Daily Horoscope 17 September 2024: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲ ಸಿಗಲಿದೆ

ಸೆಪ್ಟೆಂಬರ್​ 17,​ 2024ರ​​ ನಿಮ್ಮ ಭವಿಷ್ಯ ಹೇಗಿದೆ?: ಮಕ್ಕಳಿಂದ ಕೆಲಸಕ್ಕೆ ಅಡ್ಡಿಯಾಗಲಿದೆ. ಬಂಧುಗಳ ಜೊತೆ ಇಂದು ವಿನಾಕಾರಣ ವಿವಾದವನ್ನು ಮಾಡಿ ಬೇಸರ ತರಿಸುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಫಲಿತಾಂಶವು ಸಂತೋಷವನ್ನು ತರುವುದು. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 17 September 2024: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲ ಸಿಗಲಿದೆ
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲ ಸಿಗಲಿದೆ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Sep 17, 2024 | 12:02 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಧೃತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:31 ಗಂಟೆ, ರಾಹು ಕಾಲ ಮಧ್ಯಾಹ್ನ 03:29 ರಿಂದ 05:00, ಯಮಘಂಡ ಕಾಲ ಬೆಳಿಗ್ಗೆ 09:25 ರಿಂದ 10:56ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:27 ರಿಂದ ಮಧ್ಯಾಹ್ನ 01:58ರ ವರೆಗೆ.

ಮೇಷ ರಾಶಿ: ಅತಿಯಾದ ವಿಶ್ವಾಸವೇ ನಿಮಗೆ ತೊಂದರೆ ಕೊಡಬಹುದು. ನಿಮ್ಮ ಸಹೋದ್ಯೋಗಿಗಳು ನಿಮಗೆ ಅನಿವಾರ್ಯವಾಗಿ ಬಂದ ಸಂಕಟಕ್ಕೆ ಧನಸಹಾಯ ಮಾಡುವರು. ಕಾನೂನಿಗೆ ವಿರುದ್ಧವಾಗಿ ಯಾವುದಾದರೂ ಕಾರ್ಯವನ್ನು ಮಾಡುವ ಆಲೋಚನೆ ಇದ್ದರೆ, ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ. ಉಪಾಯದಿಂದ‌ ಮಾಡುವ ಕೆಲಸಕ್ಕೆ ಶಕ್ತಿಯ ಅವಶ್ಯಕತೆ‌ ಇರದು. ಮಕ್ಕಳಿಂದ ಕೆಲಸಕ್ಕೆ ಅಡ್ಡಿಯಾಗಲಿದೆ. ಬಂಧುಗಳ ಜೊತೆ ಇಂದು ವಿನಾಕಾರಣ ವಿವಾದವನ್ನು ಮಾಡಿ ಬೇಸರ ತರಿಸುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಫಲಿತಾಂಶವು ಸಂತೋಷವನ್ನು ತರುವುದು. ಅಪರಿಚಿತರನ್ನು ನಂಬಿ ಹಣವನ್ನು ಕಳೆದುಕೊಳ್ಳುವಿರಿ. ನಿಮ್ಮ ಸಮಯವು ಇಂದು ವ್ಯರ್ಥವಾದಂತೆ ತೋರುವುದು. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ಅಧಿಕಾರದಲ್ಲಿ ಇದ್ದರೂ ವಿನಯತೆಯು ನಿಮ್ಮನ್ನು ಮೇಲಕ್ಕೆ ಏರಿಸುವುದು. ನಿಮ್ಮನ್ನು ಇಷ್ಟಪಡುವವರಿಗೆ ಅಲ್ಪ ಸಮಯವನ್ನಾದರೂ ಕೊಡುವುದು ಅನಿವಾರ್ಯವಾಗಲಿದೆ.

