AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರ ಸ್ಥಾನ ಪರಿಶ್ರಮದಿಂದ ಮೇಲೇರುವ ಸಾಧ್ಯತೆ ಇದೆ

Daily Horoscope, 26 March 2026: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ಅಷ್ಟಮೀ ತಿಥಿಯ ಗುರುವಾರದಂದು ಪರರಿಂದ ನಿಂದನೆ, ಕಲಾಸಕ್ತಿ, ಹಣದ ನಿರೀಕ್ಷೆ, ಅನಧಿಕೃತ ವಿಚಾರಗಳ ಚರ್ಚೆ, ಹಿರಿಯರ ಮಾರ್ಗದರ್ಶನ, ಆಕಸ್ಮಿಕ ವಾರ್ತೆಯಿಂದ ಅಸಮಾಧಾನ ಇವೆಲ್ಲ ಈ ದಿನದ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರ ಸ್ಥಾನ ಪರಿಶ್ರಮದಿಂದ ಮೇಲೇರುವ ಸಾಧ್ಯತೆ ಇದೆ
ಸಾಂದರ್ಭಿಕ ಚಿತ್ರ Image Credit source: pinterest
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Mar 26, 2026 | 1:48 AM

Share

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಸೌಭಾಗ್ಯ, ಕರಣ : ವಣಿಜ, ಸೂರ್ಯೋದಯ – 06 – 25 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:01 – 15:32 ಯಮಗಂಡ ಕಾಲ 09:26 – 07:57, ಗುಳಿಕ ಕಾಲ 09:28 – 10:59

ಮೇಷ ರಾಶಿ :

ನೀವು ತೆಗೆದುಕೊಳ್ಳುವ ನಿರ್ಣಯವು ಪೂರ್ಣ ಬೆಂಬಲದಿಂದ ಕೂಡಿರದು. ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸನ್ನು ಕೆಡಿಸುವುದು. ಅಸಾಧ್ಯವಾದುದನ್ನು ಸಾಧಿಸುವ ಭ್ರಮೆಯಿಂದ ಹೊರಬನ್ನಿ. ಅಹಂಕಾರ ಸುಳಿಯುವ ಸಾಧ್ಯತೆ ಇದೆ. ನೀವು ಇಂದು ಅಸಹಾಯಕರಂತೆ ತೋರುವಿರಿ. ಆರ್ಥಿಕವಾಗಿ ಸಬಲರಾಗಲು ವಿವಿಧ ಆರ್ಥಿಕ ಮೂಲವನ್ನು ಅನ್ವೇಷಿಸಬೇಕಾದೀತು. ಮಕ್ಕಳ‌ ವಿವಾಹ ಕಾರ್ಯದಲ್ಲಿ ನೀವು ಮಗ್ನರಾಗುವಿರಿ. ಮಾತನ್ನು ಚೆನ್ನಾಗಿ ಇಟ್ಟುಕೊಂಡು ವ್ಯವಹಾರವನ್ನು ಮುನ್ನಡೆಸುವಿರಿ.

ವೃಷಭ ರಾಶಿ :

ಕೃತಜ್ಞತೆಯನ್ನು ಬೆಳೆಸಿಕೊಳ್ಳುವುದು ನಿಮ್ಮ ವ್ಯಕ್ತಿತ್ವವನ್ನು ಬದಲಿಸಬಹುದು. ಪ್ರೇಮದಲ್ಲಿ ಹಿನ್ನಡೆಯಾಗಲಿದೆ. ತಾಳ್ಮೆಯಿಂದ ಮುಖ್ಯ ಆಯುಧವಾಗಿರಲಿ. ವಿದೇಶದ ಕನಸು ಸದ್ಯ ಸಾಕಾರವಾಗದು. ವ್ಯಾಪಾರಸ್ಥರಿಗೆ ಸ್ವಲ್ಪ ಆಲಸ್ಯವು ಇರುವುದು. ಉನ್ನತ ಅಭ್ಯಾಸದಿಂದ ಹಿಂದೇಟುಹಾಕುವ ಸ್ಥಿತಿ ಬರಬಹುದು. ನಿಮ್ಮ ಆಸೆಗಳನ್ನು ಇನ್ನೊಬ್ಬರ ಜೊತೆ ಹೇಳಿಕೊಂಡು ಸಮಾಧಾನ ಪಡುವಿರಿ. ತುರ್ತು ಅವಶ್ಯಕತೆ ಇರುವುದು. ಇನ್ನೊಬ್ಬರ ಯೋಜನೆಯನ್ನು ನಿಮ್ಮದೆಂದು ಸಾಧಿಸುವಿರಿ.‌

