AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಕೆಂಡ್​​​ ಎಪಿಸೋಡ್​​ನಲ್ಲಿ ಬಹಿರಂಗವಾಯ್ತು ಮಂಜನ ಕ್ರೂರತೆ

ತನ್ನನ್ನು ಮಹಾಕವಿ ಎಂದು ಕರೆದುಕೊಳ್ಳುವ ಮಂಜನಂತೂ ಬಿಗ್​​ಬಾಸ್ ಮನೆಯನ್ನು ತನ್ನ ಆಸ್ತಾನ ಎಂದುಕೊಂಡು ಸಿಕ್ಕ ಸಿಕ್ಕವರ ಮೇಲೆಲ್ಲ ಅಬ್ಬರಿಸಿದ್ದ. ಕೀಳು ಪದಗಳ ಬಳಕೆ ಮಾಡಿದ್ದ. ಎಪಿಸೋಡ್ ಪ್ರಸಾರ ಆದಾಗ ಮಂಜ ಆಡಿದ್ದ ಮಾತುಗಳು ಮ್ಯೂಟ್ ಆಗಿದ್ದವು. ಅವರು ಮಾಡಿದ್ದ ಕೆಲವು ಕೃತ್ಯಗಳನ್ನು ತೋರಿಸಿರಲಿಲ್ಲ ಸಹ. ಆದರೆ ವೀಕೆಂಡ್ ಎಪಿಸೋಡಿನಲ್ಲಿ ಹಲವು ವಿಷಯಗಳು ಹೊರಬಂದವು.

ವೀಕೆಂಡ್​​​ ಎಪಿಸೋಡ್​​ನಲ್ಲಿ ಬಹಿರಂಗವಾಯ್ತು ಮಂಜನ ಕ್ರೂರತೆ
Manja Bigg Boss
ಮಂಜುನಾಥ ಸಿ.
|

Updated on: Oct 10, 2026 | 11:01 PM

Share

ಬಿಗ್​​ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ಹಲವಾರು ಗಲಾಟೆಗಳು, ಬೈಗುಳಗಳು, ಸಹಿಸಲಾರದ ಏನೇನೋ ನಡೆದಿದ್ದವು. ಅದರಲ್ಲೂ ತನ್ನನ್ನು ಮಹಾಕವಿ ಎಂದು ಕರೆದುಕೊಳ್ಳುವ ಮಂಜನಂತೂ ಬಿಗ್​​ಬಾಸ್ ಮನೆಯನ್ನು ತನ್ನ ಆಸ್ತಾನ ಎಂದುಕೊಂಡು ಸಿಕ್ಕ ಸಿಕ್ಕವರ ಮೇಲೆಲ್ಲ ಅಬ್ಬರಿಸಿದ್ದ. ಕೀಳು ಪದಗಳ ಬಳಕೆ ಮಾಡಿದ್ದ. ಎಪಿಸೋಡ್ ಪ್ರಸಾರ ಆದಾಗ ಮಂಜ ಆಡಿದ್ದ ಮಾತುಗಳು ಮ್ಯೂಟ್ ಆಗಿದ್ದವು. ಅವರು ಮಾಡಿದ್ದ ಕೆಲವು ಕೃತ್ಯಗಳನ್ನು ತೋರಿಸಿರಲಿಲ್ಲ ಸಹ. ಆದರೆ ವೀಕೆಂಡ್ ಎಪಿಸೋಡಿನಲ್ಲಿ ಹಲವು ವಿಷಯಗಳು ಹೊರಬಂದವು.