ವೃಷಭ ರಾಶಿ: ಇಂದು ಇನ್ನೊಬ್ಬರ ಇಂಗಿತವನ್ನು ಅರ್ಥಮಾಡಿಕೊಂಡು ಕಾರ್ಯವನ್ನು ನಿರ್ವಹಿಸಿ. ಸಂಗಾತಿಯ ಜೊತೆಗಿನ ವೈಮನಸ್ಯವನ್ನು ಹೇಗಾದರೂ ಮಾಡಿ ದೂರ ಮಾಡಿಕೊಳ್ಳಬೇಕು. ಇಂದು ನೀವು ವಹಿಸಿಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುವುದು. ಕೋಪದಲ್ಲಿ ಏನನ್ನಾದರೂ ಹೇಳಿ ಮನಸ್ಸನ್ನು ವಿಕಾರಗೊಳಿಸಿಕೊಳ್ಳುವಿರಿ. ನಿಮಗೆ ಬೇಕಾದಾಗ ಬೇಕಾದವರು ಸಿಗದೇಹೋಗಬಹುದು. ಸಂಗಾತಿಯ ಮಾರ್ಗದರ್ಶನದಲ್ಲಿ ನೀವು ಕೆಲವು ಬದಲಾವಣೆಯನ್ನು ಮಾಡಿಕೊಳ್ಳುವಿರಿ. ಧಾರ್ಮಿಕ ಅಲ್ಪ ಆಸಕ್ತಿಯು ಇರಲಿದೆ. ಇಂದಿನ ಘಟನೆಯು ನಿಸ್ಪೃಹತೆಯನ್ನು ಹೆಚ್ಚಿಸುವುದು. ಅಭಾವವೈರಾಗ್ಯವು ನಿಮ್ಮಲ್ಲಿ ಉಂಟಾಗಬಹುದು. ಇಂದಿನ ನಿಮ್ಮ ಕೆಲಸವನ್ನು ಹಂಚಿಕೊಂಡು ಮಾಡಿ. ಇದು ಕಾರ್ಯಕ್ಕೆ ವೇಗವನ್ನು ತಂದುಕೊಡುವುದು. ಯಾರನ್ನೂ ಅವಲಂಬಿಸದೇ ಸ್ವಂತ ಶ್ರಮದಿಂದ ನೀವು ಆಗುವಷ್ಟು ಕೆಲಸವನ್ನು ಮಾಡಿ. ನಿಮ್ಮ ಸಕಾರಾತ್ಮಕ ನಿಲುವು ಹಲವರಿಗೆ ಇಷ್ಟವಾಗುವುದು. ನೀವು ಕೆಲಸದಲ್ಲಿ ಪಾರದರ್ಶಕತೆಯನ್ನು ಹೆಚ್ಚು ಇಷ್ಟಪಡುವಿರಿ. ಕೆಲವು‌ ವಿಚಾರಕ್ಕೆ ದಿಕ್ಕು ತೋಚದೇ ಸುಮ್ಮನಾಗುವಿರಿ.

ಮಿಥುನ ರಾಶಿ: ನೀವಾಗಿಯೇ ಸೃಷ್ಟಿಸಿಕೊಂಡಿದ್ದನ್ನು ಬಿಡುವುದು ಒಳ್ಳೆಯದು. ನಿಮ್ಮ ಜೀವನದಲ್ಲಿ ತಪ್ಪು ತಿಳುವಳಿಕೆಗಳೇ ಹೆಚ್ಚು ತೋರುವುದು. ಉದ್ಯಮಿಗಳಿಗೆ ರಪ್ತು ವ್ಯವಹಾರವು ಬಹಳ ಕಷ್ಟವೆನಿಸಲಿದೆ. ಪಾಲುದಾರಿಕೆಯನ್ನು ಕೈಬಿಡುವುದು ಒಳ್ಳೆಯದು. ನಿಮ್ಮವರನ್ನು ನೀವು ಬಿಟ್ಟುಕೊಡಲಾರಿರಿ. ಸಲ್ಲದ ಮಾತುಗಳ ಮೇಲೆ ನಿಯಂತ್ರಣದ ಅವಶ್ಯಕತೆ ಇರಲಿದೆ. ನೇರ ಮಾತು ಎಲ್ಲರಿಗೂ ಹಿಡಿಸದು. ಮಕ್ಕಳ ವಿಚಾರದಲ್ಲಿ ಕಾಳಜಿಯ ಅವಶ್ಯಕತೆ ಇರಲಿದೆ. ನಿಮ್ಮ ಹಳೆಯ ವಸ್ತುಗಳನ್ನು ಯಾರಿಗಾದರೂ ಕೊಡುವಿರಿ. ಅಸ್ಥಿರವಾದ ಮನಃಸ್ಥಿತಿಯು ಕಾರ್ಯವನ್ನು ಹಾಳುಮಾಡುವುದು. ಪ್ರಯಾಣ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ನಿಮ್ಮ ಆಸೆ ನೆರವೇರುತ್ತಿಲ್ಲ ಎಂಬ ಆತಂಕವೂ ಇರಲಿದೆ. ಯಾವ ವಸ್ತುವನ್ನು ಖರೀದಿಸುವ ಯೋಚನೆಯನ್ನು ಮಾಡಬೇಡಿ. ಹಲವು ದಿನಗಳ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ. ವ್ಯಾಪಾರಸ್ಥರು ಸುಲಭದಲ್ಲಿ ಲಾಭವನ್ನು ಗಳಿಸುವುದು ಕಷ್ಟವಾದೀತು.