ಮಿಥುನ ರಾಶಿ :

ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಇರುವುದು. ವಿದ್ಯಾರ್ಥಿಗಳು ಅನಾರೋಗ್ಯದಿಂದ ವಿಶ್ರಾಂತಿ ಪಡೆಯಬೇಕಾಗಬಹುದು. ಅಧಿಕಾರಕ್ಕಾಗಿ ಯಾರನ್ನೂ ವಂಚಿಸಬಹುದು. ಸರಿಯಾದ ಹಂಚಿಕೊಂಡು ಕೆಲಸವನ್ನು ಮಾಡುವುದು ಸೂಕ್ತ. ಕಛೇರಿಯ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ. ವೇತನವನ್ನು ಹೆಚ್ಚಿಸಿಕೊಳ್ಳಲು ಅನ್ಯ ಮಾರ್ಗವನ್ನು ಹುಡುಕುವ ಅವಶ್ಯಕತೆ ಬರಬಹುದು. ಅಪರಿಚಿತರ ಜೊತೆ ಮಾತನಾಡಲು ಬಹಳ ಹಿಂಜರಿಕೆ ಇರುವುದು.

ಕರ್ಕಾಟಕ ರಾಶಿ :

ಅವಶ್ಯಕತೆ ಇರುವವರಿಗೆ ಬೇಕಾದ ಸಹಾಯವನ್ನು ಮಾಡಿ. ಇಂದಿನ ಕೆಲವು ಮಾತುಗಳು ನಿಮಗೆ ಇಷ್ಟವಾಗದೇ ಹೋಗುವುದು. ಕೆಲವು ವಿಚಾರದಲ್ಲಿ ನೀವು ಆತುರರಾಗುವಿರಿ. ಮನೆಯ ಖರೀದಿಯ ಬಗ್ಗೆ ಉತ್ಸಾಹ ತೋರುವಿರಿ. ಬೇಡದ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡುವಿರಿ. ಮನೆಯ ವಾತಾರಣದಲ್ಲಿ ಇರಲು ಖುಷಿಯಾಗುವುದು.‌ ನಿಮ್ಮ ರಹಸ್ಯವನ್ನು ನೀವು ಗೊತ್ತಿಲ್ಲದೇ ಬೇರೆಯವರ ಜೊತೆ ಹಂಚಿಕೊಳ್ಳುವಿರಿ.

ಸಿಂಹ ರಾಶಿ :

ಊಹಿಸದೇ ಇರುವ ಕಡೆಯಿಂದ ನಿಮಗೆ ಬೇಕು ಎನಿಸಿದ ಸಂಪತ್ತು ದೊರೆಯುವುದು. ಸರ್ಕಾರೀ ಮೂಲದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಇದು ನಿಮಗೆ ಇಂದಿನ ಅಚ್ಚರಿಯ ವಿಚಾರವೇ ಆಗಲಿದೆ. ಉದ್ಯೋಗದಲ್ಲಿ ಹೆಚ್ಚುಗಾರಿಕೆ ಇರುವುದು. ತಾಳ್ಮೆಯಿಂದ ಕಾರ್ಯವನ್ನು ಮಾಡಿ. ನೂತನ‌ ಸ್ನೇಹವನ್ನು ಬೆಳೆಸಿಕೊಳ್ಳುವಿರಿ. ಆಕರ್ಷಕ ಮಾತಿಗೆ ಮನಸೋತು ಪ್ರೀತಿಯಲ್ಲಿ ಬೀಳುವಿರಿ. ನಿಮ್ಮನ್ನು ಅಧಿಕಾರದಲ್ಲಿ ಕುಳ್ಳಿರಿಸಲು ಮೇಲಧಿಕಾರಿಗಳು ಕಾಯುವರು.

ಕನ್ಯಾ ರಾಶಿ :

ಮುಖವನ್ನು ಗಂಟು ಹಾಕಿಕೊಂಡು ಇರುವುದರಿಂದ ನಿಮ್ಮಿಂದ ಜನರನ್ನು ದೂರವಿರಿಸುವುದು. ಅತಿಯಾದ ಆಡಂಬರವು ನಿಮಗೆ ಇಷ್ಟವಾಗದು. ಬೇಡವೆನಿಸಿದವರನ್ನು ನಿಧಾನವಾಗಿ ಗೊತ್ತಾಗದಂತೆ ಪಕ್ಕಕ್ಕೆ ಸರಿಸುವಿರಿ. ನಿಮ್ಮಲ್ಲಿರುವ ಅಲ್ಪ ಹಣವನ್ನು ಸೇರಿಸಿ ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ. ಉದ್ಯೋಗಕ್ಕೆ ವಿರಾಮ ಹೇಳಿ ಹೊರಗೆ ಸುತ್ತಾಟವನ್ನು ಮಾಡುವಿರಿ. ಎಲ್ಲ ಕಾರ್ಯವನ್ನೂ ನೀವೇ ಮಾಡಬೇಕು ಎಂಬ ಹೆಬ್ಬಯಕೆ ಬೇಡ. ಸಂತೋಷಕೂಟಕ್ಕೆ ಹಣವನ್ನು ಖರ್ಚು ಮಾಡಬೇಕಾದೀತು.

