ದಿನ ಭವಿಷ್ಯ: ಇಂದು ಈ ರಾಶಿಯವರನ್ನು ಅಪರಿಚಿತರು ಪೀಡಿಸಿ, ಹಣಪಡೆಯುವರು..
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪ್ರತಿಪತ್ ತಿಥಿಯ ಭಾನುವಾರದಂದು ನಷ್ಟವಸ್ತು ಪ್ರಾಪ್ತಿ, ಅತಿಯಾದ ಸುತ್ತಾಟ, ಆದಾಯದ ಚಿಂತೆ, ಕಾನೂನಿನ ದುರುಪಯೋಗ, ಸಣ್ಣ ಉದ್ಯಮಕ್ಕೆ ಅನಿರೀಕ್ಷಿತ ಆದಾಯ, ಶ್ರೇಷ್ಠ ದಾನ, ಹಿರಿಯರ ಸೇವೆ ಇವೆಲ್ಲ ಇಂದಿನ ವಿಶೇಷ.

ಇಂದಿನಿಂದ ನವರಾತ್ರಿ ಆರಂಭ. ಜಗನ್ಮಾತೆಯ ಈ ಸುದಿನ ಎಲ್ಲರಿಗೂ ಶುಭವಾಗಲಿ. ಶೈಲಪುತ್ರಿಯಾಗಿ ಬಂದ ಸಕಲರ ಸಂಕಟವನ್ನೂ ಸಂಹರಿಸಲಿ.
ಮೇಷ ರಾಶಿ:
ತಾಳ್ಮೆಯನ್ನು ಇಟ್ಟುಕೊಂಡು ಕಾರ್ಯವನ್ನು ಸಾಧಿಸಿ. ಆಸ್ತಿಯ ತಕರಾರುಗಳು ಇತ್ಯರ್ಥವಾಗುವ ಸಮಯ ಹತ್ತಿರ ಬರುತ್ತಿದೆ. ಶೋಧಕರಿಗೆ ಉನ್ನತ ಸ್ಥಾನ. ನಿಮಗೆ ದಕ್ಕಬೇಕಾದ ಪ್ರಮಾಣಕ್ಕಿಂತಲೂ ಹೆಚ್ಚಾಗಿ ದೊರೆಯುವ ಸಾಧ್ಯತೆ ಇರುತ್ತದೆ. ಸ್ವಂತ ವಿಚಾರದಲ್ಲಿ ಮಧ್ಯಪ್ರವೇಶವನ್ನು ನಿಮ್ಮ ವ್ಯವಹಾರವು ಅಧಿಕ ಲಾಭವನ್ನು ಗಳಿಸಬಹುದು. ನಿಮಗೆ ಸಂಗಾತಿಯ ಸಹಾಯವು ಸಿಗಬಹುದು. ಸಹೋದರನಿಂದ ಮನೆಯಲ್ಲಿ ಕಿರಿಕಿರಿ ಆಗಬಹುದು.
ವೃಷಭ ರಾಶಿ:
ಧನಲಾಭವಾದರೂ ಮನಸ್ಸಿನಲ್ಲಿ ಬೇಸರದ ತುಂಬಿ ಇರುವುದು. ವೃತ್ತಿಯ ಒತ್ತಡವನ್ನು ಮನೆಗೆ ತರುವುದು ಬೇಡ. ನೀವು ಪರಿಚಿತರಿಂದ ಪ್ರಯೋಜನ ಪಡೆಯಲು ಬಯಸುವಿರಿ. ಮನಸ್ಸಿಗೆ ಯಾವುದೇ ಅನ್ಯ ಯೋಚನೆ ಬರದಂತೆ ಮಾಡಿಕೊಳ್ಳುವ ಜವಾಬ್ದಾರಿ ಇರುವುದು. ಸಹೋದ್ಯೋಗಿಗಳ ಕೆಲಸದಿಂದ ನಿಮಗೆ ಸಿಟ್ಟು ಬರಬಹುದು. ಅದನ್ನು ಅಲ್ಲಿಯೇ ನುಂಗಿಕೊಳ್ಳಬೇಕಾಗುವುದು. ನಿಮ್ಮ ನಿವೃತ್ತಿಯಿಂದ ಬೇಸರವಾಗುವುದು.
ಮಿಥುನ ರಾಶಿ:
ಸಮಾಜದಿಂದ ಸಿಗುವ ಗೌರವವೂ ಬಾರದೇ ಇರುವುದು. ಬಂಧುಗಳು ನಿಮ್ಮ ಸಹಾಯವನ್ನು ಕೇಳಬಹುದು. ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ನೀವು ಅಂದುಕೊಂಡಷ್ಟು ಲಾಭವು ಸಿಗುವತನಕ ಕಾರ್ಯವನ್ನು ನಿಲ್ಲಿಸಲಾರಿರಿ. ಸ್ವಲ್ಪಮಟ್ಟಿಗೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳಲ್ಲಿ ಮನಸ್ಸು ಕೂಡದು. ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ.
ಕರ್ಕಾಟಕ ರಾಶಿ:
ನೀರೀಕ್ಷಿಸಿದ ವಸ್ತುಗಳು ಕೆಲವು ಸಿಗಲಿವೆ. ಆಭರಣವನ್ನು ಖರೀದಿಸಲು ಸಾಲವನ್ನು ಮಾಡಬೇಕಾಗುವುದು ಉದ್ಯೋಗದಲ್ಲಿ ಒತ್ತಡವು ಅಧಿಕವಾಗಿದ್ದು ಅದು ದಾಂಪತ್ಯದಲ್ಲಿ ಮೇಲೂ ಪರಿಣಾಮವನ್ನು ಬೀರಬಹುದು. ಸಜ್ಜನರ ಸಹವಾಸವು ನಿಮಗೆ ಸಿಗಲಿದೆ.ಸಂಗಾತಿಯ ಮಾತುಗಳು ನಿಮಗೆ ಪಥ್ಯವಾಗಬಹುದು. ತಂದೆಗೆ ಇಂದು ನೀವು ಸಹಾಯ ಮಾಡುವಿರಿ. ನಿಮ್ಮ ಆರಾಮದ ದಿನಚರಿಯಲ್ಲಿಯೂ ನಿಮಗೆ ಇಂದು ಕಿರಿಕಿರಿ ಆಗುವುದು.
ಸಿಂಹ ರಾಶಿ:
ವೃತ್ತಿಯಲ್ಲಿ ಆತಂಕದ ವಾತಾವರಣವು ಇರಲಿದೆ. ದೀರ್ಘಕಾಲದ ಹೂಡಿಕೆಗಳಿಗೆ ಕೈಹಾಕುವ ಮುನ್ನ ಯೋಚಿಸಿ. ಹಿರಿಯರ ಮಾತನ್ನು ಶ್ರದ್ಧೆಯಿಂದ ಕೇಳಿ, ನಿಮ್ಮ ಕಾರ್ಯಕ್ಕೆ ಸಹಾಯಕವಾದೀತು. ಶಕ್ತಿ ಮೀರಿ ಮಾಡಿದ ಕೆಲಸದಲ್ಲಿ ನಿಮಗೆ ತೊಂದರೆಯಾಗಬಹುದು. ಆಶಾಭಂಗವಾಗುವ ಸಾಧ್ಯತೆ ಇದೆ. ಅವಕಾಶವನ್ನು ಸದುಪಯೋಗ ಮಾಡಿಕೊಂಡರೆ ಉತ್ತಮ ಭವಿಷ್ಯವು ಇರಲಿದೆ. ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ತಪ್ಪಿಸಲು ಅಸಂಬದ್ಧ ಸಲಹೆಗಳನ್ನು ಕೊಡಬಹುದು.
ಕನ್ಯಾ ರಾಶಿ:
ನಿಮ್ಮ ಹಳೆಯ ಕಾರ್ಯಗಳನ್ನೇ ಯಾರಾದರೂ ನೆನಪಿಸಿಯಾರು. ಸಮಸ್ಯೆಯನ್ನು ಬರುವ ಮೊದಲೇ ಯೋಚಿಸಿ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಕೆಲವು ಸಂಬಂಧಗಳು ಯಾಕೆ ದೂರವಾಗುತ್ತವೆ ಎಂದು ತಿಳಿಯುವುದಿಲ್ಲ. ಯಾರನ್ನೂ ನೋಯಿಸುವುದು ನಿಮಗೆ ಆಗದು. ನಿಮ್ಮ ಕೆಲಸದಲ್ಲಿ ಇಂದು ಅಡತಡೆಗಳು ಬರಬಹುದು. ಆಧ್ಯಾತ್ಮಿಕತೆಯ ಸೆಳೆತವು ಇರುವುದು. ನೆರೆಯವರ ವರ್ತನೆಯು ನಿಮ್ಮ ಸಿಟ್ಟಿಗೆ ಕಾರಣವಾಗಲಿದೆ. ಪ್ರೇಮ ಸಂಬಂಧಗಳಲ್ಲಿ ಅನುಮಾನವನ್ನು ಇಟ್ಟುಕೊಳ್ಳುವುದು ಬೇಡ.