ಕರ್ಕಾಟಕ ರಾಶಿ: ಅಪ್ರಬುದ್ಧ ಆಲೋಚನೆಗಳಿಂದ ನಿಮ್ಮ ವ್ಯಕ್ತಿತ್ವ ಗೊತ್ತಾಗುವುದು. ಅವಕಾಶಗಳು ಸಣ್ಣ ಅಂತರದಲ್ಲಿ ಕೈ ತಪ್ಪಿ ಹೋಗುವುದು. ನೀವೇ ಹಾಕಿಕೊಂಡ ಯೋಜನೆಯಲ್ಲಿ ತಪ್ಪುಗಳು ಕಾಣಲಿದ್ದು, ಅದನ್ನು ಬದಲಾಯಿಸಲೂ ಆಗದ ಸ್ಥಿತಿಯು ಬರಲಿದೆ. ಇಂದಿನ ನಿಮ್ಮ‌ ಉತ್ಸಾಹವು ಬಹಳ ಸಂತೋಷದಿಂದ ಭಾಗವಿಸುವಂತೆ ಮಾಡುವುದು. ಹೊಸ ವೃತ್ತಿಯನ್ನು ಹುಡುಕುತ್ತಿದ್ದರೆ ಉತ್ತಮ ವೃತ್ತಿಯು ಸಿಗಬಹುದು. ನಿಮ್ಮ ಬಗ್ಗೆ ನಕಾರಾತ್ಮಕ ಸುದ್ದಿಗಳು ವಿಳಂಬವಾಗಿ ಗೊತ್ತಾಗುವುದಿ. ಸ್ವಂತ ವ್ಯವಹಾರವನ್ನು ಲಾಭದಾಯಕವಾಗಿ ಪರಿವರ್ತಿಸುವಿರಿ. ಕಛೇರಿಯ ವಾತಾವರಣವು ನಿಮಗೆ ಮುಜುಗರವನ್ನು ತಂದೀತು. ಧನ ಸಂಪಾದನೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ. ಮನೆಯ ಬಗ್ಗೆ ಪ್ರೀತಿ ಹೆಚ್ಚಾಗಬಹುದು. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆಯನ್ನು ಬಲದಿಂದ ತಂದುಕೊಳ್ಳಬೇಕು. ಬಂಧುಗಳಿಂದ ಭೂಮಿಯನ್ನು ಖರೀದಿ ಮಾಡುವಿರಿ.

