
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಚಿತ್ರಾ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಷಷ್ಠಿ, ನಿತ್ಯನಕ್ಷತ್ರ : ಮೂಲಾ, ಯೋಗ : ಶೋಭನ, ಕರಣ : ತೈತಿಲ, ಸೂರ್ಯೋದಯ – 06 – 11 am, ಸೂರ್ಯಾಸ್ತ – 05 – 59 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:37 – 12:05, ಯಮಗಂಡ ಕಾಲ 15:02 – 16:31, ಗುಳಿಕ ಕಾಲ 07:40 – 09:08.
ಶರನ್ನವರಾತ್ರದ ಆರನೇ ದಿನ. ಜಗನ್ಮಾತೆಯ ಈ ಸುದಿನ ಎಲ್ಲರಿಗೂ ಶುಭವಾಗಲಿ. ಕಾತ್ಯಾಯನೀ ದೇವಿಯು ಸಕಲರ ಸಂಕಟವನ್ನೂ ಸಂಹರಿಸಿ.
ಮೇಷ ರಾಶಿ: ನಿಮ್ಮ ತ್ನಿಯ ಅನಗತ್ಯ ಖರ್ಚಿಗೆ ಕಡಿವಾಣ ಹಾಕುವಿರಿ. ಇದಕ್ಕಾಗಿ ವಾಗ್ವಾದವು ನಡೆಯಬಹುದು. ಮಕ್ಕಳನ್ನು ನಿರ್ಲಕ್ಷಿಸಿದರೆ ಕಷ್ಟವಾದೀತು. ನಿಮ್ಮ ಇಂದಿನ ಕೆಲಸಗಳನ್ನು ಬಾಕಿ ಉಳಿಸಿಕೊಳ್ಳಬೇಕಾದೀತು. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳದೇ ಪರಿಚಿತರನ್ನು ಕೇಳಿ. ಅಧಿಕಾರದ ವಿಸ್ತರಣೆಯ ಮುನ್ಸೂಚನೆ ಸಿಗುವುದು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗುವುದು.
ವೃಷಭ ರಾಶಿ: ಕೆಲವು ಕೆಲಸಗಳಿಗೆ ನೀವು ಆಲಸ್ಯವನ್ನು ತೋರುವಿರಿ. ನಿಮ್ಮ ಸಂಕಟಕ್ಕೆ ಸ್ಪಂದಿಸಿದವರನ್ನು ನೀವು ಗೌರವಿಸಿ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಏಕಾಗ್ರತೆಯ ಕೊರತೆ ಕಾಣಿಸುವುದು. ನಕಾರಾತ್ಮಕ ಆಲೋಚನೆಯನ್ನು ನೀವು ಕಡಿಮೆ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಆಸಕ್ತಿಯ ಕ್ಷೇತ್ರವೂ ನಿಮಗೆ ಇಷ್ಟವಾಗದೇ ಹೋಗುವುದು. ಅಪವಾದದ ಭಯ ನಿಮ್ಮನ್ನು ಕಾಡುವುದು. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ.
ಮಿಥುನ ರಾಶಿ: ಹಣಕಾಸಿನ ವ್ಯವಹಾರದಿಂದ ನಿಮಗೆ ಅಪವಾದವು ಬರಬಹುದು. ದಾಂಪತ್ಯದಲ್ಲಿ ಅನಗತ್ಯ ವಾಗ್ವಾದಗಳು ನಡೆಯಬಹುದು. ಕುಟುಂಬದಲ್ಲಿ ಕೆಲವು ವಿಷಯಗಳನ್ನು ನಿಮಗೆ ಹೇಳದೇ ರಹಸ್ಯವಾಗಿ ಇಡುವರು. ಯಾರದೋ ಸಿಟ್ಟನ್ನು ಇನ್ನಾರದೋ ಮೇಲೆ ತೀರಿಸಿಕೊಳ್ಳುವಿರಿ. ನೀವು ಇಂದು ಹೆಚ್ಚು ಒಂದೇ ಚಿಂತೆಯಲ್ಲಿ ಮಗ್ನರಾಗಿ ಇರುವಿರಿ. ಮನಸ್ಸು ನಿರ್ಲಿಪ್ತವಾಗಿ ಇರುವುದು.
