಒತ್ತಾಯಿಸದೇ ಕೆಲಸವನ್ನು ಮಾಡಿಸಿಕೊಳ್ಳಿ. ಕೃಷಿಯಲ್ಲಿ ಲಾಭ ಗಳಿಸಬೇಕೆಂದು ನಾನಾ ಪ್ರಯತ್ನವನ್ನು ಮಾಡುವಿರಿ. ಇಂದಿನ ಆದಾಯಕ್ಕೆ ತಕ್ಕಂತೆ ಖರ್ಚೂ ಇರಲಿದೆ.

ಕುಂಭ ರಾಶಿ: ಇಂದು ನೀವು ಅತಿಯಾದ ಒತ್ತಡ ತಂದುಕೊಳ್ಳುವ ಅಗತ್ಯ ಇಲ್ಲ. ನಿಮ್ಮ ಸ್ವಾಮ್ಯತೆಯ ಸ್ವಭಾವ ಮತ್ತು ಕೋಪ ಅನಗತ್ಯ ಜಗಳಗಳಿಗೆ ಕಾರಣವಾಗಬಹುದು. ನೀವು ಆತ್ಮಾವಲೋಕನ ಮಾಡಲು ಆಲೋಚಿಸುತ್ತೀರಿ, ಏಕೆಂದರೆ ಅದೊಂದೇ ನಿಮ್ಮ ಬಹುತೇಕ ಸಮಸ್ಯೆಗಳಿಗೆ ಉತ್ತರ ತಂದುಕೊಡುವ ದಾರಿಯಾಗಿದೆ. ಕೆಲಸದ ಸ್ಥಳದಲ್ಲಿ ನಿಷ್ಠೆಯಿಂದ ಕೆಲಸ ಮಾಡುವಿರಿ. ಕುಟುಂಬದ ಜವಾಬ್ದಾರಿಗಳನ್ನು ಸಮಯಕ್ಕೆ ಪೂರೈಸಲು ಗಮನ ಕೊಡಿ. ಕುಟುಂಬದಲ್ಲಿ ಸಂತೋಷದ ವಾತಾವರಣವು ಇರಲಿದೆ. ಹೊಸ ಸೌಲಭ್ಯಗಳನ್ನು ಪಡೆಯಲು ಖರ್ಚು ಮಾಡುವಿರಿ. ಬರವಣಿಗೆಯ ವಿಚಾರದಲ್ಲಿ ಹೆಚ್ಚು ಮನಸ್ಸನ್ನು ಕೊಡಿ. ಬೇಸರಿಸದೇ ಬಂದುದನ್ನು ಬಂದಂತೆ ಎದುರಿಸವುದು ನಿಮಗೆ ಸ್ವಭಾವಸಿದ್ಧ. ಕಾರ್ಯಕ್ಷೇತ್ರದಲ್ಲಿ, ನೀವು ಬಯಸಿದ ಕೆಲಸವನ್ನು ಮಾಡುವಿರಿ. ನೀವು ಶುಭ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುತ್ತೀರಿ.

ಮೀನ ರಾಶಿ: ಇಂದು ನೀವು ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ನೀವು ಕಠಿಣ ಹೋರಾಟ ನಡೆಸಿದರೂ ಅದು ನಿಮಗೆ ಪೂರಕವಾಗುವುದಿಲ್ಲವಾದ್ದರಿಂದ ಹಾಗೆ ಮಾಡಬೇಡಿ. ವಿಶ್ರಾಂತಿಗೆ ಕೊಂಚ ಸಮಯ ತೆಗೆದುಕೊಳ್ಳಿ ಏಕೆಂದರೆ ನೀವು ಏನೇ ಮಾಡಿದರೂ ವಿಷಯಗಳು ನಿಮ್ಮತ್ತ ಸಾಗಿ ಬರುವುದಿಲ್ಲ. ಸರ್ಕಾರಿ ನೌಕರರಿಗೆ ಅನೇಕ ಕಡೆಗಳಿಂದ‌ ಒತ್ತಡ ಬರಲಿದೆ. ಕೆಲವು ಕೆಲಸಕ್ಕೆ ಕಠಿಣಶ್ರಮದ ಅವಶ್ಯಕತೆ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಪ್ರತಿಭೆಗೆ ಹೆಚ್ಚಿನ ಸ್ಥಾನ ಸಿಗಬಹುದು. ಪ್ರಯತ್ನಿಸಿದ ಕ್ಷೇತ್ರಗಳಲ್ಲಿ ಅಪೇಕ್ಷಿತ ಯಶಸ್ಸನ್ನು ಪಡೆಯದ ಕಾರಣ ಅಸಮಾಧಾನ ಇರಲಿದೆ. ವಾಹನದಿಂದ ಅಪಘಾತವಾಗುವ ಸಾಧ್ಯತೆ. ಸ್ನೇಹಿತರ ಮಾತಿನಿಂದ ವಿದೇಶಕ್ಕೆ ಹೋಗುವ ಆಸೆ ಅತಿಯಾಗುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು. ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು.

ಲೋಹಿತ ಹೆಬ್ಬಾರ್ – 8762924271 (what’s app only)