ಮೊದಲಿಗೆ ಸುದೀಪ್, ಆಸಿಯಾರ ಉಸ್ತುವಾರಿ, ಗಗನ್ ಮತ್ತು ತಾಂಡವ್ ಅವರು ಆಟದಲ್ಲಿ ಆಡಿದ ಮೋಸದ ಬಗ್ಗೆ ಟೀಕೆ ಮಾಡಿದರು. ಬಳಿಕ ವಿಷಯ ಕಿರಣ್ ಬಳಿ ಬಂತು. ಮಂಜ, ಕಿರಣ್​​ ಕಣ್ಣಿಗೆ ಖಾರ ಹಾಕಿದ ವಿಡಿಯೋ ಪ್ರದರ್ಶಿಸಿದರು. ವಿಡಿಯೋನಲ್ಲಿ ಮಂಜ, ಕಿರಣ್ ಕಣ್ಣನ್ನೇ ಗುರಿ ಮಾಡಿಕೊಂಡು ಖಾರದ ಸಾಂಬಾರು ಹಾಕುತ್ತಿದ್ದ. ನಂತರ ಬಾಯಿಗೆ ಸುರಿಯಲು ಆರಂಭಿಸಿದ. ಅಸಲಿಗೆ ಅದನ್ನು ಎಪಿಸೋಡಿನಲ್ಲೂ ತೋರಿಸಲಾಗಿತ್ತು. ಆದರೆ ಮಂಜ ತನ್ನ ಕ್ರೂರತೆ ತೋರಿಸಿದ್ದು ಆ ಘಟನೆಯ ಬಳಿಕ.

ಕಣ್ಣಿಗೆ ಖಾರ ಹೋಗಿ ಅಳುತ್ತಿದ್ದ ಕಿರಣ್ ಅನ್ನು ಕೆಲವರು ಬಾತ್​​ರೂಮಿಗೆ ಕರೆದುಕೊಂಡು ಹೋಗಿ ಕಣ್ಣು ತೊಳೆಸುವ ಪ್ರಯತ್ನ ಮಾಡಿದಾಗ ಅದಕ್ಕೆ ಮಂಜ ಅಡ್ಡ ಹಾಕಿದನಂತೆ. ಅಲ್ಲಿಯೂ ಸಹ ಅವನ ಕಣ್ಣು ತೊಳೆಯಬಾರದು ಎಂದು ಗಲಾಟೆ ಆರಂಭಿಸಿದನಂತೆ. ಅದಾದ ಬಳಿಕ ವೈದ್ಯರು ಬಂದು ಕಿರಣ್ ಕಣ್ಣುಗಳನ್ನು ಪರೀಕ್ಷೆ ಮಾಡಿ ಕಣ್ಣಿಗೆ ಔಷಧ ಕೊಟ್ಟಿದ್ದಾರೆ. ಆ ಔಷಧಿಯನ್ನು ಸಹ ಮಂಜ ಕಿತ್ತುಕೊಂಡು ಎಸೆದನಂತೆ. ಈ ವಿಷಯವನ್ನು ಪ್ರಶಾಂತ್, ಸುದೀಪ್ ಮುಂದೆ ಹೇಳಿದರು.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ

ಅದಾದ ಬಳಿಕ ಸುದೀಪ್ ಅವರು, ‘ಏನಿದು, ಇದೇನು ಟಾಸ್ಕ್​​ನಲ್ಲಿ ಮಾಡಿದ್ದ ಅಥವಾ ಬೇಕೆಂದು ಮಾಡಿದ್ದ?’ ಎಂದು ಕೇಳಿದರು. ಅದಕ್ಕೆ ಅದೇ ರೌಡಿತನದಿಂದ ಉತ್ತರಿಸಿದ ಮಂಜ, ‘ಹೌದು, ನನಗೆ ಮೊದಲಿನಿಂದಲೂ ಕಿರಣ್ ಶಾಸ್ತ್ರಿ ಮೇಲೆ ದ್ವೇಷ ಇದೆ. ಹಾಗಾಗಿ ನಾನು ಅವನಿಗೆ ಮಾಡಬೇಕು ಎಂದುಕೊಂಡು ಮೊದಲೇ ನಿಶ್ಚಯಿಸಿಯೇ ಹೀಗೆ ಮಾಡಿದೆ ಎಂದರು. ಅಲ್ಲಿಗೆ ತನ್ನ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಕಿರಣ್ ಗೆ ಹಾನಿ ಮಾಡಿದ್ದಾಗಿ ಮಂಜ ಒಪ್ಪಿಕೊಂಡರು. ಆದರೆ ಮಂಜನ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೇ ಹೋಗಿದ್ದು ಆಶ್ಚರ್ಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