Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 12ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 12ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 12ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಚಿನ್ನದ ಒಡವೆ ಅಥವಾ ಚಿನ್ನದ ನಾಣ್ಯಗಳನ್ನು ಖರೀದಿಸುವಂತಹ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ನಿಮ್ಮ ಸಂಬಂಧಿಗಳಿಗೆ ಹಣಕಾಸಿನ ಅಗತ್ಯ ಕಂಡುಬಂದು, ನೀವು ಸಾಲ ಮಾಡಿ ಅವರಿಗೆ ನೀಡಲಿದ್ದೀರಿ. ನಿಮಗೆ ಈಗಾಗಲೇ ಸೈಟ್ ಇದೆ ಅಂತಾದರೆ ಅಲ್ಲಿ ಮನೆ ಕಟ್ಟುವ ಬಗ್ಗೆ ಕುಟುಂಬ ಸದಸ್ಯರ ಜೊತೆಗೆ ಚರ್ಚೆ ನಡೆಸಲಿದ್ದೀರಿ. ಯಾರು ದಿನಸಿ ಪದಾರ್ಥಗಳ ಮಾರಾಟ ವ್ಯವಹಾರದಲ್ಲಿ ಇದ್ದೀರೋ ಅಂಥವರಿಗೆ ಆದಾಯದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡು ಬರಲಿದೆ. ದೊಡ್ಡ ಖರ್ಚುಗಳಿಗೆ ಹೂಂ ಎನ್ನುವ ಮುಂಚೆ ಅಷ್ಟು ಮೊತ್ತವನ್ನು ನಿಮಗೆ ಹೊಂದಿಸುವುದಕ್ಕೆ ಸಾಧ್ಯವೇ ಎಂಬುದರ ಬಗ್ಗೆ ಒಂದಕ್ಕೆ ನಾಲ್ಕು ಬಾರಿ ಯೋಚಿಸುವುದು ಒಳ್ಳೆಯದು.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಸ್ನೇಹಿತರು, ಸಂಬಂಧಿಕರು ಮನೆಗೆ ಬರುವುದರಿಂದ ಸಂತಸದ ವಾತಾವರಣ ಇರಲಿದೆ. ಬಹಳ ಇಷ್ಟಪಟ್ಟು ಮನೆಗೆ ತಂದಿದ್ದ ಎಲೆಕ್ಟ್ರಾನಿಕ್ ಅಥವಾ ಎಲೆಕ್ಟ್ರಿಕಲ್ ಉಪಕರಣಗಳನ್ನು ಹಿಂತಿರುಗಿಸಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮ ಯಾವುದೇ ಕಷ್ಟಕ್ಕೆ ನಾವು ಆಗುತ್ತೇವೆ ಎಂದು ಹೇಳಿದ ಸ್ನೇಹಿತರು ಅಥವಾ ಆಪ್ತರ ಮಾತನ್ನು ನೆಚ್ಚಿಕೊಂಡು ಯಾವುದೇ ದೊಡ್ಡ ತೀರ್ಮಾನಗಳನ್ನು ಮಾಡುವುದಕ್ಕೆ ಹೋಗಬೇಡಿ. ವಿದೇಶಗಳಲ್ಲಿ ಉದ್ಯೋಗಕ್ಕಾಗಿ ಪ್ರಯತ್ನ ಪಡಬೇಕು ಎಂದು ಈಗಾಗಲೇ ತೀರ್ಮಾನ ಮಾಡಿದ್ದಲ್ಲಿ ಇದನ್ನು ತಾತ್ಕಾಲಿಕವಾಗಿಯಾದರೂ ಮುಂದಕ್ಕೆ ಹಾಕಬೇಕಾದ ಸನ್ನಿವೇಶ ಎದುರಾಗಲಿದೆ. ಎಲ್ಲರೂ ಒಪ್ಪಿಕೊಂಡ ವಿಚಾರ ಒಂದಕ್ಕೆ ಬಲವಂತವಾಗಿಯಾದರೂ ನೀವು