ಸಿಂಹ ರಾಶಿ: ಇಂದು ಯಾರ ಪ್ರಶಂಸೆಯನ್ನೂ ಪೂರ್ಣವಾಗಿ ಒಪ್ಪಿಕೊಳ್ಳಲಾರಿರಿ. ಇಂದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳ ಶ್ರಮ ಸಫಲವಾಗದು. ನೀವು ಇಂದು ಕಾರ್ಯದಲ್ಲಿ ಅನಿರೀಕ್ಷಿತ ಜಯವನ್ನು ಗಳಿಸುವಿರಿ. ಭೂಮಿಯ ದಾಖಲೆಗಳನ್ನು ಸರಿಯಾಗಿ‌ ಪಡೆದುಕೊಂಡು ವ್ಯವಹಾರವನ್ನು ಮುಂದುವಿರಿಸಿ. ಸುಳ್ಳಿನ ಮಾತಿನಿಂದ ನಿಮಗೆ ಅತಿಯಾದ ಕೋಪಬರುವುದು. ನಿಮ್ಮ ನಡವಳಿಕೆಯು ಕೆಲವರಿಗೆ ಇಷ್ಟವಾಗದೇ ಇರುವುದು. ಮಕ್ಕಳು ನಿಮ್ಮ‌ ಮಾತನ್ನೇ ನಿಮಗೆ ಹೇಳುವರು. ನಿಂತಲ್ಲೇ ನಿಲ್ಲುವುದಕ್ಕಿಂತ ನಿಧಾನವಾಗಿಯಾದರೂ ಚಲಿಸುವುದು ಮುಖ್ಯ. ನಿಮ್ಮವರ ಕೆಲವು ಸ್ವಭಾವವು ನಿಮಗೆ ಮೆಚ್ಚುಗೆಯಾಗದು. ನಿಮಗೆ ಸಿಕ್ಕ ಅನಾದರದಿಂದ ಬೇಸರವಾಗಬಹುದು. ಮಕ್ಕಳ ಉದ್ಯಮಕ್ಕೆ ನೀವು ಸಹಾಯ ಮಾಡುವಿರಿ. ದ್ವೇಷದಿಂದ ನಿಮ್ಮ ಜೀವನವು ಮಾರ್ಗಭ್ರಷ್ಟವೂ ಆಗಬಹುದು. ಹಳೆಯದನ್ನೇ ಹೊಸತನ್ನಾಗಿಸಿಕೊಂಡು ಬಳಸುವಿರಿ.

ಕನ್ಯಾ ರಾಶಿ: ಯಾರ ವಿಶ್ವಾಸವನ್ನೂ ವಿಶೇಷವಾಗಿ ಗಳಿಸಲು ಇಷ್ಟವಾಗದು. ಇಂದು ಅಪರಿಚಿತರು ಮಾರಾಟದ ವಿಚಾರದಲ್ಲಿ ಮೋಸ ಮಾಡುವರು. ಬಂಧುಗಳು ನಿಮ್ಮ ಸಹಾಯವನ್ನು ಬಯಸುವರು. ಆಸ್ತಿಯ ವಿಚಾರವಾಗಿ ನೀವು ಕಾನೂನು ಹೋರಾಟವನ್ನು ಮಾಡಲಿದ್ದೀರಿ. ಕಲಾವಿದರು ತಮ್ಮ‌‌ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ. ನಿಮ್ಮ ಮಾತುಗಳು ತಪ್ಪಾಗಿ ಪ್ರಸಾರವಾಗಬಹುದು. ವಿವಾದವಾಗುವ ಹೇಳಿಕೆಯನ್ನು ನೀಡಬೇಡಿ. ನಿತ್ಯ ಬಳಕೆಯ ವಸ್ತುವಿನ ವ್ಯಾಪಾರದಿಂದ ಲಾಭವಾದೀತು. ಸಂಗಾತಿಯ ಬಯಕೆಯನ್ನು ಈಡೇರಿಸಿ ಸಂತೋಷಪಡಿಸುವಿರಿ. ನಿಮ್ಮ ಬೆಳವಣಿಗೆಯನ್ನು ಬಂಧುಗಳು ಕಂಡು ಇಷ್ಟಪಡುವರು. ಎಲ್ಲದಕ್ಕೂ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತ ಯಾವ ಕಾರ್ಯವನ್ನೂ ಸಫಲ ಮಾಡಲಾಗದು. ನಿಮ್ಮ ಕೆಲಸದ ಬಗ್ಗೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಹಕಾರ ಲಭ್ಯ. ಕೆಲವು ಕಾರ್ಯಗಳು ಬೇಡವೆಂದರೂ ನಿಮ್ಮನ್ನು ಸುತ್ತಿಕೊಳ್ಳುವುವು.

