Daily Horoscope: ನಿಮ್ಮಿಂದ ಬೇರೆಯವರು ಕೆಲಸ ಮಾಡಿಕೊಳ್ಳಬಹುದು ಎಚ್ಚರ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಸೆಪ್ಟೆಂಬರ್ 18: ಯಾರು ಏನೇ ಅಂದರೂ ನಿಮ್ಮ ತೀರ್ಮಾನವನ್ನು ಬದಲಿಸಿಕೊಳ್ಳಲಾರಿರಿ. ಸಾಮರಸ್ಯವನ್ನು ತಂದುಕೊಳ್ಳಲು ದಂಪತಿಗಳು ಶ್ರಮಿಸುವರು. ನಿಮ್ಮ ವ್ಯವಹಾರದಲ್ಲಿ ಪರಿಚಿತರು ಬರುವುದು ಇಷ್ಡವಾಹದು. ಹಾಗಾದರೆ ಸೆಪ್ಟೆಂಬರ್ 18ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಗಂಡ, ಕರಣ: ಭವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:30 ಗಂಟೆ, ರಾಹು ಕಾಲ ಮಧ್ಯಾಹ್ನ 12:27 ರಿಂದ 01:58, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:25ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:56 ರಿಂದ ಮಧ್ಯಾಹ್ನ 12:27ರ ವರೆಗೆ.
ಸಿಂಹ ರಾಶಿ: ಗೌರವವನ್ನು ಕೊಡುವವರಿಗೆ ಅಗೌರವ ತೋರಿಸಿದರೆ ಶತ್ರುಗಳಾಗುವರು. ಇಂದು ವಾಹನದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸಲು ಕಷ್ಟವಾದೀತು. ಆಪ್ತ ಸಮಾಲೋಚನೆಯಿಂದ ನಿಮ್ಮ ಮನಸ್ಸು ಹಗುರಾಗಲಿದೆ. ಸಾಲಗಾರರ ಕಿರಿಕಿರಿ ಅತಿಯಾಗಲಿದೆ. ಜನಜಾಗರಣ ಕಾರ್ಯದಲ್ಲಿ ಇಂದು ತೊಡಗಿಕೊಳ್ಳುವಿರಿ. ವಿದೇಶಕ್ಕೆ ಬರಲು ಆಹ್ವಾನವೂ ಬರಲಿದೆ. ಆತುರದ ಪ್ರಯಾಣವು ಬೇಡ. ಇಚ್ಛೆ ಇಲ್ಲದಿದ್ದರೂ ಸ್ನೇಹಿತರ ಮನೆಗೆ ಹೊಇಗಬೇಕಸದೀತು. ಆದಾಯದ ಬಗ್ಗೆ ಗಮನಹರಿಸಿ ಆರೋಗ್ಯವನ್ನು ಕಡೆಗಣಿಸುವಿರಿ. ನಿಮ್ಮವರ ಮಾತಿನಲ್ಲಿ ಸತ್ತ್ವವಿಲ್ಲ ಎನಿಸಬಹುದು. ಉದ್ಯೋಗವನ್ನು ಹುಡುಕುವಲ್ಲಿ ಮಗ್ನರಾಗುವಿರಿ. ನಿಮ್ಮ ನಕಾರಾತ್ಮಕ ಭಾವವನ್ನು ಇನ್ನೊಬ್ಬರ ಮೇಲೆ ಹೇರುವಿರಿ. ನಿಮ್ಮ ಪ್ರತಿಕ್ರಿಯೆ ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ. ಬಳಸಿಕೊಳ್ಳುವ ಸಂಬಂಧವು ಹಾಳಾಗುವುದು.
ಕನ್ಯಾ ರಾಶಿ: ಹಣದ ಆಸೆಗೆ ದಾರಿ ತಪ್ಪಬಹುದು. ಇಂದು ಯಾರ ಬಳಿಯೂ ಸಹಾಯವನ್ನು ಕೇಳುವ ಮನಸ್ಸು ಇರದು. ಯಾರು ಏನೇ ಅಂದರೂ ನಿಮ್ಮ ತೀರ್ಮಾನವನ್ನು ಬದಲಿಸಿಕೊಳ್ಳಲಾರಿರಿ. ಸಾಮರಸ್ಯವನ್ನು ತಂದುಕೊಳ್ಳಲು ದಂಪತಿಗಳು ಶ್ರಮಿಸುವರು. ನಿಮ್ಮ ವ್ಯವಹಾರದಲ್ಲಿ ಪರಿಚಿತರು ಬರುವುದು ಇಷ್ಡವಾಹದು. ನಿಮಗೆ ಹಳೆಯ ಘಟನೆಗಳು ನೆನಪಾಗಿ ದುಃಖಿಸುವಿರಿ. ನೀವು ತಪ್ಪುಗಳನ್ನು ಒಪ್ಪಿಕೊಳ್ಳದೇ ಅಹಂಕಾರವನ್ನು ತೋರುವಿರಿ. ನಿಮ್ಮ ಬಗ್ಗೆ ಕಲಿಕಾರಭಾವವು ಇರಲಿದೆ. ನಿಮ್ಮಅಸಾಮಾನ್ಯ ಚಿಂತನೆಯಿಂದ ನೀವು ದೊಡ್ಡವರಾಗಬಹುದು. ಇನ್ನೊಬ್ಬರ ಬಗ್ಗೆ ಅನುಮಾನವೇ ಹೆಚ್ಚಾಗುವುದು. ಹೊಸ ಉದ್ಯೋಗವನ್ನು ಆರಂಭಿಸುವ ಬಗ್ಗೆ ನಿಮ್ಮೊಳಗೆ ಚಿಂತನೆಗಳು ನಡೆಯಬಹುದು. ನಿಮ್ಮ ಮಾತುಗಳು ನೇರವೂ ಕಠೋರವೂ ಅಗಿರಲಿದ್ದು, ನಿಮ್ಮ ಇಷ್ಟಪಡದವರ ಗುಂಪೊಂದು ತಯಾರಾಗಲಿದೆ. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಸಂಗಾತಿಯ ಬಗ್ಗೆ ಇರುವ ನಿಮ್ಮ ಅಭಿಪ್ರಾಯ ಬದಲಾಗುವುದು.