ತುಲಾ ರಾಶಿ :

ಇಂದು ನೀವು ತೋರಿಕೆಗೆ ಬಹಳ ಶಾಂತರಂತೆ ಕಂಡರೂ ಒಳಗೇ ಜ್ವಾಲಗ್ನಿಯಂತೆ ಕುದಿಯುವಿರಿ. ಎಲ್ಲ ವಿಚಾರದಲ್ಲಿಯೂ ಅಸಮಾಧನವು ಇರಲಿದೆ. ಪರರ ಅವಕಾಶವನ್ನು ನೋಡಿ ಮನಸ್ಸಿನಲ್ಲಿ ಸಂಕಟ. ಅತಿಯಾದ ಒತ್ತಡವು ನಿಮ್ಮ ದಕ್ಷತೆಯನ್ನು ಕಡಿಮೆ‌ ಮಾಡುವುದು. ಒಂದೇ ಕೆಲಸದಲ್ಲಿ ಮಗ್ನರಾಗಿ ಮಾಡಬೇಕಾದ ಕೆಲವು ಕೆಲಸವನ್ನು ಮರೆಯುವಿರಿ. ಇಂದು ಖರೀದಿಸಿದ ಹೊಸ ವಸ್ತುಗಳು ನಿಮಗೆ ಬಹಳ ಖುಷಿಯನ್ನು ಕೊಡುವುದು. ವೃತ್ತಿಯಲ್ಲಿ ನಿಮ್ಮನ್ನು ಗುರುತಿಸಿರುವುದು ಮನಸ್ಸನ್ನು ಹಿಗ್ಗಿಸಿರುವುದು.

ವೃಶ್ಚಿಕ ರಾಶಿ :

ನಿಮ್ಮ ಕಾರ್ಯಕ್ಷಮತೆ ಕಡಿಮೆಯಾದಂತೆ ತೋರುವುದು. ಯಾವ ಹೊಸತನ್ನೂ ಸ್ವೀಕರಿಸುವ ಮಾನಸಿಕತೆ ಇಂದು ಇರದು. ಎಲ್ಲ ವಿಚಾರಕ್ಕೂ ನಿಮ್ಮ ಮೌನಮುದ್ರೆಯು ಒತ್ತಿರುವುದು. ಹೂಡಿಕೆಯನ್ನು ಹಿಂಪಡೆಯುವ ಸಾಧಿಸುವಿರಿ ಇದೆ. ವೈಯಕ್ತಿಕ ವಿಚಾರಕ್ಕೆ ಯಾರನ್ನೂ ಸೇರಿಸಿಕೊಳ್ಳಲು ಬಯಸುವುದಿಲ್ಲ. ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆ ಸ್ಪಂದನ ಇರದು. ಅಶುಭವಾದ ಕೆಲಸಕ್ಕೆ ಗೊತ್ತಿಲ್ಲದೇ ನೀವು ಹಣವನ್ನು ನೀಡುವಿರಿ.

ಧನು ರಾಶಿ :

ದುಡುಕಿನಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಉದ್ಯಮಕ್ಕೆ ಸಂಬಂಧಿಸಿದ ಸರಿಯಾದ ನಿರ್ಧಾರವನ್ನು ಯಾರಿಂದಲಾದರೂ ಪಡಡಸುಕೊಳ್ಳಿ. ನಿಮ್ಮ ಚಾಂಚಲ್ಯದ ಸ್ಥಿತಿಗೆ ಸಿಟ್ಟಾಗಬಹುದು. ಸ್ವತಂತ್ರವಾದ ಆಲೋಚನೆಯು ಇಲ್ಲದೇ ಹೋದರೆ ಕಷ್ಟವಾದೀತು‌‌. ಕಛೇರಿಯಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚುಗೆ ಉಂಟಾಗಲಿದೆ‌. ಹಣಕಾಸಿನ ವ್ಯವಹಾರದಲ್ಲಿ ಹಿನ್ನಡೆ ಉಂಟಾಗಬಹುದು.