ತುಲಾ ರಾಶಿ: ಸರ್ಕಾರಿ ಉದ್ಯೋಗಿಗಳು ಸವಲತ್ತುಗಳನ್ನು ಕೇಳಿ ಪಡೆಯುವರು. ಸಾಂಸಾರಿಕ ಬದುಕಿನಲ್ಲಿ ಇಂದು ಸಣ್ಣಪುಟ್ಟ ಕಲಹಗಳಿದ್ದರೂ ತೂಗಿಸಿಕೊಂಡು ಹೋಗುವ ಸಾಮರ್ಥ್ಯ ಇರುವುದು. ದಾಯಾದಿ ಕಲಹವು ತಾರಕಕ್ಕೆ ಹೋಗಲಿದೆ. ನಿಮಗೆ ಬೆಂಬಲವು ಕಡಿಮೆ ಆಗಲಿದೆ. ಕಛೇರಿಯಲ್ಲಿ ನಿಮ್ಮ ಕೆಲಸವು ಮಂದಗತಿಯಲ್ಲಿ ಸಾಗಲಿದ್ದು ಸಹೋದ್ಯೋಗಿಗಳಿಂದ ದೂರು ಸಿಗಬಹುದು. ಯಾವ ವಿಚಾರದಲ್ಲಿಯೂ ನಿರೀಕ್ಷಿತ ಗುರಿ ತಲುಪಲಾಹದು. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿ ಇರಲಿದೆ. ಎಂದೋ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವ ಸಿಗಿವ ಸಂಭವಿದೆ. ಹಠದ ಸ್ವಭಾವವನ್ನು ಬಿಟ್ಟರೆ ಸಂತೋಷದ ಸಂಗತಿಗಳನ್ನು ನೀವು ಪಡೆಯುವಿರಿ. ನಿಮ್ಮ ಪ್ರಯತ್ನವು ಫಲಿಸುವ ತನಕ ಸಹನೆ ಅತ್ಯವಶ್ಯಕ. ಪುಣ್ಯಕ್ಷೇತ್ರಕ್ಕೆ ಕುಟುಂಬ ಜೊತೆ ಹೋಗಲಿದ್ದೀರಿ. ನಡೆದಾಡುವಾಗ ಜಾಗರೂಕತೆ ಇರಲಿ. ನಿಮ್ಮ ಶ್ರದ್ಧೆಗೆ ಭಂಗಬರುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ: ಆದಾಯ ಮತ್ತು ಖರ್ಚನ್ನು ಸಮವಾಗಿ ತೂಗಿಸಿಕೊಂಡರೆ ಸ್ವಲ್ಪಮಟ್ಟಿನ ಚಿಂತೆ ದೂರಾಗುವುದು. ಎಂತಹ ಆಪ್ತರಾದರೂ ಸಹಕಾರವನ್ನು ಕೇಳುವಾಗ ಹಿಂದೇಟು ಹಾಕುವಿರಿ. ನಿಮ್ಮ ಆಸೆಯನ್ನು ಪ್ರಕಟಪಡಿಸಲು ಹಿಂಜರಿಯಬಹುದು. ಸಂಗಾತಿಗೆ ಸಿಟ್ಟು ಬರುವಂತೆ ನೀವು ಉದ್ದೇಶಪೂರ್ವಕವಾಗಿ ವರ್ತಿಸುವಿರಿ. ವಿದ್ಯೆಯನ್ನು ಇನ್ನಷ್ಟು ಪಡೆಯುವ ಆಸೆ ಇರುವುದು. ದ್ವೇಷವು ನಿಮ್ಮ‌ ಜೀವನವನ್ನು ಮಾರ್ಗಭ್ರಷ್ಟ ಮಾಡಬಹುದು. ಧನಾತ್ಮಕ ಚಿಂತನೆಯಿಂದ ಉತ್ಸಾಹವೂ ಇರಲಿದೆ. ಧೈರ್ಯದ ಕೊರತೆಯು ಕಾಣಿಸುವುದು. ಮುಖಂಡರ ಜೊತೆ ನೀವು ಸಾಮಾಜಿಕ‌ ಕಾರ್ಯಗಳ‌ ಬಗ್ಗೆ ಚರ್ಚಿಸುವಿರಿ. ಭೂಮಿಗೆ ಸಂಬಂಧಿಸಿದಂತೆ ಕೆಲವು ಮಾರ್ಪಾಡಿನಿಂದ ಅನುಕೂಲವಾಗಲಿದೆ. ಕಛೇರಿಯಲ್ಲಿ ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ಗಮನವಿರುವುದು. ಒತ್ತಡವಿಲ್ಲದೇ ಇಂದಿನ‌ ವಹಿವಾಟನ್ನು ಮಾಡಿಮುಗಿಸುವಿರಿ.