ಸರಿ ಎನ್ನಬೇಕಾಗುತ್ತದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ವಿವಾಹ ವಯಸ್ಕರಾಗಿದ್ದು, ಸೂಕ್ತ ಸಂಬಂಧಗಳಿಗಾಗಿ ಹುಡುಕಾಟ ನಡೆಸುತ್ತಿರುವವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಬಾಡಿಗೆ ಮನೆಯಲ್ಲಿ ವಾಸ ಇರುವಂತಹವರು ಈಗಿರುವ ಮನೆಗಿಂತ ವಿಶಾಲವಾದ ಅಥವಾ ಅನುಕೂಲವಾದ ಮನೆಗೆ ತೆರಳಬೇಕು ಎಂದು ತೀರ್ಮಾನ ಮಾಡಲಿದ್ದೀರಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸ್ನೇಹಿತರ ಮೂಲಕವಾಗಿ ಮನಸ್ಸಿಗೆ ಖುಷಿ ನೀಡುವಂತಹ ಸುದ್ದಿ ಸಿಗಲಿದೆ. ಒಂದು ವೇಳೆ ಈಗಾಗಲೇ ಕೆಲಸ ಮಾಡಿ ಆಗಿದೆ, ಅದಕ್ಕೆ ಬರಬೇಕಾದ ಹಣ ಬಂದಿಲ್ಲ ಎಂದಾದಲ್ಲಿ ಅದನ್ನು ಪಡೆಯುವುದು ಹೇಗೆ ಎಂಬ ಮಾರ್ಗೋಪಾಯಗಳು ಹೊಳೆಯಲಿವೆ. ಈ ದಿನ ನೀವು ಪರಸ್ಥಳದಲ್ಲಿ ಇದ್ದೀರಿ ಎಂದಾದರೆ ಮೊಬೈಲ್ ಫೋನ್ ಸೇರಿದಂತೆ ಮುಖ್ಯ ವಸ್ತುಗಳ ಬಗ್ಗೆ ಎಚ್ಚರದಿಂದಿರಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಮನೆಯ ದುರಸ್ತಿ, ಸುಣ್ಣ- ಬಣ್ಣ ಮಾಡಿಸುವುದಕ್ಕಾಗಿ ಸಂಬಂಧಪಟ್ಟವರನ್ನು ಕರೆಸಿ ಅಥವಾ ಫೋನ್ ಮೂಲಕ ಮಾತುಕತೆ ಆಡಲಿದ್ದೀರಿ. ಯಾರು ಸ್ವಂತ ವ್ಯವಹಾರ ಅಥವಾ ಸ್ವಂತ ಉದ್ಯೋಗ ಮಾಡಿಕೊಂಡಿದ್ದೀರೋ ಅಂತಹವರಿಗೆ ಆದಾಯದ ಮೂಲಗಳು ಜಾಸ್ತಿ ಆಗುವ ಸೂಚನೆಗಳು ಕಂಡು ಬರಲಿವೆ. ವಿದೇಶದಲ್ಲಿ ಉನ್ನತ ವ್ಯಾಸಂಗ ಪಡೆಯಬೇಕು ಎಂದು ಪ್ರಯತ್ನ ಮಾಡುತ್ತಿರುವವರಿಗೆ ಈತನಕ ಏನಾದರೂ ಅಡೆತಡೆಗಳು ಕಾಡುತ್ತಿದ್ದಲ್ಲಿ ಅವು ನಿವಾರಣೆಯಾಗಲಿವೆ. ಡೇರಿ ವ್ಯವಹಾರ, ಪಶು ಸಾಕಣೆ ಇಂಥದ್ದನ್ನು ಮಾಡುತ್ತಿರುವವರಿಗೆ ಹೊಸದಾಗಿ ಬಂಡವಾಳವನ್ನು ಹೂಡಿ, ವ್ಯವಹಾರವನ್ನು ಇನ್ನಷ್ಟು ವಿಸ್ತರಣೆ ಮಾಡಿಕೊಳ್ಳಬೇಕು ಎಂಬ ಆಲೋಚನೆ ಮೂಡಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಯಾರು ಕ್ಯಾಟರಿಂಗ್ ವ್ಯವಹಾರವನ್ನು ಮಾಡುತ್ತಿರುವಿರೋ ಅಂಥವರಿಗೆ ಈ ದಿನ ಆದಾಯದ ಪ್ರಮಾಣದಲ್ಲಿ ಜಾಸ್ತಿ ಆಗಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರಗಳಲ್ಲಿ ಏನಾದರೂ ವ್ಯಾಜ್ಯಗಳು ಇದ್ದಲ್ಲಿ ಅದನ್ನು ನಿವಾರಿಸಿಕೊಳ್ಳುವ ಮಾರ್ಗಗಳು ಗೋಚರ ಆಗಲಿವೆ. ಮನೆಗೆ ಸಂಬಂಧಿಸಿದಂತೆ ನೀವು ತೆಗೆದುಕೊಳ್ಳುವ ತೀರ್ಮಾನಗಳಿಂದ ತಂದೆ ತಾಯಿಗೆ ಬೇಸರ ಆಗಬಹುದು. ಆದ್ದರಿಂದ ಯಾವುದೇ ಅಂತಿಮ ತೀರ್ಮಾನ ಎಂದು ತೆಗೆದುಕೊಳ್ಳುವ ಮುನ್ನ ಅವರೊಂದಿಗೆ ಚರ್ಚಿಸಿ, ಆ ನಂತರ ಮುಂದುವರಿಯಿರಿ. ಸ್ಕೂಟರ್ ಅಥವಾ ಕಾರು ಖರೀದಿ ಮಾಡಬೇಕು ಎಂದಿರುವವರಿಗೆ ಹಣಕಾಸಿನ ಹೊಂದಾಣಿಕೆ ಆಗಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಇತರರ ವೈಯಕ್ತಿಕ ವಿಚಾರಗಳಲ್ಲಿ ತಲೆ ಹಾಕುವುದಕ್ಕೆ ಹೋಗಬೇಡಿ. ಅವರಾಗಿಯೇ ಬಂದು ನಿಮ್ಮನ್ನು ಸಲಹೆ ನೀಡುವಂತೆ ಕೇಳಿಕೊಂಡರೂ ಯಾವುದೇ ಅಭಿಪ್ರಾಯ ಹೇಳದೆ ಸುಮ್ಮನಿರುವುದು ಉತ್ತಮ. ನಿಮ್ಮ ಹಣಕಾಸಿನ ಸ್ಥಿತಿಯನ್ನು ಮುಂದು ಮಾಡಿಕೊಂಡು, ಕೆಲವರು ಅವಮಾನ ಮಾಡುವುದಕ್ಕೆ ಪ್ರಯತ್ನಿಸಲಿದ್ದಾರೆ. ಆ ಕಾರಣದಿಂದಾಗಿ ಅಂಥವರಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಹೋಗಬೇಡಿ. ಮಧುಮೇಹ ಅಥವಾ ರಕ್ತದೊತ್ತಡದಂತಹ ಸಮಸ್ಯೆ ಎದುರಿಸುತ್ತಿರುವವರಿಗೆ ಉಲ್ಬಣ ಆಗುವ ಸಾಧ್ಯತೆಗಳಿವೆ. ಹೀಗೊಂದು ಒಳ್ಳೆಯ ಆದಲ್ಲಿ ಯಾವುದೇ ಕಾರಣಕ್ಕೂ ಸ್ವಯಂವೈದ್ಯ ಅಥವಾ ಮನೆ ಮದ್ದು ಅಂತ ಮಾಡುವುದು ಹೋಗಬೇಡಿ. ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ, ಅವರ ಸಲಹೆಯಂತೆಯೇ ನಡೆದುಕೊಳ್ಳಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಏನು ಮಾಡಿದರೆ ಸರಿ ಅಥವಾ ಏನು ಮಾಡಿದರೆ ಸರಿಯಲ್ಲ ಎಂಬುದನ್ನು ನಿರ್ಧಾರ ಮಾಡುವ ಸ್ಥಿತಿಯಲ್ಲಿ ಈ ದಿನ ನೀವು ಇರುವುದಿಲ್ಲ. ಇತರರು ನಿಮ್ಮ ಮೇಲೆ ಬಹಳ ಸುಲಭವಾಗಿ ಪ್ರಭಾವ ಬೀರುವಂತಹ ಸಾಧ್ಯತೆಗಳು ಇರುತ್ತವೆ. ಆ ಕಾರಣದಿಂದ ಯಾವುದೇ ಪ್ರಮುಖ ನಿರ್ಧಾರವನ್ನು ಈ ದಿನದ ಮಟ್ಟಿಗೆ ತೆಗೆದುಕೊಳ್ಳದಿರುವುದು ಉತ್ತಮ. ಇನ್ನು ಭವಿಷ್ಯದ ವಿಚಾರದಲ್ಲಿ ನಿಮ್ಮ ಆದ್ಯತೆಗಳೇನು ಎಂಬುದರ ಪಟ್ಟಿ ಒಂದನ್ನು ಮಾಡಿಕೊಳ್ಳಿ. ನಿಮ್ಮ ಆಪ್ತರು ಹಾಗೂ ಹಿತೈಷಿಗಳು ಏನನ್ನಾದರೂ ಹೇಳಿದಲ್ಲಿ ತಾಳ್ಮೆಯಿಂದ ಕೇಳಿಸಿಕೊಳ್ಳಿ, ಅವುಗಳನ್ನು ಅನುಸರಿಸಲೇಬೇಕು ಎಂಬ ಕಡ್ಡಾಯವೇನಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನೀವು ಇತರರಿಗೆ ಈ ಹಿಂದೆ ನೀಡಿದ್ದ ಸಲಹೆಯಿಂದ ತುಂಬಾ ದೊಡ್ಡ ಮಟ್ಟದ ಅನುಕೂಲ, ಲಾಭ ಆಗಲಿದೆ. ಆ ಉಪಕಾರ ಸ್ಮರಣೆ ಎಂಬಂತೆ ನಿಮಗೆ ಏನಾದರೂ ನೆರವು ನೀಡಬೇಕು ಎಂದು ಅಂದುಕೊಳ್ಳುವ ಅವಕಾಶಗಳಿವೆ. ದೂರ ಪ್ರಯಾಣಗಳಿಂದ ನಿಮಗೆ ಲಾಭ ಆಗಲಿದೆ. ಸಂತಾನ ನಿರೀಕ್ಷೆಯಲ್ಲಿ ಇರುವಂತಹವರಿಗೆ ಶುಭ ಸುದ್ದಿ ಕೇಳಿ ಬರಲಿದೆ. ಹೊಸದಾಗಿ ಉದ್ಯಮ ಅಥವಾ ವ್ಯಾಪಾರವನ್ನು ಶುರು ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಹಣಕಾಸಿನ ಮೂಲಗಳು ತೆರೆದುಕೊಳ್ಳಲಿವೆ. ಆದರೆ ಈ ದಿನಕ್ಕೆ ನಿಮಗೆ ಎಚ್ಚರಿಕೆ ಏನೆಂದರೆ, ವಾಹನಗಳನ್ನು ಪಾರ್ಕಿಂಗ್ ಮಾಡುವಾಗ ಸಾಮಾನ್ಯ ದಿನಗಳಿಗಿಂತ ಹೆಚ್ಚು ಜಾಗ್ರತೆಯನ್ನು ವಹಿಸಿ. ಏಕೆಂದರೆ ಸಣ್ಣ ಪುಟ್ಟ ಡೆಂಟ್ ಆಗುವ ಅಥವಾ ಪೇಂಟಿಂಗ್ ಹೋಗುವಂತಹ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಯಾವುದೋ ಹಳೇ ವಿಚಾರವನ್ನು ಈ ದಿನ ನಿಮಗೆ ತಲೆ ನೋವಾಗಿ ಪರಿಣಮಿಸಲಿದೆ. ಅದನ್ನು ಸಾಧ್ಯವಾದಷ್ಟು ಮುಂದುವರಿಸಿಕೊಂಡು ಹೋಗದಂತೆ ನೋಡಿಕೊಳ್ಳಿ. ನನ್ನದೇ ಸರಿ ಎಂಬ ಹಟ ಯಾವುದೇ ಕಾರಣಕ್ಕೂ ಬೇಡ. ಕೃಷಿಕರಿಗೆ ಜಮೀನು ವಿಚಾರದಲ್ಲಿ ಅಕ್ಕಪಕ್ಕದವರೊಂದಿಗೆ ವ್ಯಾಜ್ಯಗಳು ಏರ್ಪಡುವ ಸಾಧ್ಯತೆಗಳಿವೆ. ಕೂತು, ಮಾತನಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಇತರರ ಮೇಲೆ ಪ್ರತಿಷ್ಠೆಗೆ ಬಿದ್ದು ಖರ್ಚು ಮಾಡುವುದಕ್ಕೆ ಹೋಗಬೇಡಿ. ಅದರಲ್ಲೂ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಎಂದಾದಲ್ಲಿ ಖರ್ಚಿನ ಮೇಲೆ ನಿಗಾ ಇರಲಿ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವಂಥವರು ಮೊಬೈಲ್ ಸೇರಿದಂತೆ ನಿಮ್ಮ ಗ್ಯಾಜೆಟ್, ಲ್ಯಾಪ್ ಟಾಪ್ ಗಳನ್ನು ಜೋಪಾನವಾಗಿ ನೋಡಿಕೊಳ್ಳಿ.