ಕರ್ಕಾಟಕ ರಾಶಿ: ಸರ್ಕಾರಿ ದಾಖಲೆಗಳನ್ನು ಭದ್ರವಾಗಿ ಇರಿಕೊಳ್ಳಬೇಕಾಗುವುದು. ಹಣಕಾಸಿನ ವಿಚಾರಕ್ಕೆ ಸಹೋದರರ ನಡುವೆ ಚರ್ಚೆಯು ನಡೆಯಬಹುದು. ವಾಹನ ಚಲಾಯಿಸಲು ನಿಮಗೆ ಕಷ್ಟವಾದೀತು. ನಿಮ್ಮವರು ನಿಮ್ಮ ದೋಷವನ್ನೇ ಎತ್ತಿಹೇಳಬಹುದು. ಸಾಹಿತ್ಯದ ಆಸಕ್ತರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳುವರು. ಯಾವುದೇ ಪ್ರೇರಣೆ ನಿಮಗೆ ಸಿಕ್ಕಿ, ಯೋಜನೆ ಬದಲಾಯಿಸುವಿರಿ. ಹೊಸ ಹೂಡಕೆ ನಿಮಗೆ ಪ್ರಶಸ್ತ ಎನಿಸಬಹುದು.
ಸಿಂಹ ರಾಶಿ: ಇಂದಿನ ಕೆಲವು ಸಂದರ್ಭವನ್ನು ಎದುರಿಸುವಾಗ ಗೊತ್ತಿದ್ದೂ ಗೊತ್ತಿಲ್ಲದಂತೆ ಇರುವುದು ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಗೊಂದಲವು ಬರಬಹುದು. ಆಪ್ತರ ಜೊತೆಗಿನ ಒಡನಾಟವು ನಿಮ್ಮ ಭಾರವಾದ ಮನಸ್ಸನ್ನು ಹಗುರಗೊಳಿಸುವುದು. ನೀವು ಇಂದು ಸಿಟ್ಟು ಮಾಡಿಕೊಳ್ಳಬಹುದಾದ ಸನ್ನಿವೇಶಗಳು ಕಡಿಮೆ ಇರಬಹುದು. ನಿಮ್ಮ ತಂದೆಯ ಮಾರ್ಗದರ್ಶನದಲ್ಲಿ ಕುಟುಂಬ ವ್ಯವಹಾರವು ಮತ್ತೆ ಬೆಳೆಯುತ್ತದೆ.
ಕನ್ಯಾ ರಾಶಿ: ಸಮಯ ಹಾಗೂ ಸಂದರ್ಭಗಳನ್ನು ನೋಡಿ ನಿಮ್ಮ ವಿಚಾರವನ್ನು ಮೇಲಧಿಕಾರಿಗಳ ಜೊತೆ ಹಂಚಿಕೊಳ್ಳಿ. ವ್ಯಾಪರದ ವಹಿವಾಟನ್ನು ಮಾಡುತ್ತಿದ್ದರೆ ನಿಮಗೆ ಹೆಚ್ಚು ಕೆಲಸವೂ ಪ್ರಶಂಸೆಯೂ ಆರ್ಥಿಕಬಲವೂ ಬರಲಿದೆ. ಆಭರಣಗಳನ್ನು ಖರೀದಿಸುವ ಇಚ್ಛೆ ಇದ್ದರೆ ಖರೀದಿಸಿ. ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡುವುದು. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ವೃತ್ತಿಯಲ್ಲಿ ಭಡ್ತಿ ಕಷ್ಟವಾಗಬಹುದು.
ತುಲಾ ರಾಶಿ: ಋಣ ಬಾಧೆಯು ಮುಕ್ತಾಯವಾಯಿತು ಎನ್ನುತ್ತಿದ್ದಂತೆ ಇನ್ನೊಂದು ಆರಂಭವಾಗುವುದು. ಬಂಧುಗಳಿಂದ, ಮನೆಯ ಹಿರಿಯರಿಂದ ನೀವು ಅಲಕ್ಷ್ಯಕ್ಕೆ ಒಳಗಾಗುವಿರಿ. ನಿಮ್ಮ ಹೊಲಸು ಮಾತುಗಳಿಂದ ನಿಮ್ಮೊಂದಿಗೆ ಕಲಹ. ಇಂದು ನಿಮಗೆ ಬಹಳ ಬೇಸರವನ್ನು ತರಿಸುವುದು. ದಾಂಪತ್ಯದಲ್ಲಿ ನೀವು ಸುಖವನ್ನು ಕಾಣುವಿರಿ. ನಿಮ್ಮ ಮನಃಸ್ಥಿತಿಯನ್ನು ಯಾರಾದರೂ ದುರುಪಯೋಗ ಮಾಡಿಕೊಳ್ಳಬಹುದು. ಕಾರ್ಯದಲ್ಲಿ ಎಲ್ಲಿಯೂ ತಪ್ಪಾಗದಂತೆ ನೋಡಿಕೊಳ್ಳಿ.
ವೃಶ್ಚಿಕ ರಾಶಿ: ಇನ್ನೊಬ್ಬರಿಂದ ಪ್ರೇರಿತರಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗುವಿರಿ. ಆರ್ಥಿಕತೆಯ ಮೇಲೆ ನಿಮಗೆ ಮೋಹವು ಕಡಿಮೆ ಆಗಬಹುದು. ವಂಚನೆಗೆ ಪ್ರತಿವಂಚನೆಯನ್ನು ಮಾಡುವ ಬುದ್ಧಿಯು ಬರಬಹುದು. ಆಶಿಸ್ತಿನ ಕೆಲಸಕ್ಕೆ ಹಿರಿಯರಿಂದ ಬೈಸಿಕೊಳ್ಳುವಿರಿ. ಅಪರಿಚಿತ ವ್ಯಕ್ತಿಯಿಂದ ತೊಂದರೆಗಳು ಎದುರಾಗಬಹುದು. ನಿಮ್ಮ ವಿಷಯಕ್ಕೆ ಸ್ನೇಹಿತರು ನಗುವರು. ನೀವು ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.
ಧನು ರಾಶಿ: ದೂರದ ಬಂಧುಗಳ ಭೇಟಿಯು ಸಂತಸವನ್ನು ಕೊಡಬಹುದು. ಎದುರಿನವರ ಜೊತೆ ನಿಮ್ಮದೇ ಸರಿ ಎಂಬಂತೆ ತಪ್ಪಿದ್ದರೂ ವಾದಿಸುವಿರಿ. ಶತ್ರುಗಳನ್ನು ತಿಳಿದುಕೊಳ್ಳುವ ಅಶಕ್ತಿಯು ನಿಮಗೆ ಇರುವುದು. ಆತುರದಿಂದ ಯಾವ ವ್ಯವಹಾರವನ್ನೂ ಮಾಡುವುದು ಬೇಡ. ನಿಮ್ಮ ಕೆಲಸಕ್ಕೆ ಸಮಯದ ಮಿತಿಯನ್ನು ಹಾಕಿಕೊಳ್ಳಿ. ನಿಮ್ಮ ಹಾರಿಕೆಯ ಮಾತುಗಳು ನಿಮ್ಮ ಬಗ್ಗೆ ನಂಬಿಕೆಯು ಇರದಂತೆ ಮಾಡುವುದು. ಯಂತ್ರದಿಂದ ಕೆಲಸ ಮಾಡುವವರಿಗೆ ಕಷ್ಟವಾದೀತು.