ಧನು ರಾಶಿ: ಅನಿರ್ದಿಷ್ಟ ಅವಧಿಯವರೆಗೆ ಉದ್ಯೋಗದ ಕಾರಣಕ್ಕೆ ಓಡಾಟ ಮಾಡುವಿರಿ. ಇಂದು ನಿಮಗೆ ಹಳೆಯ ಘಟನೆಗಳಿಂದ ಪಾಪಪ್ರಜ್ಞೆ ಕಾಡಬಹುದು. ಪ್ರೇಮದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಮುಂದುವರಿಯುವುದು ಉತ್ತಮ. ಶತ್ರುಗಳಿಂದ‌ ತೊಂದರೆಯಾಗಬಹುದು. ಹೆಚ್ಚು ಪ್ರಯತ್ನದಿಂದ ಸ್ವಲ್ಪ ಫಲವನ್ನು ಪಡೆಯುವಿರಿ. ಅವಕಾಶದ ಕೊರತೆಯಿಂದ‌ ದುಃಖಿಸುವಿರಿ. ನಿಮ್ಮ ಧೈರ್ಯವು ಕ್ಷಣಿಕದ್ದು ಮಾತ್ರ. ನಿಮ್ಮ ಕಲ್ಪನೆಯಂತೆ ಎಲ್ಲವೂ ಆಗದು. ಯೋಜನೆಯನ್ನು ಮಾಡುವಾಗ ಸರಿಯಾಗಿ ಇರಲಿ. ಉದ್ವೇಗದಿಂದ ಏನನ್ನಾದರೂ ಹೇಳುವಿರಿ. ಒತ್ತಡಕ್ಕೆ ಅವಕಾಶವನ್ನು ಕೊಡದೇ ನೀವು ನೆಮ್ಮದಿಯಿಂದ‌ ಇರುವಿರಿ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ನೀವೇ ನಿಮ್ಮವರನ್ನು ಮೂದಲಿಸುವಿರಿ. ವರ್ಗಾವಣೆಯ ಕಿರಿಕಿರಿ‌ ನಿಮ್ಮ ತಲೆಯಲ್ಲಿ ಇರಲಿದೆ‌. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಅನಿವಾರ್ಯವಾಗಿ ಸಿಕ್ಕ ಜವಾಬ್ದಾರಿಯನ್ನು ನಿಭಾಯಿಸುವುದು ಕಷ್ಟ.

ಮಕರ ರಾಶಿ; ಮನೆ ಹಾಗೂ ಉದ್ಯೋಗದ ನಡುವೆ ಸರಿಯಾದ ಹೊಂದಾಣಿಕೆ ಕಷ್ಟ. ಇಂದು ನಿಮ್ಮ ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದಂತೆ ಅಂತಿಮ‌ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ನಿಮ್ಮ ಕಾರ್ಯವನ್ನು ಪರಿಶೀಲಿಸಲು ಉನ್ನತ ಅಧಿಕಾರಿಗಳು ಬರಲಿದ್ದಾರೆ. ಪ್ರಶಂಸೆಯೂ ಸಿಗುವ ಸಾಧ್ಯತೆ ಇದೆ‌‌. ತಾಯಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎನ್ನುವ ಸದ್ಭಾವ ಬರುವುದು. ನಿಮ್ಮ‌ ಮೇಲೂ ನಿಮ್ಮವರ ಮೇಲೆ ನಂಬಿಕೆ ಇರಲಿ. ನಿಮ್ಮ ಪಾಲಿಗೆ ಬಂದಿದ್ದನ್ನು ಖುಷಿಯಿಂದ‌ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ‌ ಗೊಂದಲವನ್ನು ಮಾಡಿಕೊಂಡು ಹಣವನ್ನು ಕಳೆದುಕೊಳ್ಳುವಿರಿ. ನೀವು ಉನ್ನತ ಸ್ಥಾನದ ಆಕಾಂಕ್ಷಿಗಳೂ ಆಗಿರುವಿರಿ. ಗುಪ್ತವಾದ ಧನವನ್ನು ಮತ್ತಷ್ಟು ಜೋಪಾನ ಮಾಡುವಿರಿ. ಸ್ವಂತ ಉದ್ಯಮಿಗಳಿಗೆ ಕಾರ್ಮಿಕರ‌ ಕೊರತೆ ಆಗುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ.