ತುಲಾ ರಾಶಿ:
ನಿಮ್ಮ ವಿವಾಹಕ್ಕೆ ಪ್ರಸ್ತಾಪಗಳು ಬರಲಿದೆ. ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮ ಇಷ್ಟದವರು ನಿಮ್ಮನ್ನು ಭೇಟಿಯಾಗಲು ಬರಬಹುದು. ನಿಮ್ಮ ಸಣ್ಣ ಉಳಿತಾಯಕ್ಕೆ ಇಂದು ಬಹಳ ಬೆಲೆಬರಲಿದೆ. ಹೊಸ ಜವಾಬ್ದಾರಿಗಳ ನಿರೀಕ್ಷೆಯಲ್ಲಿ ಇರುವಿರಿ. ವೃತ್ತಿಜೀವನದಲ್ಲಿ ಆನಂದದ ವಾತಾವರಣವು ಇರಲಿದೆ. ಹೊಸ ಉದ್ಯಮವಾದರೂ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವಿರಿ. ಹಿರಿಯ ಮೇಲೇ ಸಿಟ್ಟಾಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ:
ಯಾವ ಅಪವಾದವನ್ನೂ ನೀವು ಇಟ್ಟುಕೊಳ್ಳುವುದು ಇಷ್ಟಪಡುವುದಿಲ್ಲ. ಹೊಸ ತರಹದ ಆಲೋಚನೆಗಳು ನಿಮ್ಮನ್ನು ಹುರಿದುಂಬಿಸಲಿದೆ. ಮಾನಸಿಕ ನೆಮ್ಮದಿಯನ್ನು ಪಡೆಯಲು ಮತ್ತು ಮನಸ್ಸಿನಲ್ಲಿ ಮಾಡಿದ ಆಲೋಚನೆಗಳು ಸಾಕಾರಗೊಳ್ಳಲು ಧ್ಯಾನ ಮಾಡಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಇರುವ ಆದಾಯದ ಮೂಲವನ್ನು ಗಟ್ಟಿಮಾಡಿಕೊಳ್ಳಿ. ಎದುರಿನವರ ಇಂಗಿತವನ್ನು ತಿಳಿದುಕೊಳ್ಳದೇ ಏನನ್ನಾದರೂ ಹೇಳುವಿರಿ.
ಧನು ರಾಶಿ:
ಉದ್ಯೋಗದಲ್ಲಿ ಇಷ್ಟವಿಲ್ಲದೆ ಕಡೆ ವರ್ಗಾವಣೆ ಆಗಲಿದೆ. ಸಹೋದ್ಯೋಗಿಗಳ ಬಗ್ಗೆ ನಿಮಗೆ ಅಸಮಾಧಾನ ಇರಲಿದೆ. ಮನೆಯಲ್ಲಿ ದೇವರಿಗೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳಬಹುದು. ದುರಭ್ಯಾಸವು ನಿಮಗೆ ಹಣಕಾಸಿನ ನಷ್ಟವನ್ನು ಮಾಡಿಸೀತು. ಅತಿಥಿ ಸತ್ಕಾರವನ್ನು ಇಂದು ನೀವು ಮಾಡುವಿರಿ. ಯಾರಾದರೂ ನಿಮ್ಮನ್ನು ಚೇಡಿಸಬಹುದು. ಸ್ನೇಹಿತರಿಗೆ ನಿಮ್ಮದಾದ ಕೆಲವು ಆಯ್ಕೆಗಳನ್ನು ಹೇಳಿ.