ಮಕರ ರಾಶಿ :

ಪತ್ರವ್ಯವಹಾರವು ಸಂಪೂರ್ಣ ಪ್ರಾಮಾಣಿಕವಾಗಿ ಇರದು ಎಂಬುದು ಗಮನದಲ್ಲಿ ಇರಲಿ. ನಿಮ್ಮ ಉದ್ಯೋಗವನ್ನು ನೀವು ಪ್ರೀತಿಸುವಿರಿ. ಕೇಳಿಕೊಂಡು ಬಂದವರಿಗೆ ನಿಮ್ಮಿಂದ ಅಲ್ಪ ಸಹಾಯ ಸಿಗುವುದು. ಕುಟುಂಬದ ಜವಾಬ್ದಾರಿಯನ್ನು ಸಂಗಾತಿ ನೋಡಿಕೊಳ್ಳುವಂತೆ ಮಾಡುವಿರಿ. ಭೋಗವಸ್ತುಗಳನ್ನು ಖರೀದಿ ಮಾಡುವಿರಿ. ಇವತ್ತಿಗೆ ತುರ್ತಾಗಿ ಬೇಕಾದುದನ್ನು ಸ್ನೇಹಿತರಿಂದ ಪಡೆದುಕೊಳ್ಳುವಿರಿ. ಪಕ್ಷಪಾತ ಮಾಡದೇ ಎಲ್ಲರನ್ನೂ ಸಮಾನ ಭಾವನೆಯಿಂದ ಕಾಣುವ ಪ್ರಯತ್ನ ಮಾಡಿ.

ಕುಂಭ ರಾಶಿ :

ಇಂದು ಬಂಧುಗಳಿಂದ ನೀವು ದೂರವಾಗುವಿರಿ. ಸದಾ ಅನ್ಯರ ಬಗ್ಗೆ ಆಲೋಚನೆ ಮಾಡುವುದನ್ನು ಬಿಡಿ. ನೆರೆ ಹೊರೆಯವರ ವಿಚಾರದಲ್ಲಿ ಸಣ್ಣ ಅಸಮಾಧಾನ ಇರಲಿದೆ. ದೇಹಕ್ಕೆ ತೊಂದರೆ ಮಾಡಿಕೊಳ್ಳುವ ಸನ್ನಿವೇಶವಿರಲಿದೆ. ಮನೆಯ ಬದಲಾವಣೆಯನ್ನು ಮಾಡುವಿರಿ. ನಿಮ್ಮ ನಡಿಗೆಯೇ ವಿಶ್ವಾಸದಿಂದ ಇರುವುದನ್ನು ಹೇಳುತ್ತದೆ. ಇದರಿಂದ ಅಪಮಾನವು ಆಗುವುದು. ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಮಸ್ಯೆಯಾಗಬಹುದು. ಇಂದು ಭಯವು ಕಾಡಲಿದ್ದು ಮನೆಯನ್ನು ಬಿಟ್ಟು ಹೋಗಲಾರಿರಿ.

ಮೀನ ರಾಶಿ :

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆ ಆಗಲಿದ್ದು ಮನಸ್ಸು ಪ್ರೇಮದ ಕಾರಣಕ್ಕೆ ವಿಚಲಿತವಾಗಬಹುದು. ಮಿತ್ರರು ನಿಮಗೆ ಸಹಕಾರ ನೀಡಲಾರರು. ಸಾಲ ಮಾಡುವ ಸಂದರ್ಭವನ್ನು ತಂದುಕೊಳ್ಳುವುದು ಬೇಡ. ವಿದ್ಯಾರ್ಥಿಗಳ ಕ್ರಿಯಾಶೀಲ ವ್ಯಕ್ತಿತ್ವದಿಂದ ಎಲ್ಲರ ಗಮನವನ್ನು ಸೆಳೆಯುವರು‌. ಇಂದಿನ ಹೂಡಕೆಯು ಲಾಭದಾಯಕವಾಗಿರುವುದು. ನಿಮ್ಮ ಕೆಲಸವನ್ನು ಸರಿ ಮಾಡಿಕೊಂಡು ಹೋಗುವಿರಿ. ಅತಿಯಾದ ಕಾರ್ಯಗಳಿಂದ ಏಕಾಂಗಿಯಾಗಿ ಇರಬೇಕು ಎಂದು ಅನ್ನಿಸಬಹುದು.

-ಲೋಹಿತ ಹೆಬ್ಬಾರ್-8762924271 (what’s app only)

Follow Us