ಕುಂಭ ರಾಶಿ; ಚರಾಸ್ತಿಯನ್ನು ನೀವು ಬಿಡಬೇಕಾಗುತ್ತದೆ. ಇಂದು ನಿಮ್ಮ ಮನಸ್ಸು ಅನೇಕರ ಸಲಹೆಗಳ ಕಾರಣದಿಂದ ಬಹಳ ಚಂಚಲವಾಗಿರಲಿದೆ. ನಿಮ್ಮ ಉದ್ಯೋಗದ ಕನಸು ನನಸಾಗಲಿದೆ. ಅಶಿಸ್ತಿನ ವ್ಯವಸ್ಥೆಯು ನಿಮಗೆ ಬೇಸರ ತರಿಸಬಹುದು. ವಿದೇಶದ ಕನಸು ಅಂಕುರಿಸಬಹುದು. ಸಹೋದರಿಯರಿಗೆ ಏನನ್ನಾದರೂ ನೀಡುವಿರಿ. ನಿಮ್ಮ ಸಲಾರಾತ್ಮಕ ನಿಲುವು ಇಷ್ಟವಾಗುವುದು. ಕೆಲಸದಲ್ಲಿ ಪಾರದರ್ಶಕತೆಯನ್ನು ಇಷ್ಟಪಡುವಿರಿ. ಇಂದು ಎಂದಿಗಿಂತ ಹೆಚ್ಚು ಕಾರ್ಯವಾಗಲಿದೆ. ವ್ಯಾಪಾರವನ್ನು ವಿನಮ್ರತೆಯಿಂದ‌ ಮಾಡಿ. ಆದಾಯವು ಹೆಚ್ಚಾಗಬಹುದು. ನಿಮಗೆ ಇಷ್ಟವಾದ ಕೊಡುಗೆಯು ಲಭ್ಯವಾಗಲಿದೆ. ಪ್ರಭಾವೀ ಪದವಿಯಲ್ಲಿ ಇರುವವರನ್ನು ನೀವು ಭೇಟಿಯಾಗುವಿರಿ. ಆರೋಗ್ಯವಾಗಿರಲು, ನೀವು ಅಸಂಬದ್ಧ ಚಿಂತೆಗಳಿಂದಲೂ ದೂರವಿರಬೇಕು. ಹೆಸರು ಮಾಡುವ ಭ್ರಮೆಯು ತಲೆಗೆ ಬರುವುದು.

ಮೀನ ರಾಶಿ: ರಾಜಕೀಯ ಬಲದಿಂದ ಇಂದು ಕಾರ್ಯಗಳು ಸಿದ್ಧಿಸುವುದು. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಸಹಕಾರ ಸಿಗಲಿದೆ. ನಿಮ್ಮ ಪ್ರಯತ್ನಕ್ಕೆ ಅದೃಷ್ಟವೂ ಜೊತೆಯಾಗುವುದು. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ನಿಮ್ಮ ಶತ್ರುಗಳಿಂದ ಕೆಲವು ಅವಕಾಶಗಳು ತಪ್ಪುವುದು. ವಿವಾಹಕ್ಕೆ ಬೇಕಾದ ತಯಾರಿಯನ್ನು ನೀವು ಮಾಡಿಕೊಳ್ಳುವಿರಿ. ವಿರೋಧಿಗಳು ನಿಮ್ಮ ಬಗ್ಗೆ ಮಾತನಾಡಿಕೊಳ್ಳಬಹುದು. ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ನಿಮ್ಮನ್ನು ಅರ್ಥಮಾಡಿಕೊಳ್ಳುವವರ ಬಗ್ಗೆ ನಿಮಗೆ ಒಲವು ಹೆಚ್ಚಾಗಲಿದೆ. ಕಛೇರಿಯಲ್ಲಿ ಉಂಟಾದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನೀವು ಯತ್ನಿಸಬಹುದು. ನ್ಯಾಯಪರತೆಯಿಂದ ಇರುವುದನ್ನು ಇಷ್ಟಪಡುವರು. ನಿಮ್ಮ ಆಲೋಚನೆಗಳು ಸರಿಯಾದ ದಿಕ್ಕಿನಲ್ಲಿ ಇರಲಿ. ಕಾನೂನಿಗೆ ವಿರುದ್ಧವಾಗಿ ಕಾರ್ಯವನ್ನು ಮಾಡುವ ಆಲೋಚನೆಯನ್ನು ಮಾಡುವುದಿದ್ದರೆ ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ.

ಲೋಹಿತ ಹೆಬ್ಬಾರ್-8762924271 (what’s app only)

ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