ಮಕರ ರಾಶಿ:
ಅನಗತ್ಯ ಹರಟೆಯಿಂದ ಈ ದಿನವನ್ನು ಕಳೆಯುವಿರಿ. ಹಣಕಾಸಿನ ವ್ಯವಹಾರವನ್ನು ಮಾಡುತ್ತಿದ್ದರೆ ನಿಮಗೆ ಲಾಭವು ನಿಮ್ಮದಾಗಬಹುದು. ಸಮಯಾದ ಅಭಾವದಿಂದ ಇಂದಿನ ಕೆಲಸಗಳು ಹಾಗೆಯೇ ಇರಬಹುದು. ಉದ್ಯೋಗದಲ್ಲಿರುವ ಜನರು ತಮ್ಮ ಕಾರ್ಯಕ್ಷೇತ್ರದಲ್ಲಿ ಎಚ್ಚರಿಕೆಯಿಂದಿರಬೇಕು. ಮಕ್ಕಳಿಗೆ ಪ್ರಿಯವಾದುದನ್ನು ಮಾಡುವಿರಿ. ಧನಸಹಾಯವನ್ನು ಮಾಡಲು ನಿಮಗೆ ಇಷ್ಟವಾಗದು. ಕಳೆದುಕೊಂಡ ವಸ್ತುಗಳನ್ನು ಮರಳಿ ಪಡೆಯುವಿರಿ.
ಕುಂಭ ರಾಶಿ:
ಭವಿಷ್ಯದ ಬಗ್ಗೆ ಹೆಚ್ಚು ಚಿಂತಾಮಗ್ನರಾಗುವಿರಿ. ನಿಮ್ಮ ಒಳ್ಳೆಯತನವು ಈ ದಿನ ಮತ್ತೊಮ್ಮೆ ಸಾಬೀತಾಗುವುದು. ನೆರೆಹೊರೆಯವರಿಗೆ ಸ್ನೇಹದ ಹಸ್ತ ಚಾಚುವಿರಿ. ವಿವಾಹದ ಮಾತುಕತೆಗಳು ನಿಮ್ಮ ಖುಷಿಯನ್ನು ಹೆಚ್ಚಿಸಬಹುದು. ವೃತ್ತಿಗಾಗಿ ನೀವು ಮಾಡುವ ಪ್ರಯತ್ನದಿಂದ ಯಶಸ್ಸು ಸಿಗಲಿದೆ. ಒಂದು ಮಾತಿಗೆ ಹಲವಾರು ಅರ್ಥ. ಆಡುವಾಗ ಯೋಚನೆ ಇರಲಿ. ನೀವು ವಿರೋಧ ಮಾಡುವ ಯಾವ ಮಾತನ್ನು ಆಡುವುದು ಬೇಡ.
ಮೀನ ರಾಶಿ:
ವಿವಾಹಯೋಗವು ಬಂದರೂ ನಿಮಗೆ ಅಂತಹ ಯೋಗ್ಯತೆಯ ಕೊರತೆ ಎದ್ದು ಕಾಣುವುದು. ಭೂಮಿಗೆ ಸಂಬಂಧಿಸಿದ ಮಾತುಕತೆಯಲ್ಲಿ ಹಿನ್ನಡೆ ಉಂಟಾಗುವುದು. ಸದ್ಯಕ್ಕೆ ಸ್ಥಿರಾಸ್ಥಿ ಖರೀದಿಯ ಬಗ್ಗೆ ಚಿಂತಿಸುವುದು ಸೂಕ್ತವಲ್ಲ. ಯಾರ ಮೇಲೂ ಪಕ್ಷಪಾತ ಮಾಡದೇ ಇರಬೇಕಾಗುವುದು. ನಿಮ್ಮ ನಿರೀಕ್ಷೆ ಸಂಪೂರ್ಣ ಸರಿಯಾಗದು. ವೃತ್ತಿಯ ಕೆಲಸಗಳ ನಡುವೆ ಕುಟುಂಬವನ್ನು ಮರೆತಿರುವಿರಿ. ಮಾತನ್ನು ನೀವು ಇಂದು ಕಡಿಮೆ ಮಾಡಿದ್ದೀರಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಚಿತ್ರಾ, ಯೋಗ : ವೈಧೃತಿ, ಕರಣ : ಬವ, ಸೂರ್ಯೋದಯ – 06 – 10 am, ಸೂರ್ಯಾಸ್ತ – 06 – 02 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:33 – 18:02, ಯಮಗಂಡ ಕಾಲ 12:06 – 13:35, ಗುಳಿಕ ಕಾಲ 15:04 – 16:33
-ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:31 am, Sun, 11 October 26