ತುಲಾ ರಾಶಿ: ವೈವಾಹಿಕ ತೀರ್ಮಾನವನ್ನು ನೀವು ಮುಂದಕ್ಕೆ ಹಾಕುವಿರಿ. ಇಂದು ಭೂಮಿಯ ಖರೀದಿಯ ಬಗ್ಗೆ ಚಿಂತನೆ ಇದ್ದರೆ ಮುಂದುವರಿಯಬಹುದು. ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಅಧಿಕವಾಗಿ ಕಾಣಲಿದೆ.ವಾಹನವನ್ನು ಚಲಾಯಿಸುವಾಗ ಸಾವಧಾನತೆ ಇರಲಿ. ಕಳೆದ ದಿನಗಳಿಗಿಂತ ಇಂದು ವಿದ್ಯಾಭ್ಯಾಸವು ಉತ್ತಮ. ದೂರ ಹೋಗುವವರಿದ್ದರೆ ಹಿರಿಯರ ಆಸೀರ್ವಾದವನ್ನು ಪಡೆಯುವುದು ಉತ್ತಮ. ಸಂಗಾತಿಯು ನಿಮ್ಮ ಜೊತೆ ಜಗಳವಾಡಿ ಹಳೆಯ ವಿಚಾರವನ್ನು ಕೆದಕಿ ತೆಗೆಯಬಹುದು. ಸ್ತ್ರೀಸಂಬಂಧವಾದ ಅಪವಾದಗಳೂ ಬರಲಿದೆ. ಸಾರ್ವಜನಿಕ ಕೆಲಸದಲ್ಲಿ ನಿಮಗೆ ಮುಜುಗರವು ಹೆಚ್ಚಾದೀತು. ವಿದೇಶದ ವ್ಯಾಪಾರದಲ್ಲಿ ಸರಿಯಾದ ನಿರ್ವಹಣೆ ಸಾಧ್ಯವಾಗದು. ಸಜ್ಜನರ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ಹೆಸರಿನಿಂದ ಬೇರೆಯವರು ಕೆಲಸ ಮಾಡಿಕೊಳ್ಳಬಹುದು. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ. ಉದ್ಯೋಗದಲ್ಲಿ ಗಾಂಭೀರ್ಯವಿರಲಿದೆ. ಉನ್ನತ ವಿದ್ಯಾಭ್ಯಾಸಕ್ಕೆ ಸರಿಯಾದ ದಿಕ್ಕು ಕಾಣಿಸದು.
ವೃಶ್ಚಿಕ ರಾಶಿ: ಗಂಭೀರವಾದ ಆಲೋಚನೆಯಿಂದ ಹೊಸ ಯೋಜನೆಯು ಹೊರಬರುವುದು. ನೀವು ಇಂದು ಅನೇಕ ದಿನಗಳಿಂದ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳ್ಳಬಹುದು. ಒಂಟಿಯಾಗಿ ಸುತ್ತಾಡಬೇಕು ಎಂದು ಅನ್ನಿಸಬಹುದು. ನ್ಯಾಯವನ್ನು ಕೊಡಿಸುವವರಿಗೆ ಸೂಕ್ತ ಆಧಾರಗಳು ಸಿಗಲಿವೆ. ನಿಮ್ಮ ಬಳಿ ಸಾಮಾಜಿಕ ಕಳಕಳಿಯಿಂದ ಜನರು ಬರಬಹುದು. ಬಾರದೆಂದು ತಿಳಿದ ಹಣವು ಇಂದು ನಿಮ್ಮ ಕೈ ಸೇರಬಹುದು. ಕರ್ತವ್ಯಗಳತ್ತ ನಿಮ್ಮ ಗಮನವಿರಲಿದೆ. ನಿಮ್ಮ ಮೇಲೆ ಬಂದ ಅಪವಾದವನ್ನು ನೀವು ಇನ್ನೊಬ್ಬರ ಮೇಲೆ ಹಾಕಲಿದ್ದೀರಿ. ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಆಸೆ ಇರುವುದು. ಮಾನಸಿಕ ನೋವನ್ನು ಕೊಡುವಲ್ಲಿ ಇಂದು ಆನಂದವನ್ನು ಹೊಂದುವಿರಿ. ಪ್ರಾಣಿಗಳ ಮೇಲೆ ಪ್ರೀತಿ ಅತಿಯಾಗಬಹುದು. ಅನುಮಾನವನ್ನು ಬಿಟ್ಟು ನೇರವಾಗಿ ಇರಲು ಪ್ರಯತ್ನಿಸಿ. ಇಂದು ನೀವು ಹೆಚ್ಚು ನಗಲಿದ್ದೀರಿ. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ಇನ್ನೊಬ್ಬರ ಅವಲಂಬನೆಯಿಂದ ನಿಮಗೆ ಮುಜುಗರವಾಗುವುದು. ದುಡಿಮೆಯಿಂದ ಸುಮ್ಮನಿರುವುದು ನಿಮಗೆ ಆಗದು.