ಮಕರ ರಾಶಿ: ನಿಮ್ಮ ಮಾತಿನ ಹಾಸ್ಯವು ಇನ್ನೊಬ್ಬರಿಗೆ ನೋವನ್ನು ಮಾಡೀತು. ಆಕಸ್ಮಿಕ ಧನಲಾಭದ ನಿರೀಕ್ಷೆಯಲ್ಲಿ ಇರುವಿರಿ. ಇನ್ನೊಬ್ಬರ ಮೇಲಿಟ್ಟ ನಂಬಿಕಯು ಕಳೆದುಹೋಗಬಹುದು. ಸ್ಥಳದ ವ್ಯತ್ಯಾಸದಿಂದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡಬಹುದು. ವ್ಯಾಪಾರಸ್ಥರು ಬಹುಮಟ್ಟಿಗೆ ಲಾಭವನ್ನೇ ಪಡೆಯುವರು. ಹಿರಿಯರಿಂದ ಆಶೀರ್ವಾದ ಸಿಗಲಿದೆ. ಪ್ರೇಯಸಿಯನ್ನು ದೂರಮಾಡಿಕೊಂಡು ದುಃಖಿಸುವ ಸಾಧ್ಯತೆ ಇದೆ.
ಕುಂಭ ರಾಶಿ: ಒಂದು ಕ್ಷಣವೂ ವಿರಾವಿಲ್ಲದಂತೆ ಕಾರ್ಯವನ್ನು ಮಾಡುವಿರಿ. ಇಷ್ಟವಿಲ್ಲದ ಕಾರ್ಯಕ್ಕೆ ಎಷ್ಟೇ ಒತ್ತಾಯ ಮಾಡಿದರೂ ನೀವು ಒಪ್ಪುವುದಿಲ್ಲ. ನಿಮ್ಮ ಸ್ವಭಾವವು ಕೆಲವರಿಗೆ ಇಷ್ಟವಾಗದೇ ಹೋಗುವುದು. ಸ್ವತಂತ್ರವಾಗಲು ನೀವು ಬಯಸುವಿರಿ. ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವಿರಿ. ಅಪರಿಚಿತರ ನಿಮಗೆ ಕೆಲವು ತೊಂದರೆಗಳು ಬರಬಹುದು. ಪ್ರಯತ್ನಪಟ್ಟು ಮಾಡುವ ಕೆಲಸವು ನಿಮಗೆ ಅನುಕೂಲವನ್ನು ಮಾಡುವುದು.
ಮೀನ ರಾಶಿ: ಒಂದೇ ಕೆಲಸವನ್ನು ಹೆಚ್ಚು ಸಮಯ ಮಾಡಲು ತೆಗೆದುಕೊಳ್ಳುವಿರಿ. ಒತ್ತಡ ನಿವಾರಣೆಗೆ ಧ್ಯಾನ ಹಾಗೂ ಯೋಗಾಭ್ಯಾಸವನ್ನು ಮಾಡಬೇಕಾದೀತು. ಅಪರಿಚಿತರು ಆಪ್ತರಾಗಬಹುದು ಮಾತುಕತೆಯಿಂದ. ದುರಭ್ಯಾಸಕ್ಕೆ ಅವಕಾಶಗಳು ಬರಬಹುದು. ಪ್ರಯಾಣದ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬೇಕಾಗುವುದು. ಆರ್ಥಿಕತೆಯು ಬಲವನ್ನು ಪಡೆದುಕೊಂಡಿದ್ದು ನಿಮಗೆ ಸಂತೋಷವನ್ನು ತರುವುದು. ವಿವಿಧ ಮೂಲಗಳಿಂದ ಧನಾಗಮನವಾಗುವುದು.
ಲೋಹಿತ್ ಹೆಬ್ಬಾರ್ – 8762924271 (what’s app only)